ಮರಾಠಿಗರಿಗೆ ಶಿಕ್ಷಣ, ಉದ್ಯೋಗದಲ್ಲಿ ಮೀಸಲಾತಿಗೆ ಆಗ್ರಹಿಸಿ ಇಂದು ಮಹಾರಾಷ್ಟ್ರ ಬಂದ್​

news18
Updated:August 9, 2018, 12:54 PM IST
ಮರಾಠಿಗರಿಗೆ ಶಿಕ್ಷಣ, ಉದ್ಯೋಗದಲ್ಲಿ ಮೀಸಲಾತಿಗೆ ಆಗ್ರಹಿಸಿ ಇಂದು ಮಹಾರಾಷ್ಟ್ರ ಬಂದ್​
news18
Updated: August 9, 2018, 12:54 PM IST
ನ್ಯೂಸ್​18 ಕನ್ನಡ

ಮುಂಬೈ (ಆ. 9): ಶಿಕ್ಷಣ ಮತ್ತು ಉದ್ಯೋಗದಲ್ಲಿ ಶೇ. 16ರಷ್ಟು ಮೀಸಲಾತಿ ನೀಡುವಂತೆ ಆಗ್ರಹಿಸಿ ಮಹಾರಾಷ್ಟ್ರದಲ್ಲಿ ಇಂದು ಮರಾಠಿಗರು ಬಂದ್​ಗೆ ಕರೆನೀಡಿದ್ದಾರೆ.

ಇಂದು ಮುಂಜಾನೆಯಿಂದ ಆರಂಭವಾಗಿರುವ ಬಂದ್​ಗೆ ಈಗಾಗಲೇ ಹಲವು ಸಂಘಟನೆಗಳು ಬೆಂಬಲ ವಾಪಾಸ್​ ಪಡೆದಿವೆ. ಶಾಂತಿಯುತವಾಗಿ ಬಂದ್​ ನಡೆಯುತ್ತಿದ್ದು, ಪುಣೆಯ ಕೆಲವೆಡೆ ಕಲ್ಲು ತೂರಾಟ ನಡೆಸಿ ವಾಹನದ ಗಾಜು ಒಡೆದುಹಾಕಿರುವ ಘಟನೆ ವರದಿಯಾಗಿದೆ.  ಬೆಳಗ್ಗೆ 8ರಿಂದ ಆರಂಭವಾಗಿರುವ ಬಂದ್​ ಸಂಜೆ 6ರವರೆಗೆ ನಡೆಯಲಿದೆ. ಅಗತ್ಯಸೇವೆಗಳು, ಶಾಲಾ-ಕಾಲೇಜುಗಳು ದಿನನಿತ್ಯದಂತೆ ಕಾರ್ಯನಿರ್ವಹಿಸುತ್ತಿವೆ.

ಬಂದ್​ ಹಿನ್ನೆಲೆಯಲ್ಲಿ ಮಹಾರಾಷ್ಟ್ರದಲ್ಲಿ ಅಹಿತಕರ ಘಟನೆಗಳು ನಡೆಯುವ ಸಾಧ್ಯತೆಗಳಿರುವುದರಿಂದ ಪೊಲೀಸರು ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದ್ದು, ಹೆಚ್ಚುವರಿ ಸಿಬ್ಬಂದಿಯನ್ನು ನೇಮಕ ಮಾಡಿದ್ದಾರೆ. ಇಂಡಿಗೋ ವಿಮಾನಸಂಸ್ಥೆ ಕೂಡ ತನ್ನ ಗ್ರಾಹರಿಗೆ ನಿಗದಿತ ಸಮಯಕ್ಕಿಂತ ಮುಂಚಿತವಾಗಿ ವಿಮಾನನಿಲ್ದಾಣವನ್ನು ತಲುಪುವಂತೆ ಸಂದೇಶ ನೀಡಿದೆ.


Loading...ಇನ್ನು, ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನಾವಿಸ್​ ಸರ್ಕಾರದಿಂದ ಮರಾಠಿಗರಿಗೆ ಸರ್ಕಾರಿ ಉದ್ಯೋಗ ಮತ್ತು ಶಿಕ್ಷಣ ಸಂಸ್ಥೆಗಳಲ್ಲಿ ಮೀಸಲಾತಿ ನೀಡುವ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಿದೆ ಎಂದು ಭರವಸೆ ನೀಡಿದ್ದಾರೆ. ಅದಕ್ಕಾಗಿ ನವೆಂಬರ್​ವರೆಗೆ ಸಮಯಾವಕಾಶ ಕೋರಿದ್ದರು. ಆದರೂ ಸಕಲ ಮರಾಠ ಸಮಾಜ ಬಂದ್​ಗೆ ಕರೆನೀಡಲಾಗಿರುವುದರಿಂದ ಅನೇಕ ಸಂಘಟನೆಗಳು ಬಂದ್​ಗೆ ಬೆಂಬಲ ನೀಡಿಲ್ಲ.

 
First published:August 9, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ