HOME » NEWS » National-international » MANY GOOD SAMARITANS COME FORWARD AND DONATE BLOOD BEFORE TAKING THE CORONA JAB STG SKTV

Corona Vaccine: ಲಸಿಕೆ ತೆಗೆದುಕೊಳ್ಳುವ ಮೊದಲು ರಕ್ತದಾನ ಮಾಡೋಕೆ ಮುಂದಾದ ಯುವಜನತೆ, ನಿಟ್ಟುಸಿರು ಬಿಟ್ಟ Blood Banks

ಕೋವಿಡ್ ಲಸಿಕೆಯ ಮೊದಲ ಅಥವಾ ಎರಡನೇ ಡೋಸ್ ಪಡೆದ ಬಳಿಕ 28 ದಿನಗಳ ಕಾಲ ರಕ್ತದಾನ ಮಾಡುವಂತಿಲ್ಲ. ಈಗಾಗಲೇ 18 ವಯಸ್ಸಿನಿಂದ 45 ವಯಸ್ಸಿನವರೆಗಿನ ರಕ್ತದಾನಿಗಳು ಕೋವಿಡ್ ಲಸಿಕೆ ತೆಗೆದುಕೊಳ್ಳುತ್ತಿದ್ದು, ರಕ್ತದಾನದ ಕೊರತೆಯ ಬಹು ಮುಖ್ಯವಾದ ಅಂಶವಾಗಿ ಪರಿಗಣಿಸಲ್ಪಟ್ಟಿದೆ.

news18-kannada
Updated:May 1, 2021, 4:20 PM IST
Corona Vaccine: ಲಸಿಕೆ ತೆಗೆದುಕೊಳ್ಳುವ ಮೊದಲು ರಕ್ತದಾನ ಮಾಡೋಕೆ ಮುಂದಾದ ಯುವಜನತೆ, ನಿಟ್ಟುಸಿರು ಬಿಟ್ಟ Blood Banks
ಪ್ರಾತಿನಿಧಿಕ ಚಿತ್ರ
  • Share this:
Corona Effects: ಕೊರೊನಾ ವೈರಸ್‌ ಲಸಿಕೆಯ ಮೊದಲ ಡೋಸ್ ಅಥವಾ ಎರಡನೇ ಡೋಸ್ ಪಡೆದುಕೊಂಡ 28 ದಿನಗಳ ತನಕ ರಕ್ತದಾನ ಮಾಡುವಂತಿಲ್ಲ ಎನ್ನುವ ಅಂಶ ತಿಳಿದ ಕೂಡಲೇ ಯುವ ಸಮೂಹ ರಕ್ತದಾನಕ್ಕೆ ಮುಂದಾಗಿದೆ. ಕೊರೊನಾ ವೈರಸ್‌ನ ಎರಡನೇ ಅಲೆ ಈಗಾಗಲೇ ಎಲ್ಲಾ ರಾಜ್ಯಗಳಿಗೂ ಬರಸಿಡಿಲಿನಂತೆ ಎರಗಿದೆ. ಆಮ್ಲಜನಕ, ಐಸಿಯು ಹಾಸಿಗೆಗಳು, ಔಷಧಿಗಳ ಕೊರತೆಯುಂಟಾಗಿದೆ. ರೋಗಿಗಳ ನರಳಾಟ, ಕುಟುಂಬದವರ ಆಕ್ರಂದನ ಮತ್ತು ಮೂಲ ಭೂತ ಸೌಕರ್ಯಕ್ಕೂ ತತ್ವಾರ ಉಂಟಾಗಿದೆ. ಈ ಸಮಯದಲ್ಲಿ ಸರ್ಕಾರವು ಕೋವಿನ್ ವೇದಿಕೆಯಲ್ಲಿ 18 ರಿಂದ 45 ವರ್ಷದೊಳಗಿನವರಿಗೆ ವ್ಯಾಕ್ಸಿನೇಷನ್ ಡ್ರೈವ್ ಅನ್ನು ಪ್ರಾರಂಭಿಸಿದೆ. ಇದರಿಂದ ರಕ್ತದಾನದ ಕೊರತೆ ಉಂಟಾಗಿದೆ ಎನ್ನುವುದನ್ನು ತಜ್ಞರು ಬಿಚ್ಚಿಟ್ಟಿದ್ದಾರೆ. ದೇಶದ ಜನಸಂಖ್ಯೆಯ ಬಹುತೇಕ ಜನರು ಕೋವಿಡ್ 19 ಲಸಿಕೆ ತೆಗೆದುಕೊಳ್ಳಲು ಮುಂದಾದ ಸಂದರ್ಭದಲ್ಲಿ ಈ ವಿಷಯವನ್ನು ಬಹಿರಂಗ ಪಡಿಸಿದ್ದಾರೆ.

ಕೋವಿಡ್ ಲಸಿಕೆಯ ಮೊದಲ ಅಥವಾ ಎರಡನೇ ಡೋಸ್ ಪಡೆದ ಬಳಿಕ 28 ದಿನಗಳ ಕಾಲ ರಕ್ತದಾನ ಮಾಡುವಂತಿಲ್ಲ. ಈಗಾಗಲೇ 18 ವಯಸ್ಸಿನಿಂದ 45 ವಯಸ್ಸಿನವರೆಗಿನ ರಕ್ತದಾನಿಗಳು ಕೋವಿಡ್ ಲಸಿಕೆ ತೆಗೆದುಕೊಳ್ಳುತ್ತಿದ್ದು, ರಕ್ತದಾನದ ಕೊರತೆಯ ಬಹು ಮುಖ್ಯವಾದ ಅಂಶವಾಗಿ ಪರಿಗಣಿಸಲ್ಪಟ್ಟಿದೆ. ಪ್ರಾಜೆಕ್ಟ್ ಲೈಫ್ ಫೋರ್ಸ್‌ನಂತಹ ಸಂಸ್ಥೆಗಳು ಮತ್ತು ಬ್ಲಡ್ ಮೇಟ್‌ಗಳಂತಹ ಇತರ ಸಂಘಟಿತ ವೇದಿಕೆಗಳು 18 ವರ್ಷ ತುಂಬಿದ ವ್ಯಕ್ತಿಗಳು ಅಥವಾ 18 ರಿಂದ 45 ವರ್ಷದೊಳಗಿನವರಿಗೆ ರಕ್ತವನ್ನು ದಾನ ಮಾಡುವಂತೆ ಪ್ರತಿಯೊಬ್ಬರಿಗೂ ಕೇಳಿಕೊಳ್ಳುತ್ತಿದೆ. ಈಗಾಗಲೇ ನಿರ್ಧರಿತವಾಗಿದ್ದ ಶಸ್ತ್ರ ಚಿಕಿತ್ಸೆ ಮುಂದೂಡಲಾಗಿದ್ದರೂ, ತುರ್ತು ಶಸ್ತ್ರಚಿಕಿತ್ಸೆಗಳನ್ನು ಮುಂದುವರಿಸಲಾಗುತ್ತಿದೆ. ಇದಕ್ಕೂ ಕೂಡ ರಕ್ತದ ಕೊರತೆಯುಂಟಾಗುತ್ತಿದೆ.

ಇಂತಹ ತುರ್ತು ಸಮಯದಲ್ಲಿ 18 ರಿಂದ 45 ವರ್ಷ ಜನರಿಗೆ ರಕ್ತದಾನ ನೀಡಲು ಪ್ರೋತ್ಸಾಹಿಸುವುದು ಬಹಳ ಮುಖ್ಯವಾಗಿದೆ. ಈಗ ಚುನಾವಣೆಯ ಕಾರಣ ರಾಜಕೀಯ ಪಕ್ಷಗಳು ರಕ್ತದಾನ ಶಿಬಿರವನ್ನೂ ಸಹ ಆಯೋಜಿಸುತ್ತಿಲ್ಲ ಎಂದು ಪ್ರಾಜೆಕ್ಟ್ ಲೈಫ್ ಫೋರ್ಸ್‌ನ ಸ್ಥಾಪಕ ಮತ್ತು ಟ್ರಸ್ಟಿಗಳಲ್ಲಿ ಒಬ್ಬರಾದ ಧನೀಶ್ ಸೇಟ್ ಹೇಳುತ್ತಾರೆ. 2013ರಲ್ಲಿ ಪಶ್ಚಿಮ ಬಂಗಾಳದಲ್ಲಿ ಶೂನ್ಯ ರಕ್ತದ ಕೊರತೆಯನ್ನು ಮಾಡುವ ಗುರಿಯನ್ನು ಹೊಂದಿದ್ದವರು ಧನೀಶ್.

ಸಾಮಾನ್ಯವಾಗಿ ಚುನಾವಣೆ ಮತ್ತು ಬೇಸಿಗೆ ಸಂದರ್ಭದಲ್ಲಿ ರಕ್ತದ ಕೊರತೆಯುಂಟಾಗುತ್ತದೆ. ಆದರೆ ಸಾಂಕ್ರಾಮಿಕ ಪರಿಸ್ಥಿತಿ ಇರುವ ಕಾರಣ ಜನರು ಮನೆಯಿಂದ ಹೊರಬರಲು ಹೆದರುತ್ತಿದ್ದಾರೆ. ರಕ್ತನಿಧಿಗಳು ಕಂಗಾಲಾಗಿದೆ. ಇನ್ನು ಪಿಎಲ್‌ಎಫ್‌, ನಗರ ಮತ್ತು ರಾಜ್ಯ ಆಸ್ಪತ್ರೆಯಲ್ಲಿ ರಕ್ತದ ಕೊರತೆ ಬಗ್ಗೆ ಜಾಗೃತಿ ಮೂಡಿಸಿ, ವಾರಕ್ಕೊಮ್ಮೆ ವಸತಿ ಸಂಘಗಳಲ್ಲಿ ಕಾಲೇಜು ವಿದ್ಯಾರ್ಥಿಗಳಿಂದ ರಕ್ತದಾನ ಶಿಬಿರ ಆಯೋಜಿಸುತ್ತಿದೆ.

ಪೂರ್ವ ಕೋಲ್ಕತ್ತಾದ ಇಎಂ ಬೈಪಾಸ್ ರಸ್ತೆಯಲ್ಲಿರುವ ಕೆಲವು ಅಮೃತಶಿಲೆ ಗೋಡೌನ್‌ಗಳಲ್ಲಿ ರಕ್ತದಾನ ಶಿಬಿರ ಆಯೋಜಿಸುತ್ತಿದ್ದೇವೆ. ಅಲ್ಲಿನ ಉದ್ಯೋಗಿಗಳಿಗೆ ಇದರ ತೀವ್ರತೆ ಅರ್ಥ ಮಾಡಿಸಿ 45 ಯೂನಿಟ್ ರಕ್ತವನ್ನು ಸಂಗ್ರಹಿಸಲು ಸಾಧ್ಯವಾಯಿತು ಎನ್ನುತ್ತಾರೆ.

ಪಿನಾಕಿ ಚಕ್ರವರ್ತಿ, ಧನೀಶ್ ಅವರ ಮಾತಿಗೆ ಧ್ವನಿಗೂಡಿಸುತ್ತಾ 'ರಕ್ತದಾನದ ಬಗ್ಗೆ ಜನರಿಗೆ ಮೊದಲಿನಿಂದಲೂ ಭಯವಿದೆ. ಸಾಂಕ್ರಮಿಕ ಅದನ್ನು ಹೆಚ್ಚಿಸಿದೆ' ಎಂದಿದ್ದಾರೆ. ಅಲ್ಲದೇ ಪಿನಾಕಿ ಅವರು ರಕ್ತದಾನಿಗಳಾಗಿದ್ದು, ರಕ್ತದಾನ ಶಿಬಿರಗಳಲ್ಲೂ ಕೆಲಸ ನಿರ್ವಹಿಸುತ್ತಾರೆ. ಇತ್ತಿಚೆಗೆ ದೊಡ್ಡ ಆಸ್ಪತ್ರೆಯಲ್ಲಿ ರಕ್ತದಾನ ಮಾಡಲು ಹೋದಾಗ ಅಲ್ಲಿಯೂ ರಕ್ತದಾನದ ಕೊರತೆ ಗಮನಿಸಿದ್ದಾರೆ ಪಿನಾಕಿ. ಒ ನೆಗೆಟಿವ್ ಮತ್ತು ಎಬಿ ನೆಗೆಟೀವ್ ಕೂಡ ಸಿಗುತ್ತಿಲ್ಲ ಎಂದರು.

ಕಳೆದ ವರ್ಷವೂ ಲಾಕ್‌ಡೌನ್‌ನಿಂದ ರಕ್ತದಾನಕ್ಕೆ ಸಮಸ್ಯೆಯಾಯಿತು. ನಂತರ ಕೋಲ್ಕತ್ತಾ ಪೊಲೀಸರ ನೆರವಿನಿಂದ ಮೊಬೈಲ್ ವ್ಯಾನ್‌ಗಳ ನೆರವು ಪಡೆದಿದ್ದರು. ವ್ಯಾಕ್ಸಿನ್ ಇದ್ದರೂ ಈ ವರ್ಷ ಜನರು ರಕ್ತದಾನಕ್ಕೆ ಮುಂದಾಗುತ್ತಾರೆ ಎನ್ನುವ ಭರವಸೆ ಇದೆ ಎನ್ನುತ್ತಾರೆ.ಸಾಮಾಜಿಕ ಮಾಧ್ಯಮವು ಬಹಳ ಶ್ರಮಿಸುತ್ತಿದೆ. ಇದರಿಂದ ಪ್ರೇರೇಪಿತರಾಗಿ ರಕ್ತದಾನಿಗಳಲ್ಲದವರು ಕೂಡ ರಕ್ತ ನೀಡಲು ಮುಂದಾಗಿದ್ದಾರೆ. ಇದರಲ್ಲಿ ಕೋಲ್ಕತಾ ಮೂಲದ ಐಟಿ ವೃತ್ತಿಪರ ಉತ್ಸವ್ ಚಂದಾ ಅವರು ಕೂಡ ಒಬ್ಬರು. ವ್ಯಾಕ್ಸಿನೇಷನ್‌ನಿಂದ ಉಂಟಾಗುವ ರಕ್ತದ ಕೊರತೆ ನೀಗಿಸಲು ತಮ್ಮ ಸ್ನೇಹವಲಯಕ್ಕೂ ರಕ್ತದಾನ ಮಾಡಲು ಪ್ರೇರೆಪಿಸಿದ್ದಾರೆ.

ಇದನ್ನೂ ಓದಿhttps://kannada.news18.com/news/state/bengaluru-urban-volunteers-in-bengaluru-help-to-cremate-covid-dead-ones-where-even-the-families-cannot-step-up-sktv-559235.html

ಪ್ಲಾಟ್‌ಫಾರ್ಮ್‌ನ ಸಂಸ್ಥಾಪಕರೂ ಆಗಿರುವ ಬ್ಲಡ್ ಮೇಟ್ಸ್ ಪ್ರಿಯಮ್ ಸೇನ್‌ಗುಪ್ತಾ ಮಾತನಾಡಿ, 'ಸಾಂಕ್ರಾಮಿಕ ರೋಗದ ಹೊರತಾಗಿಯೂ ಕಳೆದ ವರ್ಷ 150 ಕ್ಕೂ ಹೆಚ್ಚು ರಕ್ತದಾನ ಶಿಬಿರಗಳನ್ನು ಆಯೋಜಿಸಲಾಗಿತ್ತು. ಆದರೆ ಈ ವರ್ಷ, ವೈರಸ್ ಹೆಚ್ಚು ಬಾಧಿಸುತ್ತಿರುವ ಕಾರಣ ತೊಂದರೆಗೆ ಸಿಲುಕಿದ್ದೇವೆ' ಎಂದಿದ್ದಾರೆ.

ಸಾರ್ವಜನಿಕರಲ್ಲಿ ಅರಿವಿನ ಕೊರತೆ ಮತ್ತು ಉತ್ತಮ ಸಂಘಟನೆಯ ಅರಿವು ಮೂಡಿಸುವುದು ಮುಖ್ಯವಾಗಿದೆ. ಈಗಾಗಲೇ ವ್ಯಾಕ್ಸಿನೇಷನ್‌ಗೆ ಜನರು ಮುಂದಾಗಿದ್ದು, ರಕ್ತದಾನದ ಕೊರತೆ ಬಗ್ಗೆ ಅವರಿಗೆ ವಿವರಿಸಿದ್ದೇವೆ. ಇನ್ನೂ ಸರ್ಕಾರವೂ ಸಹ ಈ ಸಂದರ್ಭದಲ್ಲಿ ರಕ್ತದಾನ ಶಿಬಿರ ಆಯೋಜಿಸಬೇಕು. ಆ ಮೂಲಕ ಈ ಬಿಕ್ಕಟ್ಟನ್ನು ಪರಿಹರಿಸಬಹುದು ಎಂದಿದ್ದಾರೆ.

'ರಾಜ್ಯದ 108 ರಕ್ತ ಬ್ಯಾಂಕ್‌ಗಳಿಗೆ 80 ಪ್ರತಿಶತದಷ್ಟು ರಕ್ತ ಪೂರೈಕೆಯು ರಾಜಕೀಯ ಪಕ್ಷಗಳು, ಸಮುದಾಯ ಕ್ಲಬ್‌ಗಳು ಮತ್ತು ಎನ್‌ಜಿಒಗಳು ನಡೆಸುವ ಡ್ರೈವ್‌ಗಳು ಮತ್ತು ಶಿಬಿರಗಳಿಂದ ಸಿಗುತ್ತಿದೆ. ಆದರೆ ಲಾಕ್‌ಡೌನ್ ಕಾರಣ ಇದು ಸಾಧ್ಯವಾಗಿಲ್ಲ' ಎಂದು ಸೆಂಟ್ರಲ್ ಬ್ಲಡ್ ಬ್ಯಾಂಕಿನ ಅಧಿಕಾರಿಯೊಬ್ಬರು ಇತ್ತೀಚೆಗೆ ಹೇಳಿದ್ದಾರೆ. ಈಗ ರಕ್ತ ಸಂಗ್ರಹವು ಶೇಕಡಾ 40 ರಷ್ಟು ಕಡಿಮೆಯಾಗಿದ್ದು, ಕೊರೊನಾದಿಂದ ಪರಿಸ್ಥಿತಿ ತೀರಾ ಹದಗೆಡುತ್ತಿದೆ ಎಂದಿದ್ದಾರೆ.
Published by: Soumya KN
First published: May 1, 2021, 4:20 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories