• ಹೋಂ
  • »
  • ನ್ಯೂಸ್
  • »
  • ದೇಶ-ವಿದೇಶ
  • »
  • Afghan Crisis| ಅಫ್ಘನ್​ನಲ್ಲಿ ಆರಂಭವಾಯ್ತು ರಕ್ತಪಾತ;​ ಸ್ವಾತಂತ್ರ್ಯೋತ್ಸವ ರ‍್ಯಾಲಿಯಲ್ಲಿ ತಾಲಿಬಾನಿಗಳಿಂದ ಗುಂಡಿನ ದಾಳಿ

Afghan Crisis| ಅಫ್ಘನ್​ನಲ್ಲಿ ಆರಂಭವಾಯ್ತು ರಕ್ತಪಾತ;​ ಸ್ವಾತಂತ್ರ್ಯೋತ್ಸವ ರ‍್ಯಾಲಿಯಲ್ಲಿ ತಾಲಿಬಾನಿಗಳಿಂದ ಗುಂಡಿನ ದಾಳಿ

ಅಫ್ಘನ್ನರ ಸ್ವಾತಂತ್ರ್ಯೋತ್ಸವ ರ್ಯಾಲಿಯಲ್ಲಿ ತಾಲಿಬಾನಿಗಳಿಂದ ಗುಂಡಿನ ಮೊರೆತ.

ಅಫ್ಘನ್ನರ ಸ್ವಾತಂತ್ರ್ಯೋತ್ಸವ ರ್ಯಾಲಿಯಲ್ಲಿ ತಾಲಿಬಾನಿಗಳಿಂದ ಗುಂಡಿನ ಮೊರೆತ.

ಅಫ್ಘಾನಿಸ್ತಾನದ ಅಸದಾಬಾದ್ ನಗರದಲ್ಲಿ ಜನ ಸಾಮಾನ್ಯರು ಆಫ್ಘಾನ್ ರಾಷ್ಟ್ರೀಯ ಧ್ವಜವನ್ನು ಹಿಡಿದು ರ್‍ಯಾಲಿ ನಡೆಸಿದ್ದರು. ಅಲ್ಲದೆ, ತಾಲಿಬಾನಿಗಳ ವಿರುದ್ಧ ಘೋಷಣೆ ಕೂಗಿದ್ದರು. ಆದರೆ, ಮಹಿಳೆಯರೂ ಪಾಲ್ಗೊಂಡಿದ್ದ ಈ ರ್‍ಯಾಲಿಯ ಮೇಲೆ ತಾಲಿಬಾನಿಗಳು ಗುಂಡಿನ ದಾಳಿ ಮೊರೆದಿದ್ದಾರೆ.

  • Share this:

ಕಾಬೂಲ್ (ಆಗಸ್ಟ್​ 19); ಅಫ್ಘಾನಿಸ್ತಾನದಲ್ಲಿ ಚುನಾಯಿತ ಸರ್ಕಾರವನ್ನು ಪದಚ್ಯುತಗೊಳಿಸಿ ತಾಲಿಬಾನಿಗಳು ಅಧಿಕಾರದ ಗದ್ದುಗೆಗೆ ಏರಿ ಇನ್ನೂ ಮೂರು ದಿನಗಳೂ ಮುಗಿದಿಲ್ಲ. ಅಷ್ಟರಲ್ಲೇ ಮತ್ತೆ ರಕ್ತಪಾತ ಆರಂಭವಾಗಿದೆ. 1919 ಆಗಸ್ಟ್​ 19 ರಂದು ಆಫ್ಘನ್ನರು ಬ್ರಿಟೀಷರಿಂದ ಸ್ವಾತಂತ್ರ್ಯವನ್ನು ಪಡೆದಿದ್ದರು. ಹೀಗಾಗಿ ಇಂದು ಅಫ್ಘಾನಿಸ್ತಾನದ ಅಸದಾಬಾದ್ ನಗರದಲ್ಲಿ ಜನ ಸಾಮಾನ್ಯರು ಆಫ್ಘಾನ್ ರಾಷ್ಟ್ರೀಯ ಧ್ವಜವನ್ನು ಹಿಡಿದು ರ್‍ಯಾಲಿ ನಡೆಸಿದ್ದರು. ಅಲ್ಲದೆ, ತಾಲಿಬಾನಿಗಳ ವಿರುದ್ಧ ಘೋಷಣೆ ಕೂಗಿ ಮತ್ತೆ ಸ್ವಾತಂತ್ರ್ಯಕ್ಕಾಗಿ ಧ್ವನಿ ಎತ್ತಿದ್ದರು. ಆದರೆ, ಮಹಿಳೆಯರೂ ಪಾಲ್ಗೊಂಡಿದ್ದ ಈ ರ್‍ಯಾಲಿಯ ಮೇಲೆ ತಾಲಿಬಾನಿಗಳು ಗುಂಡಿನ ದಾಳಿ ಮೊರೆದಿದ್ದಾರೆ. ಈ ದಾಳಿಯಲ್ಲಿ ಅನೇಕರು ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ. ಬುಧವಾರ ಇದೇ ರೀತಿಯ ಪ್ರತಿಭಟನೆಯಲ್ಲಿ ಮೂವರು ಸಾವನ್ನಪ್ಪಿದ್ದರು.


ಅಸಾದಾಬಾದ್‌ನಲ್ಲಿನ ಗುಂಡಿನ ದಾಳಿ ಮತ್ತು ಕಾಲ್ತುಳಿತದಿಂದ ಅಪಾತ ಜನ ಮೃತಪಟ್ಟಿದ್ದಾರೆ. ಆದರೆ, ಎಷ್ಟು ಜನ ಮೃತಪಟ್ಟಿದ್ದಾರೆ ಎಂಬ ಕುರಿತು ನಿಖರ ಮಾಹಿತಿ ಇನ್ನಷ್ಟೇ ತಿಳಿದುಬರಬೇಕಿದೆ.


ಮಾಧ್ಯಮಗಳ ಪ್ರಕಾರ ಬಿಳಿ ತಾಲಿಬಾನ್ ಧ್ವಜಗಳನ್ನು ಕಿತ್ತುಹಾಕಿದ ಪ್ರತಿಭಟನಾಕಾರರು ರ್‍ಯಾಲಿಯಲ್ಲಿ ಅಫ್ಘಾನ್ ಧ್ವಜವನ್ನು ಬೀಸುತ್ತಿದ್ದರು. ಇದರಿಂದ ಕೋಪಗೊಂಡ ತಾಲಿಬಾಣಿಗಳು ಪ್ರತಿಭಟನಾಕಾರ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ. ರಾಜಧಾನಿ ಕಾಬೂಲ್ ಅನ್ನು ತಾಲಿಬಾನ್‌ ಭಾನುವಾರ ವಶಪಡಿಸಿಕೊಂಡ ನಂತರ ಜನ ನಿಧಾನವಾಗಿ ವಿರೋಧಿಸಲು ಆರಂಭಿಸಿದ್ದಾರೆ. ಆದರೆ, ಇದನ್ನು ಸಹಿಸಿಕೊಳ್ಳದ ತಾಲಿಬಾನಿಗಳು ಈಗಿನಿಂದಲೇ ಜನರನ್ನು ಬಗ್ಗುಬಡಿಯಲು ಮುಂದಾಗುತ್ತಿರುವುದು ಇಂತಹ ಪ್ರಸಂಗಗಳಿಂದ ಸ್ಪಷ್ಟವಾಗುತ್ತಿದೆ.


ಕಳೆದ ಭಾನುವಾರೇ ಅಫ್ಘನ್ ರಾಜಧಾನಿ ಕಾಬೂಲ್ ನಗರವನ್ನು ಸಂಪೂರ್ಣವಾಗಿ ವಶಪಡಿಸಿಕೊಂಡಿದ್ದ ತಾಲಿಬಾನಿಗಳು ಮರು ದಿನವೇ ಪತ್ರಿಕಾಗೋಷ್ಠಿ ನಡೆಸಿದ್ದರು. ಈ ಪತ್ರಿಕಾಗೋಷ್ಠಿಯಲ್ಲಿ ತಾಲಿಬಾನಿಗಳು "ಮುಂದಿನ ದಿನಗಳಲ್ಲಿ ರಕ್ತಪಾತ ಹರಿಸುವುದಿಲ್ಲ. ನಾವು ಸೈನಿಕರು-ರೈತರು ಸೇರಿದಂತೆ ಎಲ್ಲರನ್ನೂ ಕ್ಷಮಿಸಿದ್ದು, ಆಫ್ಘನ್​ನಲ್ಲಿ ಶಾಂತಿಯುತ ಆಡಳಿತವನ್ನು ನಡೆಸುತ್ತೇವೆ. ಮಹಿಳೆಯರಿಗೂ ಸಹ ಷರಿಯತ್​ ಕಾನೂನು ಅನ್ವಯ ಎಲ್ಲಾ ಸವಲತ್ತುಗಳನ್ನು ನೀಡುತ್ತೇವೆ" ಎಂದು ಆಶ್ವಾಸನೆ ನೀಡಿದ್ದರು.


ಆದರೆ, ಇಂತಹ ಮಹತ್ವದ ಆಶ್ವಾಸನೆ ನೀಡಿ ಎರಡನೇ ದಿನಕ್ಕೆ ತಾಲಿಬಾನಿಗಳು ಆಫ್ಘನ್​ನಲ್ಲಿ ರಕ್ತಪಾತ ಹರಿಸಿರುವುದು ಆತಂಕಕ್ಕೆ ಕಾರಣವಾಗಿದೆ. ಅಲ್ಲದೆ, ಜನ ಪ್ರತಿನಿತ್ಯ ಭಯದಲ್ಲೇ ಬದುಕುವಂತಾಗಿದೆ.


ಇದನ್ನೂ ಓದಿ: ಜೈಲಿಂದಲೇ 10ನೇ ತರಗತಿ ಪರೀಕ್ಷೆಗೆ ತಯಾರಾಗುತ್ತಿರುವ ಹರಿಯಾಣದ ಮಾಜಿ ಸಿಎಂ 86 ವರ್ಷದ ಚೌಟಾಲಾ!


ಈ ಘಟನೆ ಬಗ್ಗೆ ಓರ್ವ ಪ್ರತ್ಯಕ್ಷದರ್ಶಿ ಮಾತನಾಡಿದ್ದು, "ನೂರಾರು ಜನರು ರ್‍ಯಾಲಿಯಲ್ಲಿ ಪಾಲ್ಗೊಳ್ಳಲು ಬೀದಿಗೆ ಬಂದರು. ಮೊದಲಿಗೆ ನಾನು ಹೆದರುತ್ತಿದ್ದೆ. ಆದರೆ ನನ್ನ ನೆರೆಹೊರೆಯವರೊಬ್ಬರು ರ್‍ಯಾಲಿಯಲ್ಲಿ ಸೇರಿಕೊಂಡಿದ್ದನ್ನು ನೋಡಿದಾಗ ನಾನು ಸಹ ಮನೆಯಲ್ಲಿರುವ ಧ್ವಜವನ್ನು ಹೊರತೆಗೆದೆ. ಆದರೆ, ತಾಲಿಬಾನಿಗಳು ಈ ಗುಂಪಿನ ಮೇಲೆ ಇದ್ದಕ್ಕಿದ್ದಂತೆ ಗುಂಡಿನ ದಾಳಿ ನಡೆಸಿದರು. ಈ ದಾಳಿಯಲ್ಲಿ ಹಲವಾರು ಜನರು ಸಾವನ್ನಪ್ಪಿದ್ದರೆ, ಅನೆಕರು ತೀವ್ರವಾಗಿ ಗಾಯಗೊಂಡಿದ್ದಾರೆ” ಎಂದು ವಿವರಿಸಿದ್ದಾರೆ.


ಬುಧವಾರ, ಕೂಡ ಜಲಾಲಾಬಾದ್‌ನಲ್ಲಿ ಕಪ್ಪು, ಕೆಂಪು ಮತ್ತು ಹಸಿರು ಬಣ್ಣದ ರಾಷ್ಟ್ರೀಯ ಧ್ವಜವನ್ನು ಹಾರಿಸಿದ್ದ ಪ್ರತಿಭಟನಾಕಾರರ ಮೇಲೆ ತಾಲಿಬಾನಿಗಳು ಗುಂಡು ಹಾರಿಸಿದರು. ಘಟನೆಯಲ್ಲಿ ಮೂವರು ಸಾವನ್ನಪ್ಪಿದ್ದಾರೆ ಎಂದು ಸಾಕ್ಷಿಗಳು ಮತ್ತು ಮಾಧ್ಯಮಗಳು ವರದಿ ಮಾಡಿವೆ.


ಇದನ್ನೂ ಓದಿ: Corona Vaccine| 2 ಡೋಸ್ ಲಸಿಕೆ ಪಡೆದ 87,000 ಜನರಲ್ಲಿ ಮತ್ತೆ ಕಾಣಿಸಿಕೊಂಡ ಸೋಂಕು, ಈ ಪೈಕಿ ಕೇರಳದ ಪಾಲು ಶೇ.46!


ತಾಲಿಬಾನ್ ವಿರುದ್ಧ ಜನರನ್ನು ಒಟ್ಟುಗೂಡಿಸಲು ಪ್ರಯತ್ನಿಸುತ್ತಿರುವ ಉಪಾಧ್ಯಕ್ಷ ಅಮರುಲ್ಲಾ ಸಲೇಹ್ ಪ್ರತಿಭಟನೆಗಳಿಗೆ ಬೆಂಬಲ ವ್ಯಕ್ತಪಡಿಸಿದ್ದಾರೆ. “ರಾಷ್ಟ್ರಧ್ವಜವನ್ನು ಹೊತ್ತುಕೊಂಡು ರಾಷ್ಟ್ರದ ಘನತೆಗಾಗಿ ನಿಂತವರಿಗೆ ಸೆಲ್ಯೂಟ್ ಮಾಡಿ” ಎಂದು ಅವರು ಟ್ವಿಟರ್‌ನಲ್ಲಿ ಹೇಳಿದ್ದರು.


ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ಲಾಕ್​​ಡೌನ್​ ನಿಯಮಗಳನ್ನು ಕಟ್ಟುನಿಟ್ಟಿನಿಂದ ಪಾಲಿಸಿ ಸೋಂಕಿನಿಂದ ತಮ್ಮನ್ನು ತಾವು ಕಾಪಾಡಿಕೊಳ್ಳುವ ಪ್ರತಿಜ್ಞೆ ತೆಗೆದುಕೊಳ್ಳಬೇಕು. ನಾವು ಸುರಕ್ಷಿತವಾಗಿ ಇದ್ದು, ನಮ್ಮಿಂದ ಇತರರಿಗೆ ಸೋಂಕು ಹಬ್ಬದಂತೆ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು.

top videos
    First published: