SSC Scam: ಜೈಲಿಗೆ ಹೋಗ್ತಾರಾ ಸಿಎಂ ಮಮತಾ ಬ್ಯಾನರ್ಜಿ? ಬಿಜೆಪಿಯಿಂದ ವಾರ್ನಿಂಗ್

ಪಶ್ಚಿಮ ಬಂಗಾಳದ ಭಾರೀ ಹಗರಣವೊಂದು ಬಿಚ್ಚಿಕೊಂಡಿದ್ದು ಟಿಎಂಸಿ ಸರ್ಕಾರವನ್ನು ಟೀಕಿಸಲು ಬಿಜೆಪಿಗೆ ಮತ್ತೊಂದು ಅಸ್ತ್ರ ದೊರೆತಂತಾಗಿದೆ. ಈ ಹಿನ್ನೆಲೆಯಲ್ಲಿ ಬಿಜೆಪಿ ಟ್ವೀಟ್ ಒಂದು ಈಗ ವೈರಲ್ ಆಗಿದೆ.

ಸಿಎಂ ಮಮತಾ ಬ್ಯಾನರ್ಜಿ

ಸಿಎಂ ಮಮತಾ ಬ್ಯಾನರ್ಜಿ

  • Share this:
ಕೊಲ್ಕತ್ತಾ(ಜು.29): ಪಶ್ಚಿಮ ಬಂಗಾಳದಲ್ಲಿ (West Bengal) ಭಾರೀ ಬಿರುಗಾಳಿ  ಎಬ್ಬಿಸಿದ ಎಸ್​ಎಸ್​ಸಿ ಹಗರಣದಲ್ಲಿ (SSC Scam) ಭಾರೀ ಪ್ರಮಾಣದ ನಗದು ಪತ್ತೆಯಾದೆ. ಪಶ್ಚಿಮ ಬಂಗಾಳದ ಶಿಕ್ಷಕರ ನೇಮಕಾತಿ (Teachers Recruitment) ಹಗರಣದ ಕರಾಳ ಮುಖ ದೇಶದ ಮುಂಚೆ ಬೆತ್ತಲಾಗಿದ್ದು ಸಿಎಂ ಮಮತಾ ಬ್ಯಾನರ್ಜಿ (CM Mamata Banerjee) ಮುಖ ಮುಚ್ಚಿಕೊಳ್ಳುವಂತಾಗಿದೆ. ಸಚಿವ ಪಾರ್ಥ ಚಟರ್ಜಿ (Partha Chatterjee) ಆಪ್ತೆ ಅರ್ಪಿತಾ ಮುಖರ್ಜಿ (Arpita Mukharjee) ಅವರ ಎರಡು ಫ್ಲಾಟ್​ನಿಂದ (Flat) ಸುಮಾರು 50 ಕೋಟಿಯಷ್ಟು ನಗದು ಸೀಝ್ ಮಾಡಲಾಗಿದ್ದು, 5 ಕೆಜಿಯಷ್ಟು ಚಿನ್ನವನ್ನೂ ವಶಕ್ಕೆ ಪಡೆಯಲಾಗಿದೆ. ಪಶ್ಚಿಮ ಬಂಗಾಳದ ಭಾರೀ ಹಗರಣವೊಂದು ಬಿಚ್ಚಿಕೊಂಡಿದ್ದು ಟಿಎಂಸಿ ಸರ್ಕಾರವನ್ನು ಟೀಕಿಸಲು ಬಿಜೆಪಿಗೆ (BJP) ಮತ್ತೊಂದು ಅಸ್ತ್ರ ದೊರೆತಂತಾಗಿದೆ. ಈ ಹಿನ್ನೆಲೆಯಲ್ಲಿ ಬಿಜೆಪಿ ಟ್ವೀಟ್ (Tweet) ಒಂದು ಈಗ ವೈರಲ್  (Viral) ಆಗಿದೆ.

ಪಶ್ಚಿಮ ಬಂಗಾಳದ ಶಾಲಾ ಶಿಕ್ಷಕರ ನೇಮಕಾತಿ ಹಗರಣದಲ್ಲಿ ಜಾರಿ ನಿರ್ದೇಶನಾಲಯದ ರೈಡ್ ಪಶ್ಚಿಮ ಬಂಗಾಳದ ಸಚಿವ ಪಾರ್ಥ ಚಟರ್ಜಿ ಮತ್ತು ಅವರ ಸಹಾಯಕಿ ಅರ್ಪಿತಾ ಮುಖರ್ಜಿ ಅವರ ಬಂಧನಕ್ಕೆ ಕಾರಣವಾಗಿದೆ. ಈ ಹಿನ್ನೆಲೆಯಲ್ಲಿ ಭಾರತೀಯ ಜನತಾ ಪಕ್ಷದ (BJP) ನಾಯಕ ಅಮಿತ್ ಮಾಳವಿಯಾ ಅವರು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರಿಗೆ ಒಂದು ಟಾಂಗ್ ಕೊಟ್ಟಿದ್ದಾರೆ.

ಮಾಜಿ ಗವರ್ನರ್ ವಿಡಿಯೋ ಪೋಸ್ಟ್ ಮಾಡಿ ಟಾಂಗ್

ಇಂಡಿಯಾ ಟುಡೇ ಕಾರ್ಯಕ್ರಮವೊಂದರಲ್ಲಿ ಪಶ್ಚಿಮ ಬಂಗಾಳದ ಮಾಜಿ ಗವರ್ನರ್ ಜಗದೀಪ್ ಧಂಖರ್ ಅವರ ವೀಡಿಯೊವನ್ನು ಬಿಜೆಪಿ ನಾಯಕ ಟ್ವೀಟ್ ಮಾಡಿದ್ದಾರೆ. ಅಲ್ಲಿ ಅವರು ಅನೇಕ ಮುಖ್ಯಮಂತ್ರಿಗಳು ಇದೇ ರೀತಿಯ ಆದರೆ ಇದಕ್ಕಿಂತ ಚಿಕ್ಕದಾದ ನೇಮಕಾತಿ ಹಗರಣಗಳಿಗಾಗಿ ಹಲವಾರು ವರ್ಷಗಳನ್ನು ಜೈಲಿನಲ್ಲಿ ಕಳೆದಿದ್ದಾರೆ ಎಂದು ಹೇಳಿದ್ದಾರೆ.

ಅಮಿತ್ ಮಾಳವಿಯಾ ವಿಡಿಯೋ ಪೋಸ್ಟ್ ಮಾಡಿ, ಎಸ್‌ಎಸ್‌ಸಿ ಹಗರಣದ ಸೂಕ್ಷ್ಮ ವಿವರಗಳನ್ನು ತಿಳಿದಿರುವ ಮಾಜಿ ಪಶ್ಚಿಮ ಬಂಗಾಳ ಗವರ್ನರ್, ಇತ್ತೀಚೆಗೆ ಕಾರ್ಯಕ್ರಮವೊಂದರಲ್ಲಿ ಪ್ರಮುಖ ಅಂಶವನ್ನು ನೀಡಿದ್ದರು. ಅನೇಕ ಮುಖ್ಯಮಂತ್ರಿಗಳು ಇದೇ ರೀತಿಯ ಆದರೆ ಚಿಕ್ಕದಾದ ನೇಮಕಾತಿ ಹಗರಣಗಳಿಗಾಗಿ ಹಲವಾರು ವರ್ಷಗಳನ್ನು ಜೈಲಿನಲ್ಲಿ ಕಳೆದಿದ್ದಾರೆ ಎಂದು ಅವರು ಗಮನಸೆಳೆದರು. ಮಮತಾ ಬ್ಯಾನರ್ಜಿಯವರು ಈ ಬಗ್ಗೆ ಚಿಂತಿಸಬೇಕು ಎಂದು ಅವರು ಹೇಳಿದ್ದಾರೆ.

Truckloads of money cash in washroom What all recovered from Arpita Mukherjee apart from 50 crore
ಪಾರ್ಥ ಚಟರ್ಜಿ ಹಾಗೂ ಅರ್ಪಿತಾ ಮುಖರ್ಜಿ


ಹಗರಣಗಳ ತಾಯಿ

ಬಿಜೆಪಿ ನಾಯಕ ಹಂಚಿಕೊಂಡಿರುವ ವೀಡಿಯೊದಲ್ಲಿ, ಪಶ್ಚಿಮ ಬಂಗಾಳದ ಶಿಕ್ಷಕರ ನೇಮಕಾತಿ ಹಗರಣವನ್ನು ಎಲ್ಲಾ ಹಗರಣಗಳ ತಾಯಿ ಎಂದು ಧಂಖರ್ ಕರೆಯುವುದನ್ನು ಕೇಳಬಹುದು.

ಪಾರ್ಥ ಚಟರ್ಜಿ ಎಲ್ಲಾ ಸಚಿವಾಲಯಗಳಿಂದ ವಜಾ

ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಗುರುವಾರ ಪಾರ್ಥ ಚಟರ್ಜಿ ಅವರನ್ನು ಎಲ್ಲಾ ಸಚಿವಾಲಯಗಳಿಂದ ವಜಾಗೊಳಿಸಿದ್ದಾರೆ. ಚಟರ್ಜಿ ಅವರು ಶಿಕ್ಷಣ ಸಚಿವರಾಗಿದ್ದಾಗ ಶಿಕ್ಷಕರ ನೇಮಕಾತಿಯಲ್ಲಿ ನಡೆದ ಅಕ್ರಮಗಳ ಕುರಿತು ಇಡಿ ತನಿಖೆ ನಡೆಸುತ್ತಿದೆ. ಅವರು ಪ್ರಸ್ತುತ ಇಡಿ ವಶದಲ್ಲಿದ್ದು, ಹಗರಣದಲ್ಲಿ ಅಕ್ರಮ ಹಣ ವರ್ಗಾವಣೆ ಕೋನವನ್ನು ತನಿಖೆ ನಡೆಸುತ್ತಿದ್ದಾರೆ.

ಇದನ್ನೂ ಓದಿ: Arpita Mukherjee: ಸಚಿವರ ಆಪ್ತೆಯ ವಾಶ್​ರೂಂನಲ್ಲಿಯೂ ಕಂತೆ ಕಂತೆ ಹಣ! 50 ಕೋಟಿಗೂ ಹೆಚ್ಚು ನಗದು! ಚಿನ್ನ ಎಷ್ಟಿತ್ತು?

ಅವರು ಮೂರು ಖಾತೆಗಳನ್ನು ಹೊಂದಿದ್ದರು - ಕೈಗಾರಿಕೆ, ವಾಣಿಜ್ಯ ಮತ್ತು ಉದ್ಯಮ ಸಚಿವಾಲಯ; ಮಾಹಿತಿ ತಂತ್ರಜ್ಞಾನ ಮತ್ತು ಎಲೆಕ್ಟ್ರಾನಿಕ್ಸ್ ಸಚಿವಾಲಯ; ಸಂಸದೀಯ ವ್ಯವಹಾರಗಳ ಸಚಿವಾಲಯ - ಮಮತಾ ಸಂಪುಟದಲ್ಲಿ ಮೂರೂ ಖಾತೆಗಳು ಈಗ ಸೇರಿಕೊಂಡಿವೆ.

ಲೆಕ್ಕಕ್ಕೆ ಸಿಗದಷ್ಟು ನಗದು

ಇಡಿ ಕಳೆದ ವಾರ ಭಾರೀ ಶೋಧ ಕಾರ್ಯಾಚರಣೆ ನಡೆಸಿದ್ದು, ಪಾರ್ಥ ಅವರ ನಿಕಟವರ್ತಿ ಅರ್ಪಿತಾ ಮುಖರ್ಜಿ ಅವರ ಮನೆಯಲ್ಲಿ 21.90 ಕೋಟಿ ರೂಪಾಯಿ ನಗದು, 56 ಲಕ್ಷ ರೂಪಾಯಿ ವಿದೇಶಿ ಕರೆನ್ಸಿ ಮತ್ತು 76 ಲಕ್ಷ ರೂಪಾಯಿ ಮೌಲ್ಯದ ಚಿನ್ನ ಪತ್ತೆಯಾಗಿದೆ. ಲೆಕ್ಕಕ್ಕೆ ಸಿಗದ ನಗದು ವಶಪಡಿಸಿಕೊಂಡ ನಂತರ, ಆತನನ್ನು ವಶಕ್ಕೆ ತೆಗೆದುಕೊಳ್ಳಲಾಯಿತು ಮತ್ತು ನಂತರ ಅರ್ಪಿತಾ ಅವರನ್ನು ಬಂಧಿಸಲಾಯಿತು.

ಇದನ್ನೂ ಓದಿ: Maxi Cabs: ಮಹಾರಾಷ್ಟ್ರ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗೆ ಭಾರೀ ಲಾಸ್; ಕಾರಣ ಮ್ಯಾಕ್ಸಿ ಕ್ಯಾಬ್!

ಏತನ್ಮಧ್ಯೆ, ಪಾರ್ಥ ಚಟರ್ಜಿ ಅವರ ಸಹಾಯಕನ ಎರಡನೇ ಅಪಾರ್ಟ್‌ಮೆಂಟ್‌ನಿಂದ ಇಡಿ ಬುಧವಾರ ಇನ್ನೂ 28.90 ಕೋಟಿ ರೂಪಾಯಿ ನಗದು, 5 ಕೆಜಿಗೂ ಹೆಚ್ಚು ಚಿನ್ನ ಮತ್ತು ಹಲವಾರು ದಾಖಲೆಗಳನ್ನು ವಶಪಡಿಸಿಕೊಂಡಿದೆ.
Published by:Divya D
First published: