ಮುಂಬೈ: ಮುಂಬೈನಲ್ಲಿ ನೀತಾ ಮುಕೇಶ್ ಅಂಬಾನಿ ಕಲ್ಚರಲ್ ಸೆಂಟರ್ (Nita Mukesh Ambani Cultural Centre) ಉದ್ಘಾಟನಾ ಸಮಾರಂಭ ನಡೆಯುತ್ತಿದೆ. ಮುಕೇಶ್ ಅಂಬಾನಿ ಮತ್ತು ನೀತಾ ಅಂಬಾನಿ ಅವರ ಕುಟುಂಬ ಸದಸ್ಯರು ಈಗಾಗಲೇ ಈ ಕಾರ್ಯಕ್ರಮಕ್ಕೆ ಆಗಮಿಸಿದ್ದಾರೆ. ಸಿನಿಮಾ(Cinema) ಹಾಗೂ ರಾಜಕೀಯ ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿದ್ದಾರೆ. ಈ ಸಮಾರಂಭದಲ್ಲಿ ಸ್ಪೈಡರ್ ಮ್ಯಾನ್ (Spider man) ಚಿತ್ರದಲ್ಲಿ ನಟಿಸಿದ್ದ ಟಾಮ್ ಹಾಲೆಂಡ್, ನಟಿ ಝೆಂಡಯಾ ಹಾಗೂ ಅನುಷ್ಕಾ ದಾಂಡೇಕರ್ ಕೂಡ ಆಗಮಿಸಿದ್ದಾರೆ.
ನೀತಾ ಮುಕೇಶ್ ಅಂಬಾನಿ ಕಲ್ಚರಲ್ ಸೆಂಟರ್ (NMACC) ಶುಕ್ರವಾರ ಉದ್ಘಾಟನೆಯಾಗಲಿದೆ. ಈ ವಿಶೇಷ ಸಂದರ್ಭದಲ್ಲಿ ನೀತಾ ಅಂಬಾನಿ ಕುಟುಂಬದ ಅನೇಕ ಸದಸ್ಯರು ಅವರೊಂದಿಗೆ ಕಾಣಿಸಿಕೊಳ್ಳಲಿದ್ದಾರೆ. ಹಲವಾರು ಬಾಲಿವುಡ್ ಮತ್ತು ಅಂತರಾಷ್ಟ್ರೀಯ ಸಿನಿ ತಾರೆಯರು ಸಹ ವಿಶೇಷ ಸಮಾರಂಭದಲ್ಲಿ ಪಾಲ್ಗೊಳ್ಳುವ ನಿರೀಕ್ಷೆಯಿದೆ. ಇದರಲ್ಲಿ ಶಾರುಖ್ ಖಾನ್, ಕರಣ್ ಜೋಹರ್, ಪ್ರಿಯಾಂಕಾ ಚೋಪ್ರಾ, ನಿಕ್ ಜೋನಾಸ್, ಟಾಮ್ ಹಾಲೆಂಡ್, ಝೆಂಡಯಾ ಮತ್ತು ಹೆಚ್ಚಿನವರು ಸೇರಿದ್ದಾರೆ. ಉದ್ಘಾಟನಾ ಕಾರ್ಯಕ್ರಮಕ್ಕೂ ಮೊದಲೇ ಅಮೀರ್ ಖಾನ್ ಮತ್ತು ಕುಟುಂಬ ಆಗಮಿಸಿದೆ. ಲಾಲ್ ಸಿಂಗ್ ಚಡ್ಡಾ ಚಿತ್ರದ ನಟ ಈವೆಂಟ್‌ನಲ್ಲಿ ತಮ್ಮ ಹೊಸ ಲುಕ್ನಲ್ಲಿ ಆಗಮಿಸಿದ್ದಾರೆ.
ಅಮೀರ್ ಖಾನ್ ಈ ವಿಶೇಷ ಕಾರ್ಯಕ್ರಮಕ್ಕೆ ತುಂಬಾ ಸಿಂಪಲ್ ಆಗಿ ಆಗಮಿಸಿದ್ದಾರೆ. ಹಸಿರು ಕುರ್ತಾ, ಡೆನಿಮ್ ಪ್ಯಾಂಟ್ ಜೊತೆಗೆ ಕ್ಲಾಸಿ ಶೂ ಧರಿಸಿದ್ದರು. ಇನ್ನು ಅವರ ಮಗಳು ಇರಾ ಖಾನ್ ಕಪ್ಪು ಮತ್ತು ಬಿಳಿ ಉಡುಗೆಯನ್ನು ಮತ್ತು ಆಕೆಯ ಭಾವಿ ಪತಿ ನೂಪುರ್ ಶಿಕಾರೆ ಟುಕ್ಸೆಡೊವನ್ನು ಧರಿಸಿದ್ದರು. ಅಮೀರ್ ಅವರ ಮಕ್ಕಳಾದ ಜುನೈದ್ ಖಾನ್ ಮತ್ತು ಆಜಾದ್ ಕೂಡ ಈ ಕಾರ್ಯಕ್ರಮಕ್ಕೆ ಆಗಮಿಸಿದ್ದರು.
ತಮಿಳಿನ ಸೂಪರ್ ಸ್ಟಾರ್ ರಜನಿಕಾಂತ್ ಕೂಡ ಉದ್ಘಾಟನಾ ಕಾರ್ಯಕ್ರಮಕ್ಕೆ ಆಗಮಿಸಿದ್ದಾರೆ. ಅಮೀರ್ ಮತ್ತು ರಜನಿಕಾಂತ್ ಜೊತೆಗೆ, ಲೆಜೆಂಡರಿ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್ ಅವರ ಪತ್ನಿ ಅಂಜಲಿ ತೆಂಡೂಲ್ಕರ್ ಮತ್ತು ಅವರ ಮಗಳು ಸಾರಾ ತೆಂಡೂಲ್ಕರ್ ಕೂಡ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದಾರೆ. ಸಚಿನ್ ನೀಲಿ ಸೂಟ್‌ನಲ್ಲಿ ಧರಿಸಿದ್ದರೆ, ಪತ್ನಿ ಸಾಂಪ್ರದಾಯಿಕ ನೀಲಿ ಉಡುಗೆಯನ್ನು ಮಿಂಚಿದರು..
ಈ ಕಾರ್ಯಕ್ರಮದಲ್ಲಿ ಬಾಲಿವುಡ್ ಸೆಲೆಬ್ರಿಟಿಗಳಾದ ಏಕ್ತಾ ಕಪೂರ್, ಜೀತೇಂದ್ರ ಮತ್ತು ತುಷಾರ್ ಕಪೂರ್ , ವಿದ್ಯಾ ಬಾಲನ್, ಆಲಿಯಾ ಭಟ್ ಕೂಡ ಇದ್ದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ