ದೇಶಾದ್ಯಂತ ಮುಂಗಾರು ಮಳೆ ಅಬ್ಬರ: 6 ರಾಜ್ಯಗಳಲ್ಲಿ 537 ಬಲಿ

news18
Updated:August 10, 2018, 11:20 AM IST
ದೇಶಾದ್ಯಂತ ಮುಂಗಾರು ಮಳೆ ಅಬ್ಬರ:  6 ರಾಜ್ಯಗಳಲ್ಲಿ 537 ಬಲಿ
ಕೇರಳದಲ್ಲಿ ಮಳೆಯಿಂದ ಹಾನಿಯಾಗಿರುವ ದೃಶ್ಯ
  • News18
  • Last Updated: August 10, 2018, 11:20 AM IST
  • Share this:
ನ್ಯೂಸ್​ 18

ಬೆಂಗಳೂರು (ಆ.10): ಈ ಬಾರಿ ದೇಶದಲ್ಲಿ ವರುಣ ರೌದ್ರ ನರ್ತನವನ್ನು ತೋರಿದ್ದು, ಕರ್ನಾಟಕ, ತಮಿಳುನಾಡು, ಮಹಾರಾಷ್ಟ್ರ, ದೆಹಲಿ ಸೇರಿದಂತೆ ಅನೇಕ ಕಡೆ ಪ್ರವಾಹದ ವಾತವಾರಣ ನಿರ್ಮಾಣವಾಗಿತ್ತು.

ಇನ್ನು ಈ ಬಾರಿಯ ಮುಂಗಾರು ಜನರಿಗೆ ಖುಷಿಯ ಜೊತೆಗೆ ಬೇಸರವನ್ನು ಮೂಡಿಸೆದೆ. ಕಾರಣ ಈ ಬಾರಿ ಮಾನ್ಸೂನ್​ಗೆ ದೇಶದಲ್ಲಿ 537 ಜನ ಸಾವನ್ನಪ್ಪಿದ್ದಾರೆ. ಪ್ರವಾಹ, ಗುಡ್ಡ, ಮನೆ ಕುಸಿತ ಸೇರಿದಂತೆ ಮಳೆಯ ವಿವಿಧ ಕಾರಣಗಳಿಂದಾಗಿ ಜನರು ಪ್ರಾಣ ಕಳೆದುಕೊಂಡಿದ್ದಾರೆ.

ಗೃಹ ಸಚಿವರ ರಾಷ್ಟ್ರೀಯ ರುತ್ತು ಪ್ರತಿಕ್ರಿಯೆ ಕೇಂದ್ರ (ಎನ್​ಇಆರ್​ಸಿ) ಪ್ರಕಾರ ಮಹಾರಾಷ್ಟ್ರದಲ್ಲಿ 139 ಜನರು, ಕೇರಳದಲ್ಲಿ 126, ಪಶ್ಚಿಮ ಬಂಗಾಳದಲ್ಲಿ 116, ಉತ್ತರ ಪ್ರದೇಶದಲ್ಲಿ 70, ಗುಜರಾತ್​ನಲ್ಲಿ 52 ಮತ್ತು ಅಸ್ಸಾಂನಲ್ಲಿ 34 ಜನ ಸಾವನ್ನಪ್ಪಿದ್ದಾರೆ.

ಮಹಾರಾಷ್ಟ್ರದ 26 ಜಿಲ್ಲೆಗಳಲ್ಲಿ ಅಧಿಕ ಮಳೆಯಾದರೆ, ಪಶ್ಚಿಮ ಬಂಗಾಳದಲ್ಲಿ 22, ಅಸ್ಸಾಂನಲ್ಲಿ 21 ಕೇರಳದಲ್ಲಿ 14 ಗುಜರಾತ್​ನಲ್ಲಿ 10, ಕರ್ನಾಟಕದಲ್ಲಿ ಮಲೆನಾಡು ,ಕರಾವಳಿ,ಮಡಿಕೇರಿ ಪ್ರದೇಶಗಳಲ್ಲಿ ಅತಿಹೆಚ್ಚು ಮಳೆಯಾಗಿದೆ.

ಅಸ್ಸಾಂನಲ್ಲಿ ಮಳೆಗೆ 10.17 ಜನರು ಮಳೆ, ಪ್ರವಾಹಕ್ಕೆ ನಲುಗಿದ್ದು, 2.17ಜನ ನಿರಾಶ್ರಿತರ ತಾಣದಲ್ಲಿ ಆಶ್ರಯ ಪಡೆದಿದ್ದಾರೆ. ಅಸ್ಸಾಂನಲ್ಲಿ ರಾಷ್ಟ್ರೀಯ ವಿಪತ್ತು ನಿರ್ವಹಣಾ ತಂಡದ 12 ತಂಡ ಕಾರ್ಯ ನಿರ್ವಹಿಸಿದ್ದು, ಒಂದೊಂದು ತಂಡದಲ್ಲಿಯೂ 45ಜನರು ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ.

ಪಶ್ಚಿಮಬಂಗಾಳದಲ್ಲಿ 1.61 ಲಕ್ಷ ಜನರು ಮಳೆಯಿಂದ ತೊಂದರೆಗೆ ಒಳಗಾಗಿದ್ದು, ಅಲ್ಲಿ 8 ಎನ್​ಡಿಆರ್​ಎಫ್​ ತಂಡ ಕಾರ್ಯನಿರ್ವಹಿಸಿದೆ. ಅಲ್ಲಿ ಸುರಿಯುತ್ತಿರುವ ಭಾರೀ ಮಳೆಗೆ 19ಜನರು ಗಂಭೀರವಾಗಿ ಗಾಯಗೊಂಡಿದ್ದು, 4 ಜನರು ನಾಪತ್ತೆಯಾಗಿದ್ದಾರೆ.ಗುಜರಾತ್​ನಲ್ಲಿ 15,912ಜನರನ್ನು ಪ್ರವಾಹದ ಸ್ಥಳದಿಂದ ಸ್ಥಳಾಂತರಿಸಲಾಗಿದೆ, ಏಳು ಎನ್​ಡಿಆರ್​ಎಫ್​ ತಂಡ ಕಾರ್ಯನಿರ್ವಹಿಸಿದೆ.

ದಕ್ಷಿಣ ರಾಜ್ಯಗಳಲ್ಲಿ 4 ಎನ್​ಡಿಆರ್​ಎಫ್​ ತಂಡ ಕಾರ್ಯ ನಿರ್ವಹಣೆ ಮಾಡುತ್ತಿದೆ, ಅದರಲ್ಲಿ ಎರಡು ಮಹಾರಾಷ್ಟ್ರದಲ್ಲಿ ಕಾರ್ಯ ನಿರ್ವಹಿಸುತ್ತಿದ. ಮಹಾರಾಷ್ಟ್ರದಲ್ಲಿ ಅಧಿಕ ಮಳೆಗೆ ಈಗಾಗಲೇ 117 ಜನರ ಗಾಯಗೊಂಡಿದ್ದಾರೆ.

ದಕ್ಷಿಣ ರಾಜ್ಯವಾದ ಕೇರಳ ಮತ್ತು ಕರ್ನಾಟಕದಲ್ಲಿ ಅಧಿಕ ಮಳೆಯಾಗಿದ್ದು, ಕೇರಳದಲ್ಲಿ ಈವರೆಗೆ 26 ಜನ ಸಾವನ್ನಪ್ಪಿದ್ದಾರೆ. ಕೇರಳದ ಎಲ್ಲಾ ಜಲಾಶಯಗಳು ಭರ್ತಿಯಾಗಿದ್ದು, ಅವುಗಳ ಗೇಟ್​ ತೆರೆಯಲಾಗಿದ್ದು, ನದಿ ಪಾತ್ರಗಳಲ್ಲಿ ಪ್ರವಾಹದ ಪರಿಸ್ಥಿತಿ ನಿರ್ಮಾಣವಾಗಿದೆ.

 
First published: August 10, 2018, 11:20 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading