ಹೀಗೊಂದು ವಿಚಿತ್ರ ಖಾಯಿಲೆ: ಸತತ ಒಂದು ಗಂಟೆಗಳ ಕಾಲ ರಕ್ತ ಕಣ್ಣೀರಿಟ್ಟ ವ್ಯಕ್ತಿ..!

ಕಣ್ಣಿಂದ ರಕ್ತ ಸುರಿಯುತ್ತಿರುವ ಬಗ್ಗೆ ವೈದ್ಯರಿಗೆ ತಿಳಿಸಿದಾಗ ವೈದ್ಯರು ಕೂಡ ದಂಗಾಗಿದ್ದಾರೆ.

zahir | news18
Updated:November 6, 2018, 6:20 PM IST
ಹೀಗೊಂದು ವಿಚಿತ್ರ ಖಾಯಿಲೆ: ಸತತ ಒಂದು ಗಂಟೆಗಳ ಕಾಲ ರಕ್ತ ಕಣ್ಣೀರಿಟ್ಟ ವ್ಯಕ್ತಿ..!
@TV Tropes
zahir | news18
Updated: November 6, 2018, 6:20 PM IST
-ನ್ಯೂಸ್ 18 ಕನ್ನಡ

'ರಕ್ತ ಕಣ್ಣೀರು' ಎಂದರೆ ಎಲ್ಲರಿಗೂ ಉಪೇಂದ್ರ ಅಭಿನಯದ ಸಿನಿಮಾ ಕಣ್ಮುಂದೆ ಬರುತ್ತದೆ. ನೆತ್ತರ ಕಣ್ಣೀರು ಎಂಬುದು ಒಂದು ಕಲ್ಪನೆ ಎಂದು ಹೆಚ್ಚಿನವರು ಭಾವಿಸಿದ್ದಾರೆ. ಆದರೆ ಇಂಗ್ಲೆಂಡ್​ನಲ್ಲಿ ವ್ಯಕ್ತಿಯೊಬ್ಬರು ರಕ್ತ ಕಣ್ಣೀರು ಸುರಿಸಿದ್ದಾರೆ. ಅದು ಸತತ ಒಂದು ಗಂಟೆಗಳ ಕಾಲ. ಅಚ್ಚರಿಯಾದರೂ ಇದು ಸತ್ಯ.

52 ವರ್ಷದ ವ್ಯಕ್ತಿಯೊಬ್ಬರ ಕಣ್ಣಿಂದ ಇದ್ದಕ್ಕಿದಂತೆ ನೆತ್ತರು ಸುರಿಯಲು ಆರಂಭಿಸಿದೆ. ಮೊದಲಿಗೆ ಇದನ್ನು ಗಮನಿಸಿದ ಈ ವ್ಯಕ್ತಿ ಸೀದಾ ಕೋಣೆಗೆ ಹೋಗಿ ಪರೀಕ್ಷಿಸಿದ್ದಾರೆ. ಈ ವೇಳೆ ಕಣ್ಣಿಂದ ರಕ್ತ ಸುರಿಯುತ್ತಿರುವುದು ಗೊತ್ತಾಗಿದೆ. ಆದರೆ ರಕ್ತ ಬರುವಾಗ ಯಾವುದೇ ನೋವು ಆಗುತ್ತಿರಲಿಲ್ಲ. ಕಣ್ಣಿನ ಗುಡ್ಡೆಗಳು ಚಲಿಸುತ್ತಿದ್ದಂತೆ ಕಣ್ಣಲ್ಲಿ ರಕ್ತ ಚಿಮ್ಮುತ್ತಿತ್ತು. ಒಂದು ಗಂಟೆಗಳ ಕಾಲ ಈ ರೀತಿಯ ಸಮಸ್ಯೆ ಕಾಣಿಸಿಕೊಂಡಿದೆ.

ಈ ಬಗ್ಗೆ ವೈದ್ಯರಿಗೆ ತಿಳಿಸಿದಾಗ ವೈದ್ಯರು ಕೂಡ ಒಂದು ಬಾರಿ ದಂಗಾಗಿದ್ದಾರೆ. ನಂತರ ಹೆಚ್ಚಿನ ಪರೀಕ್ಷೆಗೆ ಒಳಪಡಿಸಿದಾಗ  ವ್ಯಕ್ತಿಯ ಕಣ್ಣುಗಳಿಗೆ ಅಪರೂಪದ haemolacria ಖಾಯಿಲೆಗೆ ತುತ್ತಾಗಿರುವುದು ಪತ್ತೆಯಾಯಿತು. ಕಣ್ಣಿನ ಸೋಂಕುಗಳು, ಉರಿಯೂತ ಅಥವಾ ಸುತ್ತಲಿನ ರಚನೆಗಳ ಗೆಡ್ಡೆಗಳಿಂದ ಈ ರೀತಿಯಾಗಿ ರಕ್ತಸ್ರಾವವಾಗುತ್ತದೆ. ಇದೇ ಸಮಸ್ಯೆಯಿಂದ ರಕ್ತ ಕಣ್ಣೀರು ಸುರಿಯುತ್ತಿದೆ ಎಂಬುದನ್ನು ವೈದ್ಯರು ಪತ್ತೆ ಹಚ್ಚಿದ್ದಾರೆ ಎಂದು ಇಂಗ್ಲೆಂಡ್ ಜರ್ನಿ ಆಫ್ ಮೆಡಿಸಿನ್​ನಲ್ಲಿ ಪ್ರಕಟಿಸಲಾದ ವರದಿಯಲ್ಲಿ ತಿಳಿಸಲಾಗಿದೆ.

ಇದನ್ನೂ ಓದಿ: ಲವ್ - ಸೆಕ್ಸ್​- ದೋಖಾ: ಗಂಡನನ್ನು ಕೊಲ್ಲಲು ಹೆಂಡತಿಯ ಖತರ್ನಾಕ್ ಪ್ಲಾನ್..!

ಈ ಖಾಯಿಲೆಗೆ ಸರಿಯಾದ ಚಿಕಿತ್ಸೆ ಪಡೆಯದಿದ್ದರೆ ಕಣ್ಣಿನ ಕ್ಯಾನ್ಸರ್ ಉಂಟಾಗುವ ಸಾಧ್ಯತೆ ಕೂಡ ಇದೆಯಂತೆ. ಸದ್ಯ ರಕ್ತ ಕಣ್ಣೀರಿನ ವ್ಯಕ್ತಿಗೆ ಐ ಡ್ರಾಪ್ಸ್​ಗಳನ್ನು ನೀಡಲಾಗಿದ್ದು, ಈ ಔಷಧಗಳಿಂದ ಕಣ್ಣಿನ ಒತ್ತಡ ಕಡಿಮೆಯಾಗುತ್ತದೆ. ಅಲ್ಲದೆ  ಒಂದು ವರ್ಷದವರೆಗೆ ಚಿಕಿತ್ಸೆ ಮುಂದುವರೆಸಿದರೆ  ಈ ಸಮಸ್ಯೆಯು ಬಗೆಹರಿಸಿಕೊಳ್ಳಬಹುದು ಎಂದು ತನ್ನ ವೈದ್ಯರು ತಿಳಿಸಿದ್ದಾರೆ.
Loading...

First published:November 6, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...
  • I agree to receive emails from NW18

  • I promise to vote in this year's elections no matter what the odds are.

    Please check above checkbox.

  • SUBMIT

Thank you for
taking the pledge

But the job is not done yet!
vote for the deserving condidate
this year

Click your email to know more

Disclaimer:

Issued in public interest by HDFC Life. HDFC Life Insurance Company Limited (Formerly HDFC Standard Life Insurance Company Limited) (“HDFC Life”). CIN: L65110MH2000PLC128245, IRDAI Reg. No. 101 . The name/letters "HDFC" in the name/logo of the company belongs to Housing Development Finance Corporation Limited ("HDFC Limited") and is used by HDFC Life under an agreement entered into with HDFC Limited. ARN EU/04/19/13618
T&C Apply. ARN EU/04/19/13626