Mann ki Baat: ಭಾರತಕ್ಕೆ ಗೆಳೆತನ ಕಾಪಾಡಿಕೊಂಡು ಹೋಗುವುದೊಂದೇ ಅಲ್ಲ, ಪ್ರತೀಕಾರ ತೀರಿಸಿಕೊಳ್ಳುವುದೂ ಗೊತ್ತು; ಚೀನಾಗೆ ಮೋದಿ ಎಚ್ಚರಿಕೆ

ಸ್ನೇಹವನ್ನು ಹೇಗೆ ಕಾಪಾಡಿಕೊಳ್ಳಬೇಕೆಂದು ಭಾರತಕ್ಕೆ ಗೊತ್ತಿದೆ. ಆದರೆ ಇದೇ ವೇಳೆ ಅಗತ್ಯವಿದ್ದಲ್ಲಿ ಪ್ರತೀಕಾರ ತೀರಿಸಿಕೊಳ್ಳುವುದು ಸಹ ಗೊತ್ತಿದೆ ಎಂದು ಗಾಲ್ವಾನ್​ ಸಂಘರ್ಷದ ವಿಚಾರವಾಗಿ ಪ್ರಧಾನಿ ಮೋದಿ ಚೀನಾಗೆ ಎಚ್ಚರಿಕೆ ನೀಡಿದ್ದಾರೆ.

news18-kannada
Updated:June 28, 2020, 3:35 PM IST
Mann ki Baat: ಭಾರತಕ್ಕೆ ಗೆಳೆತನ ಕಾಪಾಡಿಕೊಂಡು ಹೋಗುವುದೊಂದೇ ಅಲ್ಲ, ಪ್ರತೀಕಾರ ತೀರಿಸಿಕೊಳ್ಳುವುದೂ ಗೊತ್ತು; ಚೀನಾಗೆ ಮೋದಿ ಎಚ್ಚರಿಕೆ
ಪ್ರಧಾನಿ ಮೋದಿ
  • Share this:
ನವದೆಹಲಿ(ಜೂ.28): ಪ್ರಧಾನಿ ನರೇಂದ್ರ ಮೋದಿ ಇಂದು 66ನೇ ಆವೃತ್ತಿಯ ಮನ್​ ಕಿ ಬಾತ್ ರೇಡಿಯೋ ಕಾರ್ಯಕ್ರಮದಲ್ಲಿ ದೇಶವನ್ನು ಉದ್ದೇಶಿದಿ ಮಾತನಾಡಿದ್ದಾರೆ. ಮೋದಿ ದೇಶದಲ್ಲಿನ ಪ್ರಸ್ತುತ ವಿಷಯಗಳನ್ನು ಪ್ರಸ್ತಾಪ ಮಾಡಿದ್ದಾರೆ.  ಪ್ರಮುಖವಾಗಿ ಗಾಲ್ವಾನ್​ ಕಣಿವೆಯಲ್ಲಿ ಚೀನಾ-ಭಾರತ ಸಂಘರ್ಷ ಹಾಗೂ ದೇಶವನ್ನು ಬೆಂಬಿಡದೆ ಕಾಡುತ್ತಿರುವ ಮಹಾಮಾರಿ ಕೊರೋನಾ ಕುರಿತಾಗಿ ಮೋದಿ ಮನ್​ ಕಿ ಬಾತ್ ಕಾರ್ಯಕ್ರಮದಲ್ಲಿ ಮಾತನಾಡಿದ್ದಾರೆ.

ಭಾರತಕ್ಕೆ ಗೆಳೆತನವನ್ನು ಕಾಪಾಡಿಕೊಳ್ಳುವುದು ಗೊತ್ತು, ಇದೇ ವೇಳೆ, ಅಗತ್ಯ ಬಿದ್ದರೆ ಪ್ರತೀಕಾರ ತೀರಿಸಿಕೊಳ್ಳುವುದು ಗೊತ್ತು ಎಂದು ಮೋದಿ ಚೀನಾಗೆ ಎಚ್ಚರಿಕೆ ನೀಡಿದ್ದಾರೆ. ಗಾಲ್ವಾನ್​ ಕಣಿವೆಯಲ್ಲಿ ಹುತಾತ್ಮರಾದ 20 ಮಂದಿ ಭಾರತೀಯ ಯೋಧರು ತಮ್ಮ ತಾಯ್ನಾಡಿಗಾಗಿ ಪ್ರಾಣ ತೆತ್ತಿದ್ದಾರೆ ಎಂದು ಮೋದಿ ಹೇಳಿದ್ದಾರೆ.

ಜೊತೆಗೆ, ಭಾರತ ತನ್ನ ಗಡಿ ಮತ್ತು ಸಾರ್ವಭೌಮತ್ವವನ್ನು ರಕ್ಷಿಸಿಕೊಳ್ಳುವಲ್ಲಿ ಹೊಂದಿರುವ ಬದ್ಧತೆಯನ್ನು ಇಡೀ ವಿಶ್ವವೇ ನೋಡಿದೆ. ನಮ್ಮ ವೀರ ಯೋಧರು ತಾಯಿ ನಾಡನ್ನು ರಕ್ಷಿಸಲು ತಮ್ಮ ಪ್ರಾಣ ತ್ಯಾಗ ಮಾಡಿದ್ದಾರೆ. ಆ ವೀರ ಸೈನಿಕರ ಮೇಲೆ ಭಾರತಕ್ಕೆ ಅಪಾರ ಗೌರವವಿದೆ ಎಂದರು.

Boycott China: ಚೀನಾ ಹೂಡಿಕೆ ವಿರೋಧಿಸಿ ಜೊಮ್ಯಾಟೋ ಟಿ-ಶರ್ಟ್​ ಸುಟ್ಟು ಪ್ರತಿಭಟನೆ

ಮುಂದುವರೆದ ಅವರು, ಲಡಾಖ್​ನಲ್ಲಿ ಭೂಮಿ ಕಬಳಿಸಲು ಬಂದವರಿಗೆ ಈಗಾಗಲೇ ತಕ್ಕ ಉತ್ತರ ನೀಡಲಾಗಿದೆ. ಶಾಂತಿ ಹಾಗೂ ವಿಕಾಸದ ಹಾದಿಯಲ್ಲಿ ಭಾರತ ಹಿಂದೆಂದಿಗಿಂತಲೂ ಮುಂದೆ ಇದೆ ಎಂದು ಹೇಳಿದರು.

ಇನ್ನು, ದೇಶಕ್ಕೆ ದೊಡ್ಡ ಕಂಟಕವಾಗಿರುವ ಕೋವಿಡ್-19 ಕುರಿತಾಗಿ ಮೋದಿ ಮಾತನಾಡಿದರು. ಈ ಕೊರೋನಾ ವೈರಸ್​​ನಿಂದಾಗಿ ಇಡೀ ಮನುಕುಲವೇ ಸಂಕಟದಲ್ಲಿದೆ. ಒಂದೆಡೆ ಸಾಂಕ್ರಾಮಿಕ ಸೋಂಕು, ಮತ್ತೊಂದೆಡೆ ನೆರೆಯ ದೇಶಗಳ ಮಿಲಿಟರಿ ದುರ್ವರ್ತನೆ. ಈ ಎಲ್ಲಾ ಸಂಕಷ್ಟಗಳನ್ನು ಎದುರಿಸಿ ನಿಲ್ಲುವುದು ಭಾರತದ ಇತಿಹಾಸ. ದೇಶದ 130 ಕೋಟಿ ಜನರ ಮೇಲೆ ನನಗೆ ಅಚಲವಾದ ನಂಬಿಕೆ ಇದೆ ಎಂದರು.
ದೇಶ ಈಗ ಲಾಕ್​ಡೌನ್​ನಿಂದ ಅನ್​​ಲಾಕ್​​ನತ್ತ ಸಾಗಿದೆ. ಈ ಅನ್​ಲಾಕ್​ ಸಮಯದಲ್ಲಿ ಜನರು ಜಾಗರೂಕರಾಗಿರಬೇಕು. ಸರ್ಕಾರದ ನಿಯಮಗಳನ್ನು ಪಾಲಿಸಬೇಕು. ಜೊತೆಗೆ ಕಡ್ಡಾಯವಾಗಿ ಮಾಸ್ಕ್​ ಧರಿಸಿ, ಪರಸ್ಪರ 6 ಅಡಿ ಸಾಮಾಜಿಕ ಅಂತರ ಪಾಲನೆ ಮಾಡಿ. ಮನೆಯಿಂದ ಹೊರಗೆ ಹೋಗುವಾದ ಮಾಸ್ಕ್​ ಧರಿಸಿಕೊಂಡೇ ಹೋಗಿ ಎಂದು ಪ್ರಧಾನಿ ಮೋದಿ ಜನರಲ್ಲಿ ಮನವಿ ಮಾಡಿದರು.

 
First published:June 28, 2020
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading