Mann Ki Baat: ಮೊದಲ ಬಾರಿಗೆ ಖಾಸಗಿ ಚಾನೆಲ್​ನಲ್ಲೂ ಮೋದಿ ಮನ್ ಕಿ ಬಾತ್, ನನಗೆ ಅಧಿಕಾರದ ಆಸೆ ಇಲ್ಲ ಎಂದ ಪ್ರಧಾನಿ

Mann Ki Bat : ಮನ್​ ಕೀ ಬಾತ್ ಕೊನೆಯಲ್ಲಿ ಕೋವಿಡ್ -19 ಸಾಂಕ್ರಾಮಿಕ ರೋಗವು ಇನ್ನೂ ಮುಗಿದಿಲ್ಲ ಮತ್ತು ರೋಗದ ವಿರುದ್ಧ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ ಎಂದು ಮೋದಿ ಎಚ್ಚರಿಸಿದ್ದಾರೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಜನರೊಂದಿಗೆ ದೇಶ(Country)ದ ಆಗು ಹೋಗುಗಳನ್ನು ಮತ್ತು ಮನದ ಮಾತುಗಳನ್ನು ಹಂಚಿಕೊಳ್ಳಲು ಆರಂಭವಾಗಿದ್ದ ಮನ್​ ಕೀ ಬಾತ್(Mann Ki Baat) ಕಾರ್ಯಕ್ರಮದ 83 ಸಂಚಿಕೆ ಇಂದು ಪ್ರಸಾರವಾಗಿದೆ. 3 ಅಕ್ಟೋಬರ್ 2014 ಆರಂಭಗೊಂಡ ಈ ಮನ್​  ಕೀ ಬಾತ್ ಸರ್ಕಾರ ಮತ್ತು ಜನರ ನಡುವಿನ ಸಂಬಂಧ ಗಟ್ಟಿಗೊಳಿಸಲು ಜಾರಿ ಮಾಡಿದ ಕಾರ್ಯಕ್ರಮವಾಗಿದೆ. ಆಲ್ ಇಂಡಿಯಾ ರೇಡಿಯೋ , DD ನ್ಯಾಷನಲ್ (DD National)ಮತ್ತು ಡಿಡಿ ನ್ಯೂಸ್(DD News) ನಲ್ಲಿ ಪ್ರಸಾರವಾಗುತ್ತಿತ್ತು.  ಇನ್ನು ಮನ್​ ಕೀ ಬಾತ್​ ಮೂಲ ಆವೃತ್ತಿ ಹಿಂದಿಯಲ್ಲಿ ಪ್ರಸಾರವಾಗಲಿದೆ. ಅಂದರೆ ನರೇಂದ್ರ ಮೋದಿ (Narendra Modi)ಹಿಂದಿಯಲ್ಲಿ ಮಾತನಾಡಲಿದ್ದಾರೆ. ಅದಾದ ಬಳಿಕ ಆಲ್ ಇಂಡಿಯಾ ರೇಡಿಯೋ ಸಂಜೆ 8 ಗಂಟೆ ಹೊತ್ತಿಗೆ ಆಯಾ ಪ್ರಾದೇಶಿಕ ಭಾಷೆಗಳಲ್ಲಿ ಪ್ರಸಾರ ಮಾಡಲಿದೆ. 2015 ರ ಜನವರಿಯಲ್ಲಿ, ಅಂದಿನ ಅಮೆರಿಕ ಅಧ್ಯಕ್ಷ ಬರಾಕ್ ಒಬಾಮಾ ಕೂಡ ಮೋದಿಯೊಂದಿಗೆ ಕಾರ್ಯಕ್ರಮದಲ್ಲಿ ಭಾಗವಹಿಸಿ, ಮಾತನಾಡಿದ್ದರು.

ಆದರೆ ಇದೀಗ ಖಾಸಗಿ ವೇದಿಕೆಯಲ್ಲಿ ಸಹ ಪ್ರಸಾರವಾಗಲಿದೆ. ಹೌದು, ಇದೀಗ ಡಿಜಿಟಲ್ ಮನರಂಜನಾ ಕಂಪನಿಯಾದ ಹಂಗಾಮ ಒಪ್ಪಂದ ಮಾಡಿಕೊಂಡಿದ್ದು ತನ್ನ ಆ್ಯಪ್​ನಲ್ಲಿ ಮನ್​ ಕೀ ಬಾತ್ ಪ್ರಸಾರ ಮಾಡಲಿದೆ. ಭಾರತೀಯ ಜನಶಕ್ತಿ ಮೇಲೆ ಕೇಂದ್ರೀಕರಿಸಿರುವ ಈ ಕಾರ್ಯಕ್ರಮಕ್ಕೆ ಜನರಿಂದ ಸಹ  ಉತ್ತಮ ಬೆಂಬಲ ದೊರೆತಿದೆ. ಈ ರೇಡಿಯೋ ಕಾರ್ಯಕ್ರಮದಲ್ಲಿ ಕಾಲ ಕಾಲಕ್ಕೆ ತಕ್ಕಂತೆ ಮಾಹಿತಿಗಳನ್ನು ಮತ್ತು ಸಲಹೆಗಳನ್ನು ಹಂಚಿಕೊಳ್ಳುತ್ತಾರೆ.

ಇಂದು 83ನೇ ಆವೃತ್ತಿಯ ಮನ್​ ಕೀ ಬಾತ್​ ಪ್ರಸಾರವಾಗಲಿದ್ದು, ಪ್ರಧಾನಿ ಯಾವೆಲ್ಲ ವಿಚಾರಗಳ ಬಗ್ಗೆ ಮಾತನಾಡಬಹುದು ಎಂಬ ಕುತೂಹಲ ಸಹಜವಾಗಿಯೇ ಇತ್ತು.

ಅಧಿಕಾರ ಬೇಡ, ಜನ ಸೇವೆಯೇ ನನ್ನ ಗುರಿ 

ದೇಶದ ಜನರನ್ನುದ್ದೇಶಿಸಿ ಮಾತನಾಡಿದ ಸರ್ಕಾರದ ಪ್ರಯತ್ನದಿಂದ, ಸರ್ಕಾರದ ಯೋಜನೆಗಳಿಂದ ಯಾವುದೇ ಬದುಕು ಹೇಗೆ ಬದಲಾಯಿತು, ಆ ಬದಲಾದ ಬದುಕಿನ ಅನುಭವವೇನು? ಇದನ್ನು ಕೇಳಿದಾಗ ನಮಗೂ ಸಂಚಲನ ಮೂಡುತ್ತದೆ. ಇದು ಮನಸ್ಸಿಗೆ ತೃಪ್ತಿಯನ್ನು ನೀಡುತ್ತದೆ ಮತ್ತು ಆ ಯೋಜನೆಯನ್ನು ಜನರ ಬಳಿಗೆ ತೆಗೆದುಕೊಂಡು ಹೋಗಲು ಸ್ಫೂರ್ತಿ ನೀಡುತ್ತದೆ. ಇದನ್ನೇ ನಾನು ಜೀವನದಿಂದ ಹುಡುಕುತ್ತೇನೆ. ನಾನು ಅಧಿಕಾರದಲ್ಲಿರಲು ಬಯಸುವುದಿಲ್ಲ, ಜನರ ಸೇವೆಯೇ ನನ್ನ ಗುರಿ ಎಂದಿದ್ದಾರೆ.

ಇದನ್ನೂ ಓದಿ: ಒಮಿಕ್ರಾನ್ ವೈರಸ್ ಬಗ್ಗೆ ICMR ವಿಜ್ಞಾನಿಗಳು ಹೇಳಿದ್ದೇನು ಗೊತ್ತೇ?

ಸಬ್ಕಾ ಸಾಥ್ ಸಬ್ಕಾ ವಿಕಾಸ್​ಗೆ ಉದಾರಣೆ ನೀಡಿದ ಮೋದಿ

ಜಲೌನ್‌ನಲ್ಲಿ ನೂನ್ ನದಿ ಎಂಬ ನದಿ ಇತ್ತು. ಕ್ರಮೇಣ, ನದಿಯು ಅಳಿವಿನ ಅಂಚಿಗೆ ಬಂದಿತು. ಇದರಿಂದ ಈ ಭಾಗದ ರೈತರಿಗೆ ಸಂಕಷ್ಟ ಎದುರಾಗಿದೆ. ಜಲೌನ್‌ನ ಜನರು ಈ ವರ್ಷ ಸಮಿತಿಯನ್ನು ರಚಿಸಿದರು ಮತ್ತು ನದಿಯನ್ನು ಪುನರುಜ್ಜೀವನಗೊಳಿಸಿದರು. ಇದು ‘ಸಬ್ಕಾ ಸಾಥ್, ಸಬ್ಕಾ ವಿಕಾಸ್’ಗೆ ಉದಾಹರಣೆ ಎಂದಿದ್ದಾರೆ.

ದೇಶದ ಯೋಧರ ಸ್ಮರಣೆ

ಇನ್ನೆರಡು ದಿನಗಳಲ್ಲಿ ಡಿಸೆಂಬರ್ ತಿಂಗಳು ಆರಂಭವಾಗಲಿದೆ. ದೇಶವು ನೌಕಾಪಡೆಯ ದಿನ ಮತ್ತು ಸಶಸ್ತ್ರ ಪಡೆಗಳ ಧ್ವಜ ದಿನವನ್ನು ಆಚರಿಸುತ್ತದೆ. ಡಿಸೆಂಬರ್ 16 ರಂದು ದೇಶವು 1971 ರ ಯುದ್ಧದ ಸುವರ್ಣ ಮಹೋತ್ಸವವನ್ನು ಆಚರಿಸುತ್ತಿದೆ ಎಂದು ನಮಗೆಲ್ಲರಿಗೂ ತಿಳಿದಿದೆ. ಈ ಎಲ್ಲಾ ಸಂದರ್ಭಗಳಲ್ಲಿ, ನಾನು ದೇಶದ ಭದ್ರತಾ ಪಡೆಗಳನ್ನು ನೆನಪಿಸಿಕೊಳ್ಳುತ್ತೇನೆ ಎಂದು ಸೈನಿಕರನ್ನು ನೆನಪಿಸಿಕೊಂಡಿದ್ದಾರೆ.

 ಅಂಬೇಡ್ಕರ್ ಕಾರ್ಯ ನೆನೆದ ಪ್ರಧಾನಿ

ಡಿಸೆಂಬರ್ ತಿಂಗಳಲ್ಲಿ ನಮಗೆ ಮತ್ತೊಂದು ದೊಡ್ಡ ದಿನ ಬರುತ್ತದೆ, ಇದರಿಂದ ನಾವು ಸ್ಫೂರ್ತಿ ಪಡೆಯಬಹುದು. ಡಿಸೆಂಬರ್ 6 ರಂದು ಬಾಬಾಸಾಹೇಬ್ ಅಂಬೇಡ್ಕರ್ ಅವರ ಪುಣ್ಯತಿಥಿ. ಬಾಬಾ ಸಾಹೇಬರು ದೇಶ ಮತ್ತು ಸಮಾಜಕ್ಕಾಗಿ ತಮ್ಮ ಕರ್ತವ್ಯಗಳನ್ನು ನಿರ್ವಹಿಸಲು ತಮ್ಮ ಇಡೀ ಜೀವನವನ್ನು ಮುಡಿಪಾಗಿಟ್ಟಿದ್ದರು. ನಮ್ಮ ಸಂವಿಧಾನದ ಮೂಲ ಸ್ಪೂರ್ತಿಯು ನಮ್ಮೆಲ್ಲರಿಂದ ನಮ್ಮ ಕರ್ತವ್ಯಗಳನ್ನು ನಿರ್ವಹಿಸುವುದು ಎಂಬುದನ್ನು ನಾವು ದೇಶವಾಸಿಗಳು ಎಂದಿಗೂ ಮರೆಯಬಾರದು ಎಂದು ಮೋದಿ ಹೇಳಿದರು.

ಪರಿಸರ ಉಳಿವಿನಂತ ಗಮನ ನೀಡಿ ಎಂದು ಕರೆ ನೀಡಿದ ಮೋದಿ

ನಾವು ಪ್ರಕೃತಿಯನ್ನು ಸಂರಕ್ಷಿಸಿದಾಗ, ಅದು ಪ್ರತಿಯಾಗಿ ನಮಗೆ ಪೋಷಣೆ ಮತ್ತು ರಕ್ಷಣೆಯನ್ನು ನೀಡುತ್ತದೆ. ಹಾಗಾಗಿ ನಾವು ಪರಿಸರವನ್ನು ಹಾಳು ಮಾಡದೇ ಸಂರಕ್ಷಣೆ ಮಾಡಬೇಕು.

ಇದನ್ನೂ ಓದಿ: ಪಿಎಂ ಕಿಸಾನ್ ಯೋಜನೆಯ 10ನೇ ಕಂತಿನ ಹಣ ಇನ್ನೂ ಖಾತೆಗೆ ಬಂದಿಲ್ವಾ?; ಹಾಗಾದ್ರೆ ಈ ರೀತಿ ಮಾಡಿ

ಮನ್​ ಕೀ ಬಾತ್ ಕೊನೆಯಲ್ಲಿ ಕೋವಿಡ್ -19 ಸಾಂಕ್ರಾಮಿಕ ರೋಗವು ಇನ್ನೂ ಮುಗಿದಿಲ್ಲ ಮತ್ತು ರೋಗದ ವಿರುದ್ಧ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ ಎಂದು ಮೋದಿ ಎಚ್ಚರಿಸಿದ್ದಾರೆ.
Published by:Sandhya M
First published: