Manmohan Singh| ಏಮ್ಸ್​ನಲ್ಲಿ ಕೇಂದ್ರ ಆರೋಗ್ಯ ಸಚಿವ ಮಾಂಡವೀಯ ನಡವಳಿಕೆಗೆ ಮನಮೋಹನ್ ಸಿಂಗ್ ಮಗಳು ಬೇಸರ

ಸಚಿವ ಮನ್‌ಸುಖ್‌ ಮಾಂಡವೀಯ ಅವರ ವರ್ತನೆಗೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ. ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರನ್ನು ಆಸ್ಪತ್ರೆಯಲ್ಲಿ ಭೇಟಿಯಾಗುವಾಗಲೂ ಸಹ ಛಾಯಾ ಗ್ರಾಹಕರ ಜೊತೆಗೆ ತೆರಳಬೇಕೆ? ಎಂದು ಹಲವರು ಪ್ರಶ್ನಿಸಿದ್ದಾರೆ.

ಕೇಂದ್ರ ಸಚಿವ ಮನ್​ಸುಖ್ ಮಾಂಡವೀಯ.

ಕೇಂದ್ರ ಸಚಿವ ಮನ್​ಸುಖ್ ಮಾಂಡವೀಯ.

 • Share this:
  ನವ ದೆಹಲಿ (ಅಕ್ಟೋಬರ್​ 16); ಮಾಜಿ ಪ್ರಧಾನಿ ಮನಮೋಹನ್​ ಸಿಂಗ್ ಆರೋಗ್ಯದಲ್ಲಿ ಏರುಪೇರಾಗಿದ್ದು, ಅವರನ್ನು ಇತ್ತೀಚೆಗೆ ದೆಹಲಿಯ ಏಮ್ಸ್​ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಖ್ಯಾತ ಆರ್ಥಿಕ ತಜ್ಞರೂ ಆಗಿರುವ ಮನಮೋಹನ್​ ಸಿಂಗ್ ಶೀಘ್ರದಲ್ಲಿ ಗುಣಮುಖರಾಗಬೇಕು ಎಂದು ಇಡೀ ದೇಶ ಹಾರೈಸುತ್ತಿದೆ. ವಿಶ್ವನಾಯಕರೂ ಸಹ ಮನಮೋಹನ್ ಸಿಂಗ್ ಆರೋಗ್ಯದ ಬಗ್ಗೆ ವಿಚಾರಿಸುತ್ತಿದ್ದಾರೆ. ಆದರೆ, ನವದೆಹಲಿಯಲ್ಲಿನ ಆಲ್‌ ಇಂಡಿಯಾ ಇನ್‌ಸ್ಟಿಟ್ಯೂಟ್‌ ಆಫ್‌ ಮೆಡಿಕಲ್‌ ಸೈನ್ಸ್‌ (AIIMS)ನಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮಾಜಿ ಪ್ರಧಾನಿ ಡಾ.ಮನಮೋಹನ ಸಿಂಗ್‌ ಅವರನ್ನು ನೋಡಲು ಬಂದ ಕೇಂದ್ರ ಆರೋಗ್ಯ ಸಚಿವ ಮನ್‌ಸುಖ್‌ ಮಾಂಡವೀಯ ಅವರ ವರ್ತನೆಗೆ ಸಿಂಗ್‌ ಅವರ ಪುತ್ರಿ ದಮನ್‌ ಸಿಂಗ್‌ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

  ಆಸ್ಪತ್ರೆಗೆ ಪೋಟೋಗ್ರಾಫರ್ ಜೊತೆ ತೆರಳಿದ ಸಚಿವ ಮಾಂಡವೀಯ:

  "ಏಮ್ಸ್​ನಲ್ಲಿ ರೋಗಿಗಳು ದಾಖಲಾಗಿರುವ ಕೋಣೆಯ ಒಳಗೆ ಪೋಟೋ ತೆಗೆಯುವುದು ನಿಷಿದ್ಧ. ಆದರೆ, ಮನಮೋಹನ್ ಸಿಂಗ್ ಅವರ ಆರೋಗ್ಯ ವಿಚಾರಿಸಲು ಗುರುವಾರ ಏಮ್ಸ್‌‌ಗೆ ಆಗಮಿಸಿದ್ದ ಸಚಿವ ಮಾಂಡವೀಯಯ ಅವರು ಕುಟುಂಬದ ಅನುಮತಿಗೆ ವಿರುದ್ಧವಾಗಿ ಫೋಟೋಗ್ರಾಫರ್‌‌ನನ್ನು ಸಹ ಕೊಠಡಿಯ ಒಳಗೆ ಕರೆದುಕೊಂಡು ಹೋಗಿ ಪೋಟೋ ತೆಗೆದುಕೊಂಡಿದ್ದಾರೆ" ಎಂದು ದಮನ್‌‌ ಸಿಂಗ್ ಆರೋಪಿಸಿದ್ದಾರೆ.

  ದಮನ್‌ ಅವರು ‘ದಿಪ್ರಿಂಟ್‌’ ಜಾಲತಾಣಕ್ಕೆ ಹೇಳಿಕೆ ನೀಡಿದ್ದು, "ಸಚಿವರೊಂದಿಗೆ ಫೋಟೋಗ್ರಾಫರ್‌‌ ಕೂಡ ಕೊಠಡಿಯೊಳಗೆ ಪ್ರವೇಶಿಸಿದ್ದರಿಂದ ನಮ್ಮ ತಾಯಿ ಬೇಸರಗೊಂಡಿದ್ದರು. ಕೊಠಡಿಯನ್ನು ಬಿಟ್ಟು ಹೊರಹೋಗುವಂತೆ ಕೇಳಿಕೊಂಡರೂ ನಮ್ಮ ತಾಯಿಯ ಕೋರಿಕೆಯನ್ನು ಅವರು ಸ್ವೀಕರಿಸಲೇ ಇಲ್ಲ" ಎಂದಿದ್ದಾರೆ.

  "ಆಕೆ ತುಂಬಾ ನೊಂದುಕೊಂಡಿದ್ದಾಳೆ. ಅತ್ಯಂತ ಕಠಿಣ ಸಂದರ್ಭದಲ್ಲಿ ನಮ್ಮ ಪೋಷಕರಿದ್ದಾರೆ. ಅವರು ಹಿರಿಯ ಜೀವಗಳು. ಮೃಗಾಲಯದಲ್ಲಿರುವ ಪ್ರಾಣಿಗಳಲ್ಲ" ಎಂದು ದಮನ್‌ ಸಿಂಗ್ ಕಿಡಿಕಾರಿದ್ದಾರೆ.

  ಮನಮೋಹನ್ ಸಿಂಗ್ ಪುತ್ರಿ ದಮನ್ ಕಿಡಿ:

  ನಮ್ಮ ತಂದೆಯು ಡೆಂಗ್ಯೂನಿಂದ ಬಳಲುತ್ತಿದ್ದಾರೆ. ಅವರ ರೋಗ ನಿರೋಧಕಶಕ್ತಿಯೂ ಕುಂದಿದೆ. ಹೀಗಾಗಿ ಅವರನ್ನು ಭೇಟಿ ಮಾಡಲು ಯಾರಿಗೂ ನಮ್ಮ ಪೋಷಕರು ಅವಕಾಶ ನೀಡುತ್ತಿಲ್ಲ” ಎಂದು ದಮನ್‌ ತಿಳಿಸಿದ್ದಾರೆ. ದೆಹಲಿಯಲ್ಲಿ ಕೋವಿಡ್‌ ಎರಡನೇ ಅಲೆ ತೀವ್ರಗತಿಯಲ್ಲಿದ್ದಾಗ ಏಪ್ರಿಲ್‌ ತಿಂಗಳಲ್ಲಿ ಡಾ.ಸಿಂಗ್‌ ಸೋಂಕಿಗೆ ಒಳಗಾಗಿ, ಬಳಿಕ ಚೇತರಿಸಿಕೊಂಡಿದ್ದರು.

  ಆರೋಗ್ಯ ಸಚಿವರು ಭೇಟಿ ನೀಡಿ ತಮ್ಮ ಕಾಳಜಿಯನ್ನು ವ್ಯಕ್ತಪಡಿಸಿದ್ದು ಸ್ವಾಗತಾರ್ಹ ಸಂಗತಿ ಎಂದಿರುವ ದಮನ್, "ಆ ಸಮಯದಲ್ಲಿ ನನ್ನ ಹೆತ್ತವರು ಛಾಯಾಚಿತ್ರ ತೆಗೆಯುವ ಸ್ಥಿತಿಯಲ್ಲಿರಲಿಲ್ಲ" ಎಂದೂ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

  ಸಚಿವ ಮನ್‌ಸುಖ್‌ ಮಾಂಡವೀಯ ಅವರ ವರ್ತನೆಗೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ. ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರನ್ನು ಆಸ್ಪತ್ರೆಯಲ್ಲಿ ಭೇಟಿಯಾಗುವಾಗಲೂ ಸಹ ಛಾಯಾ ಗ್ರಾಹಕರ ಜೊತೆಗೆ ತೆರಳಬೇಕೆ? ಎಂದು ಹಲವರು ಪ್ರಶ್ನಿಸಿದ್ದಾರೆ.

  ಇದನ್ನೂ ಓದಿ: CWC Meeting: ಇಂದು ಎಐಸಿಸಿ ಅಧ್ಯಕ್ಷೀಯ ಚುನಾವಣೆಗೆ ದಿನಾಂಕ ಪ್ರಕಟ ಸಾಧ್ಯತೆ

  ಸಿಂಗ್ ಆರೋಗ್ಯದಲ್ಲಿ ಚೇತರಿಕೆ;

  ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಮಾರಕ ಢೆಂಗ್ಯೂಗೆ ಖಾಯಿಲೆಗೆ ಗುರಿಯಾಗಿದ್ದಾರೆ ಎನ್ನಲಾಗಿದೆ. ಹೀಗಾಗಿ ಅವರನ್ನು ತುರ್ತು ನಿಗಾ ಘಟಕದಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಕಳೆದ ಎರಡು ದಿನಗಳಿಂದ ಅವರು ಚಿಕಿತ್ಸೆಗೆ ಸ್ಪಂದಿಸುತ್ತಿದ್ದು, ಶೀಘ್ರದಲ್ಲಿ ಗುಣಮುಖರಾಗಿ ಆಸ್ಪತ್ರೆಯಿಂದ ಮರಳಲಿದ್ದಾರೆ ಎಂದು ವೈದ್ಯರು ಭರವಸೆ ನೀಡಿದ್ದಾರೆ.

  ಇದನ್ನೂ ಓದಿ: Accident: Audi ಕಾರಿನಲ್ಲಿ ಪೊಲೀಸ್​ ಮಗನ ಹುಚ್ಚಾಟ: ಓರ್ವ ಸವಾರ ಸಾವು, ಹಲವರಿಗೆ ಗಾಯ

  ಭಾರತ ಮತ್ತು ವಿಶ್ವ ಕಂಡ ಶ್ರೇಷ್ಠ ಅರ್ಥಶಾಸ್ತ್ರಜ್ಞರಲ್ಲಿ ಒಬ್ಬರಾದ ಡಾ| ಮನಮೋಹನ್​ ಸಿಂಗ್ ಭಾರತದಲ್ಲಿ 1992ರಲ್ಲಿ ಮುಕ್ತ ಆರ್ಥಿಕ ನೀತಿಯನ್ನು ಜಾರಿಗೆ ತರುವಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಅಲ್ಲದೆ, ತಮ್ಮ ಆರ್ಥಿಕ ನೀತಿಯಿಂದಲೇ ಖ್ಯಾತರಾಗಿದ್ದ ಅವರು 2004 ರಿಂದ 2014ರ ವರೆಗೆ 10 ವರ್ಷ ಎರಡು ಅವಧಿಗೆ ದೇಶದ ಪ್ರಧಾನಿಯಾಗಿ ಕಾರ್ಯ ನಿರ್ವಹಿಸಿದ್ದಾರೆ.
  Published by:MAshok Kumar
  First published: