ಕುಸಿಯುತ್ತಿರುವ ಆರ್ಥಿಕತೆ ಸುಧಾರಣೆಗೆ ಅರ್ಥ ತಜ್ಞ ಡಾ.ಮನಮೋಹನ್​ ಸಿಂಗ್​ ಐದು ಸೂತ್ರಗಳು!

ಮನಮೋಹನ್​ ಸಿಂಗ್ ಅವರು ಹಣಕಾಸು ಸಚಿವರಾಗಿದ್ದಾಗ, ಪ್ರಧಾನಿಯಾಗಿದ್ದ ಅವಧಿಯಲ್ಲಿ ದೇಶದ ಆರ್ಥಿಕತೆ ಯಶಸ್ವಿಯಾಗಿದ್ದನ್ನು ಸ್ಮರಿಸಿಕೊಂಡಿದ್ದಾರೆ. ಆದರೆ, ಇಂದು ಮಾನವ ನಿರ್ಮಿತ ಬಿಕ್ಕಟ್ಟಿನಿಂದ ಆರ್ಥಿಕತೆ ಈ ಪ್ರಮಾಣದಲ್ಲಿ ಕುಸಿದಿದೆ ಎಂದು ಸಿಂಗ್​ ಹೇಳಿದ್ದಾರೆ.

HR Ramesh | news18-kannada
Updated:September 12, 2019, 3:48 PM IST
ಕುಸಿಯುತ್ತಿರುವ ಆರ್ಥಿಕತೆ ಸುಧಾರಣೆಗೆ ಅರ್ಥ ತಜ್ಞ ಡಾ.ಮನಮೋಹನ್​ ಸಿಂಗ್​ ಐದು ಸೂತ್ರಗಳು!
ರೇಖಾಚಿತ್ರ- ಮೀರ್​ ಸುಹೈಲ್​
  • Share this:
ನವದೆಹಲಿ: ದೇಶದ ಆರ್ಥಿಕತೆ ನಿಭಾಯಿಸುವಲ್ಲಿ ಪ್ರಧಾನಿ ನರೇಂದ್ರ ಮೋದಿ ಸರ್ಕಾರ ವಿಫಲವಾಗಿದೆ ಎಂದು ಮಾಜಿ ಪ್ರಧಾನಿ ಮನಮೋಹನ್​ ಸಿಂಗ್​ ಕಠಿಣವಾಗಿ ದಾಳಿ ನಡೆಸಿದ್ದಾರೆ. ಆರ್ಥಿಕತೆ ಕುಸಿತ ದೇಶವನ್ನು ಹಲವು ವರ್ಷಗಳ ಹಿಂದಕ್ಕೆ ತೆಗೆದುಕೊಂಡು ಹೋಗಿದೆ. ಕುಸಿಯುತ್ತಿರುವ ಆರ್ಥಿಕತೆ ಉತ್ತೇಜನಕ್ಕೆ ಹಲವು ತುರ್ತು ಕ್ರಮಗಳನ್ನು ಕೇಂದ್ರ ಸರ್ಕಾರ ಸಂವೇದನಾಶೀಲವಾಗಿ ತೆಗೆದುಕೊಳ್ಳಬೇಕಿದೆ ಎಂದು ಅವರ ಸಲಹೆ ನೀಡಿದ್ದಾರೆ.

ಕೇಂದ್ರ ಸರ್ಕಾರ ಮೊದಲು 'ತಲೆಬರೆಹ ನಿರ್ವಹಣೆ'ಯಿಂದ ಹೊರಬರಬೇಕಿದೆ ಎಂದು ಹೆಸರಾಂತ ಅರ್ಥಶಾಸ್ತ್ರಜ್ಞ ಹಾಗೂ ಮಾಜಿ ಪ್ರಧಾನಿ ಡಾ.ಮನಮೋಹನ್​ ಸಿಂಗ್​ ಹೇಳಿದ್ದಾರೆ.

ದೈನಿಕ್​ ಭಾಸ್ಕರ್ ಮತ್ತು ದಿ  ಹಿಂದೂ ಬಿಜಿನೆಸ್​ ಲೈನ್​ಗೆ ನೀಡಿದ ಸಂದರ್ಶನದಲ್ಲಿ  ಡಾ.ಸಿಂಗ್, ಕುಸಿತವೂ ಆವರ್ತಕ ಮತ್ತು ರಚನಾತ್ಮಕವಾಗಿರುವುದರಿಂದ ಇದು ದೀರ್ಘಕಾಲಿಕವಾಗಿರಲಿದೆ ಎಂದು ಅಂದಾಜಿಸುತ್ತಾರೆ. ಸರ್ಕಾರ ಆರ್ಥಿಕತೆ ಸುಧಾರಣೆ ಕಡೆಗೆ ಗಮನ ಕೊಡದೆ ಐತಿಹಾಸಿಕ ನಿರೂಪಣೆಗೆ ಸಮಯವನ್ನು ವ್ಯರ್ಥ ಮಾಡುತ್ತಿದೆ ಎಂದು ಹೇಳಿದ್ದಾರೆ.

ದೇಶ ಆರ್ಥಿಕ ಬಿಕ್ಕಟ್ಟನ್ನು ಎದುರಿಸುತ್ತಿದೆ ಎಂಬುದನ್ನು ನಾವು ನಿರಾಕರಿಸುವಂತಿಲ್ಲ. ಈಗಾಗಲೇ ಸಾಕಷ್ಟು ಸಮಯ ಕಳೆದುಹೋಗಿದೆ. ರಾಜಕೀಯ ಹಿತಾಸಕ್ತಿ ಹಾಗೂ ನೋಟು ಅಮಾನ್ಯೀಕರಣದಂತಹ ಭಾರೀ ತಪ್ಪುಗಳು ಆರ್ಥಿಕತೆ ಹಳಿ ತಪ್ಪುವಂತೆ ಮಾಡಿದೆ. ಸರ್ಕಾರ ಈಗಲಾದರೂ ಮುಂದಿನ ಪೀಳಿಗೆಗಾಗಿ ಆರ್ಥಿಕ ಸುಧಾರಣೆಗೆ ತುರ್ತು ಕ್ರಮಗಳನ್ನು ತೆಗೆದುಕೊಳ್ಳಬೇಕಿದೆ. ಮತ್ತು ಉದ್ಯಮಗಳಲ್ಲಿ ಸಮೂಹ ಉದ್ಯೋಗ ಸೃಷ್ಟಿಗೆ ಉತ್ತೇಜನ ನೀಡಬೇಕಿದೆ ಎಂದು ಡಾ.ಮನಮೋಹನ್​ ಸಿಂಗ್​ ಸರ್ಕಾರಕ್ಕೆ ಸಲಹೆ ನೀಡಿದ್ದಾರೆ.

ಇದನ್ನು ಓದಿ: ಕೇಂದ್ರ ಸರ್ಕಾರ ಜನಾದೇಶವನ್ನು ತಪ್ಪಾಗಿ ಬಳಸಿಕೊಳ್ಳುತ್ತಿದೆ; ಪಕ್ಷದ ಸಭೆಯಲ್ಲಿ ಪ್ರಧಾನಿ ಮೋದಿ ವಿರುದ್ಧ ಕಿಡಿಕಾರಿದ ಸೋನಿಯಾ

ಆರ್ಥಿಕ ಸುಧಾರಣೆಗೆ ಮನಮೋಹನ್​ ಸಿಂಗ್ ಅವರ ಪಂಚಸೂತ್ರಗಳು
  1. ಅಲ್ಪಾವಧಿಯಲ್ಲಿ ಆದಾಯ ಕಡಿಮೆಯಾದರೂ ಜಿಎಸ್​ಟಿಯನ್ನು ತರ್ಕಬದ್ಧಗೊಳಿಸುವುದು

  2. ಕೃಷಿ ವಲಯವನ್ನು ಪುನರುಜ್ಜೀವನಗೊಳಿಸುವುದು ಮತ್ತು ಕೃಷಿ ಉತ್ಪನ್ನ ಹೆಚ್ಚಳಕ್ಕೆ ಆದ್ಯತೆ ನೀಡಬೇಕು. ಅದಕ್ಕಾಗಿ ಸರ್ಕಾರ ಕಾಂಗ್ರೆಸ್​ನ ಪ್ರಣಾಳಿಕೆಯಲ್ಲಿರುವ ಅಂಶಗಳನ್ನು ಬಳಸಿಕೊಳ್ಳಬೇಕು. ಈ ಪ್ರಣಾಳಿಕೆಯಲ್ಲಿ ಕೃಷಿ ಮಾರುಕಟ್ಟೆ ಮುಕ್ತತೆಗೆ ಹಲವು ಕ್ರಮಗಳಿವೆ.

  3. ದ್ರವ್ಯತೆ ಬಿಕ್ಕಟ್ಟನ್ನು ನಿವಾರಿಸುವುದು. ಕೇವಲ ಸಾರ್ವಜನಿಕ ವಲಯ ಮಾತ್ರವಲ್ಲದ ಬ್ಯಾಂಕುಗಳಷ್ಟೇ ಅಲ್ಲ, ಎನ್​ಬಿಎಫ್​ಸಿ ಕೂಡ ಸಂಕಷ್ಟದಲ್ಲಿದೆ.

  4. ಟೆಕ್ಸ್​ಟೈಲ್ಸ್​, ಆಟೋಮೊಬೈಲ್​, ಎಲೆಕ್ಟ್ರಾನಿಕ್ಸ್​ ಮತ್ತು ಸಬ್ಸಿಡಿ ವಸತಿ ವಲಯದಲ್ಲಿ ಬೃಹತ್​ ಪ್ರಮಾಣದಲ್ಲಿ ಉದ್ಯೋಗ ಸೃಷ್ಟಿಸುವುದು. ಈ ಉದ್ದೇಶಗಳಿಗೆ, ವಿಶೇಷವಾಗಿ ಅತಿಸಣ್ಣ, ಸಣ್ಣ, ಮಧ್ಯಮ ಕೈಗಾರಿಕೆಗಳಿಗೆ ಸುಲಭವಾಗಿ ಸಾಲ ಸಿಗುವಂತೆ ಕ್ರಮ ತೆಗೆದುಕೊಳ್ಳಬೇಕು.

  5. ಚೀನಾ ಮತ್ತು ಅಮೆರಿಕ ನಡುವೆ ವಾಣಿಜ್ಯ ಸಮರ ನಡೆಯುತ್ತಿರುವ ಈ ಸಮಯದಲ್ಲಿ ನವ ರಫ್ತು ಮಾರುಕಟ್ಟೆಯನ್ನು ಸರ್ಕಾರ ಗುರುತಿಸಬೇಕು


 

ಅಲ್ಲದೇ, ಮನಮೋಹನ್​ ಸಿಂಗ್ ಅವರು ಹಣಕಾಸು ಸಚಿವರಾಗಿದ್ದಾಗ, ಪ್ರಧಾನಿಯಾಗಿದ್ದ ಅವಧಿಯಲ್ಲಿ ದೇಶದ ಆರ್ಥಿಕತೆ ಯಶಸ್ವಿಯಾಗಿದ್ದನ್ನು ಸ್ಮರಿಸಿಕೊಂಡಿದ್ದಾರೆ. ಆದರೆ, ಇಂದು ಮಾನವ ನಿರ್ಮಿತ ಬಿಕ್ಕಟ್ಟಿನಿಂದ ಆರ್ಥಿಕತೆ ಈ ಪ್ರಮಾಣದಲ್ಲಿ ಕುಸಿದಿದೆ ಎಂದು ಸಿಂಗ್​ ಹೇಳಿದ್ದಾರೆ.

First published: September 12, 2019, 3:38 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading