ಒಲಿಂಪಿಕ್ಸ್ ಪದಕ ವಂಚಿತ ಕ್ರೀಡಾಳುಗಳಿಗೆ ಸಿಗಲಿದೆ 11 ಲಕ್ಷ ರೂ ನಗದು ಬಹುಮಾನ!

ಒಲಿಂಪಿಕ್ಸ್‌ನಲ್ಲಿ ನಮ್ಮ ಆಟಗಾರರು ಪದಕ ಗೆಲ್ಲುವಲ್ಲಿ ವಿಫಲರಾಗಿರಬಹುದು ಆದರೆ ಪ್ರತಿಯೊಬ್ಬರ ಹೃದಯಗಳನ್ನು ಗೆದ್ದಿದ್ದಾರೆ ಎಂದು ಮ್ಯಾನ್‍ಕೈಂಡ್ ಫಾರ್ಮ ಔಷಧಿ ಕಂಪೆನಿ ತಿಳಿಸಿದೆ.

ಟೋಕಿಯೋ ಒಲಂಪಿಕ್ಸ್​

ಟೋಕಿಯೋ ಒಲಂಪಿಕ್ಸ್​

  • Share this:

ನಮ್ಮ ದೇಶದ ಕ್ರೀಡಾಪಟುಗಳ ದೃಢ ನಿಶ್ಚಯ ಮತ್ತು ಕಠಿಣ ಶ್ರಮವನ್ನು ಪ್ರೋತ್ಸಾಹಿಸಲು ಮ್ಯಾನ್‍ಕೈಂಡ್ ಫಾರ್ಮ ಔಷಧಿ ಕಂಪೆನಿ ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಅಲ್ಪ ಅಂತರದಲ್ಲಿ ಪದಕದಿಂದ ವಂಚಿತರಾದ 20 ಭಾರತೀಯ ಕ್ರೀಡಾಪಟುಗಳಿಗೆ ತಲಾ 11 ಲಕ್ಷ ರೂಪಾಯಿಗಳನ್ನು ನೀಡಲು ನಿರ್ಧರಿಸಿದೆ. ಇತ್ತೀಚೆಗೆ ನಡೆದ ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಕೂದಲೆಳೆಯ ಅಂತರದಲ್ಲಿ ಪದಕದಿಂದ ವಂಚಿತರಾದ 20 ಭಾರತೀಯ ಕ್ರೀಡಾಪಟುಗಳಿಗೆ ತಲಾ 11 ಲಕ್ಷ ರೂಪಾಯಿಗಳ ನಗದು ಬಹುಮಾನ ನೀಡಲು ಔಷಧಿ ಕಂಪೆನಿ ಮ್ಯಾನಿಕೈಂಡ್ ಫಾರ್ಮ ನಿರ್ಧರಿಸಿದೆ. ನಮ್ಮ ದೇಶದ ಕ್ರೀಡಾಪಟುಗಳ ದೃಢ ನಿಶ್ಚಯ ಮತ್ತು ಕಠಿಣ ಶ್ರಮವನ್ನು ಪ್ರೋತ್ಸಾಹಿಸಲು ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಕಂಪೆನಿ ತಿಳಿಸಿದೆ.


ಈ ಬಾರಿಯ ಟೋಕಿಯೋ ಒಲಿಂಪಿಕ್ಸ್ ಭಾರತೀಯರಿಗೆ ವಿಶೇಷ ಸಂತಸ ಮತ್ತು ಹೆಮ್ಮೆಯ ಕ್ಷಣವಾಗಿತ್ತು. ಜಾವೆಲಿನ್ ಎಸೆತದಲ್ಲಿ ನೀರಜ್ ಚೋಪ್ರಾ ಭಾರತಕ್ಕೆ ಚಿನ್ನದ ಪದಕ ಗೆದ್ದು ತಂದರು. ಅಷ್ಟು ಮಾತ್ರವಲ್ಲ ಪುರುಷರ ಹಾಕಿ, ಮಹಿಳಾ ವೇಟ್ ಲಿಫ್ಟಿಂಗ್ , ಮಹಿಳಾ ಬ್ಯಾಡ್ಮಿಂಟನ್ , ಮಹಿಳಾ ಬಾಕ್ಸಿಂಗ್‍ನಲ್ಲೂ ಭಾರತಕ್ಕೆ ಪದಕಗಳು ದೊರಕಿವೆ. ದೇಶದೆಲ್ಲೆಡೆ ಈ ಸಾಧನೆಯ ಕುರಿತ ಸಂಭ್ರಮಾಚರಣೆ ನಡೆಯುತ್ತಿದೆ. ಆದರೆ ಕೆಲವೇ ಅಂತರಗಳಲ್ಲಿ ಗೆಲುವಿನಿಂದ ವಂಚಿತರಾದ ಕ್ರೀಡಾಪಟುಗಳ ಪರಿಶ್ರಮವನ್ನು ಗುರುತಿಸಿ ಕ್ರೀಡಾಳುಗಳನ್ನು ಸನ್ಮಾನಿಸಲು ಮ್ಯಾನ್‍ಕೈಂಡ್ ಫಾರ್ಮ ಔಷಧಿ ಕಂಪೆನಿ ಮುಂದೆ ಬಂದಿದೆ.


ಈ ಕುರಿತು ಮ್ಯಾನ್‍ಕೈಂಡ್ ಫಾರ್ಮ ಔಷಧಿ ಕಂಪೆನಿ ಪ್ರಕಟಣೆಯೊಂದನ್ನು ಹೊರಡಿಸಿದ್ದು, ಕ್ರೀಡಾಪಟುಗಳು ಎದುರಿಸಿರುವ ಕಷ್ಟಗಳನ್ನು ಕಂಪೆನಿ ಅರ್ಥ ಮಾಡಿಕೊಂಡಿದೆ ಮತ್ತು ಕ್ರೀಡಾಳುಗಳ ಉತ್ಸಾಹವನ್ನು ಪ್ರಶಂಸಿಸಲು ಮುಂದೆ ಬಂದಿದೆ ಎಂದು ಆ ಪ್ರಕಟಣೆಯಲ್ಲಿ ತಿಳಿಸಿದೆ.ಮಹಿಳಾ ಹಾಕಿ ತಂಡ ಪ್ರತಿಯೊಬ್ಬ ಆಟಗಾರರಿಗೂ, ಅಂದರೆ ಒಟ್ಟು 16 ಮಂದಿಗೆ ತಲಾ 11 ಲಕ್ಷ, ಬಾಕ್ಸರ್ ಸತೀಶ್ ಕುಮಾರ್, ಕುಸ್ತಿಪಟು ದೀಪಕ್ ಪುನಿಯಾ, ಶೂಟರ್ ಸೌರಭ್ ಚೌಧರಿ, ಗಾಲ್ಫರ್ ಅದಿತಿ ಅಶೋಕ್ ಅವರಿಗೂ ತಲಾ 11 ಲಕ್ಷ ರೂಪಾಯಿಗಳನ್ನು ನೀಡಲಾಗುವುದು ಎಂದು ಕಂಪೆನಿ ಹೇಳಿದೆ.


ಇದನ್ನು ಓದಿ: ಬೆಂಗಳೂರಿನಲ್ಲಿ ಹೆಚ್ಚಾಗ್ತಿದೆ ಸೋಂಕು; ನಗರದ 6 ವಿಧಾನಸಭಾ ಕ್ಷೇತ್ರಗಳು ಡೇಂಜರ್ ವಲಯದಲ್ಲಿ

“ಪ್ರತೀ ಕ್ರೀಡೆಯಲ್ಲೂ ಗಣನೆಗೆ ಬರುವುದು ಗೆಲುವಲ್ಲ, ಗಣನೆಗೆ ಬರುವುದು ಹಲವಾರು ವರ್ಷಗಳ ಕಾಲ ಅದಕ್ಕಾಗಿ ಅವರು ಪಟ್ಟ ಪರಿಶ್ರಮ . ಹಾಗೂ ನಮ್ಮ ಆಟಗಾರರು ನಮ್ಮ ದೇಶವನ್ನು ಪ್ರತಿನಿಧಿಸುವುದಕ್ಕಾಗಿ ಸಾಕಷ್ಟು ಪರಿಶ್ರಮ ಪಟ್ಟಿದ್ದಾರೆ” ಎಂದು ಮ್ಯಾನ್‍ಕೈಂಡ್ ಫಾರ್ಮಾ ಔಷಧ ಕಂಪೆನಿಯ ವೈಸ್ ಚೇರ್‍ಮನ್ ಮತ್ತು ಮ್ಯಾನೇಜಿಂಗ್ ಡೈರೆಕ್ಟರ್ ರಾಜೀವ್ ಜುನೇಜಾ ಹೇಳಿದ್ದಾರೆ.


ಕ್ಷೇತ್ರದಲ್ಲಿ ಮುಂಚೂಣಿಯಲಿರುವ, “ಅವರು ಇಷ್ಟು ವರ್ಷಗಳಿಂದ ಪಟ್ಟಿರುವ ಕಠಿಣ ಪರಿಶ್ರಮ ಮತ್ತು ಮಾಡಿರುವ ತ್ಯಾಗಗಳನ್ನು ನಾವು ಪ್ರಶಂಸಿಸಲು ಬಯಸುತ್ತೇವೆ. ಇಂತಹ ಆಟಗಾರರು ಇಡೀ ದೇಶಕ್ಕೆ ಸ್ಪೂರ್ತಿ ನೀಡುತ್ತಾರೆ ಮತ್ತು ದೇಶಕ್ಕೆ ಗೌರವ ತಂದು ಕೊಡುವಂತೆ ಯುವ ಜನತೆಗೆ ಪ್ರೇರಣೆ ನೀಡುತ್ತಾರೆ” ಎಂದು ರಾಜೀವ್ ಜುನೇಜಾ ಹೇಳಿದ್ದಾರೆ.


ಒಲಿಂಪಿಕ್ಸ್‌ನಲ್ಲಿ ನಮ್ಮ ಆಟಗಾರರು ಪದಕ ಗೆಲ್ಲುವಲ್ಲಿ ವಿಫಲರಾಗಿರಬಹುದು ಆದರೆ ಪ್ರತಿಯೊಬ್ಬರ ಹೃದಯಗಳನ್ನು ಗೆದ್ದಿದ್ದಾರೆ ಎಂದು ಮ್ಯಾನ್‍ಕೈಂಡ್ ಫಾರ್ಮ ಔಷಧಿ ಕಂಪೆನಿ ತಿಳಿಸಿದೆ.

ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ನಾವು ಸುರಕ್ಷಿತವಾಗಿ ಇದ್ದು, ನಮ್ಮಿಂದ ಇತರರಿಗೆ ಸೋಂಕು ಹಬ್ಬದಂತೆ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು.
First published: