ಬಿಹಾರ ಆಶ್ರಯತಾಣ ಅತ್ಯಾಚಾರ ಪ್ರಕರಣ; ಕೊನೆಗೂ ಶರಣಾದ ಮಾಜಿ ಸಚಿವೆ

ಪ್ರಕರಣದ ಆರೋಪಿಯಾಗಿದ್ದ ಸಚಿವೆ ಮಂಜುವರ್ಮಾ ಕಳೆದೊಂದು ತಿಂಗಳಿನಿಂದ ನಾಪತ್ತೆಯಾಗಿದ್ದು, ಎಲ್ಲಿದ್ದಾರೆ ಎಂಬುದನ್ನು ಪತ್ತೆ ಮಾಡುವಲ್ಲಿ ಬಿಹಾರ ಪೊಲೀಸರು ಸೋತಿದ್ದರು

Seema.R | news18
Updated:November 20, 2018, 1:10 PM IST
ಬಿಹಾರ ಆಶ್ರಯತಾಣ ಅತ್ಯಾಚಾರ ಪ್ರಕರಣ; ಕೊನೆಗೂ ಶರಣಾದ ಮಾಜಿ ಸಚಿವೆ
ಬಿಹಾರ ಮಾಜಿ ಸಚಿವೆ ಮಂಜು ವರ್ಮಾ
  • News18
  • Last Updated: November 20, 2018, 1:10 PM IST
  • Share this:
ರಾಂಚಿ (ನ.20): ಮುಜಾಫರ್​ಪುರ ಆಶ್ರಯ ತಾಣದ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ನಾಪತ್ತೆಯಾಗಿದ್ದ ಆರೋಪಿ, ಬಿಹಾರ ಮಾಜಿ ಸಚಿವೆ ಮಂಜು ವರ್ಮಾ ಇಂದು ಸಿಬಿಐ ಮುಂದೆ ಶರಣಾಗಿದ್ದಾರೆ,

ಪ್ರಕರಣದ ಆರೋಪಿಯಾಗಿದ್ದ ಸಚಿವೆ ಮಂಜುವರ್ಮಾ ಕಳೆದೊಂದು ತಿಂಗಳಿನಿಂದ ನಾಪತ್ತೆಯಾಗಿದ್ದು, ಎಲ್ಲಿದ್ದಾರೆ ಎಂಬುದನ್ನು ಪತ್ತೆ ಮಾಡುವಲ್ಲಿ ಪೊಲೀಸರು ಸೋತಿದ್ದರು.  ಅಲ್ಲದೇ ಮಾಜಿ ಸಚಿವೆಯನ್ನು ಇದುವರೆಗೂ ಪತ್ತೆ ಮಾಡದ ಪೊಲೀಸರ ಕ್ರಮಕ್ಕೆ ಸುಪ್ರೀಂ ಕೋರ್ಟ್​ ಕೂಡ ಅಸಮಾಧಾನ ವ್ಯಕ್ತಪಡಿಸಿತು.

"ಅದ್ಭುತ! ಮಾಜಿ ಸಚಿವರು ತಲೆಮರೆಸಿಕೊಂಡಿದ್ದರು. ಪೊಲೀಸರು ಅವರ ಪತ್ತೆ ಕಾರ್ಯಕ್ಕೆ ಮುಂದಾಗಿಲ್ಲ. ಅವರು ಎಲ್ಲಿದ್ದಾರೆ ಎಂಬ ಬಗ್ಗೆ ಯಾರಿಗೂ ಮಾಹಿತಿ ಇಲ್ಲ. ನಿಮಗೆ ಪ್ರಕರಣದ ಗಂಭೀರತೆಯ ಅರಿವಿದೆಯೇ" ಎಂದು ನ.12ರಂದು ಸುಪ್ರೀಂಕೋರ್ಟ್​ ಬಿಹಾರ ಪೊಲೀಸರಿಗೆ ತರಾಟೆ ತೆಗೆದುಕೊಂಡಿತು.

ಮಂಜು ವರ್ಮಾ ಗಂಡನ ಮಾಲೀಕತ್ವದ ಮುಜಾಫರ್​ಪುರದ ಆಶ್ರಯತಾಣದಲ್ಲಿ 18 ವರ್ಷಕ್ಕಿಂತ ಕಡಿಮೆ ವಯಸ್ಸಿನ ಅನೇಕ ಮಕ್ಕಳ ಮೇಲೆ ಲೈಂಗಿಕತ ದೌರ್ಜನ್ಯ ನಡೆಸಲಾಗಿತ್ತು. ಟಾಟಾ ಇನ್ಸಿಟ್ಯೂಟ್​ ಆಫ್​ ಸೀಷಿಯಲ್​ ಸೈನ್ಸ್​ ಮೊದಲ ಬಾರಿ ಈ ಪ್ರಕರಣವನ್ನು ವರದಿ ಮಾಡುವ ಮೂಲಕ ಬೆಳಕಿಗೆ ಬಂದಿತು.

ಇದನ್ನು ಓದಿ: ಮುಜಾಫರ್​ಪುರ್​ನ ಕಾಮಾಂಧ ಬ್ರಿಜೇಶ್ ಠಾಕೂರ್​ನ ಕೀಚಕ ಸಾಮ್ರಾಜ್ಯದ ಹಿಂದಿನ ಅಸಲಿ ಕಥೆ

ಇದಾದ ಬಳಿಕ ಮಂಜು ವರ್ಮಾ ಮನೆಗೆ ದಾಳಿ ಮಾಡಿದ ಸಿಬಿಐಗೆ ಅಕ್ರಮವಾಗಿ ಇರಿಸಿದ್ದ 50 ಜೀವಂತ ಗುಂಡುಗಳು ಲಭ್ಯವಾಗಿತ್ತು. ಇದರಿಂದಾಗಿ ಮಂಜು ವರ್ಮಾ ಗಂಡನನ್ನು ಶಸ್ತ್ರಾಸ್ತ್ರ ಕಾಯ್ದೆ ಅಡಿಯಲ್ಲಿ ಬಂಧಿಸಲಾಗಿತ್ತು. ಈ ಆರೋಪ ಕೇಳಿ ಬಂದ ಹಿನ್ನಲೆಯಲ್ಲಿ ಮಂಜು ವರ್ಮಾ ಕಳೆದ ಆಗಸ್ಟ್​ನಲ್ಲಿ ತಮ್ಮ ಹುದ್ದೆಗೆ ರಾಜೀನಾಮೆಯನ್ನು ಸಲ್ಲಿಸಿದ್ದರು.

ಇದನ್ನು ಓದಿ: ಅತ್ಯಾಚಾರ, ಹಲ್ಲೆ, ಬೆತ್ತಲೆ ಹಿಂಸೆ: ಬಿಹಾರ ವಸತಿ ನಿಲಯದ ಕರ್ಮಕಾಂಡ ಬಿಚ್ಚಿಟ್ಟ ಸಂತ್ರಸ್ತರುಮುಜಾಫರ್​ಪುರದ ಎನ್​ಜಿಒದಲ್ಲಿ ಆಶ್ರಯ ಪಡೆಯುತ್ತಿದ್ದ ಹೆಣ್ಣುಮಕ್ಕಳನ್ನು ಅತಿಥಿಗಳಿಗೆ ಕಾಮತೃಷೆ ತೀರಿಸಿಕೊಳ್ಳಲು ಬಳಸಿಕೊಳ್ಳಲಾಗುತ್ತಿತ್ತು. 18 ವರ್ಷ ಒಳಗಿನ 35ಕ್ಕೂ ಹೆಚ್ಚು ಹುಡುಗಿಯರನ್ನು ಬಲವಂತವಾಗಿ ಈ ಕಾರ್ಯದಲ್ಲಿ ತೊಡಗಿಸಿಕೊಳ್ಳುವಂತೆ ನೋಡಿಕೊಳ್ಳಲಾಗಿತ್ತು. ಈ ಪ್ರಕರಣದ ಪ್ರಮುಖ ಆರೋಪಿ ಬ್ರಿಜೇಶ್​ ಠಾಕೂರ್​ನನ್ನು ಈಗಾಗಲೇ ಬಂಧಿಸಲಾಗಿದೆ. ಈ ಆಶ್ರಯ ತಾಣಕ್ಕೆ ಸಚಿವೆ ಮಂಜು ವರ್ಮಾ ಅವರ ಗಂಡ ಕೂಡ ಹಲವಾರು ಬಾರಿ ಭೇಟಿ ನೀಡಿದ್ದರು.

First published:November 20, 2018
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading