ಮನೀಶ್​ ಸಿಸೋಡಿಯಾಗೆ BJP ಆಫರ್, ಆಡಿಯೋ ರೆಕಾರ್ಡ್ ನಮ್ಮ ಬಳಿ ಇದೆ: ಕಮಲ ಪಾಳಯಕ್ಕೆ ಶಾಕ್ ಕೊಟ್ಟ ಆಮ್ ಆದ್ಮಿ!

"ಬಿಜೆಪಿ ಸೇರುವಂತೆ ಪ್ರಸ್ತಾಪ ಮುಂದಿಟ್ಟ ಆಡಿಯೋ ರೆಕಾರ್ಡಿಂಗ್ ನಮ್ಮ ಬಳಿ ಇದೆ. ಸಮಯ ಬಂದಾಗ, ಕೇಸರಿ ಪಾಳಯದ ಮುಖವಾಡ ಕಳಚಲು ನಾವದನ್ನು ಸಾರ್ವಜನಿಕಗೊಳಿಸುತ್ತೇವೆ" ಎಂದು ಮೂಲವೊಂದು ಪಿಟಿಐಗೆ ತಿಳಿಸಿದೆ.

ದೆಹಲಿಯ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ

ದೆಹಲಿಯ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ

  • Share this:
ನವದೆಹಲಿ(ಆ.23): ಆಮ್ ಆದ್ಮಿ ಪಕ್ಷ ಮತ್ತು ಭಾರತೀಯ ಜನತಾ ಪಕ್ಷದ (BJP) ನಡುವೆ ಆರೋಪ ಪ್ರತ್ಯಾರೋಪ ಮುಂದುವರಿದಿದೆ. ಈ ಗುದ್ದಾಟದಲ್ಲಿ ಈಗ ರೆಕಾರ್ಡಿಂಗ್ ವಿಷಯ ಮುನ್ನೆಲೆಗೆ ಬಂದಿದೆ. ದೆಹಲಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ (Manish Sisodia) ಅವರಿಗೆ ಭಾರತೀಯ ಜನತಾ ಪಕ್ಷಕ್ಕೆ (ಬಿಜೆಪಿ) ಸೇರುವಂತೆ ನೀಡಿದ್ದ ಆಫರ್ ಆಡಿಯೋ ರೆಕಾರ್ಡಿಂಗ್ ಅನ್ನು ಹೊಂದಿದ್ದು, ಇದರಲ್ಲಿ ಸಿಸೋಡಿಯಾ ಪಕ್ಷವನ್ನು ಬದಲಾಯಿಸಿದರೆ, ಅವರ ವಿರುದ್ಧದ ಎಲ್ಲಾ ಪ್ರಕರಣಗಳನ್ನು ಹಿಂಪಡೆಯಲಾಗುವುದು ಎಂದು ಹೇಳಿರುವ ಮಾತುಗಳಿವೆ ಎಂದು ಅರವಿಂದ್ ಕೇಜ್ರಿವಾಲ್ ನೇತೃತ್ವದ ಆಮ್ ಆದ್ಮಿ ಪಕ್ಷದ (AAP) ಮೂಲಗಳು ಸೋಮವಾರ ಈ ಮಾಹಿತಿಯನ್ನು ನೀಡಿವೆ. "ಸಮಯ ಬಂದಾಗ" ಎಎಪಿ ಆಡಿಯೋ ರೆಕಾರ್ಡಿಂಗ್ ಅನ್ನು ಸಾರ್ವಜನಿಕಗೊಳಿಸುತ್ತದೆ ಎಂದೂ ಹೇಳಲಾಗಿದೆ.

ಇದನ್ನೂ ಓದಿ:  ಕೋವಿಡ್​ ನಿಯಮ ಉಲ್ಲಂಘನೆ: ದೆಹಲಿ ಉಪಮುಖ್ಯಮಂತ್ರಿ ಸೇರಿ ಹಲವರ ಮೇಲೆ ಎಫ್​ಐಆರ್​ ದಾಖಲು

ಮೂಲವೊಂದು ಪಿಟಿಐಗೆ ಈ ಬಗ್ಗೆ ಮಾಹಿತಿ ನೀಡಿದ್ದು, "ಬಿಜೆಪಿಯ ಕೊಟ್ಟಿದ್ದ ಪ್ರಸ್ತಾಪದ ಆಡಿಯೋ ರೆಕಾರ್ಡಿಂಗ್ ನಮ್ಮ ಬಳಿ ಇದೆ ಮತ್ತು ಸಮಯ ಬಂದಾಗ, ಕೇಸರಿ ಪಕ್ಷವನ್ನು ಬಹಿರಂಗಪಡಿಸಲು ನಾವು ಅದನ್ನು ಸಾರ್ವಜನಿಕಗೊಳಿಸುತ್ತೇವೆ" ಎಂದಿದೆ. ಎಎಪಿ ನಾಯಕರು ಸಿಸೋಡಿಯಾ ಅವರ ಈ ಹೇಳಿಕೆಯನ್ನು ಬೆಂಬಲಿಸಿದ್ದಾರೆ. ಹೀಗಿದ್ದರೂ ಆ ನಾಯಕರಾಗಲೀ, ಉಪ ಮುಖ್ಯಮಂತ್ರಿಯಾಗಲೀ ಇಂತಹುದ್ದೊಂದು ಆಫರ್ ಮುಂದಿಟ್ಟ ಬಿಜೆಪಿ ನಾಯಕನ ಹೆಸರನ್ನು ಬಹಿರಂಗಗೊಳಿಸಿಲ್ಲ.

ಹೀಗಿದ್ದರೂ ಪತ್ರಿಕಾಗೋಷ್ಠಿಯಲ್ಲಿ ಎಎಪಿಯ ರಾಷ್ಟ್ರೀಯ ವಕ್ತಾರ ಮತ್ತು ರಾಜ್ಯಸಭಾ ಸಂಸದ ಸಂಜಯ್ ಸಿಂಗ್ ಸಿಸೋಡಿಯಾ ಅವರ ಮೊಬೈಲ್ ಫೋನ್ ಅನ್ನು ಸಿಬಿಐ ವಶಪಡಿಸಿಕೊಂಡ ಅವರು ಬಿಜೆಪಿಯ 'ಆಫರ್​'ನ್ನು ಹೇಗೆ ರೆಕಾರ್ಡ್ ಮಾಡಲು ಯಶಸ್ವಿಯಾದರು ಎಂಬ ನೇರ ಪ್ರಶ್ನೆಗೆ ಉತ್ತರಿಸಲು ಸಾಧ್ಯವಾಗಿಲ್ಲ. ಆದರೂ "ರೆಕಾರ್ಡ್​ ಮಾಡಲು ಕೇವಲ ಫೋನ್ ಮಾತ್ರ ಮಾಧ್ಯಮವೇ? ಬಿಜೆಪಿ ನಾಯಕರು ಇಂತಹ ಕೆಲಸಗಳಿಗೆ ಯಾವ ಮಾಧ್ಯಮ ಬಳಸುತ್ತಾರೋ ಗೊತ್ತಿಲ್ಲ? ಇಂತಹ ಕಾರ್ಯಗಳಿಗಾಗಿ ಬಿಜೆಪಿ ಎಲ್ಲಾ ರೀತಿಯ ಗಿಮಿಕ್‌ಗಳು, ಸಾಧನಗಳು ಮತ್ತು ಫೋನ್‌ಗಳು, ಸಂದೇಶವಾಹಕರು, ಸಭೆಗಳಂತಹ ಸಾಧನಗಳನ್ನು ಬಳಸುತ್ತದೆ" ಎಂದೂ ಸಿಂಗ್ ಕಿಡಿ ಕಾರಿದ್ದಾರೆ.

ಮನೀಶ್ ಸಿಸೋಡಿಯಾ ಅವರನ್ನು ಬೆಂಬಲಿಸಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಟ್ವೀಟ್

ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಮನೀಶ್ ಸಿಸೋಡಿಯಾ ಅವರನ್ನು ಬೆಂಬಲಿಸಿ ಟ್ವೀಟ್ ಮಾಡಿದ್ದಾರೆ. ಇದರಲ್ಲಿ ಅವರು 'ಇಡೀ ಜಗತ್ತು ದೆಹಲಿಯ ಶಿಕ್ಷಣ ಮತ್ತು ಆರೋಗ್ಯ ಮಾದರಿಯನ್ನು ಚರ್ಚಿಸುತ್ತಿದೆ. ಅವರು ಇದನ್ನು ನಿಲ್ಲಿಸಲು ಬಯಸುತ್ತಾರೆ. ಅದಕ್ಕಾಗಿಯೇ ದೆಹಲಿಯ ಆರೋಗ್ಯ ಮತ್ತು ಶಿಕ್ಷಣ ಸಚಿವರ ಮೇಲೆ ದಾಳಿ ನಡೆಸಿ ಬಂಧಿಸಲಾಗಿದೆ. 75 ವರ್ಷಗಳಲ್ಲಿ ಒಳ್ಳೆಯ ಕೆಲಸ ಮಾಡಲು ಯತ್ನಿಸಿದವರನ್ನು ನಿಲ್ಲಿಸಲಾಯಿತು. ಹಾಗಾಗಿಯೇ ಭಾರತ ಹಿಂದುಳಿದಿದೆ. ದೆಹಲಿಯಲ್ಲಾಗುವ ಒಳ್ಳೆಯ ಕೆಲಸ ನಿಲ್ಲಿಸಲು ಬಿಡುವುದಿಲ್ಲ, ಅಮೆರಿಕದ ಅತಿದೊಡ್ಡ ಪತ್ರಿಕೆ NYT ಯ ಮುಖಪುಟದಲ್ಲಿ ದೆಹಲಿ ಶಿಕ್ಷಣ ಮಾದರಿಯನ್ನು ಹೊಗಳಿ ಮನೀಶ್ ಸಿಸೋಡಿಯಾ ಚಿತ್ರವನ್ನು ಪ್ರಕಟಿಸಿದ ದಿನವೇ ಮನೀಶ್ ಸಿಸೋಡಿಯಾ ಮನೆ, ಕಚೇರಿ ಮೇಲೆ ಸಿಬಿಐ ದಾಳಿ ನಡೆಸಿದೆ. ಸಿಬಿಐಗೆ ಸ್ವಾಗತ. ಸಂಪೂರ್ಣ ಸಹಕಾರ ನೀಡಲಿದೆ. ಈ ಹಿಂದೆಯೂ ಹಲವು ಬಾರಿ ತನಿಖೆ ದಾಳಿ ನಡೆಸಲಾಗಿತ್ತು. ಏನೂ ಹೊರಗೆ ಬರಲಿಲ್ಲ. ಇನ್ನೂ ಏನೂ ಹೊರಬರುವುದಿಲ್ಲ ಎಂದಿದ್ದಾರೆ.

ಇದನ್ನೂ ಓದಿ:  Manish Sisodia| ಶಾಲೆ ತೆರೆಯಲು ಇನ್ನೂ ವಿಳಂಬವಾದರೆ ಇಡೀ ಪೀಳಿಗೆಯ ನಡುವೆ ಜ್ಞಾನದ ಅಂತರವಾಗಲಿದೆ; ಮನೀಶ್ ಸಿಸೋಡಿಯಾ

ಕೆಲವು ತಿಂಗಳ ಹಿಂದೆ, ದೆಹಲಿಯ ಆಮ್ ಆದ್ಮಿ ಪಕ್ಷದ ಸರ್ಕಾರವು ರಾಜ್ಯಕ್ಕೆ ಹೊಸ ಅಬಕಾರಿ ನೀತಿಯನ್ನು ತಂದಿದೆ ಎಂಬುವುದು ಉಲ್ಲೇಖನೀಯ. ಆದರೆ ಬಿಜೆಪಿ ಮತ್ತು ಕಾಂಗ್ರೆಸ್ ವಿರೋಧದಿಂದಾಗಿ ಈ ಹೊಸ ಅಬಕಾರಿ ನೀತಿಯನ್ನು ಹಿಂಪಡೆಯಬೇಕಾಯಿತು. ದೆಹಲಿಯ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರ ಮೇಲ್ವಿಚಾರಣೆಯಲ್ಲಿ ಈ ಹೊಸ ಅಬಕಾರಿ ನೀತಿಯನ್ನು ಅಂತಿಮಗೊಳಿಸಲಾಗಿದೆ. ಈ ವಿಚಾರವಾಗಿ ದೆಹಲಿಯ ಕೆಲವು ಬಿಜೆಪಿ ನಾಯಕರು ಮುಖ್ಯ ಕಾರ್ಯದರ್ಶಿಗೆ ದೂರು ನೀಡಿದ್ದರು. ಅವರು ತಮ್ಮ ತನಿಖೆಯಲ್ಲಿ ಅಕ್ರಮಗಳನ್ನು ಕಂಡುಹಿಡಿದಿದ್ದರು, ನಂತರ ಸುಮಾರು ಒಂದು ತಿಂಗಳ ಹಿಂದೆ ದೆಹಲಿಯ ಲೆಫ್ಟಿನೆಂಟ್ ಗವರ್ನರ್ ಅವರು ಪ್ರಕರಣದಲ್ಲಿ ಸಿಬಿಐ ತನಿಖೆಗೆ ಶಿಫಾರಸು ಮಾಡಿದ್ದರು. ಹಣಕ್ಕೆ ಬದಲಾಗಿ ಕೆಲವು ದೊಡ್ಡ ಮದ್ಯದ ವ್ಯಾಪಾರಿಗಳಿಗೆ ಲಾಭ ಮಾಡಿಕೊಡಲು ಹೊಸ ಅಬಕಾರಿ ನೀತಿಯನ್ನು ತರಲಾಗಿದೆ ಎಂದು ಆರೋಪಿಸಲಾಗಿದೆ.
Published by:Precilla Olivia Dias
First published: