Covid-19: ಕೊರೋನಾ ಹೆಚ್ಚಳ, ಮಣಿಪುರದಲ್ಲಿ ಶಾಲೆಗಳು ಬಂದ್!

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಕೋವಿಡ್ -19 ರ ಹೊಸ ಪ್ರಕರಣಗಳಲ್ಲಿ ತೀವ್ರ ಹೆಚ್ಚಳ ಕಂಡುಬಂದ ಹಿನ್ನೆಲೆಯಲ್ಲಿ ಮಣಿಪುರ ಸರ್ಕಾರವು ಮಂಗಳವಾರ ರಾಜ್ಯದಾದ್ಯಂತ ಎಲ್ಲಾ ಶಾಲೆಗಳನ್ನು (School) ಜುಲೈ 24 ರವರೆಗೆ ಮುಚ್ಚಲು ಆದೇಶಿಸಿದೆ.

  • Share this:

ಇಂಫಾಲ್(ಜು.13): ದೇಶದಲ್ಲಿ ಕೊರೋನಾ ಪ್ರಕರಣಗಳ (Covid 19 Caes) ಸಂಖ್ಯೆ ಏರಿಕೆಯಾಗುತ್ತಲೇ ಇದ್ದು ದೈನಂದಿನ ಕೇಸ್​ ಸಂಖ್ಯೆ ಈಗಾಗಲೇ 18 ಸಾವಿರದ ಗಡಿ ದಾಟಿದೆ. ಇದೀಗ ಮಣಿಪುರದಲ್ಲಿ (Manipur) ಕೊರೋನಾ ಪ್ರಕರಣಗಳ ಸಂಖ್ಯೆ ಹೆಚ್ಚಾಗಿ ಶಾಲೆಗಳನ್ನು ಮುಚ್ಚಲಾಗಿದೆ. ಕೋವಿಡ್ -19 ರ ಹೊಸ ಪ್ರಕರಣಗಳಲ್ಲಿ ತೀವ್ರ ಹೆಚ್ಚಳ ಕಂಡುಬಂದ ಹಿನ್ನೆಲೆಯಲ್ಲಿ ಮಣಿಪುರ ಸರ್ಕಾರವು ಮಂಗಳವಾರ ರಾಜ್ಯದಾದ್ಯಂತ ಎಲ್ಲಾ ಶಾಲೆಗಳನ್ನು (School) ಜುಲೈ 24 ರವರೆಗೆ ಮುಚ್ಚಲು ಆದೇಶಿಸಿದೆ. ಮಣಿಪುರ ಸರ್ಕಾರ ಹೊರಡಿಸಿದ ಅಧಿಸೂಚನೆಯಲ್ಲಿ, “ಕೋವಿಡ್ -19 ಪ್ರಕರಣಗಳು ಹೆಚ್ಚಾದಂತೆ ಮತ್ತು ಪಾಸಿಟಿವಿಟಿ ರೇಟ್ ರಾಜ್ಯದಲ್ಲಿ 15% ಕ್ಕಿಂತ ಹೆಚ್ಚಿದೆ, ರಾಜ್ಯದ ಎಲ್ಲಾ ಶಾಲೆಗಳು (ಸರ್ಕಾರಿ/ಖಾಸಗಿ) ಜುಲೈ 24 ರವರೆಗೆ ಮುಚ್ಚಲ್ಪಡುತ್ತವೆ ಎನ್ನಲಾಗಿದೆ.


ಕೊರೋನಾ ಟೆಸ್ಟ್ ಪಾಸಿಟಿವಿಟಿ ರೇಟ್ ಅನುಪಾತದ ವರದಿಗಳ ಹಿನ್ನೆಲೆಯಲ್ಲಿ ಈ ಆದೇಶವನ್ನು ನೀಡಲಾಗಿದೆ. ಇದು ಪ್ರಸ್ತುತ 15% ಕ್ಕಿಂತ ಹೆಚ್ಚಿದೆ. ಸೋಮವಾರ, 47 ಜನರಿಗೆ ಕೋವಿಡ್ -19 ಪಾಸಿಟಿವ್ ದೃಢಪಟ್ಟಿದ್ದು ರಾಜ್ಯದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 172 ಕ್ಕೆ ಏರಿಕೆಯಾಗಿದೆ. ರಾಜ್ಯದಲ್ಲಿ ಯಾವುದೇ ಹೊಸ ಸಾವುಗಳು ವರದಿಯಾಗಿಲ್ಲ,


ದೇಶದಲ್ಲಿ ಏರುತ್ತಲೇ ಇದೆ ಕೊರೋನಾ


ಕೇಂದ್ರ ಆರೋಗ್ಯ ಸಚಿವಾಲಯದ ಅಂಕಿಅಂಶಗಳ ಪ್ರಕಾರ, ಭಾರತದಲ್ಲಿ ಮಂಗಳವಾರ ಒಂದು ದಿನದಲ್ಲಿ 13,615 ಹೊಸ ಕರೋನವೈರಸ್ ಸೋಂಕುಗಳು ದಾಖಲಾಗಿದ್ದರೆ, ಸಕ್ರಿಯ ಪ್ರಕರಣಗಳು 1,31,043 ಕ್ಕೆ ಏರಿದೆ. ದೇಶದ ಒಟ್ಟು ಕೋವಿಡ್-19 ಪ್ರಕರಣಗಳ ಸಂಖ್ಯೆ 4,36,52,944 ಕ್ಕೆ ಏರಿದೆ ಮತ್ತು 20 ಹೊಸ ಸಾವುಗಳೊಂದಿಗೆ ಸಾವಿನ ಸಂಖ್ಯೆ 5,25,474 ಕ್ಕೆ ಏರಿದೆ ಎಂದು ಬೆಳಿಗ್ಗೆ 8 ಗಂಟೆಗೆ ನವೀಕರಿಸಿದ ಡೇಟಾ ತಿಳಿಸಿದೆ.


ಸೋಂಕಿಗಿಂತ ಚೇತರಿಗೆ ಹೆಚ್ಚಿದೆ


ಸಕ್ರಿಯ ಪ್ರಕರಣಗಳು ಒಟ್ಟು ಸೋಂಕುಗಳಲ್ಲಿ 0.30 ಪ್ರತಿಶತವನ್ನು ಒಳಗೊಂಡಿವೆ, ಆದರೆ ರಾಷ್ಟ್ರೀಯ COVID-19 ಚೇತರಿಕೆ ದರವು 98.50 ಪ್ರತಿಶತದಷ್ಟು ದಾಖಲಾಗಿದೆ ಎಂದು ಸಚಿವಾಲಯ ತಿಳಿಸಿದೆ. 24 ಗಂಟೆಗಳ ಅವಧಿಯಲ್ಲಿ ಸಕ್ರಿಯ COVID-19 ಕ್ಯಾಸೆಲೋಡ್‌ನಲ್ಲಿ 330 ಪ್ರಕರಣಗಳ ಹೆಚ್ಚಳ ದಾಖಲಾಗಿದೆ.


ಇದನ್ನೂ ಓದಿ: Pani Puri: ಪಾನಿಪುರಿ ತಿನ್ಬೇಡಿ ಎಚ್ಚರ! ಆರೋಗ್ಯ ಇಲಾಖೆಯಿಂದಲೇ ಸೂಚನೆ


ಭಾರತದ COVID-19 ಸಂಖ್ಯೆಯು ಆಗಸ್ಟ್ 7, 2020 ರಂದು 20 ಲಕ್ಷದ ಗಡಿಯನ್ನು ದಾಟಿದೆ. ಆಗಸ್ಟ್ 23 ರಂದು 30 ಲಕ್ಷ, ಸೆಪ್ಟೆಂಬರ್ 5 ರಂದು 40 ಲಕ್ಷ ಮತ್ತು ಸೆಪ್ಟೆಂಬರ್ 16 ರಂದು 50 ಲಕ್ಷ. ಇದು ಸೆಪ್ಟೆಂಬರ್ 28 ರಂದು 60 ಲಕ್ಷ, ಅಕ್ಟೋಬರ್ 11 ರಂದು 70 ಲಕ್ಷವನ್ನು ದಾಟಿದೆ. ಅಕ್ಟೋಬರ್ 29 ರಂದು 80 ಲಕ್ಷ, ನವೆಂಬರ್ 20 ರಂದು 90 ಲಕ್ಷ ಮತ್ತು ಡಿಸೆಂಬರ್ 19 ರಂದು ಒಂದು ಕೋಟಿ ಗಡಿ ದಾಟಿದೆ.


ತಮಿಳುನಾಡಿನ ಶಾಲೆಯ 30 ಮಕ್ಕಳಿಗೆ ಕೊರೋನಾ


ತಮಿಳುನಾಡಿನಲ್ಲಿ ವೈದ್ಯಕೀಯ ಕಾಲೇಜು ವಿದ್ಯಾರ್ಥಿಗಳಿಗೆ ಕೋವಿಡ್ -19 ಪಾಸಿಟಿವ್ ದೃಢಪಟ್ಟಿತ್ತು. ಇದು ತೂತುಕುಡಿ ಜಿಲ್ಲೆಯಲ್ಲಿ ಚಿಕಿತ್ಸೆಯಲ್ಲಿರುವ ಒಟ್ಟು ರೋಗಿಗಳ ಸಂಖ್ಯೆಯನ್ನು 82 ಕ್ಕೆ ಹೆಚ್ಚಿಸಿದೆ.


ಇತರ 200 ವಿದ್ಯಾರ್ಥಿಗಳಿಗೆ ಕೋವಿಡ್ -19 ಪರೀಕ್ಷೆಗಳನ್ನು ನಡೆಸಲಾಗಿದ್ದು,  30 ವಿದ್ಯಾರ್ಥಿಗಳ ರಿಸಲ್ಟ್ ಪಾಸಿಟಿವ್ ಬಂದಿದೆ.ಪಾಸಿಟಿವ್ ಬಂದ ವಿದ್ಯಾರ್ಥಿಗಳಿಗೆ ತಮ್ಮ ಹಾಸ್ಟೆಲ್‌ಗಳಲ್ಲಿ ಕ್ವಾರಂಟೈನ್‌ನಲ್ಲಿ ಇರುವಂತೆ ಸೂಚಿಸಲಾಗಿದೆ. ಅವರಿಗೆ ಆನ್‌ಲೈನ್ ತರಗತಿಗಳನ್ನು ವ್ಯವಸ್ಥೆ ಮಾಡಲಾಗಿತ್ತು.


ಇದನ್ನೂ ಓದಿ: Morning Digest: ಕಡಿಮೆ ಆಗ್ತಿಲ್ಲ ವರುಣನ ಆರ್ಭಟ, ಶ್ರೀಲಂಕಾ ಅಧ್ಯಕ್ಷ ಪರಾರಿ, ಇಳಿಕೆಯಾಯ್ತು ಚಿನ್ನದ ಬೆಲೆ; ಬೆಳಗಿನ ಟಾಪ್ ನ್ಯೂಸ್

top videos


    ದೇಶದಲ್ಲಿ ಶಾಲೆಗಳು ಪುನರಾರಂಭಗೊಂಡ ನಂತರ ಜೂನ್ ತಿಂಗಳಲ್ಲಿ ಮಳೆಯಿಂದಾಗಿ ತರಗತಿಗಳು ಮೊಟಕುಗೊಂಡರೆ ಇನ್ನೊಂದು ಕಡೆ ಮಳೆ ನಿಂತರೂ ವೈರಸ್ ಭೀತಿ ಮಾತ್ರ ಕಮ್ಮಿಯಾಗುತ್ತಿಲ್ಲ. ಚಿಕ್ಕ ಮಕ್ಕಳನ್ನು ಶಾಲೆಗೆ ಕಳುಹಿಸುವುದು ಪೋಷಕರಿಗೂ ಸವಾಲಾಗಿದೆ. ದೇಶದಲ್ಲಿಯೂ ಕೊರೋನಾ ವೈರಸ್ ಏರಿಕೆಯಾಗುತ್ತಿದೆ, ಆದರೆ ಇದು ಹಿಂದಿನಷ್ಟು ಮಾರಣಾಂತಿಕವಲ್ಲ ಎನ್ನುವುದು ಸ್ವಲ್ಪ ಮಟ್ಟಿಗೆ ಸಮಾಧಾನಕರ.

    First published: