• Home
  • »
  • News
  • »
  • national-international
  • »
  • Bus Accident: ಮಣಿಪುರದ ಖೌಪುಮ್​ನಲ್ಲಿ ಶಾಲಾ ಬಸ್ ಅಪಘಾತ, ಐವರು ವಿದ್ಯಾರ್ಥಿಗಳ ಸಾವು

Bus Accident: ಮಣಿಪುರದ ಖೌಪುಮ್​ನಲ್ಲಿ ಶಾಲಾ ಬಸ್ ಅಪಘಾತ, ಐವರು ವಿದ್ಯಾರ್ಥಿಗಳ ಸಾವು

ಮಣಿಪುರದ ನೋನಿ ಜಿಲ್ಲೆಯ ಖೌಪುಮ್ ಪ್ರದೇಶದಲ್ಲಿ ಶಾಲಾ ಬಸ್ ಅಪಘಾತ

ಮಣಿಪುರದ ನೋನಿ ಜಿಲ್ಲೆಯ ಖೌಪುಮ್ ಪ್ರದೇಶದಲ್ಲಿ ಶಾಲಾ ಬಸ್ ಅಪಘಾತ

ಮಣಿಪುರದ ನೋನಿ ಜಿಲ್ಲೆಯ ಖೌಪುಮ್ ಪ್ರದೇಶದಲ್ಲಿ ಬುಧವಾರ ಶಾಲಾ ಬಸ್ ಅಪಘಾತಕ್ಕೀಡಾಗಿದ್ದರಿಂದ ಐವರು ವಿದ್ಯಾರ್ಥಿಗಳು ಪ್ರಾಣ ಕಳೆದುಕೊಂಡಿದ್ದಾರೆ. ಅಪಘಾತದಲ್ಲಿ ಮೃತಪಟ್ಟ ವಿದ್ಯಾರ್ಥಿಗಳು ಹೈಯರ್ ಸೆಕೆಂಡರಿ ಶಾಲೆಯವರು ಎಂದು ಎಂದು ಪೊಲೀಸರು ತಿಳಿಸಿದ್ದಾರೆ.

  • News18 Kannada
  • Last Updated :
  • Manipur, India
  • Share this:

    ಮಣಿಪುರದಲ್ಲಿ (Manipur) ಶಾಲಾ ವಾಹನ (School Bus) ಅಪಘಾತಕ್ಕೀಡಾಗಿದ್ದು (Accident), ಸ್ಥಳದಲ್ಲೇ ಐವರು ವಿದ್ಯಾರ್ಥಿಗಳು (Five Students) ಸಾವನ್ನಪ್ಪಿರುವ ಘಟನೆ (Incident) ನಡೆದಿದೆ. ಇತ್ತೀಚಿನ ದಿನಗಳಲ್ಲಿ ಅಪಘಾತಗಳ ಸಂಖ್ಯೆ ಎಲ್ಲೆಡೆ ಹೆಚ್ಚಿದೆ. ಸರಣಿ ಅಪಘಾತಗಳು ನಡೆಯುತ್ತಿವೆ. ಈಗ ಮಣಿಪುರದ ನೋನಿ ಜಿಲ್ಲೆಯ ಖೌಪುಮ್ ಪ್ರದೇಶದಲ್ಲಿ ಬುಧವಾರ ಶಾಲಾ ಬಸ್ ಅಪಘಾತಕ್ಕೀಡಾಗಿದ್ದರಿಂದ ಐವರು ವಿದ್ಯಾರ್ಥಿಗಳು ಪ್ರಾಣ ಕಳೆದುಕೊಂಡಿದ್ದಾರೆ. ಅಪಘಾತದಲ್ಲಿ ಮೃತಪಟ್ಟ ವಿದ್ಯಾರ್ಥಿಗಳು ಹೈಯರ್ ಸೆಕೆಂಡರಿ ಶಾಲೆಯವರು ಎಂದು ಎಂದು ಪೊಲೀಸರು ತಿಳಿಸಿದ್ದಾರೆ. ಇನ್ನು ವಿದ್ಯಾರ್ಥಿಗಳು ಅಪಘಾತದಲ್ಲಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಇನ್ನು ಅಪಘಾತದಲ್ಲಿ ಗಾಯಗೊಂಡ ವಿದ್ಯಾರ್ಥಿಗಳನ್ನು ಸ್ಥಳೀಯ ಹಾಗೂ ಸಮೀಪದ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಆರೋಗ್ಯ ಕೇಂದ್ರಕ್ಕೆ ಕರೆದುಕೊಂಡು ಹೋಗುವಾಗ ಮಾರ್ಗ ಮಧ್ಯೆಯೇ ವಿದ್ಯಾರ್ಥಿಗಳು ಮೃತಪಟ್ಟಿದ್ದಾರೆ ಎಂದು ಹೇಳಲಾಗಿದೆ.


    ಮಣಿಪುರದ ನೋನಿ ಜಿಲ್ಲೆಯ ಖೌಪುಮ್ ಪ್ರದೇಶದಲ್ಲಿ ಶಾಲಾ ಬಸ್ ಅಪಘಾತ


    ಪೊಲೀಸ್ ವರದಿ ಪ್ರಕಾರ, ಹೈಯರ್ ಸೆಕೆಂಡರಿ ಶಾಲೆಯ ಸುಮಾರು 36 ವಿದ್ಯಾರ್ಥಿಗಳು ಮತ್ತು ಸಿಬ್ಬಂದಿಯನ್ನು ಕರೆದೊಯ್ಯುತ್ತಿದ್ದ ಶಾಲಾ ಬಸ್ ಮಣಿಪುರದ ನೋನಿ ಜಿಲ್ಲೆಯ ಖೌಪುಮ್ ನ ಯೈರಿಪೋಕ್‌ ಪ್ರದೇಶದ ತಂಬಲ್ನು ದಲ್ಲಿ ಅಪಘಾತಕ್ಕೀಡಾಗಿದೆ.


    ಅಧ್ಯಯನ ಪ್ರವಾಸಕ್ಕೆ ಹೋಗುತ್ತಿದ್ದ ವಿದ್ಯಾರ್ಥಿಗಳು


    ಈ ಘಟನೆ ಬುಧವಾರ ಬೆಳಗ್ಗೆ 11 ಗಂಟೆ ಸುಮಾರಿಗೆ ನುಂಗ್ಸೈ ಗ್ರಾಮದಲ್ಲಿ ಪಲ್ಟಿಯಾಗಿದೆ. ಈ ಪ್ರದೇಶ ಇಂಫಾಲ್‌ನಿಂದ ನೈಋತ್ಯಕ್ಕೆ 50 ಕಿಮೀ ದೂರದಲ್ಲಿದೆ. ಹೈಯರ್ ಸೆಕೆಂಡರಿ ಶಾಲೆಯ ಸುಮಾರು 36 ವಿದ್ಯಾರ್ಥಿಗಳು ಮತ್ತು ಸಿಬ್ಬಂದಿ ಅಧ್ಯಯನ ಪ್ರವಾಸಕ್ಕೆಂದು ಖೌಪುಮ್ ಕಡೆಗೆ ಹೋಗ್ತಾ ಇದ್ರು.


    ನೋನಿ ಜಿಲ್ಲೆಯ ಹಿರಿಯ ಅಧಿಕಾರಿಯೊಬ್ಬರು ನೀಡಿರುವ ಮಾಹಿತಿ ಮೇರೆಗೆ, ಅಪಘಾತದಲ್ಲಿ ಐವರನ್ನು ಹೊರತುಪಡಿಸಿ, ಮತ್ಯಾವುದೇ ಸಾವಿನ ಪ್ರಕರಣ ಸದ್ಯ ಕಂಡು ಬಂದಿಲ್ಲ. ಈ ಬಗ್ಗೆ ಯಾವುದೇ ದೃಢೀಕೃತ ವರದಿಯಿಲ್ಲ. ಆದರೆ ಸಾವು ನೋವು ಪ್ರಮಾಣ ಹೆಚ್ಚಾಗುವ ಸಾಧ್ಯತೆ ಹೆಚ್ಚಿದೆ ಎಂದು ತಿಳಿಸಿದ್ದಾರೆ.




    ಮೂಲಗಳ ಮಾಹಿತಿ ಪ್ರಕಾರ, ಕೆಲವು ಗಾಯಾಳು ವಿದ್ಯಾರ್ಥಿಗಳನ್ನು ಇಂಫಾಲ್‌ ನ ಖಾಸಗಿ ಆರೋಗ್ಯ ಕೇಂದ್ರಕ್ಕೆ ರವಾನೆ ಮಾಡಲಾಗಿದೆ ಎಂದು ಹೇಳಿವೆ.


    ಘಟನಾ ಸ್ಥಳಕ್ಕೆ ಸಚಿವ ಡಾ.ಸಪಂ ರಂಜನ್ ಸಿಂಗ್ ಭೇಟಿ


    ಇನ್ನು ಅಪಘಾತ ನಡೆದ ಸ್ಥಳಕ್ಕೆ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ. ಸಪಂ ರಂಜನ್ ಸಿಂಗ್ ಭೇಟಿ ನೀಡಿದ್ರು. ಈ ವೇಳೆ ಅಪಘಾತದ ಕುರಿತು ಮಾಹಿತಿ ಪಡೆದುಕೊಂಡರು. ಸಾರ್ವಜನಿಕ ಸಂಪರ್ಕ ಖಾತೆಯ ಅಧಿಕಾರಿಗಳು ಸಹ ಸ್ಥಳಕ್ಕೆ ಭೇಟಿ ನೀಡಿದ್ದರು. ಘಟನೆ ಬಗ್ಗೆ ಸಚಿವರು ಮಾಹಿತಿ ಪಡೆದಿದ್ದಾರೆ.


    ಕೊರಟಗೆರೆಗೆ ತೆರಳುವ ವೇಳೆ ಅಪಘಾತ


    ಗೌರಿಬಿದನೂರು ತಾಲೂಕಿನ ಅಲಕಾಪುರಕ್ಕೆ ಆಗಮಿಸಿ ಕೆಲಸ ಮುಗಿಸಿಕೊಂಡು ವಾಪಸ್ ಕೊರಟಗೆರೆಗೆ ತೆರಳುವ ವೇಳೆ ಅಪಘಾತವಾಗಿದೆ. ಘಟನಾ ಸ್ಥಳಕ್ಕೆ ಗೌರಿಬಿದನೂರು ಗ್ರಾಮಾಂತರ ಪೊಲೀಸ್ ಠಾಣೆಯ ಪೊಲೀಸರು ಹಾಗೂ ಗುಡಿಬಂಡೆ ಪೊಲೀಸ್ ಠಾಣೆಯ ಇನ್ಸ್​ಪೆಕ್ಟರ್ ಲಿಂಗರಾಜು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ.


    ಇದನ್ನೂ ಓದಿ: ಆ್ಯಂಬುಲೆನ್ಸ್​ನಲ್ಲಿ ಡ್ರೈವರ್ ಜೊತೆ ದಾರಿ ಮಧ್ಯೆಯೇ ಮದ್ಯ ಸೇವಿಸಿದ ರೋಗಿ!


    ಗದಗದಲ್ಲಿ ಅಪಘಾತ ಇಬ್ಬರು ಸಾವು


    ಗದಗ ಪಟ್ಟಣದ ಹೊರವಲಯದ ಗದ್ದಿ ಹಳ್ಳದ ಬಳಿ ಬೈಕ್ ಹಾಗೂ ಮಿನಿ ಬಸ್ ನಡುವೆ ಅಪಘಾತ ಸಂಭವಿಸಿ ಇಬ್ಬರು ಸಾವನ್ನಪ್ಪಿದ್ದಾರೆ. ರೋಣದಿಂದ ಗದಗ ಕಡೆಗೆ ಬರುತ್ತಿದ್ದ ಮಿನಿ ಬಸ್ ಗದಗದಿಂದ ನರೇಗಲ್ ಗೆ ಹೊರಟ್ಟಿದ್ದ ಬೈಕ್ ನಡುವೆ ಡಿಕ್ಕಿ ಸಂಭವಿಸಿದೆ. ಅಪಘಾತದಲ್ಲಿ ಸಂಗಮೇಶ್(27) ,ದತ್ತಪ್ಪ (30) ಮೃತ ದುರ್ದೈವಿಗಳು.

    Published by:renukadariyannavar
    First published: