ಬಿಜೆಪಿಗೆ ಮುಖಭಂಗ; ಮಣಿಪುರದಲ್ಲಿ ಆಪರೇಷನ್‌ ಕಮಲಕ್ಕೆ ತುತ್ತಾಗಿದ್ದ ಶಾಸಕರಿಗೆ ಹೈಕೋರ್ಟ್‌ ಛೀಮಾರಿ

ಇತ್ತೀಚೆಗೆ ಬಿಜೆಪಿ ಮಣಿಪುರದಲ್ಲಿ ಆಪರೇಷನ್ ಕಮಲ ನಡೆಸಿತ್ತು. ಆ ಮೂಲಕ ಕಾಂಗ್ರೆಸ್‌ ಪಕ್ಷದ 7 ಜನ ಶಾಸಕರನ್ನು ತನ್ನ ಪಕ್ಷಕ್ಕೆ ಸೆಳೆದುಕೊಂಡಿತ್ತು. ಆದರೆ, ಇದನ್ನು ಗಂಭೀರ ಪ್ರಕರಣ ಎಂದು ಪರಿಗಣಿಸಿರುವ ಮಣಿಪುರ ಹೈಕೋರ್ಟ್, ಈ 7 ಜನ ಶಾಸಕರು ಇಂಫಾಲ್ ಶಾಸಕಾಂಗ ಸಭೆಗೆ ಪ್ರವೇಶಿಸುವುದನ್ನೇ ನಿರ್ಬಂಧಿಸಿದೆ.

ಮಣಿಪುರ ಹೈಕೋರ್ಟ್‌.

ಮಣಿಪುರ ಹೈಕೋರ್ಟ್‌.

  • Share this:
ಇತ್ತೀಚೆಗೆ ಕರ್ನಾಟಕ ಮತ್ತು ಮಧ್ಯಪ್ರದೇಶದಲ್ಲಿ ನಡೆದಿದ್ದ ಆಪರೇಷನ್‌ ಕಮಲ ಇಡೀ ರಾಷ್ಟ್ರ ಮಟ್ಟದಲ್ಲಿ ದೊಡ್ಡ ಸುದ್ದಿಯಾಗಿತ್ತು. ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ “ಸ್ಪೀಕರ್ ಅನರ್ಹಗೊಳಿಸಿದ ಶಾಸಕರು ಅನರ್ಹರು ಹೌದು..ಆದರೆ, ಅವರು ಚುನಾವಣೆಗೆ ಸ್ಪರ್ಧಿಸಬಹುದು” ಎಂಬ ಸುಪ್ರೀಂ ಕೋರ್ಟ್‌ ತೀರ್ಪು ಸಾಕಷ್ಟು ಚರ್ಚೆಗೆ ಗ್ರಾಸವಾಗಿತ್ತು. ಈ ತೀರ್ಪು ಇಂತಹ ಮತ್ತಷ್ಟು ರಾಜಕೀಯ ದೊಂಬರಾಟಗಳಿಗೆ ಕಾರಣವಾಗಲಿದೆ ಎನ್ನಲಾಗಿತ್ತು. ಆದರೆ, ಮಣಿಪುರದ ಹೈಕೋರ್ಟ್‌ ಇಂದು ಆಪರೇಷನ್‌ ಕಮಲದ ಕುರಿತು ಮಹತ್ವದ ತೀರ್ಪು ನೀಡುವ ಮೂಲಕ ಇಡೀ ರಾಷ್ಟ್ರದ ಗಮನ ಸೆಳೆದಿದೆ. ಅಲ್ಲದೆ, ಬಿಜೆಪಿ ಪಕ್ಷದ ಮುಖಭಂಗಕ್ಕೆ ಕಾರಣವಾಗಿದೆ.

ಇತ್ತೀಚೆಗೆ ಬಿಜೆಪಿ ಮಣಿಪುರದಲ್ಲಿ ಆಪರೇಷನ್ ಕಮಲ ನಡೆಸಿತ್ತು. ಆ ಮೂಲಕ ಕಾಂಗ್ರೆಸ್‌ ಪಕ್ಷದ 7 ಜನ ಶಾಸಕರನ್ನು ತನ್ನ ಪಕ್ಷಕ್ಕೆ ಸೆಳೆದುಕೊಂಡಿತ್ತು. ಆದರೆ, ಇದನ್ನು ಗಂಭೀರ ಪ್ರಕರಣ ಎಂದು ಪರಿಗಣಿಸಿರುವ ಮಣಿಪುರ ಹೈಕೋರ್ಟ್, ಪಕ್ಷಾಂತರ ಮಾಡಿರುವ ಈ 7 ಜನ ಶಾಸಕರಿಗೂ ಛೀಮಾರಿ ಹಾಕಿದೆ. ಅಲ್ಲದೆ, ಇಂಫಾಲ್ ಶಾಸಕಾಂಗ ಸಭೆಗೆ ಇವರ ಪ್ರವೇಶಿಸುವುದನ್ನೇ ನಿರ್ಬಂಧಿಸಿದೆ. ಅಲ್ಲದೆ, ಮುಂದಿನ ಆದೇಶದವರೆಗೆ ಶಾಸಕರ ಪ್ರವೇಶವನ್ನು ತಡೆಯುವಂತೆ ರಾಜ್ಯ ವಿಧಾನಸಭಾ ಸ್ಪೀಕರ್ ಯುನ್ನಮ್ ಖೇಮ್‌ಚಂದ್ ಅವರಿಗೆ ನಿರ್ದೇಶನ ನೀಡಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಪೀಕರ್‌ ನಡೆಯನ್ನೂ ಖಂಡಿಸಿರುವ ನ್ಯಾಯಾಲಯ, "ತೀರ್ಪು ಹಾಗೂ ಆದೇಶವನ್ನು ನ್ಯಾಯಾಲಯಕ್ಕೆ ತಿಳಿಸಿದ ದಿನದಿಂದ ಮೂರು ತಿಂಗಳೊಳಗೆ ಸ್ಪೀಕರ್ ಅರ್ಜಿಗಳನ್ನು ನಿರ್ಧರಿಸಬೇಕಾಗಿತ್ತು. ಆದರೆ, ಅರ್ಜಿದಾರರು ತಮ್ಮ ಮುಂದೆ ಸಲ್ಲಿಸಿದ್ದ ಅರ್ಜಿಗಳನ್ನು ನಿರ್ದಿಷ್ಟ ಸಮಯದೊಳಗೆ ನಿರ್ಧರಿಸಲು ಸ್ಪೀಕರ್ ವಿಫಲರಾಗಿದ್ದಾರೆ” ಎಂದು ಚಾಟಿ ಬೀಸಿದೆ.

2017 ರಲ್ಲಿ ನಡೆದ ಮಣಿಪುರ ವಿಧಾನಸಭಾ ಚುನಾವಣೆಯಲ್ಲಿ 60 ಸದಸ್ಯ ಬಲವಿರುವ ವಿಧಾನ ಸಭೆಯಲ್ಲಿ ಕಾಂಗ್ರೆಸ್ 28 ಶಾಸಕರನ್ನು ಹೊಂದಿರುವ ಏಕೈಕ ದೊಡ್ಡ ಪಕ್ಷವಾಗಿ ಹೊರಹೊಮ್ಮಿತ್ತು. ಆದರೆ ಸುಮಾರು ಎಂಟು ಕಾಂಗ್ರೆಸ್ ಶಾಸಕರು ನಂತರ ಪಕ್ಷವನ್ನು ತೊರೆದು ಬಿಜೆಪಿ ಸೇರಿದ್ದರು. ಅಲ್ಲಿ ಬಿಜೆಪಿ 21 ಸ್ಥಾನಗಳನ್ನು ಗೆದ್ದಿತ್ತು.

ಬಿಜೆಪಿಯು ನ್ಯಾಷನಲ್ ಪೀಪಲ್ಸ್ ಪಾರ್ಟಿ ಹಾಗೂ ನಾಗಾ ಪೀಪಲ್ಸ್ ಫ್ರಂಟ್ ನಿಂದ ತಲಾ ನಾಲ್ಕು ಸ್ಥಾನಗಳು, ತೃಣಮೂಲ ಕಾಂಗ್ರೆಸ್‌ನಿಂದ ಒಂದು, ಲೋಕ ಜನ ಶಕ್ತಿ ಪಕ್ಷದಿಂದ ಒಂದು ಹಾಗೂ ಒಬ್ಬ ಪಕ್ಷೇತರ ಶಾಸಕನ ಬೆಂಬಲ ಪಡೆದು ಸರ್ಕಾರವನ್ನು ರಚಿಸಿತ್ತು. ಈಗ ಮತ್ತೆ 7 ಜನ ಶಾಸಕರು ಆಪರೇಷನ್‌ ಕಮಲಕ್ಕೆ ಒಳಗಾಗಿರುವುದನ್ನು ಅಲ್ಲಿನ ಹೈಕೋರ್ಟ್‌ ಗಂಭೀರವಾಗಿ ಪರಿಗಣಿಸಿದೆ.

ನ್ಯಾಯಾಲಯದ ತೀರ್ಪಿನ ಕುರಿತು ಹರ್ಷ ವ್ಯಕ್ತಪಡಿಸಿರುವ ಮಣಿಪುರದ ಕಾಂಗ್ರೆಸ್ ವಕ್ತಾರ ನಿಂಗೊಂಬಮ್ ಬುಪೆಂಡಾ ಮೀಟೈ “ಸ್ಪೀಕರ್ ನ್ಯಾಯಮಂಡಳಿಯಲ್ಲಿ ಅವರ ವಿರುದ್ಧ ಬಾಕಿ ಇರುವ ಅನರ್ಹತೆ ಪ್ರಕರಣಗಳ ಅಂತಿಮ ವಿಲೇವಾರಿ ತನಕ ಮಣಿಪುರದ ವಿಧಾನಸಭೆಗೆ ಪ್ರವೇಶಿಸದಂತೆ ತಡೆದ ಮಣಿಪುರದ ಹೈಕೋರ್ಟ್ ನೀಡಿದ ತೀರ್ಪನ್ನು ನಾನು ಸ್ವಾಗತಿಸುತ್ತೇನೆ.” ಎಂದಿದ್ದಾರೆ.

“ಜೂನ್ 19 ರಂದು ಮಣಿಪುರದಿಂದ ರಾಜ್ಯಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲ್ಲುತ್ತದೆ ಎಂದು ನನಗೆ ಖಾತ್ರಿಯಿದೆ. ಮಣಿಪುರದಲ್ಲಿ ಶೀಘ್ರದಲ್ಲೇ ಕಾಂಗ್ರೆಸ್ ನೇತೃತ್ವದ ಹೊಸ ಸಮ್ಮಿಶ್ರ ಸರ್ಕಾರವನ್ನು ನೋಡಲು ನಾನು ಕಾಯುತ್ತಿದ್ದೇನೆ” ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ : ಬಿಜೆಪಿ ನಾಯಕ ಜ್ಯೋತಿರಾದಿತ್ಯ ಸಿಂಧಿಯಾ ಮತ್ತು ಅವರ ತಾಯಿಗೆ ಕೊರೋನಾ ಪಾಸಿಟಿವ್‌; ದೆಹಲಿ ಆಸ್ಪತ್ರೆಗೆ ದಾಖಲು
First published: