Manipur Elections: ಮಣಿಪುರ ವಿಧಾನಸಭಾ ಚುನಾವಣಾ ಕಣದಲ್ಲಿ ಅಬ್ಬರ, ಗದ್ದಲಗಳೇ ಇಲ್ಲ!

ನಾವು ಬೆಂಬಲಿಸುವ ಅಭ್ಯರ್ಥಿಗೆ ನಾವು ಬೆಳೆಯುವ ಹಣ್ಣು, ತರಕಾರಿ ತಂದು ಕೊಡುತ್ತೇವೆ. ಈ ಮೂಲಕ‌ ನಿಮಗೆ ಮತ ಹಾಕುತ್ತೇವೆ ಎಂದು ತೋರಿಸುತ್ತೇವೆ ಎಂದು ಸಮಾರಂಭಕ್ಕೆ ಅಕ್ಕಿ ಹಣ್ಣು ಹಂಪಲು ತಂದಿರುವ ಸುಷ್ಮಾ ಹೇಳಿದ್ದಾರೆ. 

ಮಣಿಪುರ ವಿಧಾನಸಭಾ ಚುನಾವಣೆ

ಮಣಿಪುರ ವಿಧಾನಸಭಾ ಚುನಾವಣೆ

  • Share this:
ನವದೆಹಲಿ(ಫೆ.‌ 23): ಈಗ ನಡೆಯುತ್ತಿರುವ ಉತ್ತರ ಪ್ರದೇಶ, ಉತ್ತರಖಂಡಾ, ಗೋವಾ ಪಂಜಾಬ್ ಹಾಗೂ ಮಣಿಪುರ ರಾಜ್ಯಗಳ ವಿಧಾನಸಭಾ ಚುನಾವಣೆಗಳ(Assembly Election) ಪೈಕಿ ಮಣಿಪುರದಲ್ಲಿ (Manipur) ಚುನಾವಣೆ ನಡೆಯುತ್ತಿದೆ ಎಂದೇ ಚರ್ಚೆ ಆಗುತ್ತಿಲ್ಲ.‌ ಇದು ಮಣಿಪುರದ ಹೊರಗಿನ‌‌ ಚಿತ್ರಣ ಮಾತ್ರವಲ್ಲ, ರಾಜ್ಯದೊಳಗೂ ಚುನಾವಣಾ ಪ್ರಚಾರದ (Elections Campaign) ಗದ್ದಲ, ಗೊಂದಲಗಳು‌‌ ಗೋಚರಿಸುತ್ತಿಲ್ಲ. ಸಾಮಾನ್ಯವಾಗಿ ಚುನಾವಣೆ ಎಂದರೆ ರಾಜಕೀಯ ನೇತಾರರ ಗದ್ದಲ, ವಾಗ್ದಾಳಿ, ಆರೋಪ ಪ್ರತ್ಯಾರೋಪ, ಸಂಭ್ರಮಾಚರಣೆ, ಅಬ್ಬರಗಳು ಕಾಣಸಿಗುತ್ತವೆ. ಆದರೆ ಈ ಬಾರಿ ಮಣಿಪುರದಲ್ಲಿ ಎಲ್ಲಾ ರಾಜಕೀಯ ಪಕ್ಷಗಳು ತಮ್ಮ ಧ್ವಜಗಳನ್ನು ಹಾರಿಸುವ ಮತ್ತು ವಿವಿಧ ಧಾರ್ಮಿಕ ಆಚರಣೆಗಳ ಮೂಲಕ ಮಾತ್ರ ಮತದಾರರನ್ನು ತಮ್ಮತ್ತ ಸೆಳೆಯುವ ಪ್ರಯತ್ನ ನಡೆಸಿವೆ.

ಸಿಎಂ ಪ್ರಚಾರವೂ ಸಿಂಪಲ್

ಎಲ್ಲೆಡೆ ಎಲ್ಲಾ ರಾಜಕೀಯ ಪಕ್ಷಗಳ ಧ್ವಜಗಳು ಸಿದ್ಧವಾಗಿವೆ.‌ ಆಯಾ ಪಕ್ಷದ ನಾಯಕರು ಬಂದಾಗ ಪಟಪಟಿಸುತ್ತವೆ. ಅದೇ ರೀತಿ ಆಯಾ ‌ಪಕ್ಷದ, ನಾಯಕರ ಇಷ್ಟಾನುಸಾರ ಧಾರ್ಮಿಕ ಕಾರ್ಯಕ್ರಮಗಳು ಜರುಗುತ್ತವೆ. ಇದು ಈ ಬಾರಿಯ ಮಣಿಪುರ ವಿಧಾನಸಭಾ ಚುನಾವಣೆಯ ಅಖಾಡದಲ್ಲಿ ಕಂಡು ಬರುತ್ತಿರುವ ಸಾಮಾನ್ಯ ಚಿತ್ರಣ.‌ ಸೆಕ್ಮಾಯಿ ಕ್ಷೇತ್ರದಲ್ಲಿ‌ ಅಲ್ಲಿನ ಶಾಸಕರೂ ಆಗಿರುವ ಬಿಜೆಪಿ ಅಭ್ಯರ್ಥಿ ಹೈಕಮ್ ಡಿಂಗೋ ಸಿಂಗ್ ಇದೇ ರೀತಿಯ ಕಾರ್ಯಕ್ರಮವನ್ನು ನಡೆಸುತ್ತಿದ್ದಾರೆ. ಮುಖ್ಯಮಂತ್ರಿ ಎನ್ ಬಿರೇನ್ ಸಿಂಗ್ ಇಂದು ಡಿಂಗೊ ಆಯೋಜಿಸಿರುವ ಧಾರ್ಮಿಕ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದಾರೆ.

ಇದನ್ನೂ ಓದಿ: Manipur Elections: ಮಣಿಪುರ ವಿಧಾನಸಭಾ ಚುನಾವಣಾ ಕಣದಲ್ಲಿ ಅಬ್ಬರ, ಗದ್ದಲಗಳೇ ಇಲ್ಲ!

ಹಣ್ಣು-ತರಕಾರಿ ತಂದುಕೊಡುವ ಮತದಾರರು

ತಾವು ಆಯೋಜಿಸಿರುವ ಕಾರ್ಯಕ್ರಮಕ್ಕೆ ಸಿಎಂ ಬರುತ್ತಿರುವುದರ ಬಗ್ಗೆ ಪ್ರತಿಕ್ರಿಯಿಸಿದ್ದ ಡಿಂಗೋ 'ನನ್ನ ಧ್ವಜಾರೋಹಣಕ್ಕೆ ಸಿಎಂ ಬರುತ್ತಿರುವುದಕ್ಕೆ ಆಭಾರಿಯಾಗಿದ್ದೇನೆ. ಸಮಯಕ್ಕೆ ಸರಿಯಾಗಿ ಕೆಲಸ ಮಾಡಿದರೆ, ಗ್ರಾಮಸ್ಥರೆಲ್ಲರೂ ಭಾಗವಹಿಸಿ ಅಭ್ಯರ್ಥಿಯನ್ನು ಗೆಲ್ಲಿಸುತ್ತಾರೆ' ಎಂದು ಡಿಂಗೊ ಹೇಳಿದ್ದರು. ಏತನ್ಮಧ್ಯೆ, ಡಿಂಗೊಗೆ ಬೆಂಬಲ ನೀಡುವ ಬ್ಯಾನರ್ ಜೊತೆಗೆ ಅಕ್ಕಿ, ತರಕಾರಿಗಳು ಮತ್ತು ಹಣ್ಣುಗಳನ್ನು ತರಲಾಗಿದೆ.‌ ತಾವು ಯಾವ ಪಕ್ಷವನ್ನು ಬೆಂಬಲಿಸುವುದಾಗಿ ಅಭಿವ್ಯಕ್ತಿಸಲು ತಮ್ಮ ಹಣ್ಣುಗಳು ಮತ್ತು ತರಕಾರಿಗಳ ಬುಟ್ಟಿಯೊಂದಿಗೆ ಆಯಾ ಪಕ್ಷದ ಧ್ವಜವನ್ನು ಬಳಸಿರುವ ದೃಶ್ಯಗಳು ಕಂಡುಬರುತ್ತಿವೆ. ಈ ರೀತಿಯ ಬೆಂಬಲ ಎಲ್ಲಾ ಪಕ್ಷಗಳಿಗೂ ಸಿಗುತ್ತಿದೆ. ನೋಡಿ, ಇದು ನಮ್ಮ ಸಂಸ್ಕಾರ, ನಾವು ಬೆಂಬಲಿಸುವ ಅಭ್ಯರ್ಥಿಗೆ ನಮ್ಮ ಕ್ಷೇತ್ರದಲ್ಲಿ ಏನೇನು ಬೇಸಾಯ ಮಾಡಿದರೂ ತರುತ್ತೇವೆ. ಇದನ್ನು ನಮ್ಮ ಅಭ್ಯರ್ಥಿಗೆ ನೀಡಿ ಅಭ್ಯರ್ಥಿಗೆ ಮತ ಹಾಕುತ್ತೇವೆ ಎಂದು ತೋರಿಸುತ್ತೇವೆ ಎಂದು ಸಮಾರಂಭಕ್ಕೆ ಅಕ್ಕಿ ಹಣ್ಣು ಹಂಪಲು ತಂದಿರುವ ಸುಷ್ಮಾ ಹೇಳಿದ್ದಾರೆ.

ಇದನ್ನೂ ಓದಿ: Russia-Ukraine War: ರಷ್ಯಾದ ವಿರುದ್ಧ ‘ದೊಡ್ಡಣ್ಣ‘ ಗರಂ, 2 ಹಣಕಾಸು ಸಂಸ್ಥೆಗಳ ಮೇಲೆ ಅಮೆರಿಕ ನಿರ್ಬಂಧ

ಮಣಿಪುರದ 60 ವಿಧಾನಸಭಾ ಕ್ಷೇತ್ರಗಳಿಗೆ ಈ ಬಾರಿ ಎರಡು ಹಂತದ ಮತದಾನ ನಡೆಯುತ್ತಿದೆ. ಫೆಬ್ರವರಿ 27ರಂದು ಮೊದಲ ಹಾಗೂ ಮಾರ್ಚ್ 3ರಂದು ಎರಡನೇ ಹಂತದ ಮತದಾನ ಜರುಗಲಿದೆ. ಈಗಾಗಲೇ ಪ್ರಧಾನ ಮಂತ್ರಿ ನರೇಂದ್ರ ಮೋದಿ, ಕಾಂಗ್ರೆಸ್ ನಾಯಕರಾದ ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತಿತರರು ಪ್ರಚಾರ ಸಭೆಗಳನ್ನೂ ನಡೆಸಿದ್ದಾರೆ. ಇಲ್ಲಿ ರಾಷ್ಟ್ರೀಯ ಪಕ್ಷಗಳಾದ ಕಾಂಗ್ರೆಸ್ ಮತ್ತು ಬಿಜೆಪಿಗಿಂತ ಸ್ಥಳೀಯ ಪಕ್ಷಗಳ ಪ್ರಾಬಲ್ಯ ಹೆಚ್ಚಾಗಿದ್ದು ಅವೇ ಹೆಚ್ಚಿನ‌ ಸೀಟುಗಳನ್ನು ಗೆಲ್ಲುವ ಸಾಧ್ಯತೆ ಇದೆ. ಅವುಗಳಿಗೆ ಬೆಂಬಲ ನೀಡಿ‌ ಕಾಂಗ್ರೆಸ್ ಅಥವಾ ‌ಬಿಜೆಪಿ ಸರ್ಕಾರ ರಚಿಸಬೇಕಾದ ಅಗತ್ಯ ಇದೆ.
Published by:Latha CG
First published: