Manipur Election 2022: ಮಣಿಪುರ ವಿಧಾನಸಭಾ ಚುನಾವಣೆಗೆ ಅಖಾಡ ಸಿದ್ಧ, ಮತದಾರನ ಓಲೈಕೆಗೆ ಬಂದ್ರು ಪ್ರಧಾನಿ ಮೋದಿ!

ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿ ಏಕಾಂಗಿಯಾಗಿ ಕಣಕ್ಕಿಳಿಯಲು ನಿರ್ಧರಿಸಿದೆ. ಪಕ್ಷವು ಎಲ್ಲಾ 60 ಸ್ಥಾನಗಳಲ್ಲಿ ತನ್ನ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ ಸೇರಿದಂತೆ ಐದು ಸಣ್ಣ ಪಕ್ಷಗಳೊಂದಿಗೆ ರಾಜ್ಯದ ಪ್ರಮುಖ ವಿರೋಧ ಪಕ್ಷ ಕಾಂಗ್ರೆಸ್ ಕಣದಲ್ಲಿದೆ.

ಪ್ರಧಾನಿ ಮೋದಿ

ಪ್ರಧಾನಿ ಮೋದಿ

  • Share this:

ಮಣಿಪುರ(Manipur)ದಲ್ಲಿ ಒಟ್ಟು 60 ವಿಧಾನಸಭಾ ಕ್ಷೇತ್ರಗಳಿದ್ದು, ಫೆಬ್ರವರಿ 27 ಮತ್ತು ಮಾರ್ಚ್​ 3ರಂದು ಮತದಾನ (Voting) ನಡೆಯಲಿದೆ. ಹಾಗೇ, ಮಾರ್ಚ್ 3ರಂದು ಮತಎಣಿಕೆ ಇದೆ. 2017ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ 28 ಕ್ಷೇತ್ರಗಳನ್ನು ಗೆದ್ದುಕೊಂಡು, ಸಂಪೂರ್ಣ ಬಹುಮತಪಡೆದ ದೊಡ್ಡ ಪಕ್ಷವಾಗಿ ಹೊರಹೊಮ್ಮಿತ್ತು. ಆದರೆ ನಂತರ ಹಲವು ನಾಯಕರು ಕಾಂಗ್ರೆಸ್ (Congress) ಬಿಟ್ಟರು. ಅದಾದ ಬಳಿಕ ಬಿಜೆಪಿ ಅಲ್ಲಿ ನಾಗಾ ಪೀಪಲ್ಸ್​ ಫ್ರಂಟ್​ (NPF). ನ್ಯಾಶನಲ್​ ಪೀಪಲ್ಸ್ ಪಾರ್ಟಿ (NPP), ಲೋಕ ಜನಶಕ್ತಿ  ಪಾರ್ಟಿ (LJP) ಮತ್ತು ಇತರ ಸ್ವತಂತ್ರ ಅಭ್ಯರ್ಥಿಗಳೊಂದಿಗೆ ಸೇರಿ ಸರ್ಕಾರ ರಚನೆ ಮಾಡಿತ್ತು. ಈ ಬಾರಿ ಚುನಾವಣೆಯಲ್ಲಿ ಮೊದಲ ಹಂತದಲ್ಲಿ 6 ಜಿಲ್ಲೆಗಳು ಮತ್ತು ಎರಡನೇ ಹಂತದಲ್ಲಿ 10 ಜಿಲ್ಲೆಗಳಲ್ಲಿ ಮತದಾನ ನಡೆಯಲಿದೆ. ಈ ರಾಜ್ಯದ ಮೇಲೆ ಬಿಜೆಪಿ(BJP) ಕಣ್ಣಿಟ್ಟಿದೆ. ಈ ಬಾರಿ ಸ್ವತಂತ್ರ ಪಕ್ಷವಾಗಿ ಸರ್ಕಾರ ರಚಿಸಲು ನಾನಾ ಕಸರತ್ತು ಮಾಡುತ್ತಿದೆ. ಹೀಗಾಗಿ ಇಂದು ಮಣಿಪುರ ಚುನಾವಣಾ ಅಖಾಡಕ್ಕೆ ಪ್ರಧಾನಿ ಮೋದಿ (PM Modi) ಎಂಟ್ರಿಯಾಗುತ್ತಿದ್ದಾರೆ. ಇಂದು ಮಣಿಪುರದಲ್ಲಿ ಬೃಹತ್​ ರ್‍ಯಾಲಿ (Rally​)  ನಡೆಸಲಿದ್ದಾರೆ ಪ್ರಧಾನಿ ಮೋದಿ.


ಮಣಿಪುರದಲ್ಲಿಂದು ಪ್ರಧಾನಿ ಮೋದಿ ಬೃಹತ್​ ರ್‍ಯಾಲಿ!

ಇಂದು ಮಣಿಪುರದಲ್ಲಿ ಪ್ರಧಾನಿ ಮೋದಿ ಬೃಹತ್​ ರ್‍ಯಾಲಿ ನಡೆಸೆ ಮತದಾರರಲ್ಲಿ ಮತಯಾಚನೆ ಮಾಡಲಿದ್ದಾರೆ. ತಮ್ಮ ಪಕ್ಷದ ಅಭ್ಯರ್ಥಿಗಳ ಪರ ಮತಯಾಚನೆ ಮಾಡಲಿದ್ದಾರೆ. ಈ ಬಾರಿಯೂ ಅಲ್ಲಿ ತಮ್ಮ ಪಕ್ಷದ ಅದಿಪತ್ಯ ಸಾಧಿಸಲು ಪ್ರಧಾನಿ ಮೋದಿ ಶಪಥ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಇಂದು ಮಣಿಪುರಕ್ಕೆ ಚುನಾವಣಾ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಪ್ರಧಾನಿಯವರು ಹೀಂಗಾಂಗ್ ನಲ್ಲಿ ಬಿಜೆಪಿಯ ಚುನಾವಣಾ ಸಮಾವೇಶ ನಡೆಸಲಿದ್ದಾರೆ. ಬೆಳಗ್ಗೆ 11 ಗಂಟೆಯಿಂದ ಈ ಸಾರ್ವಜನಿಕ ಸಭೆ ನಡೆಯುತ್ತಿದೆ.

ಏಕಾಂಗಿಯಾಗಿ ಕಣಕ್ಕಿಳಿದಿದೆ ಬಿಜೆಪಿ!

ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿ ಏಕಾಂಗಿಯಾಗಿ ಕಣಕ್ಕಿಳಿಯಲು ನಿರ್ಧರಿಸಿದೆ. ಪಕ್ಷವು ಎಲ್ಲಾ 60 ಸ್ಥಾನಗಳಲ್ಲಿ ತನ್ನ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ ಸೇರಿದಂತೆ ಐದು ಸಣ್ಣ ಪಕ್ಷಗಳೊಂದಿಗೆ ರಾಜ್ಯದ ಪ್ರಮುಖ ವಿರೋಧ ಪಕ್ಷ ಕಾಂಗ್ರೆಸ್ ಕಣದಲ್ಲಿದೆ. ರಾಜ್ಯದಲ್ಲಿ ಕಾಂಗ್ರೆಸ್‌ಗೆ ದೊಡ್ಡ ಮುಖವಿಲ್ಲ, ಹೀಗಾಗಿ ಈ ಬಾರಿ ಬಿಜೆಪಿ-ಕಾಂಗ್ರೆಸ್ ಮತ್ತು ಸ್ವತಂತ್ರ ಅಭ್ಯರ್ಥಿಗಳ ನಡುವೆ ಹಣಾಹಣಿ ಏರ್ಪಡಬಹುದು.

ಇದನ್ನೂ ಓದಿ: ರಾಜಸ್ಥಾನ ಕಾರು ಅಪಘಾತಕ್ಕೆ ಮೋದಿ ಸಂತಾಪ, ಮೃತಪಟ್ಟವರಿಗೆ 2 ಲಕ್ಷ ಪರಿಹಾರ ಘೋಷಣೆ

ಇಲ್ಲಿನ ಜನರು ಸ್ಪಷ್ಟವಾಗಿ ಬಹುಮತ ನೀಡಿ ಬಿಜೆಪಿಯನ್ನು ಆಡಳಿತದ ಹುದ್ದೆಯಲ್ಲಿ ಕೂರಿಸಿದ್ದಾರೆ. ಅದಕ್ಕೆ ಪ್ರತಿಫಲವಾಗಿ ಬಜೆಪಿ ಸರ್ಕಾರ ಹಲವು ಅಭಿವೃದ್ಧಿ ಕಾರ್ಯಗಳನ್ನು ಮಾಡುತ್ತಿದೆ. ಮಣಿಪುರದಲ್ಲಿ ಸುಮಾರು 1,30,000 ಮನೆಗಳು ಉಚಿತ ವಿದ್ಯುತ್​ ಪಡೆಯುತ್ತಿವೆ. 30,000 ಮನೆಗಳಲ್ಲಿ ಶೌಚಗೃಹ ನಿರ್ಮಾಣವಾಗಿದೆ.

ಮಣಿಪುರದಲ್ಲಿ ಯಾರ ಪರ ಇದ್ದಾರೆ ಮತದಾರರು?

ಇಲ್ಲಿನ ಜನರು ಈ ಬಾರಿಯೂ ಎನ್​ಡಿಎ ಪಕ್ಷಕ್ಕೆ ಬಹುಪರಾಕ್ ಹೇಳಲಿದ್ದಾರೆ. ಕೆಲವೇ ವರ್ಷಗಳ ಹಿಂದೆ, ಈ ರಾಜ್ಯದಲ್ಲಿ ಶೇ.6ರಷ್ಟು ಜನರು ಮಾತ್ರ ತಮ್ಮ ಮನೆಗಳಿಗೆ ಪೈಪ್​ಲೈನ್ ಮೂಲಕ ನೀರು ಪಡೆಯುತ್ತಿದ್ದರು. ಆದರೆ ಇಂದು ಜಲಜೀವನ್​ ಮಿಷನ್​​ ಅಭಿಯಾನದಡಿ ಇಲ್ಲಿನ ಶೇ.60ರಷ್ಟು ಜನರ ಮನೆಗೆ ನಲ್ಲಿ ವ್ಯವಸ್ಥೆಯಾಗಿದ್ದು, ನೀರು ಪೂರೈಕೆ ಮಾಡಲಾಗುತ್ತಿದೆ. ಬಿಜೆಪಿ ಸರ್ಕಾರ ಇಲ್ಲಿ ಎಲ್ಲ ಕೆಲಸಗಳನ್ನು ಅಚ್ಚುಕಟ್ಟಾಗಿ ಮಾಡಿಕೊಟ್ಟಿದೆ.

ಇದನ್ನೂ ಓದಿ: ’ಮೋದಿ ನಿಜವಾದ ಸಮಸ್ಯೆಗಳ ಬಗ್ಗೆ ಮಾತನಾಡಲಿ’; ಪ್ರಿಯಾಂಕಾ ಗಾಂಧಿ ತಾಕೀತು

ಬಿಜೆಪಿ ರಿಲೀಸ್ ಮಾಡಿದ ಪ್ರಣಾಳಿಕೆಯಲ್ಲಿ ಏನಿದೆ?

ಮಣಿಪುರ ಚುನಾವಣೆ ಇನ್ನೇನು ಸನ್ನಿಹಿತವಾಗುತ್ತಿದೆ, ಬಿಜೆಪಿ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿತ್ತು. ಮಹಿಳೆಯರು ಹಾಗೂ ವಿದ್ಯಾರ್ಥಿಗಳನ್ನು ಗಮನದಲ್ಲಿಟ್ಟುಕೊಂಡು ಪ್ರಣಾಳಿಕೆ ಸಿದ್ಧಪಡಿಸಿದೆ. ಬಡ ಮಹಿಳೆಯರಿಗೆ ಎರಡು ಉಚಿತ ಅಡುಗೆ ಅನಿಲ ಸಿಲಿಂಡರ್, ಎಲ್ಲರಿಗೂ ಉಚಿತ ಸ್ಕೂಟಿ ಭರವಸೆ ನೀಡಲಾಗಿದೆ. ಪ್ರತಿಭಾವಂತ ಕಾಲೇಜು ವಿದ್ಯಾರ್ಥಿನಿಯರು ಅಥವಾ ಬಡ ಹೆಣ್ಣುಮಕ್ಕಳಿಗೆ 25 ಸಾವಿರ ಪ್ರೋತ್ಸಾಹಧನ ಮತ್ತು 12ನೇ ತರಗತಿಯಲ್ಲಿ ಉತ್ತೀರ್ಣರಾದ ಎಲ್ಲಾ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್‌ಟಾಪ್‌ಗಳನ್ನು ನೀಡುವುದಾಗಿ ತಿಳಿಸಲಾಗಿದೆ.
Published by:Vasudeva M
First published: