ನಟಿ ಪ್ರಿಯಾ ವಾರಿಯರ್ ವಿರುದ್ಧ ಮುಸ್ಲಿಮರು ಬಂಡೆದ್ದಿರುವುದು ಯಾಕೆ? ಏನಿದೆ ಹಾಡಿನಲ್ಲಿ?


Updated:February 14, 2018, 7:17 PM IST
ನಟಿ ಪ್ರಿಯಾ ವಾರಿಯರ್ ವಿರುದ್ಧ ಮುಸ್ಲಿಮರು ಬಂಡೆದ್ದಿರುವುದು ಯಾಕೆ? ಏನಿದೆ ಹಾಡಿನಲ್ಲಿ?
ನಟಿ ಪ್ರಿಯಾ ಪ್ರಕಾಶ್ ವಾರಿಯರ್

Updated: February 14, 2018, 7:17 PM IST
ಬೆಂಗಳೂರು(ಫೆ. 14): ಮಲಯಾಳಂ ನಟಿ ಪ್ರಿಯಾ ಪ್ರಕಾಶ್ ವಾರಿಯರ್ ಹೊಸ ವಿವಾದದಲ್ಲಿ ಸಿಲುಕಿಕೊಂಡಿದ್ದಾರೆ. ಈ ವಿವಾದದಲ್ಲಿ ನಟಿಯದ್ದು ನೇರ ಪಾತ್ರವಿಲ್ಲ. ಮಲಯಾಳಂನ ಪ್ರಖ್ಯಾತ ಹಾಡಿನ ದೃಶ್ಯದಲ್ಲಿ ಪ್ರಿಯಾ ನಟಿಸಿರುವುದೇ ಆಕೆಗೆ ವಿವಾದ ಸುತ್ತಿಕೊಳ್ಳಲು ಕಾರಣ. ಮಾಣಿಕ್ಯ ಮಲರಾಯ ಪೂವಿ ಎಂಬ ಈ ಹಾಡು ಕೆಲ ಮುಸ್ಲಿಮ್ ವರ್ಗಗಳನ್ನು ಸಿಡಿಮಿಡಿಗೊಳಿಸಿದೆ. ಒರು ಆಡಾರ್ ಲವ್ ಎಂಬ ಸಿನಿಮಾದಲ್ಲಿ ಈ ಹಾಡನ್ನು ಬಳಸಲಾಗಿದೆ. ಆ ಹಾಡಿನ ದೃಶ್ಯದಲ್ಲಿ ಪ್ರಿಯಾ ವಾರಿಯರ್ ಮತ್ತಿತರರು ನಟಿಸಿದ್ದಾರೆ.

ಈಗ ವಿವಾದದ ಕೇಂದ್ರಬಿಂದುವಾಗಿರುವುದು ಆ ಹಾಡು ಮಾತ್ರವೇ. ಹಾಡಿನಲ್ಲಿ ಪ್ರವಾದಿ ಮೊಹಮ್ಮದ್ ಅವರನ್ನು ಮತ್ತು ಇಸ್ಲಾಂ ಧರ್ಮವನ್ನು ಅವಹೇಳನ ಮಾಡುವಂತಿದೆ ಎಂದು ಮುಸ್ಲಿಮರು ದೂರಿದ್ದಾರೆ.

ವಿವಾದವಾಗಿರುವ ಆ ಪದ್ಯದ ಒಂದೆರಡು ಸಾಲುಗಳು ಹಾಗೂ ಕನ್ನಡ ಭಾವಾನುವಾದ ಇಲ್ಲಿದೆ.

ಮಲಯಾಳಂ:

ಮಾಣಿಕ್ಯ ಮಲರಾಯ ಪೂವಿ
ಮಹಾದಿಯಮ್ ಖದೀಜಾ ಬೀವಿ
ಮಕ್ಕಾ ಎನ್ನ ಪುಣ್ಯ ನಾಟ್ಟಿಲ್
Loading...

ವಿಲಾಸಿಡುಮ್ ನಾರಿ…

ಕನ್ನಡ:
ಮಾಣಿಕ್ಯ ಹೂವಿನಂಥ ಪೋರಿ
ಮಹಾತ್ಮ ಖದೀಜಾ ಬೀವಿ
ಮೆಕ್ಕಾದ ಪುಣ್ಯ ನಾಡಿನಲ್ಲಿ
ರಾಣಿಯಂತಿರುವ ನಾರಿಈ ಹಾಡು ಪ್ರವಾದಿ ಮೊಹಮ್ಮದ್ ಅವರ ಲವ್ ಸ್ಟೋರಿಯನ್ನು ಹೇಳುತ್ತದೆ. ಆದರೆ, ಪ್ರವಾದಿಗಳನ್ನು ಎಲ್ಲಿಯೂ ಅವಹೇಳನ ಮಾಡಲಾಗಿಲ್ಲ ಎನ್ನಲಾಗಿದೆ. ಅಂದಹಾಗೆ, ಮಾಣಿಕ್ಯ ಮಲರಾಯ ಪೂವಿ ಹಾಡು ಹೊಸದಾಗಿ ಬರೆದ ಸಾಹಿತ್ಯವಲ್ಲ. ಕೇರಳದ ಮುಸ್ಲಿಮ್ ಜಾನಪದ ಲೋಕದಲ್ಲಿ ಇದು ಫೇಮಸ್ ಹಾಡು. ಮುಸ್ಲಿಮರ ಮಾಪಿಳ್ಳ ಪಾಟ್ಟು ಶೈಲಿಯಲ್ಲಿ ಈ ಹಾಡನ್ನು ಹಾಡಲಾಗುತ್ತದೆ. ಪಿಎಂಎ ಜಬ್ಬರ್ ಅವರು ಸಾಹಿತ್ಯ ಬರೆದಿದ್ದಾರೆ. ಮುಸ್ಲಿಮ್ ಸಮುದಾಯದ ಮದುವೆ ಮನೆಗಳಲ್ಲಿ ಈ ಹಾಡು ಹಾಡುವುದು ಸಾಮಾನ್ಯವಂತೆ.

ಏನೇ ಆಗಲಿ, ಬಹಳ ಅದ್ಭುತವಾಗಿ ಸಂಗೀತ ರಚನೆಯಾಗಿರುವ ಈ ಹಾಡು ಯೂಟ್ಯೂಬ್​ನಲ್ಲಿ ಬರೋಬ್ಬರಿ ಜನಪ್ರಿಯತೆ ಗಳಿಸಿದೆ. ಅಪ್​ಲೋಡ್ ಆದ ನಾಲ್ಕೇ ದಿನಕ್ಕೆ ಒಂದೂವರೆ ಕೋಟಿಗೂ ಹೆಚ್ಚು ವೀಕ್ಷಣೆ ಪಡೆದಿದೆ. ಮಲಯಾಳಂನದಲ್ಲಿ ಇತ್ತೀಚೆಗೆ ವೈರಲ್ ಆಗಿದ್ದ ‘ಜಿಮ್ಮಿಕಿ ಕಮಲ್’ ಹಾಡಿಗೆ ಸಂಗೀತ ಕಂಪೋಸ್ ಮಾಡಿದ್ದ ಶಾನ್ ರೆಹಮಾನ್ ಅವರೇ ಮಾಣಿಕ್ಯ ಮಲರಾಯ ಪೂವಿಗೆ ಮ್ಯೂಸಿಕ್ ಡೈರೆಕ್ಷನ್ ಮಾಡಿದ್ದಾರೆ.
First published:February 14, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ