Tripura ನೂತನ ಸಿಎಂ ಆಗಿ ಮಾಣಿಕ್ ಸಹಾ ನೇಮಕ

ಬಿಪ್ಲಬ್​ ದೇಬ್​ ರಾಜೀನಾಮೆ ಬಳಿಕ ಕರೆಯಲಾದ ಬಿಜೆಪಿ ಶಾಸಕರ ಸಭೆಯಲ್ಲಿ ಸಹಾ ಅವರ ಹೆಸರನ್ನು ಘೋಷಿಸಲಾಗಿದ್ದು, ಪಕ್ಷದ ಶಾಸಕರು ಅವರಿಗೆ ಬೆಂಬಲ ವ್ಯಕ್ತಪಡಿಸಿದ್ದಾರೆ.

ಮಾಣಿಕ್ ಸಹಾ

ಮಾಣಿಕ್ ಸಹಾ

  • Share this:
    ತ್ರಿಪುರಾ ಮುಖ್ಯಮಂತ್ರಿ ಬಿಪ್ಲಬ್ ಕುಮಾರ್ ದೇಬ್ ರಾಜೀನಾಮೆ ( Biplab Kumar Deb) ನೀಡಿದ ಕೆಲವೇ ಗಂಟೆಗಳ ಬಳಿಕ ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಡಾ ಮಾಣಿಕ್ ಸಹಾ ( Manik Saha)  ಅವರನ್ನು ಅವರ ಬಿಜೆಪಿ ಆಯ್ಕೆ ಮಾಡಿದೆ. ವೃತ್ತಿಯಲ್ಲಿ ದಂತವೈದ್ಯರಾಗಿರುವ ಸಹಾ ಅವರು ಕಳೆದ ತಿಂಗಳಷ್ಟೇ ರಾಜ್ಯಸಭಾ ಸಂಸದರಾಗಿ ಆಯ್ಕೆಯಾಗಿದ್ದರು. ಬಿಜೆಪಿಯ ತ್ರಿಪುರಾ ರಾಜ್ಯಾಧ್ಯಕ್ಷರೂ ಆಗಿರುವ ಅರು ಇನ್ನು ಒಂದು ವರ್ಷಗಳ ಕಾಲ ಸಿಎಂ ಆಗಿ ಕಾರ್ಯ ನಿರ್ವಹಿಸಲಿದ್ದಾರೆ.

    ಬಿಪ್ಲಬ್​ ದೇಬ್​ ರಾಜೀನಾಮೆ ಬಳಿಕ ಕರೆಯಲಾದ ಬಿಜೆಪಿ ಶಾಸಕರ ಸಭೆಯಲ್ಲಿ ಸಹಾ ಅವರ ಹೆಸರನ್ನು ಘೋಷಿಸಲಾಗಿದ್ದು, ಪಕ್ಷದ ಶಾಸಕರು ಅವರಿಗೆ ಬೆಂಬಲ ವ್ಯಕ್ತಪಡಿಸಿದ್ದಾರೆ.

    ದೇಬ್​ ರಾಜೀನಾಮೆ

    ತ್ರಿಪುರಾ ವಿಧಾನಸಭಾ ಚುನಾವಣೆಗೆ ಇನ್ನೇನು ಒಂದು ತಿಂಗಳು ಬಾಕಿ ಇರುವ ಸಮಯದಲ್ಲಿ ಮುಖ್ಯಮಂತ್ರಿ ಸ್ಥಾನಕ್ಕೆ ಇಂದು ಬಿಪ್ಲಬ್​ ಕುಮಾರ್​ ದೇಬ್​ ರಾಜೀನಾಮೆ ಸಲ್ಲಿಸಿದ್ದಾರೆ. ಬಿಜೆಪಿ ಹೈ ಕಮಾಂಡ್ ಸೂಚನೆ ಹಿನ್ನಲೆ ಅವರು ರಾಜೀನಾಮೆ ನೀಡಿದ್ದು, ರಾಜ್ಯಪಾಲ ಸತ್ಯದೇವ್ ನಾರಾಯಣ ಆರ್ಯ ಅವರಿಗೆ ರಾಜೀನಾಮೆ ಸಲ್ಲಿಸಿದರು. ರಾಜೀನಾಮೆ ನೀಡಿದ ಬಳಿಕ ಮಾತನಾಡಿದ ಬಿಪ್ಲಬ್​ ದೇಬ್​, ರಾಜ್ಯದಲ್ಲಿ ಮುಂದಿನ ವರ್ಷದ ಆರಂಭದಲ್ಲಿ ಚುನಾವಣೆ ನಡೆಯಲಿದೆ. ತ್ರಿಪುರಾದಲ್ಲಿ ಬಿಜೆಪಿ ಅಧಿಕಾರವನ್ನು ಮುಂದಿನ ಅವಧಿಗೂ ನಿರೀಕ್ಷೆ ಮಾಡಾಗಿದ್ದು, ಹೆಚ್ಚು ಕಾಲ ಪಕ್ಷವನ್ನು ಅಧಿಕಾರದಲ್ಲಿ ಇಡಬೇಕಿದೆ. ಈ ಹಿನ್ನಲೆ ಈ ನಿರ್ಧಾರ ನಡೆಸಿರುವುದಾಗಿ ತಿಳಿಸಿದ್ದಾರೆ.

    ಪಕ್ಷಕ್ಕಿಂತ ಮಿಗಿಲು ಯಾವುದಿಲ್ಲ

    ಪಕ್ಷ ಎಲ್ಲಕ್ಕಿಂತ ಮಿಗಿಲಾಗಿದೆ. ನಾನು ಪ್ರಧಾನಿ ಮೋದಿಯವರ ನಾಯಕತ್ವ ಮತ್ತು ನಿರ್ದೇಶನದಲ್ಲಿ ಪಕ್ಷಕ್ಕಾಗಿ ಕೆಲಸ ಮಾಡಿದ್ದೇನೆ. ಪಕ್ಷದ ರಾಜ್ಯ ಘಟಕದ ಮುಖ್ಯಸ್ಥನಾಗಿ ಮತ್ತು ಸಿಎಂ ಆಗಿ ತ್ರಿಪುರಾದ ಜನರಿಗೆ ನ್ಯಾಯ ಕೊಡಿಸಲು ಪ್ರಯತ್ನಿಸಿದ್ದೇನೆ. ನಾನು ಶಾಂತಿ, ಅಭಿವೃದ್ಧಿ ಮತ್ತು ರಾಜ್ಯವನ್ನು ಕೋವಿಡ್ ಬಿಕ್ಕಟ್ಟಿನಿಂದ ಹೊರತರಲು ಪ್ರಯತ್ನಿಸಿದೆ.

    ಪ್ರತಿಯೊಂದಕ್ಕೂ ಸಮಯದ ಚೌಕಟ್ಟು ಇದೆ. ಆ ಸಮಯದ ಚೌಕಟ್ಟಿನಲ್ಲಿ ನಾವು ಕೆಲಸ ಮಾಡುತ್ತೇವೆ. ಪಕ್ಷ ನನ್ನನ್ನು ಸಿಎಂ ಮಾಡಲಿ ಅಥವಾ ಇನ್ಯಾವುದೇ ಹುದ್ದೆ ನೀಡಲಿ ಅದಕ್ಕೆ ಹೊಂದಿಕೊಂಡು ನಾನು ಕೆಲಸ ಮಾಡುತ್ತೇನೆ ಎಂದಿದ್ದಾರೆ. ನವದೆಹಲಿಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಭೇಟಿಯಾದ ದಿನದ ನಂತರ ಅವರು ಹುದ್ದೆಗೆ ರಾಜೀನಾಮೆ ನೀಡಿದ್ದಾರೆ.

    ಇದನ್ನು ಓದಿ: ಮಗಳ ಬೆಳೆಸಲು 30 ವರ್ಷದಿಂದ ಗಂಡಿನ ವೇಷ ತೊಟ್ಟ ಅಮ್ಮ; ಮುತ್ತು ಆಗಿ ಬದಲಾದ ಪೆಚ್ಚಿಯಮ್ಮಳ್ ಕಥೆ ಇದು

    ದೇಬ್​ ರಾಜೀನಾಮೆ ಬಳಿಕ ತಕ್ಷಣವೇ ಪಕ್ಷದ ಶಾಸಕರ ಸಭೆಯಲ್ಲಿ ರಾಜ್ಯದ ನೂತನ ಮುಖ್ಯಮಂತ್ರಿಯನ್ನು ಆಯ್ಕೆ ಮಾಡಿದ್ದಾರೆ. ಬಿಜೆಪಿಯ ಶಾಸಕಾಂಗ ಪಕ್ಷದ ಸಭೆಗೆ ಕೇಂದ್ರ ಸಚಿವ ಭೂಪೇಂದರ್ ಯಾದವ್ ಮತ್ತು ಬಿಜೆಪಿ ಪ್ರಧಾನ ಕಾರ್ಯದರ್ಶಿ ವಿನೋದ್ ತಾವ್ಡೆ ಅವರನ್ನು ಸದ್ಯ ಕೇಂದ್ರ ವೀಕ್ಷಕರನ್ನಾಗಿ ಮಾಡಲಾಗಿತ್ತು

    ಇದನ್ನು ಓದಿ: Amritsarದ ಗುರುನಾನಕ್​ ದೇವ್​ ಆಸ್ಪತ್ರೆಯಲ್ಲಿ ಬೆಂಕಿ ಅವಘಡ

    2023ರ ಮಾರ್ಚ್‌ನಲ್ಲಿ ನಡೆಯಲಿರುವ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಪಕ್ಷವು ಹೊಸ ಮುಖವನ್ನು ಕಾಣಲು ಬಯಸುತ್ತದೆ ಎಂದು ಹೇಳಲಾಗಿದೆ.
    ಬಿಪ್ಲಬ್ ಕುಮಾರ್ ದೇಬ್ ಅವರ ರಾಜೀನಾಮೆಗೆ ಪ್ರತಿಕ್ರಿಯಿಸಿದ ಅಖಿಲ ಭಾರತ ತೃಣಮೂಲ ಕಾಂಗ್ರೆಸ್, ತ್ರಿಪುರಾದಲ್ಲಿ ಸಾವಿರಾರು ಜನರನ್ನು ವಿಫಲಗೊಳಿಸಿದ ಸಿಎಂಗೆ ಗುಡ್ ಬೈ ಮತ್ತು ಗುಡ್ ರಿಡನ್ಸ್. ನಿಮ್ಮಿಂದ ರಾಜ್ಯಕ್ಕೆ ಸಾಕಷ್ಟು ಹಾನಿಯಾಗಿದೆ. ಬಿಜೆಪಿಯ ಉನ್ನತ ಮುಖ್ಯಸ್ಥರು ಸಹ ಅವರ ಅಸಮರ್ಥತೆಯಿಂದ ಬೇಸರಗೊಂಡಿದ್ದಾರೆ ಎಂದು ಟೀಕಿಸಿ ಟ್ವೀಟ್​ ಮಾಡಲಾಗಿದೆ
    Published by:Seema R
    First published: