Mango Diplomacy: ಪಾಕಿಸ್ತಾನ ಸರ್ಕಾರ ಕಳುಹಿಸಿದ್ದ ಮಾವಿನ ಹಣ್ಣನ್ನು ವಾಪಾಸ್ ಕಳಿಸಿದ ಅಮೆರಿಕ, ಚೀನಾ

Pakistan's Mango Diplomacy: ಪಾಕಿಸ್ತಾನದ ಮಾವಿನ ರಾಜತಾಂತ್ರಿಕತೆ ಭಾಗವಾಗಿ 32ಕ್ಕೂ ಹೆಚ್ಚು ದೇಶಗಳಿಗೆ ಮಾವಿನ ಹಣ್ಣುಗಳ ಬಾಕ್ಸ್ ಕಳುಹಿಸಲಾಗಿತ್ತು. ಆದರೆ, ಅಮೆರಿಕ ಹಾಗೂ ಚೀನಾ ಸೇರಿದಂತೆ ಅನೇಕ ದೇಶಗಳು ಆ ಮಾವಿನ ಹಣ್ಣನ್ನು ವಾಪಾಸ್ ಕಳುಹಿಸಿವೆ.

ಮಾವಿನ ಹಣ್ಣು

ಮಾವಿನ ಹಣ್ಣು

  • Share this:
    ವಿಶ್ವದಲ್ಲೇ ಭಾರತದಲ್ಲಿ ಅತಿ ಹೆಚ್ಚು ಮಾವಿನ ಹಣ್ಣುಗಳನ್ನು ಉತ್ಪಾದನೆ ಮಾಡುತ್ತಿದ್ದರೂ ಮಾವಿನ ರಫ್ತು ಮಾರುಕಟ್ಟೆಯಲ್ಲಿ ಪಾಕಿಸ್ತಾನ ಹಾಗೂ ಮೆಕ್ಸಿಕೋ ದೇಶಗಳು ಮುಂಚೂಣಿಯಲ್ಲಿವೆ. ಪಾಕಿಸ್ತಾನದಿಂದ ಪ್ರತಿವರ್ಷ ವಿಶ್ವದ ಬಹುತೇಕ ರಾಷ್ಟ್ರಗಳಿಗೆ ಮಾವಿನ ಹಣ್ಣುಗಳನ್ನು ರಫ್ತು ಮಾಡಲಾಗುತ್ತದೆ. ಪಾಕಿಸ್ತಾನದ ಮಾವಿನ ರಾಜತಾಂತ್ರಿಕತೆ (Mango Diplomacy) ಭಾಗವಾಗಿ 32ಕ್ಕೂ ಹೆಚ್ಚು ದೇಶಗಳಿಗೆ ಮಾವಿನ ಹಣ್ಣುಗಳ ಬಾಕ್ಸ್ ಕಳುಹಿಸಲಾಗಿತ್ತು. ಆದರೆ, ಅಮೆರಿಕ ಹಾಗೂ ಚೀನಾ ಸೇರಿದಂತೆ ಅನೇಕ ದೇಶಗಳು ಆ ಮಾವಿನ ಹಣ್ಣಿನ ಬಾಕ್ಸ್​ಗಳನ್ನು ವಾಪಾಸ್ ಕಳುಹಿಸಿವೆ.

    ಕೊರೋನಾ ಸೋಂಕು ಉಲ್ಬಣಿಸುತ್ತಲೇ ಇರುವುದರಿಂದ ಅನೇಕ ರಾಷ್ಟ್ರಗಳು ಸಾಕಷ್ಟು ಕಟ್ಟುನಿಟ್ಟಿನ ಕಾನೂನು ಜಾರಿಗೊಳಿಸಿವೆ. ಹೀಗಾಗಿ, ಅಮೆರಿಕ ಮತ್ತು ಚೀನಾ ಸೇರಿದಂತೆ ಹಲವು ರಾಷ್ಟ್ರಗಳು ಕೋವಿಡ್ ಕ್ವಾರಂಟೈನ್ ನಿಯಮಾವಳಿಗಳ ಕಾರಣವೊಡ್ಡಿ ಪಾಕಿಸ್ತಾನ ಕಳುಹಿಸಿದ್ದ ಮಾವಿನ ಹಣ್ಣುಗಳ ಬಾಕ್ಸ್​ಗಳನ್ನು ವಾಪಾಸ್ ಕಳುಹಿಸಿವೆ ಎಂದು ಎಎನ್​ಐ ವರದಿ ಮಾಡಿದೆ.

    ಇದನ್ನೂ ಓದಿ: Karnataka Politics: ಕರ್ನಾಟಕದಲ್ಲಿ ನಾಯಕತ್ವ ಬದಲಾವಣೆ ವಿಚಾರ; ಜೂನ್ 18ಕ್ಕೆ ಯಡಿಯೂರಪ್ಪ ಭವಿಷ್ಯ ನಿರ್ಧಾರ?

    ಎಎನ್​ಐ ವರದಿ ಪ್ರಕಾರ, ಪಾಕಿಸ್ತಾನದ ವಿದೇಶಾಂಗ ಸಚಿವಾಲಯ ಕಳೆದ ಬುಧವಾರ 32ಕ್ಕೂ ಹೆಚ್ಚು ದೇಶಗಳಿಗೆ ಮಾವಿನ ಹಣ್ಣುಗಳ ಬಾಕ್ಸ್​ಗಳನ್ನು ಕಳುಹಿಸಿತ್ತು. ಆದರೆ, ಅಮೆರಿಕ ಹಾಗೂ ಚೀನಾ ಸೇರಿದಂತೆ ಕೆಲವು ದೇಶಗಳು ಆ ಬಾಕ್ಸ್​ಗಳನ್ನು ಸ್ವೀಕರಿಸಲು ಸಾಧ್ಯವಿಲ್ಲ ಎಂದು ತಿಳಿಸಿವೆ. ಈ ಎರಡು ದೇಶಗಳ ಜೊತೆಗೆ ಕೆನಡಾ, ಫ್ರಾನ್ಸ್​, ನೇಪಾಳ, ಈಜಿಪ್ಟ್​, ಶ್ರೀಲಂಕಾ ದೇಶಗಳು ಕೂಡ ಪಾಕಿಸ್ತಾನದ ಮಾವಿನ ಹಣ್ಣುಗಳ ಪಾಕ್ಸ್​ಗಳ ಉಡುಗೊರೆಯನ್ನು ಸ್ವೀಕರಿಸದೆ ವಾಪಾಸ್ ಕಳುಹಿಸಿವೆ.

    ವಿವಿಧ ತಳಿಯ ಮಾವಿನ ಹಣ್ಣುಗಳನ್ನು ಹೆಚ್ಚಾಗಿ ಬೆಳೆಯುವ ಪಾಕಿಸ್ತಾನದಿಂದ ಚೌನ್ಸಾ ಎಂಬ ತಳಿಯ ಮಾವಿನ ಹಣ್ಣುಗಳನ್ನು 32 ರಾಷ್ಟ್ರಗಳಿಗೆ ಕಳುಹಿಸಲಾಗಿತ್ತು. ಇರಾನ್, ಟರ್ಕಿ, ಇಂಗ್ಲೆಂಡ್, ಅಫಘಾನಿಸ್ತಾನ, ಬಾಂಗ್ಲಾದೇಶ, ರಷ್ಯಾ, ಗಲ್ಫ್​ ರಾಷ್ಟ್ರಗಳಿಗೂ ಪಾಕಿಸ್ತಾನದಿಂದ ಮಾವಿನ ಹಣ್ಣುಗಳ ಬಾಕ್ಸ್​ ಕಳುಹಿಸಲಾಗಿತ್ತು. ಪಾಕಿಸ್ತಾನ ಸರ್ಕಾರದ ಪರವಾಗಿ ಈ ಹಣ್ಣುಗಳನ್ನು ಕಳುಹಿಸಲಾಗಿತ್ತು.

    ಇದನ್ನೂ ಓದಿ: Petrol Price Today: ಪೆಟ್ರೋಲ್ ಬೆಲೆಯೇರಿಕೆ ಬೆನ್ನಲ್ಲೇ ಮತ್ತೊಂದು ಶಾಕ್; 1 ಲೀಟರ್​ಗೆ 100 ರೂ. ದಾಟಿದ ಡೀಸೆಲ್ ಬೆಲೆ!

    ಮುಖ್ಯವಾಗಿ ಪಾಕಿಸ್ತಾನದ ಮಾವಿನ ರಾಜತಾಂತ್ರಿಕತೆ (Mango Diplomacy) ಚೀನಾದೊಂದಿಗೆ ಬೆಸೆದುಕೊಂಡಿದೆ. ಆದರೆ, ಈ ಬಾರಿ ಚೀನಾ ದೇಶ ಕೂಡ ಪಾಕ್​ನ ಮಾವಿನ ಹಣ್ಣುಗಳ ಉಡುಗೊರೆಯನ್ನು ತಿರಸ್ಕರಿಸಿದೆ. ಈ ಎರಡೂ ದೇಶಗಳ ನಡುವೆ ಆಯಾ ಸೀಸನ್​ನ ಹಣ್ಣುಗಳ ಕೊಡು-ಕೊಳ್ಳುವಿಕೆ ದೀರ್ಘಕಾಲದಿಂದ ನಡೆದುಬಂದಿದೆ. ಆದರೆ, ಕೊರೋನಾ ನಿಯಮಗಳ ನೆಪವೊಡ್ಡಿ ಈ ವರ್ಷ ಪಾಕ್​ನ ಉಡುಗೊರೆಯನ್ನು ಹಲವು ದೇಶಗಳು ವಾಪಾಸ್ ಕಳುಹಿಸಿವೆ.

    ಇದಕ್ಕಿಂತ ಮೊದಲು ಅನ್ವರ್ ರಟ್ಟೋಲ್ ಮತ್ತು ಸಿಂಧೂರಿ ತಳಿಯ ಮಾವಿನ ಹಣ್ಣುಗಳನ್ನು ಬೇರೆ ದೇಶಗಳಿಗೆ ಕಳುಹಿಸಲಾಗುತ್ತಿತ್ತು. ಆದರೆ, ಈ ಬಾರಿ ಆ ಹಣ್ಣುಗಳನ್ನು ಕಳುಹಿಸಿರಲಿಲ್ಲ.
    Published by:Sushma Chakre
    First published: