Ambulance Driver: 2700 ಕಿ ಮೀ, 45 ಗಂಟೆ; ಮಂಗಳೂರು ಟು ಉತ್ತರ ಪ್ರದೇಶ ಆಂಬುಲೆನ್ಸ್​ನಲ್ಲೇ ಪ್ರಯಾಣ

ರೋಗಿಯನ್ನು ಆಸ್ಪತ್ರೆಯಿಂದ ಮನೆಗೆ ಕರೆದೊಯ್ಯುವುದಾಗಿ ಮನೆಯವರು ಕೇಳಿಕೊಂಡಾಗ ವಿಮಾನದ ಮೂಲಕ ಕರೆದುಕೊಂಡು ಹೋಗುವಂತೆ ಸೂಚಿಸಲಾಗಿತ್ತು.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಜೀವನದಲ್ಲಿ ಆಕಸ್ಮಿಕವಾಗಿ ಎಷ್ಟೋ ಘಟನೆಗಳು ಜರುಗುತ್ತವೆ. ಕೆಲವೊಂದು ಬದುಕಿಗೆ ಪೂರಕವಾಗಿರುತ್ತದೆ. ಇನ್ನು ಕೆಲವು ಜೀವನಕ್ಕೆ (Life) ಮಾರಕವಾಗಿರುತ್ತದೆ.  ಕೆಲವೊಬ್ಬರ ಜೀವನದಲ್ಲಿ ಮನುಷ್ಯರೇ ದೇವರಂತೆ ಬಂದು ಕಾಪಾಡುವ ಎಷ್ಟೋ ನಿದರ್ಶನಗಳಿರುತ್ತವೆ. ಅಂತಹದೇ ಒಂದು ಘಟನೆ  ಉತ್ತರಪ್ರದೇಶದಲ್ಲಿ (Uttara Pradesh) ನಡೆದಿದೆ. ಅಡಿಕೆ ಗೋಡೊನಿನಲ್ಲಿ ಕೆಲಸ ಮಾಡುತ್ತಿರವ ಹಸನ್ ಎಂಬ ಯುವಕ ಆಕಸ್ಮಿಕವಾಗಿ  ಬಿದ್ದು ಗಾಯಗೊಂಡಿದ್ದರು ಅವರನ್ನು ಮಂಗಳೂರಿನಿಂದ (Mangaluru) ಉತ್ತರ ಪ್ರದೇಶದವರೆಗೆ ಆಂಬುಲೆನ್ಸ್ (Ambulance) ಮೂಲಕ ಕರೆದೊಯ್ಯಲಾಯಿತು. 

ಆಕಸ್ಮಿಕವಾಗಿ ಬಿದ್ದ ವ್ಯಕ್ತಿಯೊಬ್ಬನ್ನು ಆಕ್ಸಿಜನ್ ಸಿಲೆಂಡರ್ ಸೌಲಭ್ಯ ಕಲ್ಪಿಸಿ ಒಂದು ಸ್ಥಳದಿಂದ ಮತ್ತೊಂದು ದೂರದ ಸ್ಥಳಕ್ಕೆ ಕರೆದೊಯ್ದ ಘಟನೆ ನಡೆದಿದೆ. ಮಂಗಳೂರಿನಿಂದ 30 ಕೀ.ಮಿ ದೂರವಿರುವ ಮೂಡಬಿದಿರೆಯಿಂದ ರೋಗಿಯ ಹುಟ್ಟೂರಾದ ಉತ್ತರ ಪ್ರದೇಶದ ಮುರ್ದಾಬಾದ್​​ಗೆ ಇಲ್ಲಿ ಆ್ಯಂಬುಲೆನ್ಸ್ ಮೂಲಕವೇ ಕರೆದೊಯ್ಯಲಾಯಿತು. ಆಂಬುಲೆನ್ಸ್ ಮಾಲಿಕರು ಮತ್ತು ಡ್ರೈವರ್ ಅನಿಲ್ ರುಬೇನ್ ಮೆಂಡೊನ್ಸಾ 45 ಹಾಗೂ ಡ್ರೈವರ್ ಅಶ್ವತ್ ಮೂಡಬಿದ್ರೆ 26 ಮಹಮದ್ ಹಸನ್ ಅವರನ್ನು ಊರಿಗೆ ತಲುಪಿಸುವ ಕಾರ್ಯ ಮಾಡಿದ್ದಾರೆ.

2700 ಕಿಲೋ ಮೀಟರ್ ದೂರದ ಪ್ರಯಾಣ
ಈ ಆ್ಯಂಬುಲೆನ್ಸ್ ಪ್ರಯಾಣದಲ್ಲಿ 2700 ಕಿಲೋ ಮೀಟರ್ ದೂರವನ್ನು 45 ಗಂಟೆಗಳಲ್ಲಿ ತಲುಪಿರುವುದು ಈಗ ಭಾರೀ ಶ್ಲಾಘನೆ ಗಿಟ್ಟಿಸಿದೆ. ರೋಗಿ ಹಸನ್ ಅವರು ಆಳ್ವಾಸ್ ಹೆಲ್ತ್ ಸೆಂಟರ್​​ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಅಡಿಕೆ ಗೋಡೋನ್​​ನಲ್ಲಿ ಕೆಲಸ ಮಾಡುವ ಸಮಯದಲ್ಲಿ ಬಿದ್ದು ಗಾಯಗೊಂಡಿದ್ದ ಹಸನ್ ತೀವೃವಾದ ನೋವು ಅನುಭವಿಸುತ್ತಿದ್ದರು. ಅಗಸ್ಟ್ 25 ರಿಂದ ಸಪ್ಟೆಂಬರ್ 9 ರ ವರೆಗೆ ಇವರು ಆಳ್ವಾಸ್ ಹೆಲ್ತ್ ಸೆಂಟರ್​​ನಲ್ಲಿ ಚಿಕಿತ್ಸೆ ಪಡೆದಿದ್ದರು. ರೋಗಿಯನ್ನು ಆಸ್ಪತ್ರೆಯಿಂದ ಮನೆಗೆ ಕರೆದೊಯ್ಯುವುದಾಗಿ ಮನೆಯವರು ಕೇಳಿಕೊಂಡಾಗ ವಿಮಾನದ ಮೂಲಕ ಕರೆದುಕೊಂಡು ಹೋಗುವಂತೆ ಸೂಚಿಸಲಾಗಿತ್ತು.

ಇದನ್ನೂ ಓದಿ: ಬ್ಯಾಂಕ್​ಗಳಲ್ಲಿ ಸ್ಥಳೀಯ ಭಾಷೆ ಬಲ್ಲವರನ್ನೇ ನೇಮಿಸಿ; ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಸೂಚನೆ

ವಿಮಾನದಲ್ಲಿ ಹೋಗಲು ನಿರ್ಧಾರ
ಮರುದಿನ ಆಂಬುಲೆನ್ಸ್ ಮೂಲಕವೇ ಹಸನ್ ಮತ್ತು ಅವರ ತಂದೆಯನ್ನು ಮಂಗಳೂರು ವಿಮಾನ ನಿಲ್ಧಾಣಕ್ಕೆ ಕರೆದೊಯ್ಯಲಾಯಿತು. ಆದರೆ ಮೊದಲೇ ಎಲ್ಲಾ ಟಿಕೆಟ್ ಬುಕ್ ಆಗಿದ್ದವು. ಇನ್ನು ಖಾಸಗಿ ವಿಮಾನದಲ್ಲಿ ಕರೆದೊಯ್ಯುವ ಪ್ರಯತ್ನ ಮಾಡಲಾಯಿತು. ಆಕ್ಸಿಜನ್ ಸಿಲೆಂಡರ್ ಸಮೇತ ಹಸನ್ ಅವರನ್ನು ಕರೆದೊಯ್ಯಲು ಖಾಸಗಿ ವಿಮಾನಗಳು ಪರವಾನಿಗೆ ನೀಡದೇ ಇರುವ ಸಂದರ್ಭದಲ್ಲಿ ಆಂಬುಲೆನ್ಸ್ ಮೂಲಕವೇ ಕರೆದೊಯ್ಯುವ ನಿರ್ಧಾರ ಮಾಡಲಾಯಿತು. ಹಸನ್ ಮನೆಯವರು ಮತ್ತು ಸಂಬಂಧಿಕರೂ ಸಹ ಇವರನ್ನು ಒತ್ತಾಯಿಸಿದರು ಹೀಗಿರುವಾಗ ಅನಿವಾರ್ಯವಾಗಿ ರೋಗಿ ಹಸನ್ ಅವರನ್ನು ಕರೆದೊಯ್ಯಲಾಯಿತು.

ಅಪಾಯದಿಂದ ಪಾರಾದ ರೋಗಿ
ವೈದ್ಯರನ್ನು ಸಂಪರ್ಕಿಸಿ ಆಂಬುಲೆನ್ಸ್​​ನಲ್ಲಿ ಕರೆದೊಯ್ಯುತ್ತೇವೆ ಎಂದು ಹೇಳಿದಾಗ ಹೀಗೆ ಮಾಡುವುದು ತುಂಬಾ ಅಪಾಯಕಾರಿ. ಅಪಾಯವನ್ನು ಎದುರಿಸಲು ಸಿದ್ಧರಿದ್ದರೆ ಮಾತ್ರ ಕರೆದುಕೊಂಡು ಹೋಗಿ ಎಂದಾಗ ಎಲ್ಲರಿಗೂ ಬೇಸರವಾಗಿತ್ತು. ಆದರೂ ಧೈರ್ಯಮಾಡಿ ಮಾರುತಿ ಸುಜುಕಿ ಇಕೊ ಆಂಬುಲೆನ್ಸ್​​ನಲ್ಲಿ ಸ್ಥಳಾಂತರ ಮಾಡಲಾಯಿತು. ಸೆಪ್ಟೆಂಬರ್ 10 ರಂದು ಸಂಜೆ ಮೂಡಬಿದಿರೆಯಿಂದ ಹೊರಟು ಸಪ್ಟೆಂಬರ್ 12 ರಂದು ಬೆಳಿಗ್ಗೆ ಮೊರಾದಾಬಾದ್ ತಲುಪಿಸಿದರು. ನಂತರ ಅವರನ್ನು ಶ್ರೇಯಾ ನ್ಯೂರೋ ಕೇರ್​​ಗೆ ದಾಖಲಿಸಲಾಯಿತು ಎಂದು 65 ವಯಸ್ಸಿನ ಹಸೀನ್ ತಂದೆ ಹೇಳಿದರು.

ಇದನ್ನೂ ಓದಿ: ಪುಟಿನ್ ಎದುರೇ ಯುದ್ಧ ಬೇಡ ಎಂದ ಮೋದಿ! ಭಾರತದ ಸಲಹೆಗೆ 'ನಮೋ' ಎಂದ ವಿಶ್ವದ ಮಾಧ್ಯಮಗಳು

ಧನ್ಯವಾದ ತಿಳಿಸಿದ ತಂದೆ
ಅಪಾಯ ಎದುರಾಗಿದ್ದ ಸಂದರ್ಭದಲ್ಲಿ ಪರ ಊರಿನಲ್ಲಿ ಆತಂಕದಿಂದ ಜೀವಿಸುತ್ತಿದ್ದ ನಮಗೆ ನೆಮ್ಮದಿಯಿರಲಿಲ್ಲ.  ಮಗನಿಗೆ ಹೀಗಾಯಿತಲ್ಲ ಎಂಬ ದುಃಖ ಕಾಡುತ್ತಿತ್ತು ಅಂತಹ ಸಮಯದಲ್ಲಿ ಸಹಾಯ ಮಾಡಿದ ಅಂಬುಲೆನ್ಸ್ ಚಾಲಕನಿಗೆ ನಾನು ತುಂಬಾ ಧನ್ಯವಾದಗಳನ್ನು ಅರ್ಪಿಸುತ್ತೇನೆ. ಅವರು ನನ್ನ ಮಗನನ್ನು ಸುರಕ್ಷಿತವಾಗಿ ತಲುಪಿಸಿದ್ದಾರೆ ಎಂದು ಹಸನ್ ತಂದೆ ತಿಳಿಸಿದ್ದಾರೆ.
First published: