• Home
  • »
  • News
  • »
  • national-international
  • »
  • Mangaluru Blast: ಮಂಗಳೂರು ರಿಕ್ಷಾ ಸ್ಫೋಟಕ್ಕೆ ಕೊಯಂಬತ್ತೂರು ಕಾರ್​ ಬ್ಲಾಸ್ಟ್ ಪ್ರೇರಣೆಯೇ?

Mangaluru Blast: ಮಂಗಳೂರು ರಿಕ್ಷಾ ಸ್ಫೋಟಕ್ಕೆ ಕೊಯಂಬತ್ತೂರು ಕಾರ್​ ಬ್ಲಾಸ್ಟ್ ಪ್ರೇರಣೆಯೇ?

ಮಂಗಳೂರು ಸ್ಫೋಟದ ರಿಕ್ಷಾ

ಮಂಗಳೂರು ಸ್ಫೋಟದ ರಿಕ್ಷಾ

ಕೊಯಂಬತ್ತೂರು ಸ್ಫೋಟದಲ್ಲಿ ನಾಡಬಾಂಬ್ ತಯಾರಿಸಲು ಅಗತ್ಯವಿರುವ ಬಳಸಲಾದ ಪೊಟ್ಯಾಷಿಯಂ ನೈಟ್ರೇಟ್ ಮತ್ತು ಸಲ್ಫರ್  ಸ್ಫೋಟದಲ್ಲಿ  ಮೃತಪಟ್ಟಿದ್ದ ಜಮೇಶಾ ಮುಬಿನ್ ಮನೆಯಲ್ಲಿ ಪತ್ತೆಯಾಗಿತ್ತು.

  • News18 Kannada
  • Last Updated :
  • Karnataka, India
  • Share this:

    ಮಂಗಳೂರಿನಲ್ಲಿ ನಡೆದ ಆಟೋರಿಕ್ಷಾ ಬಾಂಬ್ ಬ್ಲಾಸ್ಟ್ ಪ್ರಕರಣ (Autorickshaw Explodes)  ಇದೇ ವರ್ಷದಲ್ಲಿ ನಡೆದಿದ್ದ ಕೊಯಂಬತ್ತೂರಿನ ಸಿಲಿಂಡರ್ ಸ್ಪೋಟ ಪ್ರಕರಣವನ್ನೇ ಹೋಲುತ್ತದೆ ಎಂದು ಹೇಳಲಾಗುತ್ತಿದೆ. ಮಂಗಳೂರಿನ ಸ್ಫೋಟ (Mangaluru Blast) ಪ್ರಕರಣವನ್ನು ಡಿಜಿಪಿ ಪ್ರವೀಣ್ ಸೂದ್ ಆ್ಯಕ್ಟ್ ಆಫ್ ಟೆರರ್ ಎಂದು ಕರೆದಿದ್ದಾರೆ. ಈ ಆ್ಯಕ್ಟ್ ಆಫ್ ಟೆರರ್ (Act Of Terror) ಎಂಬ ಪದ ಕೊಯಂಬತ್ತೂರು ಬಾಂಬ್ ಬ್ಲಾಸ್ಟ್ ಪ್ರಕರಣದಲ್ಲೂ ಕೇಳಿಬಂದಿತ್ತು. ಹಾಗಾದರೆ ಮಂಗಳೂರಿನ ಸ್ಫೋಟಕ್ಕೆ ಹೋಲಿಕೆಯಿರುವ  ಕೊಯಂಬತ್ತೂರು ಸ್ಟೋಟದ (Coimbatore Bomb Blast ) ಭೀಕರ ವಿವರಗಳು ಇಲ್ಲಿವೆ.


    ಕೊಯಂಬತ್ತೂರ್​ ಸ್ಫೋಟ ಹೇಗಿತ್ತು?
    ಕೊಯಂಬತ್ತೂರು ಸ್ಫೋಟದಲ್ಲಿ ನಾಡಬಾಂಬ್ ತಯಾರಿಸಲು ಅಗತ್ಯವಿರುವ ಬಳಸಲಾದ ಪೊಟ್ಯಾಷಿಯಂ ನೈಟ್ರೇಟ್ ಮತ್ತು ಸಲ್ಫರ್  ಸ್ಫೋಟದಲ್ಲಿ  ಮೃತಪಟ್ಟಿದ್ದ ಜಮೇಶಾ ಮುಬಿನ್ ಮನೆಯಲ್ಲಿ ಪತ್ತೆಯಾಗಿತ್ತು.


    ಪತ್ರ ಬರೆದಿಟ್ಟಿದ್ದ ಆತ್ಮಹತ್ಯಾ ದಾಳಿಕೋರ
    ಅಲ್ಲದೇ, ಜಮೇಶಾ ಮುಬಿನ್ ಬರೆದಿದ್ದ ಪತ್ರದಲ್ಲಿ ' ನನ್ನ ಸಾವಿನ ಸುದ್ದಿ ನಿಮ್ಮನ್ನು ತಲುಪಿದರೆ ನನ್ನ ತಪ್ಪುಗಳನ್ನು ಮನ್ನಿಸಿ. ನನಗಾಗಿ ಪ್ರಾರ್ಥನೆ ಸಲ್ಲಿಸಿ' ಎಂದು ಬರೆಯಲಾಗಿತ್ತು, ಅಲ್ಲದೇ ಇದು ಅಪ್ಪಟ ಸೂಸೈಡ್ ಮಿಷನ್ ಎಂದೇ ಖಚಿತವಾಗಿತ್ತು. ಮುಬಿನ್ ಕಾರಿನೊಳಗೆ ಸಿಲಿಂಡರ್​ಗಳನ್ನು ಇಡುತ್ತಿರುವ ವಿಡಿಯೋ ಸಹ ತನಿಖಾಧಿಕಾರಿಗಳಿಗೆ ದೊರೆತಿತ್ತು.


    2019ರಲ್ಲಿ ರಾಷ್ಟ್ರೀಯ ತನಿಖಾ ದಳದಿಂದ ಬಂಧನಕ್ಕೆ ಒಳಗಾದ ಎಂಡಿ ಅಜರುದ್ದೀನ್ ಎಂಬಾತನ 8 ಸಹಚರರನ್ನು ಸಹ ಈ ಬಾಂಬ್ ಸ್ಫೋಟಕ್ಕೆ ಸಂಬಂಧಿಸಿ ಬಂಧಿಸಲಾಗಿತ್ತು. ಸಿಸಿಟಿವಿ ದೃಶ್ಯಾವಳಿಗಳು ಕೊಯಂಬತ್ತೂರು ಬಾಂಬ್ ದಾಳಿ ಘಟನೆಯನ್ನು ಬೇಧಿಸುವ ತನಿಖೆಯಲ್ಲಿ ರಾಷ್ಟ್ರೀಯ ತನಿಖಾ ದಳಕ್ಕೆ ನೆರವಾಗಿದ್ದವು.


    ಬೆಳ್ಳಂ ಬೆಳಗ್ಗೆ 4 ಗಂಟೆಗೆ ಮಾರುತಿ ಕಾರ್​ನಲ್ಲಿ ಸ್ಫೋಟ
    ಬೆಳ್ಳಂ ಬೆಳಗ್ಗೆ 4 ಗಂಟೆಗೆ ಮಾರುತಿ ಕಾರ್​ನಲ್ಲಿ ಸ್ಫೋಟ ಸಂಭವಿಸಿತ್ತು. ಕೊಯಂಬತ್ತೂರಿನ ಈ ಆಘಾತಕಾರಿ ಸ್ಫೋಟ ಪ್ರಕರಣದಲ್ಲಿ 2 ಗ್ಯಾಸ್ ಸಿಲಿಂಡರ್ ಬಳಸಿರುವುದು ಖಚಿತವಾಗಿತ್ತು. ಈ ಸ್ಫೋಟದಲ್ಲಿ ಗಾರಿನಲ್ಲಿದ್ದ ಓರ್ವ ಮೃತಪಟ್ಟಿದ್ದ. ಸ್ಫಟದ ಸ್ಥಳದ ಬಳಿಯೇ ಇದ್ದ ದೇವಾಲಯದ ಕಟ್ಟಡದ ಮುಂಭಾಗಕ್ಕೆ ಹಾನಿಯಾಗಿತ್ತು. ಆದರೆ ಇತರ ಯಾರಿಗೂ ಗಾಯಗಳಾಗಿರಲಿಲ್ಲ.


    ಇದನ್ನೂ ಓದಿ: Mangaluru Blast: ಮಂಗಳೂರು ಸ್ಫೋಟ ಕೇಸ್; ನಿಷೇಧಿತ PFI ಸಂಘಟನೆ ಮುಖಂಡ NIA ವಶಕ್ಕೆ


    ಅಲ್ಲದೇ ತನಿಖೆಯಲ್ಲಿ ಐಸಿಸ್ ಲಷ್ಕರ್ ಎ ತೊಯ್ಬಾ ಸಂಘಟನೆಯ ಜೊತೆಗೂಡಿ ನಡೆಸಿದ ದುಷ್ಕೃತ್ಯ ಎಂದು ಕೊಯಂಬತ್ತೂರು ಸ್ಫೋಟ ಪ್ರಕರಣ ಪತ್ತೆಯಾಗಿತ್ತು.


    ಮಂಗಳೂರು ಸ್ಫೋಟ; ಕೇಂದ್ರದ ತನಿಖಾ ಸಂಸ್ಥೆಗಳ ಜೊತೆ ತನಿಖೆ ನ
    ಮಂಗಳೂರು ಆಟೋರಿಕ್ಷಾ ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿ ಕರ್ನಾಟಕ ಪೊಲೀಸರಿಂದ ಸೂಕ್ಷ್ಮವಾಗಿ, ಆಳವಾಗಿ ತನಿಖೆ ನಡೆಸಲಾಗ್ತಿದೆ‌. ಕೇಂದ್ರದ ತನಿಖಾ ಸಂಸ್ಥೆಗಳ ಜೊತೆ ತನಿಖೆ ನಡೆಸಲಾಗ್ತಿದೆ ಎಂದು ಡಿಜಿಪಿ ಪ್ರವೀಣ್ ಸೂದ್ ಹೇಳಿದ್ದಾರೆ. ಪ್ರವೀಣ್ ಸೂದ್​ ಅವರ ಟ್ವೀಟ್​​ನ್ನು ಎಡಿಜಿಪಿ ಅಲೋಕ್ ಕುಮಾರ್ (ADGP Alok Kumar) ರೀಟ್ವೀಟ್ ಮಾಡಿದ್ದಾರೆ.


    ಇದನ್ನೂ ಓದಿ: Autorickshaw Explodes: ಆಟೋ ಸ್ಫೋಟದ ಹಿಂದೆ ಉಗ್ರರ ಕೈವಾಡ; ಉದ್ದೇಶಪೂರ್ವಕ ಕೃತ್ಯ ಎಂದ ಡಿಜಿಪಿ


    ಚಲಿಸುತ್ತಿದ್ದ ಆಟೋದಲ್ಲಿ ಸ್ಫೋಟ ಪ್ರಕರಣ ಭೇದಿಸಲು ಪೊಲೀಸ್ ಕಮಿಷನರ್ ಮೂರು ತಂಡಗಳ ರಚನೆ ಮಾಡಿದ್ದಾರೆ. ಕಳೆದ ರಾತ್ರಿಯೇ ರಾಜ್ಯದ ವಿವಿಧ ಭಾಗಗಳಿಗೆ ಪೊಲೀಸರ ತಂಡ ತೆರಳಿದೆ. ಸ್ಫೋಟದ ಜಾಡು ಹಿಡಿದು ಮಂಗಳೂರು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.


    ಪ್ರಯಾಣಿಕನಿಂದ ಅಸ್ಪಷ್ಟ ಮಾಹಿತಿ
    ಸ್ಫೋಟದಲ್ಲಿ ಗಂಭೀರವಾಗಿ ಗಾಯಗೊಂಡಿರುವ ಪ್ರಯಾಣಿಕ ಪ್ರೇಮ್ ರಾಜ್​ ಪೊಲೀಸರ ಎದುರು ಗೊಂದಲಕಾರಿ ಹೇಳಿಕೆ ನೀಡುತ್ತಿದ್ದಾನೆ ಎನ್ನಲಾಗಿದೆ. ಒಮ್ಮೆ ತಾನು ಮೈಸೂರಿನಿಂದ ಬಂದಿದ್ದಾಗಿ ಹೇಳಿದ್ದು, ತನ್ನ ಸೋದರ ಬಾಬುರಾವ್​ಗೆ ಕರೆ ಮಾಡಿ ಅಂತ ನಂಬರ್ ನೀಡಿದ್ದಾನೆ. ಆದರೆ ಕರೆ ಮಾಡಿದ್ರೆ ಆ ವ್ಯಕ್ತಿ ಸಂಬಂಧಿಕನೇ ಅಲ್ಲ ಎಂಬ ಅಂಶ ಬೆಳಕಿಗೆ ಬಂದಿದೆ.

    Published by:ಗುರುಗಣೇಶ ಡಬ್ಗುಳಿ
    First published: