Vande Bharat Train: ಕರ್ನಾಟಕದ ಎರಡು ಜಿಲ್ಲೆಗಳಿಗೆ ಸಂಚರಿಸುತ್ತಾ ಕೇರಳದ ಮೊದಲ ವಂದೇ ಭಾರತ್​ ರೈಲು?

ವಂದೇ ಭಾರತ್ ರೈಲು

ವಂದೇ ಭಾರತ್ ರೈಲು

ಕೇರಳದಲ್ಲಿ ವಂದೇ ಭಾರತ್ ಎಕ್ಸ್‌ಪ್ರೆಸ್ ಸಂಚರಿಸುವ ಮಾರ್ಗಗಳೆಂದರೆ ಎರ್ನಾಕುಲಂ-ಮಂಗಳೂರು ಮತ್ತು ಎರ್ನಾಕುಲಂ-ಬೆಂಗಳೂರು ಮಾರ್ಗಗಳಾಗಿದ್ದು ಇವೆರಡರ ಅಂತ್ಯದ ಸ್ಥಳಗಳು ಕರ್ನಾಟಕದಲ್ಲಿರಲಿವೆ. ಇನ್ನು ಮುಂಬರುವ ಚುನಾವಣೆಗೆ ಕರ್ನಾಟಕದಲ್ಲಿ ಮಾದರಿ ನೀತಿ ಸಂಹಿತೆ ಜಾರಿಯಾಗಿರುವುದರಿಂದ ಈ ಯೋಜನೆಗಳು ಆರಂಭಗೊಳ್ಳಲು ಕೊಂಚ ವಿಳಂಬವಾಗಬಹುದು ಎಂದು ವರದಿ ತಿಳಿಸಿದೆ.

ಮುಂದೆ ಓದಿ ...
  • Share this:

ಕೇರಳದ (Kerala) ಮೊದಲ ಸೆಮಿಹೈಸ್ಪೀಡ್ ಟ್ರೈನ್, ವಂದೇ ಭಾರತ್ (Vande Bharat) ಈ ತಿಂಗಳ ಕೊನೆಯಲ್ಲಿ ಆರಂಭಗೊಳ್ಳಲಿದೆ. ಇಲಾಖೆಯು ಆರಂಭದಲ್ಲಿ ಮೊದಲ 16 ಕೋಚ್‌ಗಳನ್ನು ಚಲಾಯಿಸಲು ಯೋಜಿಸಿದ್ದು ಪ್ರಯಾಣಿಕರ ಸಂಖ್ಯೆಯನ್ನು ಗಮನಿಸಿಕೊಂಡು ಪ್ರಯಾಣದಲ್ಲಿ ಮಾರ್ಪಾಡುಗಳನ್ನು ನಡೆಸಲಿದೆ ಎಂದು ತಿಳಿಸಿದೆ. ಎರಡನೇ ವಂದೇ ಭಾರತ್ ಎಕ್ಸ್‌ಪ್ರೆಸ್ (Vande Bharat Express) ಅನ್ನು ಸಹ ಯೋಜಿಸಲಾಗಿದ್ದು ಎಂಟು ಕೋಚ್‌ಗಳನ್ನು ಬಳಸಲಾಗುತ್ತದೆ ಎಂದು ವರದಿ ತಿಳಿಸಿದ್ದು, ಮೊದಲ ಸೇವೆಯಲ್ಲಿ ಪ್ರಯಾಣಿಕರು ನಿರೀಕ್ಷೆಗಿಂತ ಕಡಿಮೆಯಿದ್ದರೆ ಕೋಚ್‌ಗಳ ಸಂಖ್ಯೆಯನ್ನು ಕಡಿಮೆ ಮಾಡಲಾಗುತ್ತದೆ ಎಂದು ಇಲಾಖೆ ತಿಳಿಸಿದೆ.


ಕೇರಳದಲ್ಲಿ ವಂದೇ ಭಾರತ್ ಎಕ್ಸ್‌ಪ್ರೆಸ್ ಸಂಚರಿಸುವ ಮಾರ್ಗ


ಕೇರಳದಲ್ಲಿ ವಂದೇ ಭಾರತ್ ಎಕ್ಸ್‌ಪ್ರೆಸ್ ಸಂಚರಿಸುವ ಮಾರ್ಗಗಳೆಂದರೆ ಎರ್ನಾಕುಲಂ-ಮಂಗಳೂರು ಮತ್ತು ಎರ್ನಾಕುಲಂ-ಬೆಂಗಳೂರು ಮಾರ್ಗಗಳಾಗಿದ್ದು ಇವೆರಡರ ಅಂತ್ಯದ ಸ್ಥಳಗಳು ಕರ್ನಾಟಕದಲ್ಲಿವೆ.


ಮುಂಬರುವ ಚುನಾವಣೆಗೆ ಕರ್ನಾಟಕದಲ್ಲಿ ಮಾದರಿ ನೀತಿ ಸಂಹಿತೆ ಜಾರಿಯಾಗಿರುವುದರಿಂದ ಈ ಯೋಜನೆಗಳು ಆರಂಭಗೊಳ್ಳಲು ಕೊಂಚ ವಿಳಂಬವಾಗಬಹುದು ಎಂದು ವರದಿ ತಿಳಿಸಿದೆ. ಎರಡನೇ ವಂದೇ ಭಾರತ್ ಎಕ್ಸ್‌ಪ್ರೆಸ್ ಕೇರಳ ರಾಜ್ಯದೊಳಗೆ ಮತ್ತೊಂದು ಮಾರ್ಗದಲ್ಲಿ ಸಂಚರಿಸುವ ಸಾಧ್ಯತೆ ಕೂಡ ಇಲ್ಲದಿಲ್ಲ ಎಂದು ತಿಳಿದುಬಂದಿದೆ.


ಇದನ್ನೂ ಓದಿ: ಬೇಲಿ ದಾಟಿ ಅಮೆರಿಕ ಅಧ್ಯಕ್ಷರ ಭವನ ಪ್ರವೇಶಿಸಿದ ಪುಟ್ಟ ಮಗು! ಮುಂದೆ ಆಗಿದ್ದೇ ರೋಚಕ!


ಪ್ರಧಾನಿಯವರಿಂದ ಶಂಕುಸ್ಥಾಪನೆ


ಮೂಲತಃ, ಕೇರಳಕ್ಕೆ ಎಂಟು ಬೋಗಿಗಳ ರೈಲನ್ನು ತಲುಪಿಸಲು ರೈಲ್ವೆ ಉದ್ದೇಶಿಸಿತ್ತು, ಆದರೆ ಬದಲಾಗಿ, 16 ಕಾರ್ ರೈಲನ್ನು ಚೆನ್ನೈ ಮೂಲದ ಇಂಟೆಗ್ರಲ್ ಕೋಚ್ ಫ್ಯಾಕ್ಟರಿ (ಐಸಿಎಫ್) ನಿಂದ ವಿತರಿಸಲಾಯಿತು.


ಎಪ್ರಿಲ್ 25 ರಂದು ತಿರುವನಂತಪುರಂನಲ್ಲಿ ನಡೆಯುವ ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ ರೈಲು ಪ್ರಯಾಣಕ್ಕೆ ಚಾಲನೆ ನೀಡಲಿದ್ದಾರೆ. ಇದೇ ಸಮಾರಂಭದಲ್ಲಿ ತಿರುವನಂತಪುರಂ ನಿಲ್ದಾಣವನ್ನು ವಿಮಾನ ನಿಲ್ದಾಣ ಮಾದರಿಯಲ್ಲಿ ನವೀಕರಿಸುವ ಕಾಮಗಾರಿಗೂ ಪ್ರಧಾನಿಯವರು ಶಂಕುಸ್ಥಾಪನೆ ನೆರವೇರಿಸಲಿದ್ದಾರೆ.


ಪ್ರಯಾಣಿಕರನ್ನು ಅವಲಂಬಿಸಿ ಇನ್ನಷ್ಟು ವಂದೇ ಭಾರತ್ ರೈಲುಗಳನ್ನು ಆರಂಭಿಸುವುದು


16 ಕೋಚ್‌ಗಳ ರೈಲು, ನಿರೀಕ್ಷಿತ ಪ್ರಯಾಣಿಕರ ಗುರಿಯನ್ನು ತಲುಪದೇ ಇದ್ದರೆ ಹಾಗೂ ಅದನ್ನು ಎಂಟು ಬೋಗಿಗಳಿಗೆ ಇಳಿಸಿದರೆ, ರಾಜ್ಯವು ಎರಡನೇ ವಂದೇ ಭಾರತ್ ರೈಲನ್ನು ಪ್ರಾರಂಭಿಸಲಿದೆಯೇ ಎಂಬುದು ಸ್ಪಷ್ಟವಾಗಿಲ್ಲ. ದಕ್ಷಿಣ ರೈಲ್ವೇ ಇದನ್ನು ತಿರುನಲ್ವೇಲಿ-ಚೆನ್ನೈ ಮಾರ್ಗದಲ್ಲಿ ನಿಯೋಜಿಸಲು ಯೋಜಿಸಿದೆ.


ಕಣ್ಣೂರುವರೆಗೆ ವಿಸ್ತರಿಸುವ ಯೋಜನೆ


ಮೊದಲ ವಂದೇ ಭಾರತ್ ಎಕ್ಸ್‌ಪ್ರೆಸ್ 501 ಕಿಮೀ ದೂರದ ತಿರುವನಂತಪುರಂ ಹಾಗೂ ಕೋಯಿಕ್ಕೋಡ್ ಮಾರ್ಗದಲ್ಲಿ ಸಂಚರಿಸಲಿದೆ ಮೂಲತಃ ಇದನ್ನು ಕಣ್ಣೂರುವರೆಗೆ ವಿಸ್ತರಿಸುವ ಯೋಜನೆ ಇತ್ತು.


ಆದರೆ ಪ್ರಯಾಣಿಕರ ಸಂಖ್ಯೆ ಹಾಗೂ ಇನ್ನಷ್ಟು ಅಂಶಗಳನ್ನು ಗಮನದಲ್ಲಿರಿಸಿಕೊಂಡು ನಂತರದ ದಿನಗಳಲ್ಲಿ ವಂದೇ ಭಾರತ್ ಸೇವೆಯನ್ನು ಕಣ್ಣೂರುವರೆಗೆ ವಿಸ್ತರಿಸಲು ರೈಲ್ವೇ ಇಲಾಖೆ ನಿರ್ಧರಿಸಲಿದೆ.


ವಂದೇ ಭಾರತ್ ರೈಲು


ಟ್ರಯಲ್ ಟ್ರೈನ್


ವಂದೇ ಭಾರತ್ ಅಧಿಕೃತವಾಗಿ ಸಂಚರಿಸುವ ಮುನ್ನ ಪ್ರಾಯೋಗಿಕ ಪರೀಕ್ಷೆಗಳನ್ನು ನಡೆಸಲಿದ್ದು, ಮುಂದಿನ ವಾರದಿಂದ ಪ್ರಾಯೋಗಿಕ ರೈಲುಗಳು ಸಂಚರಿಸಲಿವೆ.


ಕೇರಳದಲ್ಲಿ ಪ್ರವಾಸೋದ್ಯಮದ ಉತ್ತೇಜನ


ವಂದೇ ಭಾರತ್ ಎಕ್ಸ್‌ಪ್ರೆಸ್ ಭಾರತೀಯ ರೈಲ್ವೇಯ ಪ್ರಮುಖ ಯೋಜನೆಯಾಗಿದ್ದು, ಗಂಟೆಗೆ 160 ಕಿಮೀ ವೇಗದಲ್ಲಿ ಸಂಚರಿಸಲಿದೆ. ರೈಲು ಸ್ವಯಂಚಾಲಿತ ಬಾಗಿಲುಗಳು, ಜಿಪಿಎಸ್ ಆಧಾರಿತ ಪ್ರಯಾಣಿಕರ ಮಾಹಿತಿ ವ್ಯವಸ್ಥೆ ಮತ್ತು ಆನ್‌ಬೋರ್ಡ್ ವೈ-ಫೈ, ಇತರ ಸೌಕರ್ಯಗಳನ್ನು ಒಳಗೊಂಡಿದೆ.


ಕೇರಳದಲ್ಲಿ ವಂದೇ ಭಾರತ್ ಎಕ್ಸ್‌ಪ್ರೆಸ್‌ನ ಪ್ರಾರಂಭವು ಪ್ರಯಾಣಿಕರಿಗೆ ವೇಗವಾದ ಮತ್ತು ಹೆಚ್ಚು ಪರಿಣಾಮಕಾರಿ ಸಾರಿಗೆಯನ್ನು ಒದಗಿಸುವ ನಿರೀಕ್ಷೆಯನ್ನು ಹೊಂದಿದ್ದು, ರಾಜ್ಯದಲ್ಲಿ ಪ್ರವಾಸೋದ್ಯಮವನ್ನು ಉತ್ತೇಜಿಸುತ್ತದೆ ಎನ್ನಲಾಗಿದೆ.




ಇನ್ನಷ್ಟು ರೈಲುಗಳ ಘೋಷಣೆ ಸಾಧ್ಯತೆ


ಇನ್ನಷ್ಟು ಹೆಚ್ಚಿನ ವಂದೇ ಭಾರತ್ ರೈಲುಗಳನ್ನು ಮೋದಿಯವರು ಘೋಷಿಸಲಿದ್ದಾರೆ ಎಂದು ಹೆಚ್ಚಿನ ರೈಲ್ವೇ ಪ್ರಯಾಣಿಕರು ಭಾವಿಸುತ್ತಿದ್ದಾರೆ. ಈಗಾಗಲೇ ರೈಲ್ವೇ ಇಲಾಖೆ ಎರ್ನಾಂಕುಲಮ್-ವೇಲಾಂಕಣ್ಣಿ ಹಾಗೂ ಕೊಲ್ಲಂ ತಿರುಪತಿಗೆ ಹೊಸ ರೈಲುಗಳನ್ನು ಘೋಷಿಸಿದೆ. ವಂದೇ ಭಾರತ್ ಟ್ರೈನ್ ಅನ್ನು ಆರಂಭಿಸಿದ ನಂತರ ಕನಿಷ್ಟ 110 kmph ದೂರವನ್ನು ಕ್ರಮಿಸಬೇಕು ಎಂದು ರೈಲ್ವೇ ಮಂಡಳಿ ತಿಳಿಸಿದೆ.

top videos
    First published: