Nikhil Kumaraswamy ಜಿಲ್ಲಾ ಪಂಚಾಯತ್ ಗೆದ್ದು ಆಮೇಲೆ ಮಾತನಾಡಲಿ: ಸುಮಲತಾ

ಸಂಸದೆ ಸುಮಲತಾ

ಸಂಸದೆ ಸುಮಲತಾ

ಅಭಿಷೇಕ್ ಅಂಬರೀಶ್ ಮಗ. ಅವನು‌ ಯಾರ ಮಾತನ್ನೂ ಕೇಳುವುದಿಲ್ಲ. ಚುನಾವಣೆಗೆ ನಿಲ್ಲುವ ಬಗ್ಗೆ ಅವನೇ ನಿರ್ಧಾರ ಮಾಡಬೇಕು. ಮಂಡ್ಯದ ಎಲ್ಲಾ ವಿಧಾನಸಭಾ ಕ್ಷೇತ್ರಗಳಿಂದ ಅಭಿಷೇಕ್ ಸ್ಪರ್ಧೆ ಮಾಡಬೇಕು ಎಂಬ ಆಹ್ವಾನ ಬರುತ್ತಿವೆ ಎಂದು ಸುಮಲತಾ ಹೇಳಿದರು.

  • Share this:

ನವದೆಹಲಿ, ಮಾ. 30: ಸಂಸದೆ ಸುಮಲತಾ ಅಂಬರೀಶ್ (Sumalatha Ambarish) ಹಾಗೂ ಜೆಡಿಎಸ್ (JDS) ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ (Nikhil Kumaraswamy) ನಡುವೆ ಮಂಡ್ಯದಲ್ಲಿ 2019ರಲ್ಲಿ ಲೋಕಸಭಾ ಚುನಾವಣೆ ನಡೆದ ರೀತಿ ಗೊತ್ತೇ ಇದೆ. ಅಂದು ಆರಂಭವಾದ ನಿಖಿಲ್ ಕುಮಾರಸ್ವಾಮಿ ಮತ್ತು ಸುಮಲತಾ ನಡುವಿನ‌ ವಾಕ್ಸಮರ ಈವರೆಗೂ ನಿಂತಿಲ್ಲ. 'ನಿಖಿಲ್ ಕುಮಾರಸ್ವಾಮಿ ಅವರ ಪಕ್ಷ, ತಾತಾ, ತಂದೆ ಹೆಸರು ಬಿಟ್ಟು ಜಿಲ್ಲಾ ಪಂಚಾಯತ್ ಚುನಾವಣೆ ಗೆಲ್ಲಲ್ಲಿ, ಗೆದ್ದ ಬಂದು ಆಮೇಲೆ ನನಗೆ ಸಲಗೆ ನೀಡಲಿ ಎಂದು ಸುಮಲತಾ ಸವಾಲು ಹಾಕಿದ್ದಾರೆ.


ನಿಖಿಲ್ ಕುಮಾರಸ್ವಾಮಿಗೆ ಸುಮಲತಾ ತಿರುಗೇಟು
ಈಗ ನಿಖಿಲ್ ಕುಮಾರಸ್ವಾಮಿ ಬಾರಿ ರಾಜಕೀಯದಲ್ಲಿ ಬಹಳ ಅನುಭವಿಯಂತೆ ಸಲಹೆ ನೀಡಿದ್ದಾರೆ. ನನ್ನ ಸಾಧನೆ ಏನು? ನನ್ನ ಕೊಡುಗೆ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದು ಹೇಳಿದ್ದಾರೆ. ಅವರು ಚಿಕ್ಕವರಾದರೂ ಪರವಾಗಿಲ್ಲ. ನನ್ನಿಂದ ತಪ್ಪಾಗಿದ್ದರೆ ಸಲಹೆ ಸ್ವೀಕರಿಸುವೆ. ಆದರೆ ಅವರು ಪ್ಯಾಕ್ಟ್ ಇಟ್ಟುಕೊಂಡು ಮಾತನಾಡಬೇಕು. ಅವರು ಸೋತವರು, ಸೋತವರು ಗೆದ್ದವರಿಗೆ ಬುದ್ದಿ ಹೇಳುವುದನ್ನು ಬಿಡಬೇಕು ಎಂದು ನಿಖಿಲ್ ಕುಮಾರಸ್ವಾಮಿಗೆ ಸುಮಲತಾ ತಿರುಗೇಟು ನೀಡಿದರು.


ಅಭಿಷೇಕ್ ನನ್ನ ಮಾತು ಕೇಳಲ್ಲ
ಅಭಿಷೇಕ್ ಅಂಬರೀಶ್ ಮಗ. ಅವನು‌ ಯಾರ ಮಾತನ್ನೂ ಕೇಳುವುದಿಲ್ಲ. ಚುನಾವಣೆಗೆ ನಿಲ್ಲುವ ಬಗ್ಗೆ ಅವನೇ ನಿರ್ಧಾರ ಮಾಡಬೇಕು. ಮಂಡ್ಯದ ಎಲ್ಲಾ ವಿಧಾನಸಭಾ ಕ್ಷೇತ್ರಗಳಿಂದ ಅಭಿಷೇಕ್ ಸ್ಪರ್ಧೆ ಮಾಡಬೇಕು ಎಂಬ ಆಹ್ವಾನ ಬರುತ್ತಿವೆ. ಮಂಡ್ಯದಲ್ಲಿ ಅಭಿಷೇಕಗೆ ಜನರ ಪ್ರೀತಿ ಸಿಗುತ್ತಿದೆ.‌ ಚುನಾವಣೆ ಸ್ಪರ್ಧೆ ಮಾಡಿ ಎಂದು ಜನರು ಎಲ್ಲಾ ಕಡೆ ಹೇಳುತ್ತಿದ್ದಾರೆ. ರಾಷ್ಟ್ರೀಯ ಪಕ್ಷಗಳಿಂದ ಹಿಡಿದು ಎಲ್ಲಾ ಪಕ್ಷಗಳು ಟಿಕೆಟ್ ನೀಡಲು ಸಿದ್ದವಿವೆ. ಆದರೆ ಸದ್ಯ ಅಭಿಷೇಕ ರಾಜಕೀಯದ ಬಗ್ಗೆ ನಿರ್ಧಾರ ಮಾಡಿಲ್ಲ.‌


ಕೆಲ ನಾಯಕರು ನನ್ನ ಪ್ರತಿಕ್ರಿಯೆಯ ನಿರೀಕ್ಷೆ ಮಾಡುತ್ತಿದ್ದಾರೆ. ನಾನು ಏನೂ ಹೇಳಿಲ್ಲ ಎಂದು ಬೇಜಾರು ಮಾಡಿಕೊಂಡಿದ್ದಾರೆ. ಆದರೆ ಅಭಿಷೇಕ್ ಏನನ್ನೂ ತೀರ್ಮಾನ ಮಾಡಿಲ್ಲ. ‌ಸದ್ಯ ಅಭಿಷೇಕ್ ಸಿನಿಮಾದ ಮೇಲೆ ಹೆಚ್ಚು ಗಮನ ಹರಿಸಿದ್ದಾನೆ. ಮುಂದಿನ ಮಾರ್ಚ್ ಅಥವಾ ಎಪ್ರಿಲ್ ತಿಂಗಳಲ್ಲಿ ಚುನಾವಣೆಗೆ ಸ್ಪರ್ಧಿಸುವ ಬಗ್ಗೆ ಅಂತಿಮ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಹೇಳಿದರು. ಜೊತೆಗೆ 'ನಾನು ವಿಧಾನಸಭೆ ಚುನಾವಣೆಗೆ ಸ್ಪರ್ಧೆ ಮಾಡುವುದಿಲ್ಲ' ಎಂಬುದನ್ನು ಸ್ಪಷ್ಟಪಡಿಸಿದರು.


ಇದನ್ನು ಓದಿ:  Hijab ಧರಿಸಿ SSLC ಪರೀಕ್ಷೆ ಬರೆಯಲು ಅವಕಾಶ; ಏಳು ಶಿಕ್ಷಕರ ಅಮಾನತು


ನಿಖಿಲ್ ಕುಮಾರಸ್ವಾಮಿ ವಿರುದ್ಧ ಸುಮಲತಾ ಕಿಡಿ
ದೆಹಲಿಯಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಸುಮಲತಾ, ಜೆಡಿಎಸ್ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದರು. ಸುಮಲತಾ ಅಂಬರೀಶ್ ಬಗ್ಗೆ ಮಾತನಾಡಿದ್ರೆ ಮೈಲೈಜ್ ಸಿಗುತ್ತದೆ ಎಂದು ಜೆಡಿಎಸ್ ಯುವ ನಾಯಕರಿಗೆ ಗೊತ್ತಾಗಿದೆ. ಮಾಧ್ಯಮಗಳಲ್ಲಿ ವರದಿಯಾಗಲೆಂದೇ ಮಾತನಾಡುತ್ತಾರೆ ಎಂದು ನಿಖಿಲ್ ಕುಮಾರಸ್ವಾಮಿ ವಿರುದ್ಧ ಸುಮಲತಾ ಕಿಡಿ ಕಾರಿದರು.


ಇದನ್ನು ಓದಿ: ಕಾಶ್ಮೀರಿ ಪಂಡಿತರ ಕುರಿತು Kejriwal​​​ ಹೇಳಿಕೆ; ತೇಜಸ್ವಿ ಸೂರ್ಯ ನೇತೃತ್ವದಲ್ಲಿ Delhi CM ಮನೆ ಮುಂದೆ BJP ಪ್ರತಿಭಟನೆ


ಜೆಡಿಎಸ್ ಶಾಸಕರ ಜೊತೆ ಬಹಿರಂಗ ಚರ್ಚೆಗೆ ಸಿದ್ದ
ಜೆಡಿಎಸ್ ಶಾಸಕರೊಬ್ಬರು ನನ್ನನ್ನು ಬಹಿರಂಗ ಮಾತುಕತೆಗೆ‌ ಬರುವಂತೆ ಆಹ್ವಾನಿಸಿದ್ದರು. ನಾನು ಮಾತುಕತೆಗೆ ಸಿದ್ದವಾಗಿದ್ದೇನೆ‌. ನನ್ನ ಬಳಿ ಎಲ್ಲದಕ್ಕೂ ಉತ್ತರವಿದೆ ಎಂದ ಸುಮಲತಾ ಶಾಸಕರಾದ ಸುರೇಶ್ ಗೌಡ ಮತ್ತು ಅನ್ನದಾನಿ ಕೊವೀಡ್ ಆಸ್ಪತ್ರೆಯಲ್ಲಿ ಡ್ಯಾನ್ಸ್ ಮಾಡಿ ಬಂದರು.‌ ಕೊವೀಡ್ ಹೋರಾಟದಲ್ಲಿ ನೀವ್ ಏನ್ ಮಾಡಿದರು ಎಂದು ನನ್ನ ಪ್ರಶ್ನಿಸಿದರು. ನಾನು ಆಕ್ಸಿಜನ್ ವಿಚಾರದಲ್ಲಿ ಸಾಕಷ್ಟು ಕೆಲಸ ಮಾಡಿದ್ದೇನೆ. ಆರೋಗ್ಯ ಸಚಿವರ ಜೊತೆಗೂಡಿ ಜಿಲ್ಲೆಯಲ್ಲಿ ಆಕ್ಸಿಜನ್ ಪ್ಲಾಂಟ್ ಗಳನ್ನು ನಿರ್ಮಾಣ ಮಾಡಿಸಿದ್ದೇನೆ ಎಂದರು.


ಸಾಲಿಗ್ರಾಮದಲ್ಲಿ ಎಸ್ಸಿ - ಎಸ್ಟಿ ಕಾಲೋನಿಗಳಲ್ಲಿ ಅಭಿವೃದ್ಧಿ ಕಾರ್ಯಗಳ ಗುದ್ದಲಿ ಪೂಜೆಗೆ ತೆರಳಿದಾಗ ಬೆದರಿಕೆ ಹಾಕಿದ್ದರು.‌ ಶಾಸಕ ಸಾ.ರಾ. ಮಹೇಶ್ ಕಡೆಯ ಬೆಂಬಲಿಗರು ಜೀವ ಬೆದರಿಕೆ ಹಾಕಲು ಬಂದಿದ್ದರು. ಸ್ಥಳೀಯ ಮಹಿಳೆಯರು ನನ್ನ ಬೆಂಬಲಕ್ಕೆ ಬಂದಿದ್ದರು. ಕೆಆರ್‌ಎಸ್ ಮತ್ತು ಅಕ್ರಮ ಗಣಿಗಾರಿಕೆ ಬಗ್ಗೆ ಕ್ರಮ ತೆಗೆದುಕೊಂಡಿದ್ದಕ್ಕೆ ಅಲ್ಲಿ ಅಕ್ರಮ ಗಣಿಗಾರಿಕೆ ನಿಲ್ಲಿಸಿದೆ.‌ ಇದರಿಂದ ಕೆಲವರಿಗೆ ನೋವು ಕಷ್ಟವಾಗಿದೆ. ನಾನು ಮೂರು ವರ್ಷದಲ್ಲಿ ಇಷ್ಟು ಸವಾಲು ಎದುರಿಸಿದ್ದೇವೆ. ಜೀವ ಬೆದರಿಕೆ ನಡುವೆ ಇಷ್ಟೇಲ್ಲ ಕೆಲಸ ಮಾಡಿದ್ದೇನೆ. ಜನರು ನನ್ನ ಜೊತೆಗೆ ಇರುತ್ತೇವೆ ಎಂದು ಭರವಸೆ ನೀಡಿದ್ದಾರೆ ಎಂದು ತಿಳಿಸಿದರು.

top videos
    First published: