ಮಾನಸ ಸರೋವರ ಯಾತ್ರೆ: ಕನ್ನಡಿಗರ ರಕ್ಷಣೆ ಕಾರ್ಯ ಮುಂದುವರಿಕೆ


Updated:July 3, 2018, 7:14 PM IST
ಮಾನಸ ಸರೋವರ ಯಾತ್ರೆ: ಕನ್ನಡಿಗರ ರಕ್ಷಣೆ ಕಾರ್ಯ ಮುಂದುವರಿಕೆ
  • Share this:
ನ್ಯೂಸ್​-18 ಕನ್ನಡ

ನವದೆಹಲಿ(ಜುಲೈ.03): ಮಾನಸ ಸರೋವರ ಯಾತ್ರೆಗೆ ತೆರಳಿ ಸಂಕಷ್ಟದಲ್ಲಿದ್ದ ಯಾತ್ರಿಕರ ರಕ್ಷಣೆ ಕಾರ್ಯಾಚರಣೆ ಮುಂದುವರಿದಿದೆ ಎಂದು ತಿಳಿದು ಬಂದಿದೆ. ಈಗಾಗಲೇ ಸುರಕ್ಷಿತ ಸ್ಥಳ ಸೇರಿದ 250 ಯಾತ್ರಿಕರು, ಹಿಲ್ಸಾದಿಂದ ಸಿಮಿಕೋಟ್ ಗೆ ತಲುಪಿದ್ದಾರೆ.

ಶೀಘ್ರವೇ ಸಿಮಿಕೋಟ್ ನಿಂದ ಕಟ್ಮಂಡು, ಲಕ್ನೋ ಮತ್ತು ದೆಹಲಿಯೆಡೆಗೆ ಪ್ರಯಾಣ ಬೆಳೆಸಲಿದ್ದು, ನಿವಾಸಿ ಆಯುಕ್ತರು ಕೇಂದ್ರ ಅಧಿಕಾರಿಗಳ ಸಂಪರ್ಕದಲ್ಲಿದ್ದಾರೆ. ಇಂದು ರಾತ್ರಿ ಕರ್ನಾಟಕ ಭವನದಿಂದ ಎರಡು ತಂಡಗಳ ರವಾನೆಯಾಗಲಿವೆ.

ಒಂದು ತಂಡ ನೇಪಾಳ ಮತ್ತೊಂದು ತಂಡ ಲಕ್ನೋಗೆ ತೆರಳಲಿದ್ದು, ಯಾತ್ರಿಕರ ರಕ್ಷಣೆಗಾಗಿ ಲಕ್ನೋ ನಿಲ್ದಾಣದಲ್ಲಿ ಮಾಹಿತಿ ಕೇಂದ್ರ ಸ್ಥಾಪಿಸಲಾಗಿದೆ. ಲಕ್ನೋದಿಂದ ನೇರವಾಗಿ ತಮ್ಮ ಊರುಗಳಿಗೆ ಹೋಗಬಹುದು ಎನ್ನಲಾಗಿದೆ.

ದೆಹಲಿಗೆ ಮುಖಾಂತರವೂ ತಮ್ಮ ಊರಿಗೆ ತೆರಳಬಹುದು ಎಂದು ಅಧಿಕಾರಿಗಳು ತಿಳಿಸಿದ್ದು, ಅಗತ್ಯ ರೈಲ್ವೆ ಟಿಕೆಟ್ ವ್ಯವಸ್ಥೆ ಮಾಡಲಾಗಿದೆ. ದೆಹಲಿ ನಿವಾಸಿ ಆಯುಕ್ತ ನಿಲಯ ಮಿತಾಶ್ ರಿಂದ ನ್ಯೂಸ್​-18 ಗೆ ಮಾಹಿತಿ ಲಭ್ಯವಾಗಿದೆ.
First published:July 3, 2018
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading