HOME » NEWS » National-international » MAN WHO WANTS TO LIVE FOR 180 YEARS SPENDS RS 87 LAKH TO RE INJECTS HIS OWN STEM CELLS STG HG

180 ವರ್ಷಗಳ ಕಾಲ ಬದುಕಲು ಅಮೆರಿಕದ ಈ ಟೆಕ್ ಉದ್ಯಮಿ ಮಾಡುತ್ತಿರುವುದೇನು ಗೊತ್ತಾ?

180 ವರ್ಷಗಳ ಕಾಲ ಬದುಕಲು ದೃಢ ನಿಶ್ಚಯ ಹೊಂದಿರುವ ಟೆಕ್ ಉದ್ಯಮಿ, ತಾನು ಹೆಚ್ಚು ವರ್ಷ ಬದುಕಲು ಮಾಡುತ್ತಿರುವ ವಿಲಕ್ಷಣ ತಂತ್ರಗಳು ಶೀಘ್ರದಲ್ಲೇ ಸೆಲ್ ಫೋನ್​ಗಳಂತೆ ಜನಪ್ರಿಯವಾಗಲಿವೆ ಎಂದು ಹೇಳಿಕೊಂಡಿದ್ದಾನೆ.

news18-kannada
Updated:February 6, 2021, 4:10 PM IST
180 ವರ್ಷಗಳ ಕಾಲ ಬದುಕಲು ಅಮೆರಿಕದ ಈ ಟೆಕ್ ಉದ್ಯಮಿ ಮಾಡುತ್ತಿರುವುದೇನು ಗೊತ್ತಾ?
ಪ್ರಾತಿನಿಧಿಕ ಚಿತ್ರ (Photo: Google)
  • Share this:
ಸಾಯಲು ಬಹುತೇಕ ಮನುಷ್ಯರು ಇಷ್ಟಪಡುವುದಿಲ್ಲ. ನೂರು ವರ್ಷ ಆದ್ರೂ ಬದುಕಿರಬೇಕು ಅಂತ ಹಲವರು ಆಗಾಗ ಹೇಳುತ್ತಲೇ ಇರುತ್ತಾರೆ. ಅದೇ ರೀತಿ ಅಮೆರಿಕದ ಟೆಕ್ ಉದ್ಯಮಿಯೊಬ್ಬರಿಗೆ 180 ವರ್ಷಗಳ ಕಾಲ ಬದುಕುವಾಸೆ. ಈ ಬಗ್ಗೆ ದೃಢ ನಿಶ್ಚಯ ಹೊಂದಿರುವ ಅವರು ವಿಲಕ್ಷಣ ತಂತ್ರಗಳನ್ನು ಅನುಸರಿಸುತ್ತಿದ್ದಾರೆ.

180 ವರ್ಷಗಳ ಕಾಲ ಬದುಕಲು ದೃಢ ನಿಶ್ಚಯ ಹೊಂದಿರುವ ಟೆಕ್ ಉದ್ಯಮಿ, ತಾನು ಹೆಚ್ಚು ವರ್ಷ ಬದುಕಲು ಮಾಡುತ್ತಿರುವ ವಿಲಕ್ಷಣ ತಂತ್ರಗಳು ಶೀಘ್ರದಲ್ಲೇ ಸೆಲ್ ಫೋನ್​ಗಳಂತೆ ಜನಪ್ರಿಯವಾಗಲಿವೆ ಎಂದು ಹೇಳಿಕೊಂಡಿದ್ದಾನೆ. ಬೆಳಗಿನ ಉಪಹಾರ ಬಿಟ್ಟುಬಿಡುವುದರಿಂದ ಹೆಚ್ಚು ವರ್ಷಗಳ ಕಾಲ ಬದುಕಬಹುದೆಂದು ಈತ ದೃಢವಾಗಿ ನಂಬಿದ್ದಾರೆ. ಅಷ್ಟೇ ಅಲ್ಲದೆ, ಕೋಲ್ಡ್ ಕ್ರೈಯೊಥೆರಪಿ ಚೇಂಬರ್ ಮೇಲೆ ಕುಳಿತುಕೊಳ್ಳುವುದು ಮತ್ತು ಮಧ್ಯಂತರ-ಉಪವಾಸ ಸೇರಿದಂತೆ ವಿವಿಧ ತಂತ್ರಗಳನ್ನು ಬಳಸಿಕೊಂಡು ಕನಿಷ್ಠ 2153 ನೇ ಇಸವಿಯವರೆಗೆ ಬದುಕಬಹುದು ಎಂದು ಅಮೆರಿಕದ ಈ ಲೈಫ್​​ಸ್ಟೈಲ್ ಗುರು ಬಯಸಿದ್ದಾರೆ.

47 ವರ್ಷದ ಮಿಲಿಯನೇರ್ ಜೈವಿಕ ಗಡಿಯಾರವನ್ನು ಹಿಂತಿರುಗಿಸುವ ವಿಧಾನಗಳನ್ನು ವಿವರಿಸಲು 'ಬಯೋಹ್ಯಾಕಿಂಗ್' ಎಂಬ ಪದವನ್ನು ರೂಪಿಸಿದರು. ಎಷ್ಟು ಕಾಲ ಸಾಧ್ಯವೋ, ಅಲ್ಲಿಯವರೆಗೆ ಬದುಕುಳಿಯುವ ಪ್ರಯತ್ನದಲ್ಲಿ ಡೇವ್ ತನ್ನ ದೇಹದ ಒಟ್ಟಾರೆ ಕಾರ್ಯನಿರ್ವಹಣೆಯನ್ನು ಸುಧಾರಿಸಲು ಭಿನ್ನತೆಗಳು ಮತ್ತು ತಂತ್ರಗಳಿಗಾಗಿ 1,000,000 ಡಾಲರ್ಸ್​​ಗೂ ಅಧಿಕ ಹಣ ಖರ್ಚು ಮಾಡಿದ್ದಾರೆ. ತನ್ನದೇ ಆದ ಸ್ಟೆಮ್ ಸೆಲ್​ಗಳನ್ನು ಮತ್ತೆ ತನ್ನ ದೇಹಕ್ಕೆ ಇಂಜೆಕ್ಷನ್ ಮಾಡಿಕೊಳ್ಳಲು ಆತನ ಮೂಳೆ ಮಜ್ಜೆಯ ಭಾಗಗಳನ್ನು ತೆಗೆದುಹಾಕಿದ್ದಾನೆ.

ಐಟಿವಿಯ ದಿಸ್ ಮಾರ್ನಿಂಗ್ ಕಾರ್ಯಕ್ರಮದಲ್ಲಿ ಕಾಣಿಸಿಕೊಂಡ ಈತ, ಟಿವಿ ನಿರೂಪಕ ಹಾಲಿ ವಿಲ್ಲೊಗ್ಬಿ ಜತೆ ಮಾತನಾಡಿದ್ದಾನೆ. ಡೇವ್​ಗೆ ಇಷ್ಟು ದಿನ ಏಕೆ ಬದುಕಲು ಬಯಸುತ್ತಾರೆ ಎಂಬ ಹಾಲಿಯ ಪ್ರಶ್ನೆಗೆ ಉತ್ತರಿಸಿದ ಉದ್ಯಮಿ, ''ಕುತೂಹಲಕಾರಿ ವ್ಯಕ್ತಿಯಾದ ನಾನು, ಜಗತ್ತಿನಲ್ಲಿ ಸರಿಪಡಿಸಬೇಕಾಗಿರುವುದು ಮತ್ತು ಸುಧಾರಿಸಬಹುದಾಗಿರುವುದು ಬಹಳಷ್ಟು ಇದೆ ಎಂದು ಭಾವಿಸಿದ್ದೇನೆ'' ಎಂದು ಹೇಳಿದ್ದಾರೆ. ಅಲ್ಲದೆ, ನಾನು ಹೆಚ್ಚು ವರ್ಷ ಬದುಕಲು ಬಯಸಿ ಕೆಲವು ತಂತ್ರಗಳನ್ನು ಪ್ರಯೋಗಿಸುತ್ತಿರುವುದಕ್ಕೆ ಹೆಚ್ಚು ಹಣ ಖರ್ಚಾಗುತ್ತಿದೆ, ಕೆಲವು ವಸ್ತುಗಳು ದುಬಾರಿಯಾಗಿದೆ ಎಂದು ದೃಢಪಡಿಸಿದರು. ಆದರೆ, ಉಪವಾಸದಂತಹ ಹಲವು ಮಾರ್ಗಗಳಿವೆ ಎಂದೂ ಹೇಳಿಕೊಂಡಿದ್ದಾನೆ.

ದೀರ್ಘಾವಧಿಯ ಜೀವನಕ್ಕಾಗಿ ತನ್ನ ವಿಧಾನಗಳನ್ನು ಅನ್ವಯಿಸಿದ ನಂತರ, 40 ವರ್ಷಕ್ಕಿಂತ ಕಡಿಮೆ ವಯಸ್ಸಿನ ಜನರು 100 ವರ್ಷಕ್ಕಿಂತ ಹಿರಿಯ ವಯಸ್ಸಿನ ವ್ಯಕ್ತಿಗಳ ಮೇಲೆ 'ಸಂತೋಷ ಮತ್ತು ಹೆಚ್ಚು ಕ್ರಿಯಾತ್ಮಕ' ರಾಗಿರುತ್ತಾರೆ ಎಂದೂ ಡೇವ್ ಊಹಿಸಿದ್ದಾರೆ. ಇನ್ನು, ತಾನೊಬ್ಬನೇ ಅಲ್ಲ ತನ್ನ ಪತ್ನಿ ಸಹ 180 ವರ್ಷ ಬದುಕಲು ರೇಸ್​​​ನಲ್ಲಿದ್ದಾಳೆ ಎಂದೂ ಹೇಳಿಕೊಂಡಿದ್ದಾನೆ.

ಇತರರಿಗೆ ಹೋಲಿಸಿದರೆ, ಡೇವ್ ಹಲವಾರು ಆ್ಯಂಟಿ ಏಜಿಂಗ್ ಚಿಕಿತ್ಸೆಗಳಲ್ಲದೆ, ತಾನು ತಿನ್ನುವುದರಲ್ಲಿ ಹಾಗೂ ನಿದ್ರೆ ಮಾಡುವುದಕ್ಕೂ ಮಿತಿ ಹಾಕಿಕೊಂಡಿದ್ದಾನೆ. ಈ ಮೂಲಕ ಕಡಿಮೆ ಉರಿಯೂತಕ್ಕೆ ತನ್ನನ್ನು ತಾನು ಹೊಂದಿಸಿಕೊಂಡಿದ್ದಾನೆ. ತನ್ನ ದೇಹದಲ್ಲಿ ತನ್ನದೇ ಆದ ಸ್ಟೆಮ್ ಸೆಲ್​ಗಳನ್ನು ಪುನಃ ಪರಿಚಯಿಸುವ ಪ್ರಯೋಜನಗಳನ್ನು ವಿವರಿಸಿದ ಅವರು, ಜನರು ಚಿಕ್ಕವರಿದ್ದಾಗ ಬೇಗ ಗುಣಮುಖರಾಗುತ್ತಾರೆ. ಆದರೆ, ವಯಸ್ಸಾದಂತೆ, ದೇಹದ ಸ್ಟೆಮ್ ಸೆಲ್​​ಗಳಿಗೆ ದಣಿವಾಗುತ್ತದೆ. ಆದ್ದರಿಂದ ತಾನು ಹೆಚ್ಚು ಸ್ಟೆಮ್ ಸೆಲ್​ಗಳನ್ನು ತನ್ನ ದೇಹಕ್ಕೆ ನೀಡುವ ವಿಧಾನಗಳನ್ನು ಆರಿಸಿಕೊಂಡಿರುವುದಾಗಿ ಹೇಳಿದ್ದಾರೆ.
Youtube Video
ಡೇವ್ ಕ್ರೈಯೊಥೆರಪಿಯನ್ನು ಸಹ ಅನುಸರಿಸುತ್ತಾರೆ. ಇದನ್ನು ಕೋಲ್ಡ್ ಥೆರಪಿ ಎಂದೂ ಕರೆಯುತ್ತಾರೆ. ಇದು ವಿವಿಧ ಅಂಗಾಂಶಗಳ ಗಾಯಗಳಿಗೆ ಚಿಕಿತ್ಸೆ ನೀಡಲು ಕಡಿಮೆ ತಾಪಮಾನವನ್ನು ಬಳಸುವುದನ್ನು ಒಳಗೊಂಡಿರುತ್ತದೆ. ತಾನು ಹತ್ತು ವರ್ಷಗಳಿಗಿಂತ ಹೆಚ್ಚು ಕಾಲ ತಣ್ಣೀರಿನ ಸ್ನಾನ ಮಾಡುತ್ತಿರುವುದಾಗಿಯೂ ಹೇಳಿಕೊಂಡಿದ್ದಾರೆ. ಅಲ್ಲದೆ, ದೀರ್ಘಕಾಲ ಜೀವನ ನಡೆಸಲು ಡೇವ್ ಮತ್ತೊಂದು ತಂತ್ರವನ್ನು ಬಳಸುತ್ತಾನೆ. ಅದು ಮಧ್ಯಂತರ ಉಪವಾಸ, ಅಂದರೆ ಒಂದು ನಿರ್ದಿಷ್ಟ ಅವಧಿಯ ಕಾಲ ಉಪವಾಸದ ಅವಧಿಗಳನ್ನು ರಚಿಸಿಕೊಳ್ಳುವುದು. ದಿನಕ್ಕೆ ಎಷ್ಟು ಬಾರಿ ಊಟ ಮಾಡುತ್ತಾರೆ ಎಂಬುದನ್ನು ನಿಯಂತ್ರಿಸಿಕೊಳ್ಳುವುದು ಇದರಲ್ಲಿ ಒಳಗೊಂಡಿರುತ್ತದೆ. ಡೇವ್ ಪ್ರಕಾರ, ಇದು ರೋಗವನ್ನು ತಡೆಗಟ್ಟಲು ಸಹಾಯ ಮಾಡುತ್ತದೆ. ಏಕೆಂದರೆ ಉಪವಾಸದ ಅವಧಿಗಳು ಆಹಾರವನ್ನು ಜೀರ್ಣಿಸಿಕೊಳ್ಳದೆ ತನ್ನ ದೇಹವನ್ನು 'ಸ್ವತಃ ಸರಿಪಡಿಸಲು' ಅನುಮತಿಸುತ್ತದೆ.
Published by: Harshith AS
First published: February 6, 2021, 4:10 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories