ನಿಜಾಮ್​​ ಮ್ಯೂಸಿಯಂನಿಂದ ಕಳುವಾಗಿದ್ದ ಚಿನ್ನದ ಊಟದ ಡಬ್ಬಿ ಸೇರಿದಂತೆ ಅಪಾರ ಬಂಗಾರಗಳು ಪತ್ತೆ

news18
Updated:September 11, 2018, 6:03 PM IST
ನಿಜಾಮ್​​ ಮ್ಯೂಸಿಯಂನಿಂದ ಕಳುವಾಗಿದ್ದ ಚಿನ್ನದ ಊಟದ ಡಬ್ಬಿ ಸೇರಿದಂತೆ ಅಪಾರ ಬಂಗಾರಗಳು ಪತ್ತೆ
news18
Updated: September 11, 2018, 6:03 PM IST
-ನ್ಯೂಸ್​ 18 ಕನ್ನಡ

ಹೈದರಾಬಾದ್​(ಸೆ. 11): ಕಳೆದ ವಾರ ಹೈದರಾಬಾದ್​ನ ನಿಜಾಮ್​​ ಮ್ಯೂಸಿಯಂನಿಂದ ಕಳುವಾಗಿದ್ದ ಕೋಟ್ಯಂತರ ರೂ.ಬೆಲೆಬಾಳುವ ಚಿನ್ನದ ಊಟದ ಡಬ್ಬಿ ಸೇರಿದಂತೆ ಪುರಾತನ ವಸ್ತುಗಳು ಮಂಗಳವಾರ ಪತ್ತೆಯಾಗಿವೆ.

ಮ್ಯೂಸಿಯಂಗೆ ನುಗ್ಗಿದ ಕಳ್ಳರು, ಚಿನ್ನದ  ಊಟದ ಡಬ್ಬಿ​ ಜೊತೆಗೆ ವಜ್ರ, ಮಾಣಿಕ್ಯ, ಪಚ್ಚೆ ತುಂಬಿದ ಕಪ್​​ ಹಾಗೂ 7 ನೇ ನಿಜಾಮನಿಗೆ ಸೇರಿದ ತಟ್ಟೆ (ಸಾಸರ್)​ ಮತ್ತು ಚಮಚವನ್ನು ಕದ್ದು ಮುಂಬೈಗೆ ಪಲಾಯನ ಮಾಡಿದ್ದಾರೆ. ಬಂಧನಕ್ಕೂ ಮುನ್ನ ಆರೋಪಿಗಳು ಐಷಾರಾಮಿ ಹೋಟೆಲ್​ನಲ್ಲಿ ಇದ್ದರು ಎನ್ನಲಾಗಿದೆ.

ಈ ಪ್ರಕರಣದ ತನಿಖೆಗಾಗಿ ವಿಶೇಷ ಪೊಲೀಸ್​ ತಂಡಗಳನ್ನು ರಚಿಸಲಾಗಿತ್ತು. ಕದ್ದ ನಿಜಾಮ್​ನ ಚಿನ್ನದ  ಊಟದ ಡಬ್ಬಿಯನ್ನು (ತಿಂಡಿಯ ಡಬ್ಬಿ) ಕಳ್ಳನೋರ್ವ ಪ್ರತಿದಿನ ಊಟ ಇಡಲು ಬಳಸುತ್ತಿದ್ದ ಎನ್ನಲಾಗಿದೆ. ಇದೀಗ ಕಳುವಾಗಿದ್ದ ಎಲ್ಲಾ ವಸ್ತುಗಳು ಪೊಲೀಸರ ವಶವಾಗಿವೆ.

ಸೆ.02 ರಂದು ಪುರನಿ ಹವೇಲಿಯ ಮ್ಯೂಸಿಯಂನ ಮೂರನೆಯ ಗ್ಯಾಲರಿಯಿಂದ ಈ ಬೆಲೆಬಾಳುವ ಪ್ರಾಚೀನ ವಸ್ತುಗಳು ಕಾಣೆಯಾಗಿದ್ದವು. ಪ್ರಕರಣವನ್ನು ಬೇಧಿಸಲು 15 ವಿಶೇಷ ತಂಡಗಳನ್ನು ರಚಿಸಲಾಗಿತ್ತು. ಇದೀಗ ಕಳುವಾಗಿದ್ದ ಎಲ್ಲಾ ವಸ್ತುಗಳನ್ನು ಮರುಪಡೆಯಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಮುಸುಕುಧಾರಿಗಳಿಬ್ಬರು ಮ್ಯೂಸಿಯಂನಿಂದ ಹೊರಬಂದು ಬೈಕ್​ನಲ್ಲಿ ಹೋಗುವ ದೃಶ್ಯ ಸಿಸಿಟಿವಿ ದೃಶ್ಯಾವಳಿಯಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚಾಗಿ ವೈರಲ್​ ಆಗಿತ್ತು. ಈ ಪ್ರಕರಣಲ್ಲಿ ಇಬ್ಬರು ವ್ಯಕ್ತಿಗಳ ಕೈವಾಡವಿದೆ ಎಂದು ಪೊಲೀಸರು ಸಂಶಯ ವ್ಯಕ್ತಪಡಿಸಿದ್ದಾರೆ.

ಹೈದರಾಬಾದ್​ನ 7 ನೇ ನಿಜಾಮ್​ನ ಮೊಮ್ಮಗ ಮತ್ತು ನಿಜಾಮ್ ಕುಟುಂಬ ಕಲ್ಯಾಣ ಸಂಸ್ಥೆಯ ಅಧ್ಯಕ್ಷ ನವಾಬ್​ ನಜಾಫ್​ ಅಲಿ ಖಾನ್​ ಕಳೆದ ವಾರ ಹೈದರಾಬಾದ್​ ಪೊಲೀಸ್​ ಕಮೀಷನರ್​ ಅಂಜನಿ ಕುಮಾರ್​​ ಅವರಿಗೆ ಪತ್ರ ಬರೆದು, ಬೆಲೆಬಾಳುವ ಅತಿಮುಖ್ಯವಾದ ಐತಿಹಾಸಿಕ ವಸ್ತುಗಳನ್ನು ಮರುಪಡೆಯಬೇಕು ಹಾಗೂ ಅದಕ್ಕೆ ಹೆಚ್ಚಿನ ಆದ್ಯತೆ ನೀಡಬೇಕೆಂದು ಮನವಿ ಮಾಡಿದ್ದರು.

ಅಷ್ಟೇ ಅಲ್ಲದೇ ಮ್ಯೂಸಿಯಂನ ಭದ್ರತಾ ವ್ಯವಸ್ಥೆ ಬಗ್ಗೆಯೂ ಪ್ರಶ್ನೆ ಮಾಡಿದ್ದರು. ಈ ಮ್ಯೂಸಿಯಂನ್ನು ನಿರ್ವಹಣೆ ಮಾಡುವವರ ನಿರ್ಲಕ್ಷ್ಯದಿಂದ ಮತ್ತು ಕಳಪೆ ಭದ್ರತಾ ವ್ಯವಸ್ಥೆಗಳಿಂದಲೇ ಕಳ್ಳರು ಬಹಳ ಸುಲಭವಾಗಿ ಒಳನುಗ್ಗಿ ಕಳ್ಳತನ ಮಾಡಿದ್ದಾರೆ ಎಂದು ಆರೋಪ ಮಾಡಿದ್ದರು.

7 ನೇ ನವಾಬ್​ ಮಿರ್​ ಒಸ್ಮಾನ್​ ಅಲಿ ಖಾನ್​ ಬಹದೂರ್ ನಿಜಾಮ್​ ಅವರಿಗೆ  ಸೇರಿದ ಅಮೂಲ್ಯವಾದ ವಸ್ತುಗಳು ಈ ಮ್ಯೂಸಿಯಂನಲ್ಲಿವೆ. ಸ್ಮಾರಕಗಳು, ರಾಜರು ನೀಡಿದ ಉಡುಗೊರೆಗಳು, ಗೌರವಾನ್ವಿತರು ಅರ್ಪಿಸಿದ ಬೆಲೆಕಟ್ಟಲಾಗದ ಅನೇಕ ವಸ್ತುಗಳು ಈ ಮ್ಯೂಸಿಯಂನಲ್ಲಿವೆ ಎಂದು ಹೇಳಿದರು.

ಏಳನೇ ನಿಜಾಮನಿಗೆ ಸಂಬಂಧಿಸಿದ ಅನೇಕ ವೈಯಕ್ತಿಕ ವಸ್ತುಗಳ ಸಂಗ್ರಹ ಈ ಮ್ಯೂಸಿಯಂನಲ್ಲಿದ್ದು, ಅವುಗಳನ್ನು ವಜ್ರ,ಚಿನ್ನ, ಬೆಳ್ಳಿ ಮತ್ತು ಪಚ್ಚೆಯಿಂದ ಕೆತ್ತಲಾಗಿದೆ. 
First published:September 11, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...