ಪುಣೆಯ ಪಿಂಪ್ರಿ ಚಿಂಚವಾಡ್​ನ ಮೇಯರ್ ಆದ ಆಟೋ ಚಾಲಕ!


Updated:August 5, 2018, 5:08 PM IST
ಪುಣೆಯ ಪಿಂಪ್ರಿ ಚಿಂಚವಾಡ್​ನ ಮೇಯರ್ ಆದ ಆಟೋ ಚಾಲಕ!

Updated: August 5, 2018, 5:08 PM IST
ನ್ಯೂಸ್ 18 ಕನ್ನಡ


ಪುಣೆ (ಆ.5): ಹಲವು ವರ್ಷಗಳ ಕಾಲ ಆಟೋ ರಿಕ್ಷಾ ಓಡಿಸಿಕೊಂಡೇ ಜೀವನ ಸಾಗಿಸುತ್ತಿದ್ದ ವ್ಯಕ್ತಿ ಇದೀಗ ಪುಣೆ ಜಿಲ್ಲೆಯ ಪಿಂಪ್ರಿ ಚಿಂಚವಾಡ್ ಪಟ್ಟಣದ ಮೇಯರ್ ಆಗಿ ಆಯ್ಕೆಯಾಗಿದ್ದಾರೆ.36 ವರ್ಷದ ರಾಹುಲ್ ಜಾಧವ್ ಎಂಬುವವರೇ ಪಿಂಪ್ರಿ ಚಿಂಚವಾಡ್ನ ಮುನ್ಸಿಪಲ್ ಕಾರ್ಪೋರೇಷನ್ ಮೇಯರ್ ಆಗಿ ಆಯ್ಕೆಯಾದವರು. 128 ಸದಸ್ಯರಿರುವ ಪಿಂಪ್ರಿ ಚಿಂಚವಾಡ್ ಪುರಸಭೆ ಬಿಜೆಪಿ ಅಧಿಕಾರದಲ್ಲಿದೆ. ಬಡ ರೈತ ಕುಟುಂಬದಲ್ಲಿ ಹುಟ್ಟಿದ ಜಾಧವ್ ಎಸ್ಎಸ್ಎಲ್ಸಿವರೆಗೆ ಮಾತ್ರ ಶಿಕ್ಷಣ ಪಡೆದು, ಜೀವನ ನಿರ್ವಹಣೆಗಾಗಿ 1996 ರಿಂದ ಆರು ಚಕ್ರದ ಆಟೋ ರಿಕ್ಷಾ ಓಡಿಸಲು ಆರಂಭಿಸಿದರು. 2003ರಲ್ಲಿ ಆರು ಚಕ್ರದ ಆಟೋ ರಿಕ್ಷಾವನ್ನು ನಿಷೇಧಿಸಿದ ನಂತರ ಕೃಷಿಯತ್ತ ಜಾಧವ್ ಮುಖ ಮಾಡಿದರು.


ನಂತರದಲ್ಲಿ ಮತ್ತೆ ಖಾಸಗಿ ವಾಹನದ ಚಾಲಕರಾಗಿ ಕೆಲಸಕ್ಕೆ ಸೇರಿಕೊಂಡರು. 2006ರಲ್ಲಿ ರಾಜಕೀಯಕ್ಕೆ ಪ್ರವೇಶ ಪಡೆದ ಜಾಧವ್ 2007ರಲ್ಲಿ ರಾಜ್ ಠಾಕ್ರೆ ನೇತೃತ್ವದ ಮಹಾರಾಷ್ಟ್ರ ನವನಿರ್ಮಾಣ ಸೇನಾ (ಎಂಎನ್ಎಸ್) ಸೇರಿಕೊಂಡರು.

Loading...


"2012ರಲ್ಲಿ ಎಂಎನ್ಎಸ್ನಿಂದ ಟಿಕೆಟ್ ಪಡೆದು ಮೊದಲ ಬಾರಿಗೆ ಕಾರ್ಪೋರೆಟರ್ ಆದೆ. ಆನಂತರ 2017ರಲ್ಲಿ ಬಿಜೆಪಿ ಸೇರ್ಪಡೆಗೊಂಡು ಎರಡನೇ ಬಾರಿಗೆ ಕಾರ್ಪೋರೆಟರ್ ಆಗಿ ಆಯ್ಕೆಯಾಗಿದ್ದೇನೆ," ಎಂದು ಜಾಧವ್ ಪಿಟಿಐ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.


ಮೇಯರ್ ಸ್ಥಾನಕ್ಕೆ ನಿತಿನ್ ಕಲ್ಜಿ ಅವರು ರಾಜೀನಾಮೆ ನೀಡಿದ್ದರಿಂದ ತೆರವಾಗಿದ್ದ ಸ್ಥಾನಕ್ಕೆ ಬಿಜೆಪಿ ಜಾಧವ್ ಅವರ ಹೆಸರನ್ನು ಸೂಚಿಸಿತ್ತು. ಮೇಯರ್ ಸ್ಥಾನಕ್ಕೆ ಎನ್ಸಿಪಿ ಕೂಡ ಅಭ್ಯರ್ಥಿಯನ್ನು ಕಣಕ್ಕಿಳಿಸಿತ್ತು. ಶನಿವಾರ ನಡೆದ ಚುನಾವಣೆಯಲ್ಲಿ ಚಲಾವಣೆಯಾದ 120 ಮತಗಳಲ್ಲಿ ಜಾಧವ್ 81 ಮತಗಳನ್ನು ಪಡೆಯುವ ಮೂಲಕ ನಿರಾಯಾಸವಾಗಿ ಮೇಯರ್ ಆಗಿ ಚುನಾಯಿತರಾದರು. ಎಂಟು ಮಂದಿ ಕಾರ್ಪೋರೆಟರ್ಗಳು ಚುನಾವಣೆಗೆ ಗೈರು ಹಾಜರಾಗಿದ್ದರು.


"ನಾನೊಬ್ಬ ಆಟೋ ರಕ್ಷಾ ಚಾಲಕನಾಗಿ ಸಾಕಷ್ಟು ನೋವುಗಳನ್ನು ಅನುಭವಿಸಿದ್ದೇನೆ. ಜನಗಳ ಕಷ್ಟ ಏನು ಎಂಬುದು ನನಗೆ ಚೆನ್ನಾಗಿ ಗೊತ್ತು, ಮೇಯರ್ ಆಗಿ ನನ್ನ ಮೊದಲ ಆದ್ಯತೆ ಸಾಮಾನ್ಯ ಜನರ ಶ್ರೇಯೋಭಿವೃದ್ಧಿಗಾಗಿ ಕೆಲಸ ಮಾಡುವುದು ಮತ್ತು ಕೈಗಾರಿಕಾ ಪ್ರದೇಶದ ಅಭಿವೃದ್ಧಿ ಯೋಜನೆಗಳನ್ನು ಪೂರ್ಣಗೊಳಿಸುವುದು," ಎಂದು ಹೇಳಿದ್ದಾರೆ.
First published:August 5, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...