ಜೈಲಿಂದ ಪರಾರಿಯಾದವನಿಂದ ಅತ್ಯಾಚಾರ, ಕೊಲೆ; ನಾಪತ್ತೆಯಾಗಿದ್ದ ಯುವತಿ ದೇಹ ಕೊಳೆತ ಸ್ಥಿತಿಯಲ್ಲಿ ಪತ್ತೆ

ಡಿ. 5ರಂದು ಯುವತಿ ನಾಪತ್ತೆಯಾಗಿದ್ದಾಳೆ ಎಂದು ದೂರು ದಾಖಲಾಗಿತ್ತು. ಅದಾಗಿ 1 ವಾರದ ಬಳಿಕ ಕೊಳೆತ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿತ್ತು. ಯುವತಿಯ ಹುಟ್ಟಿದ ಊರಿನಿಂದ 90 ಕಿ.ಮೀ. ದೂರದ ನಿರ್ಜನ್ ಪ್ರದೇಶದಲ್ಲಿ ಆಕೆಯ ಶವ ಪತ್ತೆಯಾಗಿತ್ತು.

Sushma Chakre | news18-kannada
Updated:December 19, 2019, 8:21 AM IST
ಜೈಲಿಂದ ಪರಾರಿಯಾದವನಿಂದ ಅತ್ಯಾಚಾರ, ಕೊಲೆ; ನಾಪತ್ತೆಯಾಗಿದ್ದ ಯುವತಿ ದೇಹ ಕೊಳೆತ ಸ್ಥಿತಿಯಲ್ಲಿ ಪತ್ತೆ
ಸಾಂದರ್ಭಿಕ ಚಿತ್ರ
  • Share this:
ಹೈದರಾಬಾದ್ (ಡಿ. 19): ತೆಲಂಗಾಣದ ಮೇದಕ್ ಜಿಲ್ಲೆಯಲ್ಲಿ ಡಿ. 5ರಂದು ನಾಪತ್ತೆಯಾಗಿದ್ದ ಯುವತಿಯೊಬ್ಬಳ ಶವ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ. ಆಕೆಯ ಮೇಲೆ ಅತ್ಯಾಚಾರ ನಡೆಸಿ, ಕೊಲೆ ಮಾಡಲಾಗಿದ್ದು, ಈ ಕೃತ್ಯ ಎಸಗಿದಾತ ಕೆಲವು ದಿನಗಳ ಹಿಂದಷ್ಟೇ ಜೈಲಿನಿಂದ ಪರಾರಿಯಾಗಿದ್ದ ಎಂಬ ವಿಷಯ ಬೆಳಕಿಗೆ ಬಂದಿದೆ.

ರಾಮಾಯಮ್​ಪೇಟೆಯಲ್ಲಿ ಯುವತಿಯ ಮೃತದೇಹ ಪತ್ತೆಯಾಗಿದೆ. ಡಿ. 5ರಂದು ತಮ್ಮ 29 ವರ್ಷದ ಮಗಳು ನಾಪತ್ತೆಯಾಗಿದ್ದಾಳೆ ಎಂದು ಆಕೆಯ ಪೊಲೀಸರು ದೂರು ನೀಡಿದ್ದರು. ಮೃತಳ ಗಂಡನನ್ನು ಜೈಲಿನಲ್ಲಿ ಭೇಟಿಯಾಗಿದ್ದ ಆರೋಪಿ ತಾನು ಜೈಲಿನಿಂದ ತಪ್ಪಿಸಿಕೊಂಡು ಬಂದ ನಂತರ ಆತನನ್ನು ಸಂಪರ್ಕಿಸಲು ಪ್ರಯತ್ನಿಸಿದ್ದ. ಇದಕ್ಕಾಗಿ ಆತನ ಮೊಬೈಲ್ ನಂಬರ್​ಗೆ ಫೋನ್ ಮಾಡಿದಾಗ ಆತನ ಹೆಂಡತಿ ಫೋನ್ ರಿಸೀವ್ ಮಾಡಿದ್ದರು. ಆಕೆಯೊಂದಿಗೆ ಆರೋಪಿ ಸ್ನೇಹ ಸಂಪಾದಿಸಿಕೊಂಡಿದ್ದ.

ತಾನು ಬಚ್ಚಿಟ್ಟಿರುವ ಹಣ, ಚಿನ್ನವನ್ನು ತೋರಿಸುವುದಾಗಿ ಆಕೆಯನ್ನು ನಿರ್ಜನ ಪ್ರದೇಶಕ್ಕೆ ಕರೆದೊಯ್ದ ಆರೋಪಿ ಆಕೆಯ ಮೇಲೆ ಅತ್ಯಾಚಾರ ನಡೆಸಿದ್ದ. ನಂತರ ಈ ವಿಷಯವನ್ನು ಆಕೆಯ ಗಂಡನಿಗೆ ಹೇಳಿದರೆ ತಾನು ಇಲ್ಲಿರುವ ವಿಚಾರ ಪೊಲೀಸರಿಗೆ ತಿಳಿಯುತ್ತದೆ ಎಂಬ ಭಯದಿಂದ ಆಕೆಯನ್ನು ಕೊಲೆ ಮಾಡಿದ್ದ. ನಂತರ ಹೊರವಲಯದಲ್ಲಿ ಆಕೆಯ ಮೃತದೇಹವನ್ನು ಬಿಸಾಡಿದ್ದ.

ನಿರ್ಭಯಾ ಅತ್ಯಾಚಾರ ಪ್ರಕರಣ: ಅಪರಾಧಿ ಸಲ್ಲಿಸಿದ್ದ ಮೇಲ್ಮನವಿ ಅರ್ಜಿ ವಜಾ, ಗಲ್ಲು ಶಿಕ್ಷೆಯನ್ನು ಎತ್ತಿ ಹಿಡಿದ ಸುಪ್ರೀಂಕೋರ್ಟ್​

ಡಿ. 5ರಂದು ಯುವತಿ ನಾಪತ್ತೆಯಾಗಿದ್ದಾಳೆ ಎಂದು ದೂರು ದಾಖಲಾಗಿತ್ತು. ಅದಾಗಿ 1 ವಾರದ ಬಳಿಕ ಕೊಳೆತ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿತ್ತು. ಯುವತಿಯ ಹುಟ್ಟಿದ ಊರಿನಿಂದ 90 ಕಿ.ಮೀ. ದೂರದ ನಿರ್ಜನ ಪ್ರದೇಶದಲ್ಲಿ ಆಕೆಯ ಶವ ಪತ್ತೆಯಾಗಿತ್ತು. ಆ ಏರಿಯಾದಲ್ಲಿರುವ ಸಿಸಿಟಿವಿ ದೃಶ್ಯಾವಳಿ ಮೂಲಕ ಆರೋಪಿಯೊಂದಿಗೆ ಆ ಯುವತಿ ಹೋಗಿದ್ದು ಪತ್ತೆಯಾಗಿತ್ತು. ಕೊಲೆಯಾದ ಮಾರನೇ ದಿನ ಮೃತ ಯುವತಿಯ ಬೈಕ್​ನಲ್ಲಿ ಆರೋಪಿ ಓಡಾಡುತ್ತಿದ್ದುದು ಕೂಡ ದಾಖಲಾಗಿತ್ತು. ನಂತರ ಫೋನ್ ಕರೆಗಳನ್ನು ಪರಿಶೀಲಿಸಿದಾಗ ಅಸಲಿ ವಿಷಯ ಬಯಲಾಗಿತ್ತು. ಆ ಆರೋಪಿಯನ್ನು ಇನ್ನೆರಡು ಕೊಲೆ ಪ್ರಕರಣದಲ್ಲಿ ಬಂಧಿಸಲಾಗಿತ್ತು. ಆದರೆ, ಕೆಲವು ದಿನಗಳ ಹಿಂದೆ ಆತ ಜೈಲಿನಿಂದ ಪರಾರಿಯಾಗಿದ್ದ.

(ವರದಿ: ರಿಷಿಕಾ ಸದಂ)
First published:December 19, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ