• Home
  • »
  • News
  • »
  • national-international
  • »
  • New Delhi: ದೆಹಲಿಯ ಲೀಲಾ ಪ್ಯಾಲೇಸ್‌ಗೆ 23 ಲಕ್ಷ ವಂಚಿಸಿದ್ದವ ಅಂದರ್, ಅಬುಧಾಬಿ ರಾಜಮನೆತನದ ಅಧಿಕಾರಿ ಎಂದಿದ್ದವ ಪುತ್ತೂರಲ್ಲಿ ಅರೆಸ್ಟ್!

New Delhi: ದೆಹಲಿಯ ಲೀಲಾ ಪ್ಯಾಲೇಸ್‌ಗೆ 23 ಲಕ್ಷ ವಂಚಿಸಿದ್ದವ ಅಂದರ್, ಅಬುಧಾಬಿ ರಾಜಮನೆತನದ ಅಧಿಕಾರಿ ಎಂದಿದ್ದವ ಪುತ್ತೂರಲ್ಲಿ ಅರೆಸ್ಟ್!

ಲೀಲಾ ಪ್ಯಾಲೇಸ್

ಲೀಲಾ ಪ್ಯಾಲೇಸ್

ಆಗಸ್ಟ್‌ 1ರಂದು ಹೋಟೆಲ್‌ನ 427 ರೂಮ್‌ಗೆ ಚೆಕ್‌ ಇನ್‌ ಆಗಿದ್ದ ಆತ ನವೆಂಬರ್‌ 20ರವರೆಗೆ ತಂಗಿದ್ದ. ಕೊನೆಗೆ ಎಲ್ಲಾ ಐಷಾರಾಮಿ ಸವಲತ್ತುಗಳ ಮಜಾ ಉಡಾಯಿಸಿ ಬಿಲ್‌ ಕಟ್ಟದೇ ಪರಾರಿಯಾಗಿದ್ದಾನೆ. ಆರೋಪಿ ಕಾಣೆಯಾದ ಹಿನ್ನೆಲೆ ಹೋಟೆಲ್‌ ಮ್ಯಾನೇಜರ್‌ ಅನುಪಮ್‌ ದಾಸ್‌ ಗುಪ್ತಾ ಅವರು ಜ. 14ರಂದು ಆರೋಪಿ ವಿರುದ್ಧ ದಿಲ್ಲಿಯ ಸರೋಜಿನಿ ನಗರ ಠಾಣೆಯಲ್ಲಿ ದೂರು ದಾಖಲಿಸಿದ್ದರು.

ಮುಂದೆ ಓದಿ ...
  • Share this:

ನವದೆಹಲಿ: ತಾನು ಅಬುಧಾಬಿಯ ರಾಜಮನೆತನದ ಅಧಿಕಾರಿ ಎಂದು ಹೇಳಿಕೊಂಡು  ದೆಹಲಿಯ (New Delhi) ಲೀಲಾ ಪ್ಯಾಲೇಸ್ ಹೋಟೆಲ್​ಗೆ (Leela Palace Hotel) ಲಕ್ಷಗಟ್ಟಲೆ ಹಣ ವಂಚಿಸಿದ್ದ ವ್ಯಕ್ತಿಯನ್ನು ದೆಹಲಿ ಪೊಲೀಸರು ಮಂಗಳೂರಿನ ಪೂತ್ತೂರಿನಲ್ಲಿ  (Mangaluru) ಬಂಧಿಸಿದ್ದಾರೆ. ಆರೋಪಿಯನ್ನು 41 ವರ್ಷದ ಮೊಹಮ್ಮದ್​​ ಷರೀಫ್ ಎಂದು ಗುರುತಿಸಲಾಗಿದೆ. ಮೊಹಮ್ಮದ್​ ಷರೀಫ್​ ಕಳೆದ ವರ್ಷ ಮೂರು ತಿಂಗಳು ಪಂಚತಾರಾ ಹೋಟೆಲ್​ನಲ್ಲಿ (Panchatara Hotel) ತಂಗಿದ್ದು, ತಾನು ಅಬುಧಾಬಿಯ ರಾಜಮನೆತನದ ಸದಸ್ಯ ಶೇಖ್​ ಫಲಾಹ್​ ಬಿನ್ ಜಾಯೆದ್​ ಅಲ್​ ನಹ್ಯಾನ್ (Sheikh Hamdan bin Zayed bin Sultan Al Nahyan) ಅವರ  ಉದ್ಯೋಗಿಯಂತೆ ನಟಿಸಿ ಬಿಲ್ ಪಾವತಿಸದೇ ಎಸ್ಕೇಪ್ ಆಗಿದ್ದನು. ಅಷ್ಟೇ ಅಲ್ಲದೇ ಹೋಟೆಲ್ ರೂಮ್​ನಲ್ಲಿದ್ದ ಬೆಳ್ಳಿ ಹಾಗೂ ಇತರೆ ವಸ್ತುಗಳನ್ನು ಕಳ್ಳತನ ಮಾಡಿದ್ದಾರೆ ಎಂದು ಹೋಟೆಲ್ ಆಡಳಿತ ಮಂಡಳಿ ಆರೋಪಿಸಿದೆ.


ಒಟ್ಟು 35 ಲಕ್ಷ ರೂ. ಹೋಟೆಲ್‌ ಬಿಲ್‌ ಮಾಡಿದ್ದ ಆರೋಪಿ


ಒಟ್ಟು 35 ಲಕ್ಷ ರೂ. ಹೋಟೆಲ್‌ ಬಿಲ್‌ ಮಾಡಿದ್ದನು. ಆದರೆ, ಷರೀಫ್‌ ಕೇವಲ 11.5 ಲಕ್ಷ ರೂ. ಅಷ್ಟೇ ಪಾವತಿಸಿದ್ದ. ಹೋಟೆಲ್​ ಕೊಠಡಿಯಲ್ಲಿದ್ದ ತಂಗಿದ್ದ ಆತ 23,46,413 ರೂ. ಬಾಕಿಯನ್ನು ಉಳಿಸಿದ್ದಾನೆ ಎಂದು ಪೊಲೀಸ್​ ಠಾಣೆಯಲ್ಲಿ ದೂರು ದಾಖಲಿಸಿದೆ.


ಲೀಲಾ ಪ್ಯಾಲೇಸ್


ಆರೋಪಿ ವಿರುದ್ಧ ಅನುಪಮ್‌ ದಾಸ್‌ ಗುಪ್ತಾ ದೂರು


ಆಗಸ್ಟ್‌ 1ರಂದು ಹೋಟೆಲ್‌ನ 427 ರೂಮ್‌ಗೆ ಚೆಕ್‌ ಇನ್‌ ಆಗಿದ್ದ ಆತ ನವೆಂಬರ್‌ 20ರವರೆಗೆ ತಂಗಿದ್ದ. ಕೊನೆಗೆ ಎಲ್ಲಾ ಐಷಾರಾಮಿ ಸವಲತ್ತುಗಳ ಮಜಾ ಉಡಾಯಿಸಿ ಬಿಲ್‌ ಕಟ್ಟದೇ ಪರಾರಿಯಾಗಿದ್ದಾನೆ. ಆರೋಪಿ ಕಾಣೆಯಾದ ಹಿನ್ನೆಲೆ ಹೋಟೆಲ್‌ ಮ್ಯಾನೇಜರ್‌ ಅನುಪಮ್‌ ದಾಸ್‌ ಗುಪ್ತಾ ಅವರು ಜ. 14ರಂದು ಆರೋಪಿ ವಿರುದ್ಧ ದಿಲ್ಲಿಯ ಸರೋಜಿನಿ ನಗರ ಠಾಣೆಯಲ್ಲಿ ದೂರು ದಾಖಲಿಸಿದ್ದರು.


ಲೀಲಾ ಪ್ಯಾಲೇಸ್


ಐಪಿಸಿ ಸೆಕ್ಷನ್‌ 419, 420, 380ರ ಅಡಿ ಪೊಲೀಸರು ಪ್ರಕರಣ ದಾಖಲಿಸಿದ್ದರು. ಮೊಹಮ್ಮದ್‌ ಷರೀಫ್‌ ನೀಡಿರುವ ಬ್ಯುಸಿನೆಸ್‌ ಕಾರ್ಡ್‌, ಯುಎಇ ನಿವಾಸದ ಚೀಟಿ ಸೇರಿದಂತೆ ಇತರ ದಾಖಲೆ ಪತ್ರಗಳು ನಕಲಿಯಾಗಿರುವ ಸಾಧ್ಯತೆಗಳಿದ್ದು, ಆ ಕುರಿತು ತನಿಖೆ ನಡೆಸಲಾಗುತ್ತಿದೆ ಎಂದು ಈ ವೇಳೆ ಪೊಲೀಸರು ಹೇಳಿದ್ದರು.


ಪಂಚತಾರಾ ಹೋಟೆಲ್​ನಲ್ಲಿ 6-8 ತಿಂಗಳಿಂದ ತಂಗಿದ್ದ ಆರೋಪಿ


ಆರೋಪಿ ಆರೀಫ್ ಕರ್ನಾಟಕದಲ್ಲಿ ಹಣಕಾಸು ಮತ್ತು ವ್ಯವಹಾರ ನಿರ್ವಹಣೆಯಲ್ಲಿ ಎಂಬಿಎ ಮಾಡಿದ್ದ. 10 ವರ್ಷಗಳ ಕಾಲ ದುಬೈನಲ್ಲಿ ಉಳಿದುಕೊಂಡು ವಿವಿಧ ಕಂಪನಿಗಳಲ್ಲಿ ಕೆಲಸ ಮಾಡಿದ್ದ. ಆದರೆ ಇಂದಿಗೂ ಮದುವೆಯಾಗಿಲ್ಲ. ನಂತರ 2020ರಲ್ಲಿ ಭಾರತಕ್ಕೆ ಆಗಮಿಸಿದ ಆತ ಪೂತ್ತಿರಿನಲ್ಲಿರದೇ ಪಂಚತಾರಾ ಹೋಟೆಲ್​ನಲ್ಲಿ 6-8 ತಿಂಗಳಿಂದ ತಂಗಿದ್ದ.


ಲೀಲಾ ಪ್ಯಾಲೇಸ್


ಈ ಹಿಂದೆ ವಿದೇಶದಲ್ಲಿ ಕೆಲಸ ಕೊಡಿಸುವ ನೆಪದಲ್ಲಿ ವ್ಯಕ್ತಿಗೆ ವಂಚನೆ


ಈ ಹಿಂದೆ ವ್ಯಕ್ತಿಯೊಬ್ಬರಿಗೆ ವಿದೇಶದಲ್ಲಿ ಕೆಲಸ ಕೊಡಿಸುವ ಆಮಿಷ ಲಕ್ಷಾಂತರ ರೂಪಾಯಿ ವಂಚನೆ ಮಾಡಿರುವ ಘಟನೆ ಕಾಫಿನಾಡು ಚಿಕ್ಕಮಗಳೂರು ಜಿಲ್ಲೆಯಲ್ಲಿ ನಡೆದಿತ್ತು. ವಿದೇಶದಲ್ಲಿ ಉದ್ಯೋಗದ ಅನ್‌ಲೈನ್‌ ಅಮಿಷಕ್ಕೆವೊಬ್ಬರು ಮರುಳಾಗಿ 90ಸಾವಿರ ಹಣ ಪಾವತಿಸಿ ಮೋಸ ಹೋಗಿದ್ದಾರೆ.


ಇದನ್ನೂ ಓದಿ: Money Fraud: ಹಣ ಡಬಲ್‌ ಮಾಡ್ತೀವಿ ಎಂದು 800 ಕೋಟಿ ವಂಚನೆ!
ಚಿಕ್ಕಮಗಳೂರು ಜಿಲ್ಲೆಯ ಕಳಸ ತಾಲ್ಲೂಕಿನ ಚನ್ನಹಡ್ಲು ಗ್ರಾಮದ ಎಸ್‌.ಕಾರ್ತಿಕ್ ಅವರು ಮೋಸ ಹೋಗಿದ್ದು, ಜಿಲ್ಲಾ ಸೈಬರ್, ಅರ್ಥಿಕ ಮತ್ತು ಮಾದಕ ಠಾಣೆಗೆ ದೂರು ನೀಡಿದ್ದಾರೆ. ವಿದೇಶದಲ್ಲಿ ಉದ್ಯೋಗದ ಜಾಹಿರಾತನ್ನು ಇನ್ ಸ್ಟಾಗ್ರಾಂನಲ್ಲಿ ನೋಡಿ ಆ್ಯಪ್‌ನಲ್ಲಿ ನೋಂದಾಯಿಸಿಕೊಂಡು ಹಣ ಕಳೆದುಕೊಂಡಿದ್ದಾರೆ. 2022ರ ಜುಲೈ 6ರಂದು ವ್ಯಕ್ತಿಯೊಬ್ಬರು ಫೋನ್ ಮಾಡಿ ಕೆನಡಾದಲ್ಲಿ ಫುಡ್ ಪ್ಯಾಕಿಂಗ್ ಉದ್ಯೋಗ ಇದೆ ಎಂದು ಹೇಳಿ ಆಧಾರ್ ಕಾರ್ಡ್‌, ಇತರ ಮಾಹಿತಿ ಪಡೆದುಕೊಂಡು ಉದ್ಯೋಗ ಕೊಡಿಸುವುದಾಗಿ ನಂಬಿಸಿ ವಂಚನೆ ಮಾಡಿದ್ದರು

Published by:Monika N
First published: