• Home
 • »
 • News
 • »
 • national-international
 • »
 • Viral News: ರಾತ್ರೋರಾತ್ರಿ ವಿಶ್ವದ ಮೊದಲ ಟ್ರಿಲಿಯನೇರ್ ಆದ ವ್ಯಕ್ತಿ, ಇವನ ಅದೃಷ್ಟ ನೋಡಿ ಎಲ್ರಿಗೂ ಹೊಟ್ಟೆಕಿಚ್ಚು !

Viral News: ರಾತ್ರೋರಾತ್ರಿ ವಿಶ್ವದ ಮೊದಲ ಟ್ರಿಲಿಯನೇರ್ ಆದ ವ್ಯಕ್ತಿ, ಇವನ ಅದೃಷ್ಟ ನೋಡಿ ಎಲ್ರಿಗೂ ಹೊಟ್ಟೆಕಿಚ್ಚು !

ಡಾಲರ್​​.

ಡಾಲರ್​​.

ತನ್ನ ಖಾತೆಯಲ್ಲಿ 13 ಅಂಕಿಗಳ ಮೊತ್ತವನ್ನು ನೋಡಿ ಕ್ರಿಸ್‌ಗೆ ತನ್ನ ಕಣ್ಣುಗಳನ್ನು ತಾನೇ ನಂಬಲು ಆಗಲಿಲ್ಲ. ಕೆಲ ದಿನಗಳ ಹಿಂದಷ್ಟೇ ರಾಕೆಟ್ ಬನ್ನಿ ಕರೆನ್ಸಿಗೆ ಕೇವಲ $ 20 ಠೇವಣಿ ಮಾಡಿದ ನಂತರ ಇಷ್ಟೊಂದು ಹಣ ಹೇಗೆ ಬಂತೆಂದು ಆತ ಶಾಕ್‌ಗೊಳಗಾದ.

 • Share this:

  ಸಾವಿರಾರು ಜನರು ಕ್ರಿಪ್ಟೋಕರೆನ್ಸಿಯಲ್ಲಿ ಹೂಡಿಕೆ ಮಾಡುತ್ತಿದ್ದಾರೆ. ಮತ್ತು ಅವರಲ್ಲಿ ಅನೇಕರು ಬಹುಶಃ ತಮ್ಮಂತೆ ಹೂಡಿಕೆ ಮಾಡಲು ನಿಮಗೆ ಸಲಹೆ ನೀಡುತ್ತಾರೆ. ಕ್ರಿಪ್ಟೋ ಕರೆನ್ಸಿಯ ಅನಿರೀಕ್ಷಿತ ಸ್ವಭಾವದೊಂದಿಗೆ, ನಿಮ್ಮ ಹಣವನ್ನು ಅದರಲ್ಲಿ ಹೂಡಿಕೆ ಮಾಡಲು ಸಾಕಷ್ಟು ಅಪಾಯಗಳಿವೆ. ಆದರೆ ಹೂಡಿಕೆದಾರರು ತಮ್ಮ ಹುಚ್ಚು ಕನಸುಗಳಿಗಿಂತ ಹೆಚ್ಚಾಗಿ ತಮ್ಮನ್ನು ಶ್ರೀಮಂತರನ್ನಾಗಿ ಮಾಡುತ್ತದೆ ಎಂದು ಅವರು ನಂಬುತ್ತಾರೆ. ಇದೇ ರೀತಿ, ಅಮೆರಿಕದ ಜಾರ್ಜಿಯಾದ ಕ್ರಿಸ್ ವಿಲಿಯಮ್ಸನ್‌ಗೆ ಹೆಚ್ಚು ಸಂಪತ್ತನ್ನು ಸಂಪಾದಿಸುವ ಬಯಕೆಯು ಸಾಕಾರಗೊಂಡಿದೆ. ಪ್ರತಿದಿನ ಬೆಳಗ್ಗೆಯಂತೇ ತನ್ನ ಹೂಡಿಕೆಗಳನ್ನು ಪರಿಶೀಲಿಸಲು ಕ್ರಿಸ್‌ ಮುಂದಾಗಿದ್ದು, ಆ ವೇಳೆ ತಮ್ಮ ಅಕೌಂಟ್‌ ನೋಡಿ ಶಾಕ್‌ ಆಗಿದ್ದಾರೆ. ರಾತ್ರೋರಾತ್ರಿ ತನ್ನ ಅಕೌಂಟ್‌ಗೆ 1 ಟ್ರಿಲಿಯನ್‌ ಡಾಲರ್‌ಗಿಂತ ಹೆಚ್ಚು ಮೌಲ್ಯದ್ದಾಗಿದೆ ಎಂದು ಆತ ಕಂಡುಕೊಂಡನು. ತನ್ನ ಖಾತೆಯಲ್ಲಿ 13 ಅಂಕಿಗಳ ಮೊತ್ತವನ್ನು ನೋಡಿ ಕ್ರಿಸ್‌ಗೆ ತನ್ನ ಕಣ್ಣುಗಳನ್ನು ತಾನೇ ನಂಬಲು ಆಗಲಿಲ್ಲ. ಕೆಲ ದಿನಗಳ ಹಿಂದಷ್ಟೇ ರಾಕೆಟ್ ಬನ್ನಿ ಕರೆನ್ಸಿಗೆ ಕೇವಲ $ 20 ಠೇವಣಿ ಮಾಡಿದ ನಂತರ ಇಷ್ಟೊಂದು ಹಣ ಹೇಗೆ ಬಂತೆಂದು ಆತ ಶಾಕ್‌ಗೊಳಗಾದ.


  ಈ ಬಗ್ಗೆ ಫಾಕ್ಸ್ ನ್ಯೂಸ್‌ನೊಂದಿಗೆ ಮಾತನಾಡಿದ ಕ್ರಿಸ್‌, ನಾನು ಈಗ ಎಂಟು ತಿಂಗಳಿನಿಂದ ಕ್ರಿಪ್ಟೋ ಹೂಡಿಕೆಯಲ್ಲಿ ತೊಡಗುತ್ತಿದ್ದೇನೆ. ಇದು ಕೇವಲ ಆಟದ ನಾಣ್ಯಗಳು ಎಂದು ನಾನು ಕಂಡುಕೊಂಡಿದ್ದೇನೆ. ನಾನು ಪ್ರತಿದಿನ ಬೆಳಗ್ಗೆ ಎದ್ದಾಗ ಕ್ರಿಪ್ಟೋ ಅಕೌಂಟ್‌ ಅನ್ನು ಪರಿಶೀಲಿಸುವ ಹಾಗೆ ಆ ದಿನವೂ ನೋಡಿದೆ. ಆದರೆ, ಮೊದಲ ಬಾರಿಗೆ 1 ಟ್ರಿಲಿಯನ್‌ ಡಾಲರ್‌ಗಿಂತ ಹೆಚ್ಚಿನ ಹಣ ನೋಡಿ ತಾನಿನ್ನೂ ಅರ್ಧ ನಿದ್ರೆಯಲ್ಲಿದ್ದೀನಿ ಎಂದು ಅಂದುಕೊಂಡೆ.


  ನರ್ಸ್‌ ಆಗಲು ಓದುತ್ತಿರುವ ಆತ, ಮತ್ತೆ ತನ್ನ ಅಕೌಂಟ್‌ ಅನ್ನು ನೋಡಿದರೂ ಅಷ್ಟೇ ಹಣ ತೋರಿಸುತ್ತಿತ್ತು. ಆ ಸಮಯದಲ್ಲಿ ನಾನು ಅದನ್ನು ಹೇಗೆ ಮಾರಾಟ ಮಾಡಬೇಕೆಂದು ನನ್ನ ಸ್ನೇಹಿತನಿಗೆ ಕೇಳಿದೆ. ಆದರೆ, ನಂತರ ರಾಕೆಟ್ ಬನ್ನಿ ಕರೆನ್ಸಿಯನ್ನು ಬೇರೆ ಪ್ಲಾಟ್‌ಫಾರ್ಮ್‌ಗೆ ಹಾಕಲು ಪ್ರಯತ್ನಿಸಿದರೆ ಅಲ್ಲಿ ಅದೇ ಮೊತ್ತ ತೋರಿಸಲಿಲ್ಲ. ಈ ಹಿನ್ನೆಲೆ ನಾನು ಟ್ರಿಲಿಯನೇರ್‌ ಆಗಿರುವುದು ಕೇವಲ ಸಾಫ್ಟ್‌ವೇರ್‌ ತೊಂದರೆಯಿಂದ ಇರಬಹುದು ಎಂದು ನಾನು ಅರಿತುಕೊಂಡು, ಆ ಬಗ್ಗೆ ಕಾಯಿನ್‌ಬೇಸ್‌ ಸಂಪರ್ಕ ಮಾಡಿದೆ ಎಂದು ಹೇಳಿದ್ದಾನೆ.


  ಇದನ್ನೂ ಓದಿ: Sugarless Mango: ಶುಗರ್ ಇದೆ ಎಂದು ಹೆದರಬೇಡಿ; ಮಾರುಕಟ್ಟೆಯಲ್ಲಿವೆ ಸಕ್ಕರೆರಹಿತ ಮಾವಿನಹಣ್ಣು!

  ಅಲ್ಲದೆ, ತನ್ನ ಅದೃಷ್ಟದ ಸ್ಕ್ರೀನ್‌ಶಾಟ್‌ ಅನ್ನು ಟ್ವಿಟ್ಟರ್‌ನಲ್ಲಿ ಪೋಸ್ಟ್‌ ಮಾಡಿದ ಕ್ರಿಸ್‌, "ನೀವು ಅದನ್ನು ನೋಡಿದಾಗ ನಿಮಗೆ ತಿಳಿಯುತ್ತದೆ. ಇಷ್ಟು ದೊಡ್ಡ ಮೊತ್ತವನ್ನು ಪಡೆಯಲು ನನಗೆ ಯಾವುದೇ ಮಾರ್ಗವಿಲ್ಲ ಎಂಬುದೂ ನಿಮಗೆ ಅರಿವಿದೆ'' ಎಂದು ಬರೆದುಕೊಂಡಿದ್ದಾನೆ. ಇನ್ನು, ಕಾಯಿನ್‌ಬೇಸ್‌ ಈ ಬಗ್ಗೆ ತನಿಖೆ ನಡೆಸಿದ ಬಳಿಕ ತನ್ನ ಖಾತೆಯಲ್ಲಿ ಮೊತ್ತ ಕಡಿಮೆಯಾಗುತ್ತದೆಂದು ಆತ ಭಾವಿಸಿದ್ದ. ಆದರೆ, ಅದರ ಬದಲಾಗಿ ಆತನ ಖಾತೆಯಲ್ಲಿ ಕೆಲ ದಿನಗಳಿಂದ ಹಣ ಇನ್ನೂ ಹೆಚ್ಚಾಗುತ್ತಿದೆ..! ನನ್ನ ಖಾತೆಯಲ್ಲಿ ಹಣ ಹೆಚ್ಚಾಗುತ್ತಿರುವ ಬಗ್ಗೆ ನಾನು ಸ್ಕ್ರೀನ್ ರೆಕಾರ್ಡಿಂಗ್ ಮಾಡಿದ್ದೇನೆ ಎಂದೂ ಆತ ಹೇಳಿದ್ದಾನೆ.


  ಆದರೆ, ಕಾಯಿನ್‌ ಬೇಸ್‌ ಈ ಬಗ್ಗೆ ನನಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಈ ಹಿನ್ನೆಲೆ ತಾನು ವಿಶ್ವದ ಮೊದಲ ಟ್ರಿಲಿಯನೇರ್‌ ಆಗಬಹುದೆಂಬ ಭರವಸೆ ಈಗಲೂ ಇದೆ, ಅಲ್ಲದೆ, ತನ್ನ ಸಂಕಟದ ಬಗ್ಗೆ ಸಲಹೆಗಾಗಿ ಆತ ಟೆಸ್ಲಾ ಮಾಲೀಕ ಎಲಾನ್‌ ಮಸ್ಕ್‌ಗೆ ಸಹ ಟ್ವೀಟ್‌ ಮಾಡಿದ್ದಾನೆ. ಇನ್ನೊಂದೆಡೆ, ತಾನು ನಿಜಕ್ಕೂ ಟ್ರಿಲಿಯನೇರ್‌ ಆದರೆ, ತಾನು ಜೀವನದುದ್ದಕ್ಕೂ ಮಾಡುತ್ತಿರುವಂತೆ ಜನರಿಗೆ ಸಹಾಯ ಮಾಡುವ ಗುರಿ ಇದೆ. ಅದು ನನ್ನ ಜೀವಿತಾವಧಿಯಲ್ಲಿ ಖರ್ಚು ಮಾಡಲು ಸಾಧ್ಯವಾಗದ ಹಣ. ಈ ಹಿನ್ನೆಲೆ ಅದರಿಂದ ಒಳ್ಳೆಯ ಕಾರ್ಯ ಮಾಡುತ್ತೇನೆ ಎಂದು ಕ್ರಿಸ್‌ ಹೇಳಿಕೊಂಡಿದ್ದಾರೆ.
  ಸದ್ಯ, ಕ್ರಿಸ್‌ ಅಕೌಂಟ್‌ ತಾತ್ಕಾಲಿಕವಾಗಿ ಸ್ಥಗಿತವಾಗಿದ್ದು, ಕೆಲ ದಿನಗಳ ಕಾಲವಾದರೂ ತಾನು 2021ರಲ್ಲಿ ಟ್ರಿಲಿಯನೇರ್‌ ಆಗಿದ್ದೆ ಎಂಬುದನ್ನು ನಾನು ಶಾಶ್ವತವಾಗಿ ಹಿಂತಿರುಗಿ ನೋಡುತ್ತೇನೆ ಎಂದೂ ಅಮೆರಿಕದ ಜಾರ್ಜಿಯಾದ ಕ್ರಿಸ್ ವಿಲಿಯಮ್ಸನ್‌ ಹೇಳಿಕೊಂಡಿದ್ದಾನೆ.

  Published by:Soumya KN
  First published: