HOME » NEWS » National-international » MAN TURNS DETECTIVE TO FIND HIS LOST SPANIELS TRACKS DOWN 70 STOLEN DOGS STG SNVS

ಕಳುವಾದ ನಾಯಿ ಪತ್ತೆ ಮಾಡಲು ಡಿಟೆಕ್ಟಿವ್ ಆದ ವ್ಯಕ್ತಿ; 70 ಶ್ವಾನಗಳ ರಕ್ಷಣೆ

ತನ್ನ ನಾಯಿಗಳು ಕಳುವಾದಾಗ ಅದರ ಮಾಲೀಕ ಪತ್ತೆದಾರಿಯಾಗಿ ನಾಯಿಗಳ ಜಾಡು ಹಿಡಿದುಹೊರಟಾಗ ಕ್ರಿಮಿನಲ್ ಗ್ಯಾಂಗ್​ವೊಂದರ ಸುಳಿವು ಸಿಗುತ್ತದೆ. ತನ್ನ ನಾಯಿ ಜೊತೆಗೆ ಇತರ 70 ನಾಯಿಗಳೂ ಕೂಡ ಆ ಗ್ಯಾಂಗ್ ಕೈಯಲ್ಲಿ ಸಿಲುಕಿರುವುದು ಗೊತ್ತಾಗಿ ಅವುಗಳನ್ನ ರಕ್ಷಿಸಿದ ಘಟನೆ ಇಂಗ್ಲೆಂಡ್​ನಲ್ಲಿ ನಡೆದಿದೆ.

news18
Updated:February 19, 2021, 10:02 AM IST
ಕಳುವಾದ ನಾಯಿ ಪತ್ತೆ ಮಾಡಲು ಡಿಟೆಕ್ಟಿವ್ ಆದ ವ್ಯಕ್ತಿ; 70 ಶ್ವಾನಗಳ ರಕ್ಷಣೆ
ರಕ್ಷಣೆಯಾದ ನಾಯಿಮರಿಗಳು
  • News18
  • Last Updated: February 19, 2021, 10:02 AM IST
  • Share this:
ಕಳೆದುಹೋದ ಸ್ಪೇನಿಯಲ್ ತಳಿಯ ತನ್ನ ನಾಯಿಗಳನ್ನು ಹುಡುಕಲು ಹೋದ ವ್ಯಕ್ತಿಯೊಬ್ಬ ತನ್ನ ನಾಯಿ ಜೊತೆ 70 ಇತರ ನಾಯಿಗಳನ್ನೂ ರಕ್ಷಿಸಿದ ಘಟನೆ ಇಂಗ್ಲೆಂಡ್​ನಲ್ಲಿ ವರದಿಯಾಗಿದೆ. ಕಳ್ಳರ ಪಾಲಾಗಿದ್ದ ಈ ನಾಯಿಗಳು ಈಗ ಬಚಾವಾಗಿವೆ. ಟೋನಿ ಕ್ರೋನಿನ್ ಎಂಬಾತ ಅತ್ಯಂತ ಪ್ರೀತಿಯಿಂದ ಸಾಕಿದ್ದ ಸ್ಪೇನಿಯಲ್ ತಳಿಯ ನಾಯಿಗಳು ಒಂದು ದಿನ ಇದ್ದಕ್ಕಿದ್ದಂತೆ ನಾಪತ್ತೆಯಾಗಿದ್ದವು. ಅವುಗಳನ್ನು ಹುಡುಕಲೇಬೇಕು ಎಂದು ಆತ ಪಣತೊಟ್ಟಿದ್ದ. ತನ್ನ ಇದ್ದಬದ್ದ ಕೆಲಸವನ್ನೆಲ್ಲಾ ಬಿಟ್ಟು ಪೂರ್ಣಪ್ರಮಾಣದಲ್ಲಿ ನಾಯಿಗಳ ಹುಟುಕಾಟ ಪ್ರಾರಂಭಿಸಿದ್ದ.    

ತನ್ನ ನಾಯಿಮರಿಗಳು ಇರುವ ಸ್ಥಳ ಮತ್ತು ಅವುಗಳನ್ನು ಕಳ್ಳತನ ಮಾಡಿದ ಕ್ರಿಮಿನಲ್ ‍ಗ್ಯಾಂಗ್ ಬಗ್ಗೆ ಸುಳಿವು ಸಿಕ್ಕ ಬಳಿಕ ಟೋನಿ ಕಾರ್ಮಾರ್ತೇನ್​ಶೈರ್​ಗೆ ಹೋಗಿದ್ದ. ಖತರ್ನಾಕ್ ಖದೀಮರ ತಂಡವೊಂದು ಟೋನಿಯ ನಾಯಿಮರಿಗಳು ಸೇರಿದಂತೆ ಬೆಲೆಬಾಳುವ ಹಲವಾರು ನಾಯಿಗಳನ್ನು ಕದ್ದು ಕೂಡಿಟ್ಟಿದ್ದರು. ಸುಮಾರು 40 ಸಾವಿರ ಪೌಂಡ್(40 ಲಕ್ಷ ರೂ.) ಬೆಲೆಬಾಳುವ 70 ನಾಯಿಗಳನ್ನು ಟೋನಿ ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾನೆ ಎಂದು ಮೆಟ್ರೋ ಯುಕೆ ವರದಿ ಮಾಡಿದೆ.

ಇದನ್ನೂ ಓದಿ: ಟಿಕ್...ಟಿಕ್... ಬರುತ್ತಿದೆ ಮನುಕುಲದ ಅಂತ್ಯದ ಕಾಲ!?

ಲ್ಯಾಬ್ರಡಾರ್ಸ್, ವೆಸ್ಟೀಸ್ ಮತ್ತು ವಿವಿಧ ತಳಿಗಳ ನಾಯಿಗಳನ್ನು ಪತ್ತೆಹಚ್ಚಿದ್ದಾಗಿ ಟೋನಿ ಹೇಳಿದ್ದಾರೆ. ಇವುಗಳ ಜೊತೆಗೆ ನನ್ನ ಕಳುವಾದ ಸ್ಪೇನಿಯಲ್ ತಳಿಯ ನಾಯಿಗಳು ಇದ್ದವು ಎಂದಿದ್ದಾನೆ. ಕಳ್ಳರು ಅತ್ಯಂತ ಬೆಲೆಬಾಳುವ ವಿವಿಧ ತಳಿಗಳ ನಾಯಿಗಳನ್ನು ಕದ್ದು ಒಂದೆಡೆ ಕೂಡಿಟ್ಟಿದ್ದರು. ನಾನು ನನ್ನ ನಾಯಿಮರಿಗಳನ್ನು ಹುಡುಕಲು ಹೊರಟಾಗ ನಾಯಿಗಳ ದೊಡ್ಡ ಹಿಂಡೇ ನಮ್ಮ ಕಡೆ ಬಂದಿತು ಎಂದು ಆತ ಹೇಳಿದ್ದಾನೆ.

‘ವೆಸ್ಟೀಸ್, ಲ್ಯಾಬ್ರಡಾರ್ಸ್, ಪಗ್ಸ್ ಜಾತಿಯ ನಾಯಿಗಳು ಇದ್ದವು. ಎಲ್ಲವೂ ನಮ್ಮ ಕಡೆ ಓಡಿಬಂದು ಹುಚ್ಚನಂತೆ ಬೊಗಳುತ್ತಿದ್ದವು. ಆ ಹಿಂಡಿನ ಮಧ್ಯೆದಲ್ಲಿಯೇ ನಾನು ಸಾಕಿದ್ದ ನಾಯಿಗಳು ನನ್ನ ಕಡೆಗೆ ಓಡಿಬಂದವು. ಕಳ್ಳರು ಹಿಡಿದು ಎಲ್ಲವನ್ನೂ ಒಂದೆಡೆ ಕೂಡಿಹಾಕಿದ್ದರಿಂದ ಅವುಗಳು ಭಯಗೊಂಡು ಕಾಲುಗಳ ಮಧ್ಯೆ ಬಾಲ ಮುದುರಿಕೊಂಡು ನನ್ನ ಸುತ್ತಲೂ ಓಡಾಡುತ್ತಿದ್ದವು’ ಎಂದು ಟೋನಿ ತಿಳಿಸಿದ್ದಾರೆ.

ಇದನ್ನೂ ಓದಿ: ಟೆಕ್ಸಾಸ್‌ನಲ್ಲಿ ಅಪಾಯಕಾರಿ ಮಟ್ಟ ತಲುಪಿದ ಉಷ್ಣಾಂಶ: ಹೆಪ್ಪುಗಟ್ಟಿ ಸಾವನ್ನಪ್ಪುತ್ತಿರುವ ಪ್ರಾಣಿಗಳು

ಈ 70 ನಾಯಿಗಳ ಪೈಕಿ 22 ನಾಯಿಗಳನ್ನು ಈಗಾಗಲೇ ಅವುಗಳ ಮಾಲೀಕರಿಗೆ ಹಿಂತಿರುಗಿಸಲಾಗಿದೆ. ಇನ್ನುಳಿದವುಗಳನ್ನು ಸುರಕ್ಷಿತ ಸ್ಥಳದಲ್ಲಿಡಲಾಗಿದೆ. ಡಿಟೆಕ್ವಿವ್ ಆಗಿ ನಾಯಿಗಳನ್ನು ಪತ್ತೆ ಹಚ್ಚಿದ ಟೋನಿ ಕಾರ್ಯಕ್ಕೆ ಅನೇಕರು ಮೆಚ್ಚುಗೆ ಸೂಚಿಸಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಅವರು ಪತ್ತೆ ಹಚ್ಚಿರುವ ನಾಯಿಗಳ ಹಿಂಡಿರುವ ವಿಡಿಯೋ ಸಖತ್ ವೈರಲ್ ಆಗುತ್ತಿದೆ.ಕೆಲ ದಿನಗಳ ಹಿಂದಷ್ಟೇ ಕಳೆದುಹೋಗಿದ್ದ ನಾಯಿಯನ್ನು ರಕ್ಷಿಸಿ ಐರ್ಲೆಂಡ್‌ನ ವಿಕ್ಲೊ ಪರ್ವತಗಳಲ್ಲಿ 10 ಕಿ.ಮೀವರೆಗೆ ತಮ್ಮ ಬೆನ್ನಿನ ಮೇಲೆ ಸಾಗಿಸಿದ್ದ ದಂಪತಿಗೆ ಪ್ರಶಂಸೆಗಳ ಮಹಾಪೂರವೇ ಹರಿದುಬಂದಿತ್ತು. ಈ ವಿಡಿಯೋ ತುಣುಕನ್ನು ಟಿಕ್‌ಟಾಕ್‌ನಲ್ಲಿ ಹಂಚಿಕೊಳ್ಳಲಾಗಿತ್ತು. ನಂತರ ಅದನ್ನು ಟ್ವಿಟರ್ ನಲ್ಲಿ ಪೋಸ್ಟ್ ಮಾಡಲಾಗಿತ್ತು. ಈ ವಿಡಿಯೋ ಕೂಡ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿತ್ತು.
Published by: Vijayasarthy SN
First published: February 19, 2021, 10:02 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories