Murder for Accident: ಬೈಕ್ ನಲ್ಲಿ ಯುವತಿಗೆ ಗುದ್ದಿದ್ದಕ್ಕೆ ಕೊಂದೇ ಬಿಟ್ಟರು,19 ವರ್ಷದ ಯುವಕನ ದುರಂತ ಅಂತ್ಯ

Man thrashed by Angry Mob: 19 ವರ್ಷದ ಯೋಗೇಶ್ ಎಂಬ ಯುವಕ ಸಾವನ್ನಪ್ಪಿದ್ದಾನೆ. ಅಲ್ವಾರ್ ಜಿಲ್ಲೆಯ Meena Ka Bass ಏರಿಯಾದಲ್ಲಿ ಯೋಗೇಶ್ ತನ್ನ ಬೈಕಿನಲ್ಲಿ ಹೊರಟಿದ್ದ. ಇದೇ ವೇಳೆ ರಸ್ತೆಯಲ್ಲಿ ಅಡ್ಡಬಂದ ಮಹಿಳೆಗೆ ಯೋಗೇಶ್ ಬೈಕ್ ನ ಕಂಟ್ರೋಲ್ ಸಿಗದೇ ಗುದ್ದಿದ್ದ. ಇಷ್ಟಕ್ಕೆ ರೊಚ್ಚಿಗೆದ್ದ ಸ್ಥಳೀಯರು ಆತನಿಗೆ ಮನಬಂದಂತೆ ಥಳಿಸಿದ್ದಾರೆ. ಮಾತನಾಡಲು ಅವಕಾಶ ನೀಡದೆ ಏಕಾಏಕಿ ಹಲ್ಲೆ ಮಾಡಿದ್ದಾರೆ.

ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

 • Share this:
  Crime News: ಜೀವನವೇ ಹಾಗೆ, ಯಾವ ಸಮಯದಲ್ಲಿ ಬೇಕಾದರೂ ನಮ್ಮ ಪ್ರಾಣಪಕ್ಷಿ ಹಾರಿ ಹೋಗಬಹುದು. ಅದನ್ನು ಯಾರ ಕೈಯಿಂದಲೂ ಊಹಿಸಲು ಸಾಧ್ಯವಿಲ್ಲ. ಬೈಕ್ ನಲ್ಲಿ ರಸ್ತೆಯಲ್ಲಿ ಹೋಗುತ್ತಿದ್ದಾಗ ಯುವತಿಗೆ ಗುದ್ದಿದ್ದಕ್ಕೆ (Accident), ಯುವಕನೋರ್ವನನ್ನು ಸಾರ್ವಜನಿಕರು ಮನಬಂದಂತೆ ಥಳಿಸಿದ್ದಾರೆ (assault). ಬಳಿಕ ಯುವಕ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾನೆ. ಸೆಪ್ಟೆಂಬರ್ 15ರಂದು ರಾಜಸ್ಥಾನದ ಜೈಪುರಿನ ಅಲ್ವಾರ್ ಜಿಲ್ಲೆಯಲ್ಲಿ ಈ ದುರ್ಘಟನೆ ನಡೆದಿದೆ. 19 ವರ್ಷದ ಯೋಗೇಶ್ ಎಂಬ ಯುವಕ ಸಾವನ್ನಪ್ಪಿದ್ದಾನೆ. ಅಲ್ವಾರ್ ಜಿಲ್ಲೆಯ Meena Ka Bass ಏರಿಯಾದಲ್ಲಿ ಯೋಗೇಶ್ ತನ್ನ ಬೈಕಿನಲ್ಲಿ ಹೊರಟಿದ್ದ. ಇದೇ ವೇಳೆ ರಸ್ತೆಯಲ್ಲಿ ಅಡ್ಡಬಂದ ಮಹಿಳೆಗೆ ಯೋಗೇಶ್ ಬೈಕ್ ನ ಕಂಟ್ರೋಲ್ ಸಿಗದೇ ಗುದ್ದಿದ್ದ. ಇಷ್ಟಕ್ಕೆ ರೊಚ್ಚಿಗೆದ್ದ ಸ್ಥಳೀಯರು ಆತನಿಗೆ ಮನಬಂದಂತೆ ಥಳಿಸಿದ್ದಾರೆ. ಮಾತನಾಡಲು ಅವಕಾಶ ನೀಡದೆ ಏಕಾಏಕಿ ಹಲ್ಲೆ ಮಾಡಿದ್ದಾರೆ. ತೀವ್ರವಾಗಿ ಗಾಯಗೊಂಡಿದ್ದ ಆತನನ್ನ ಜೈಪುರದ ಆಸ್ಪತ್ರೆಯೊಂದಕ್ಕೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ ಯುವಕ ಯೋಗೇಶ್ ಮೃತಪಟ್ಟಿದ್ದ.

  ಈ ವಿಚಾರ ತಿಳಿದ ಯೋಗೇಶ್ ಕುಟುಂಬಸ್ಥರು, ಘಟನೆ ನಡೆದ ಸ್ಥಳಕ್ಕೆ ಮೃತದೇಹ ತಂದು ಪ್ರತಿಭಟನೆ ನಡೆಸಿದರು. ಮೃತದೇಹವನ್ನು ನಡುರಸ್ತೆಯಲ್ಲೇ ಇಟ್ಟು, ಯುವಕನನ್ನ ಕೊಂದ ಆರೋಪಿಗಳನ್ನು ಬಂಧಿಸುವಂತೆ ಆಕ್ರೋಶ ಹೊರಹಾಕಿದ್ದಾರೆ. ಕೂಡಲೇ ಸ್ಥಳಕ್ಕೆ ಆಗಮಿಸಿದ ಪೊಲೀಸರು ತಪ್ಪಿತಸ್ಥರನ್ನು ಬಂಧಿಸಿ ಕ್ರಮ ಕೈಗೊಳ್ಳುತ್ತೇವೆ ಅಂತ ಭರವಸೆ ನೀಡಿದ್ದಾರೆ. ಇದಾದ ಬಳಿಕ ಕುಟುಂಬಸ್ಥರು ಮೃತದೇಹವನ್ನು ತೆಗೆದುಕೊಂಡು ಹೋಗಿದ್ದಾರೆ. ಬಳಿಕ ಯುವಕನ ಅಂತ್ಯಕ್ರಿಯೆಯನ್ನು ನೆರವೇರಿಸಲಾಗಿದೆ. ಈ ಸುದ್ದಿ ಇದೀಗ ಸಾಮಾಜಿಕ ಜಾಲತಾಣದಲ್ಲಿ ಬಾರಿ ಚರ್ಚೆ ಹುಟ್ಟುಹಾಕಿದೆ. ಸಣ್ಣ ವಿಚಾರಕ್ಕೆ ಹೀಗೆ ಹೊಡೆದು ಕೊಂದಿರುವುದನ್ನು ನೆಟ್ಟಿಗರು ಖಂಡಿಸಿದ್ದಾರೆ. ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಜರಗಿಸುವಂತೆ ಆಗ್ರಹಿಸುತ್ತಿದ್ದಾರೆ.

  ಘಟನೆ ಬಳಿಕ Badodamev ಠಾಣಾ ಪೊಲೀಸರು 6 ಜನರ ವಿರುದ್ಧ ಎಫ್ಐಆರ್ ದಾಖಲಿಸಿದ್ದಾರೆ. ಆದರೆ ಈವರೆಗೂ ಯಾರೊಬ್ಬರನ್ನು ಬಂಧಿಸಿಲ್ಲ. ಪ್ರಕರಣ ದಾಖಲಿಸಿಕೊಂಡು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಶೀಘ್ರವೇ ಆರೋಪಿಗಳನ್ನು ಬಂಧಿಸುವುದಾಗಿ ಪೊಲೀಸರು ಭರವಸೆ ನೀಡಿದ್ದಾರೆ. ಇತ್ತ ಮಗನನ್ನು ಕಳೆದುಕೊಂಡ ತಂದೆ-ತಾಯಿ ಕಣ್ಣೀರಿನಲ್ಲಿ ಕೈ ತೊಳೆಯುತ್ತಿದ್ದಾರೆ. ಈ ತಂದೆ ತಾಯಿಗೆ ನ್ಯಾಯ ಕೊಡಿಸಬೇಕೆಂದು ಸಾಮಾಜಿಕ ಜಾಲತಾಣದಲ್ಲಿ ಹಲವರು ಬೆಂಬಲ ನೀಡುತ್ತಿದ್ದಾರೆ.

  ಇದನ್ನೂ ಓದಿ: Assault- ಲೈನ್​ನಲ್ಲಿ ಬನ್ನಿ ಎಂದಿದ್ದಕ್ಕೆ ಯುವತಿ ಮೇಲೆ ಹಲ್ಲೆ; ಬೆಂಗಳೂರಿನ ಸೂಪರ್ ಮಾರ್ಕೆಟ್​ನಲ್ಲಿ ಘಟನೆ

  "ಅಪಘಾತ ಅನ್ನೋದು ಹೇಳಿ ಕೇಳಿ ಆಗೋದಲ್ಲ, ಅಚಾನಕ್ ಆಗಿ ಆಗುವುದೇ ಅಪಘಾತ. ಯುವಕನಿಗೆ ಹೊಡೆಯುವ ಬದಲು ಬುದ್ಧಿ ಹೇಳಿ ಕಳುಹಿಸಬಹುದಾಗಿತ್ತು. ಅಥವಾ ಮಹಿಳೆಯನ್ನು ಆಸ್ಪತ್ರೆಗೆ ದಾಖಲಿಸಿ ಆಸ್ಪತ್ರೆಯ ಸಂಪೂರ್ಣ ವೆಚ್ಚವನ್ನು ಭರಿಸಲು ಹೇಳಬಹುದಿತ್ತು. ಮನಬಂದಂತೆ ಥಳಿಸಲು ನಿಮಗೆ ಅಧಿಕಾರ ಕೊಟ್ಟವರು ಯಾರು? ಸಾಯುವ ಮಟ್ಟಕ್ಕೆ ಹೊಡೆಯಲು ನಿಮಗೆ ಮನಸಾಕ್ಷಿಯಾದರು ಹೇಗೆ ಬಂತು?" ಈ ರೀತಿಯ ಪ್ರಶ್ನೆಗಳನ್ನು ನೆಟ್ಟಿಗರು ಕೇಳುತ್ತಿದ್ದಾರೆ.

  ಮತ್ತೊಂದು ವರ್ಗ " ಆರೋಪಿಗಳು ಯಾರೆಂದು ಪೊಲೀಸರಿಗೆ ಗೊತ್ತಿದೆ. ಆದರೂ ಪೊಲೀಸರು ಅವರನ್ನ ಬಂಧಿಸದೇ ಜಾಣ ಮೌನ ವಹಿಸಿದ್ದಾರೆ. ಯಾರಾದರೂ ಪ್ರಭಾವಿ ಮಕ್ಕಳು ಈ ರೀತಿ ಅಪಘಾತ ಮಾಡಿದ್ದರೆ, ಅವರಿಗೆ ಯಾವುದೇ ತೊಂದರೆ ಆಗದಂತೆ ನೋಡಿಕೊಳ್ಳುತ್ತಾರೆ. ಈ ಯುವಕನ ವಿಚಾರದಲ್ಲಿ ಯಾಕೆ ನ್ಯಾಯ ಒದಗಿಸುತ್ತಿಲ್ಲ. ಉಗುರಿನಲ್ಲಿ ಹೋಗುವ ವಿಚಾರಕ್ಕೆ ಕೊಡಲಿಯನ್ನು ಬಳಸಿದ ಹಾಗೆ, ಬುದ್ಧಿ ಹೇಳಿ ಕಳುಹಿಸುವುದನ್ನು ಬಿಟ್ಟು ಈ ರೀತಿ ಹೊಡೆದು ಸಾಯಿಸಿರುವುದು ನಿಜಕ್ಕೂ ನಾಚಿಕೆಗೇಡಿನ ಸಂಗತಿ" ಎಂದು ಕಿಡಿಕಾರಿದ್ದಾರೆ.

  (ವರದಿ- ವಾಸುದೇವ್. ಎಂ)
  Published by:Soumya KN
  First published: