Rajgarh: 35 ಲಕ್ಷದ ವಿಮೆ ಮಾಡಿಸಿ, 5 ಲಕ್ಷಕ್ಕೆ ಸುಪಾರಿ: ಹೆಂಡತಿ ಕೊಲ್ಲಲು ಗಂಡನ ಖತರ್ನಾಕ್ ಪ್ಲಾನ್​!

ಮಧ್ಯಪ್ರದೇಶದ ರಾಜ್‌ಗಢದಲ್ಲಿ ಸಾಲದ ಸುಳಿಗೆ ಸಿಲುಕಿದ ವ್ಯಕ್ತಿಯೊಬ್ಬ ತನ್ನ ಪತ್ನಿಗೆ ಸುಪಾರಿ ನೀಡಿ ಕೊಂದಿದ್ದಾನೆ. ಇಂಟರ್‌ನೆಟ್‌ನಲ್ಲಿ ವಿಡಿಯೋ ನೋಡಿ ಮೊದಲು ಪತ್ನಿಗೆ 35 ಲಕ್ಷ ರೂಪಾಯಿ ಮೊತ್ತದ ವಿಮೆ ಮಾಡಿಸಿ ನಂತರ ಆಕೆಯನ್ನು ಕೊಲ್ಲಲು ಐದು ಲಕ್ಷ ರೂ.ಗೆ ಬಾಡಿಗೆ ಶೂಟರ್‌ಗಳಿಗೆ ಸುಪಾರಿ ನೀಡಿದ್ದಾನೆ. ಆರೋಪಿ ಪತಿ ಶೂಟರ್‌ಗಳಿಗೆ ಮುಂಗಡವಾಗಿ ಒಂದು ಲಕ್ಷ ರೂಪಾಯಿ ಪಾವತಿಸಿ ಉಳಿದ ಮೊತ್ತವನ್ನು ವಿಮಾ ಮೊತ್ತ ಪಡೆದ ನಂತರ ನೀಡುವುದಾಗಿ ಹೇಳಿದ್ದಾನೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಜೈಪುರ(ಆ.07): ಮಧ್ಯಪ್ರದೇಶದ ರಾಜ್‌ಗಢದಲ್ಲಿ (Madhya Pradesh) ಪೊಲೀಸರು ಆಘಾತಕಾರಿ ಪ್ರಕರಣವೊಂದನ್ನು ಬಯಲಿಗೆಳೆದಿದ್ದಾರೆ. ಇಲ್ಲಿ ಪತಿಯೊಬ್ಬ ಹೆಂಡತಿಯ ವಿಮಾ ಪಾಲಿಸಿಯ (Insurance Policy) ಮೊತ್ತದಿಂದ ಸಾಲವನ್ನು ತೀರಿಸಲು ಆಕೆಯನ್ನು ಕೊಂದಿದ್ದಾನೆ. ಅಚ್ಚರಿ ಎಂದರೆ ಪತ್ನಿಯ ಹತ್ಯೆಗೂ ಮುನ್ನ ಪತಿಯೇ ಪತ್ನಿಗೆ 35 ಲಕ್ಷ ರೂ.ಗೆ ವಿಮೆ ಮಾಡಿಸಿದ್ದ.

ರಾಜ್‌ಗಢ್ ಜಿಲ್ಲೆಯ ಹೆಚ್ಚುವರಿ ಎಸ್ಪಿ ಮಂಕಮ್ನಾ ಪ್ರಸಾದ್ ಪ್ರಕಾರ, ಜುಲೈ 26 ರ ರಾತ್ರಿ 9 ಗಂಟೆಯ ಸುಮಾರಿಗೆ ಈ ಪ್ರಕರಣ ನಡೆದಿದೆ. ಜಿಲ್ಲೆಯ ಭೋಪಾಲ್ ರಸ್ತೆಯ ಮನಾ ಜೋಡ್ ಗ್ರಾಮದ ಬಳಿ ಪೂಜಾ ಮೀನಾ (27) ಎಂಬ ಮಹಿಳೆ ತನ್ನ ಪತಿ ಬದ್ರಿಪ್ರಸಾದ್ ಮೀನಾ (31) ಅವರೊಂದಿಗೆ ಬೈಕ್‌ನಲ್ಲಿ ಹೋಗುತ್ತಿದ್ದಾಗ ನಡೆದ ಗುಂಡಿನ ದಾಳಿಯಲ್ಲಿ ಸಾವನ್ನಪ್ಪಿದ್ದಾರೆ. ವಿಚಾರಣೆ ವೇಳೆ ತಾನು ನಾಲ್ವರಿಂದ ಸಾಲ ಪಡೆದಿದ್ದು, ಹಣ ವಾಪಸ್ ನೀಡುವಂತೆ ನಿರಂತರವಾಗಿ ಒತ್ತಡ ಹೇರುತ್ತಿದ್ದರು ಎಂದು ಪತಿ ಪೊಲೀಸರಿಗೆ ತಿಳಿಸಿದ್ದಾರೆ.

ಇದನ್ನೂ ನೋಡಿ:  Crime News: ಜೀವ ಭಯದಿಂದ ಜೀವ ತೆಗೆದೆ: ಕಕ್ಕೆ ರಾಹುಲ್ ಮರ್ಡರ್ ಸಿಕ್ರೇಟ್ ರಿವೀಲ್

ಪತ್ನಿಯೊಂದಿಗೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಹೋಗುತ್ತಿದ್ದಾಗ ಆ ನಾಲ್ವರು ತನ್ನ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಪತಿ ಪೊಲೀಸರಿಗೆ ತನ್ನ ಕಥೆಯಲ್ಲಿ ತಿಳಿಸಿದ್ದಾರೆ. ಈ ವೇಳೆ ಪತ್ನಿ ಮಧ್ಯಪ್ರವೇಶಿಸಿದಾಗ ಆರೋಪಿ ಗುಂಡು ಹಾರಿಸಿ ಪರಾರಿಯಾಗಿದ್ದಾನೆ ಎಂದೂ ತನಿಖೆ ವೇಳೆ ಹೇಳಿದ್ದಾನೆ. ಮಹಿಳೆಯ ಪತಿ ಹೇಳಿಕೆಯ ಆಧಾರದ ಮೇಲೆ ಪೊಲೀಸರು ನಾಲ್ವರು ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.

ಈ ವೇಳೆ ಮಹಿಳೆಗೆ ಕೆಲ ದಿನಗಳ ಹಿಂದೆ ವಿಮೆ ಮಾಡಿಸಿರುವುದು ತಿಳಿದು ಬಂದಿದೆ. ಇದಾದ ಬಳಿಕ ತನಿಖೆಯ ದಿಕ್ಕನ್ನು ಬದಲಾಯಿಸಲಾಯಿತು. ಇದಾಧ ಬಳಿಕ ಬಯಲಾದ ವಿ ಆರಗಳಿಂದ ಪೊಲೀಸರು ಕೊಲೆಗಾರನನ್ನು ಪತ್ತೆ ಹಚ್ಚಿದ್ದಾರೆ. ಕೊಲೆಗಾರ ಬೇರಾರೂ ಅಲ್ಲ ಮೃತಳ ಪತಿ ಎಂದು ತಿಳಿದುಬಂದಿದೆ. ಆರೋಪಿಯು ಮೊದಲು ಪತ್ನಿಗೆ ವಿಮೆ ಮಾಡಿಸಿ ನಂತರ ವಿಮಾ ಮೊತ್ತದಿಂದ ಸಾಲವನ್ನು ಮರುಪಾವತಿಸಲು ಆಕೆಯನ್ನು ಕೊಂದು ಹಾಕಿದ್ದಾನೆ ಎಂದು ಪೊಲೀಸ್ ತನಿಖೆಯಿಂದ ತಿಳಿದುಬಂದಿದೆ.

ಹೀಗೆ ಬಯಲಾಯ್ತು ಸತ್ಯ

ಪೊಲೀಸರಿಗೆ ನೀಡಿದ ಹೇಳಿಕೆಯಲ್ಲಿ, ಮೃತಳ ಪತಿ ಘಟನೆಯ ರಾತ್ರಿಯ ಕಥೆಯನ್ನು ಹೇಳಿದ್ದು, ಹೆಂಡತಿಗೆ ಮುಂಭಾಗದಿಂದ ಗುಂಡು ಹಾರಿಸಲಾಗಿದೆ ಎಂದಿದ್ದ. ಆದರೆ ಮರಣೋತ್ತರ ಪರೀಕ್ಷೆಯ ವರದಿಯಲ್ಲಿ ಮಹಿಳೆಗೆ ಹಿಂದಿನಿಂದ ಗುಂಡು ಹಾರಿಸಲಾಗಿದೆ ಎಂದು ತಿಳಿದುಬಂದಿದೆ. ಇಲ್ಲಿಂದ ಪೊಲೀಸರ ಅನುಮಾನ ಬಲವಾಯಿತು. ಇದಾದ ನಂತರ ಪೊಲೀಸರು ನಾಲ್ವರು ಆರೋಪಿಗಳ ಕರೆ ವಿವರಗಳನ್ನು ಪಡೆದುಕೊಂಡರು, ನಂತರ ಘಟನೆಯ ಸಮಯದಲ್ಲಿ ಅವರಲ್ಲಿ ಯಾರೂ ಅಲ್ಲಿ ಇರಲಿಲ್ಲ ಎಂಬುವುದು ತಿಳಿದು ಬಂದಿದೆ.

ಇದನ್ನೂ ನೋಡಿ:  Mysore Double Murder: ತಂದೆ & ಆತನ ಜೊತೆಗಿದ್ದ ಮಹಿಳೆಯನ್ನು ಕೊಚ್ಚಿ ಕೊಲೆಗೈದ ಮಗ..!

ಇದಾದ ಬಳಿಕ ಮೃತಳ ಪತಿಯ ಕರೆ ವಿವರಗಳನ್ನು ಪೊಲೀಸರು ಪಡೆದುಕೊಂಡಾಗ ಪತಿ ಕಳೆದ ಕೆಲವು ದಿನಗಳಿಂದ ಒಂದು ನಂಬರ್‌ನಲ್ಲಿ ನಿರಂತರವಾಗಿ ಮಾತನಾಡುತ್ತಿದ್ದು, ಆ ನಂಬರ್ ಕೂಡ ಘಟನೆ ನಡೆದಾಗ ಅದೇ ಸ್ಥಳದಲ್ಲಿಯೇ ಇತ್ತು ಎಂದು ತಿಳಿದು ಬಂದಿದೆ. ಇದಾದ ನಂತರ ಪೊಲೀಸರು ಪತಿಯನ್ನು ವಿಚಾರಣೆಗೆ ಒಳಪಡಿಸಿದರು, ಆರಂಭದಲ್ಲಿ ಅವನು ಪೊಲೀಸರ ದಾರಿ ತಪ್ಪಿಸಿದ್ದಾನೆ. ಆದರೆ ವಿಚಾರಣೆ ಮತ್ತಷ್ಟು ಕಠಿಣಗೊಳಿಸಿದಾಗ ಆರೋಪಿ ತನ್ನ ಅಪರಾಧವನ್ನು ಒಪ್ಪಿಕೊಂಡಿದ್ದಾನೆ.

ಮೃತಳ ಪತಿ ತಪ್ಪೊಪ್ಪಿಕೊಂಡಿದ್ದಾನೆ ಎಂದು ಹೆಚ್ಚುವರಿ ಎಸ್ಪಿ ಮಂಕಮ್ಮನ ಪ್ರಸಾದ್ ತಿಳಿಸಿದ್ದಾರೆ. ಸುಮಾರು 50 ಲಕ್ಷ ರೂಪಾಯಿ ಸಾಲ ಪಡೆದಿರುವುದಾಗಿ ಆರೋಪಿ ತಿಳಿಸಿದ್ದಾನೆ. ಈ ಸಾಲ ತೀರಿಸಲು ಪತ್ನಿಗೆ ಮೊದಲು 35 ಲಕ್ಷ ರೂಪಾಯಿ ಅಪಘಾತ ವಿಮೆ ಮಾಡಿಸಿ, ಇಂಟರ್‌ನೆಟ್‌ನಲ್ಲಿ ವಿಡಿಯೋ ನೋಡಿ ಪತ್ನಿಯನ್ನು ಕೊಲ್ಲಲು ಪ್ಲಾನ್ ಮಾಡಿದ್ದ.

ಬೈಕ್ ಹಾಳಾದ ನೆಪ

ಇದಕ್ಕಾಗಿ ಆರೋಪಿಗಳು ಮೂವರು ದುಷ್ಕರ್ಮಿಗಳನ್ನು ಬಾಡಿಗೆಗೆ ಪಡೆದು 5 ಲಕ್ಷ ರೂಪಾಯಿಗೆ ಪತ್ನಿಯನ್ನು ಹತ್ಯೆ ಮಾಡಲು ಸುಪಾರಿ ನೀಡಿದ್ದ. ಅಲ್ಲದೇ ಇದಕ್ಕಾಗಿ 1 ಲಕ್ಷ ರೂಪಾಯಿ ಮುಂಗಡವಾಘಿ ಪಾವತಿಸಿ ಉಳಿದ ಮೊತ್ತವನ್ನು ವಿಮಾ ಮೊತ್ತದಿಂದ ನೀಡುವುದಾಗಿ ಹೇಳಿದ್ದ. ಕೊಲೆಯಾದ ದಿನ ರಾತ್ರಿ ರಸ್ತೆಯಲ್ಲಿ ಬೈಕ್ ಹಾಳಾಗಿದ್ದಕ್ಕೆ ಪತಿ, ಪತ್ನಿಯನ್ನು ರಸ್ತೆ ಬದಿ ಕೂಳಿತುಕೊಳ್ಳಲು ಹೇಳಿ ಬೈಕ್ ಸರಿಪಡಿಸುವಂತೆ ನಟಿಸಲು ಆರಂಭಿಸಿದ್ದ. ಈ ವೇಳೆ ಸುಪಾರಿ ಪಡೆದಿದ್ದ ಆರೋಪಿಗಳು ಮಹಿಳೆಗೆ ಹಿಂದಿನಿಂದ ಗುಂಡು ಹಾರಿಸಿ ಪರಾರಿಯಾಗಿದ್ದಾರೆ.

ಇಬ್ಬರು ಆರೋಪಿಗಳ ಬಂಧನ

ಆರೋಪಿ ಬದ್ರಿ ಸಹಚರರಾದ ಅಜಯ್ ಅಲಿಯಾಸ್ ಗೋಲು, ಶಾಕೀರ್ ಮತ್ತು ಹುನಾರ್ ಸಿಂಗ್ ಸೇರಿ ಕೊಲೆ ಮಾಡಿರುವುದು ತನಿಖೆಯಿಂದ ಬೆಳಕಿಗೆ ಬಂದಿದೆ. ಸದ್ಯ ಕುರವಾರ ಪೊಲೀಸರು ಆರೋಪಿಗಳಾದ ಬದ್ರಿಪ್ರಸಾದ್ ಮತ್ತು ಹುನಾರ್ ಸಿಂಗ್ ಅವರನ್ನು ಬಂಧಿಸಿದ್ದಾರೆ. ಆರೋಪಿ ಪತಿ ಬದ್ರಿ ಪ್ರಸಾದ್ ಮೀನಾ ಕೂಡ ಕುರಾವರ ಪೊಲೀಸ್ ಠಾಣಾ ವ್ಯಾಪ್ತಿಯ ಗೂಂಡಾ ಎಂದು ಹೇಳಲಾಗುತ್ತಿದೆ. ಇದೇ ವೇಳೆ ಪ್ರಕರಣದ ಇತರ ಆರೋಪಿಗಳಾದ ಶಾಕಿರ್ ಮತ್ತು ಗೋಳು ಬೋಡಗಾಗಿ ಶೋಧ ಕಾರ್ಯ ನಡೆಯುತ್ತಿದೆ.
Published by:Precilla Olivia Dias
First published: