Rooster Fight: ಕೋಳಿ ಕಾಳಗದಲ್ಲಿ ಹರಿದ ನೆತ್ತರು.. ಹುಂಜದ ಕಾಲಿಗೆ ಕಟ್ಟಿದ್ದ ಚಾಕು ಚುಚ್ಚಿ ವ್ಯಕ್ತಿ ಸಾವು!

ಆಂಧ್ರ ಪ್ರದೇಶ(Andhra Pradesh)ದಲ್ಲಿ ಮತ್ತು ತಮಿಳುನಾಡಿ(Tamil nadu)ನಲ್ಲಿ ಜನರು ಕೋಳಿ ಕಾಳಗವನ್ನು ಒಂದು ಪ್ರತಿಷ್ಟೆಯ ಪ್ರತೀಕವೆಂಬಂತೆ ತುಂಬಾನೇ ಗಂಭೀರವಾಗಿ ತೆಗೆದುಕೊಂಡು ಅನೇಕ ಜಗಳಗಳನ್ನು ಆಡುವುದನ್ನು ನಾವು ಅನೇಕ ಸಲ ಟಿವಿ(TV)ಯಲ್ಲಿ ಪ್ರಸಾರವಾಗಿರುವ ಸುದ್ದಿಯನ್ನು ನೋಡಿರುತ್ತೇವೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ನಾವು ಈ ಹಳ್ಳಿಗಳಲ್ಲಿ ಕೋಳಿ ಕಾಳಗ(Cockfight)ಗಳನ್ನು ನೋಡಿಯೇ ಇರುತ್ತೇವೆ ಮತ್ತು ಅಲ್ಲಿ ನೆರೆದಿರುವ ಜನರು ತಮ್ಮ ಕೋಳಿ(Chicken)ಗಳನ್ನು ಚೆನ್ನಾಗಿ ಪಳಗಿಸಿ ಈ ಕಾಳಗಕ್ಕೆ ಎಂದೇ ತಯಾರು ಮಾಡಿರುತ್ತಾರೆ. ಆಂಧ್ರ ಪ್ರದೇಶ(Andhra Pradesh)ದಲ್ಲಿ ಮತ್ತು ತಮಿಳುನಾಡಿ(Tamil nadu)ನಲ್ಲಿ ಜನರು ಕೋಳಿ ಕಾಳಗವನ್ನು ಒಂದು ಪ್ರತಿಷ್ಟೆಯ ಪ್ರತೀಕವೆಂಬಂತೆ ತುಂಬಾನೇ ಗಂಭೀರವಾಗಿ ತೆಗೆದುಕೊಂಡು ಅನೇಕ ಜಗಳಗಳನ್ನು ಆಡುವುದನ್ನು ನಾವು ಅನೇಕ ಸಲ ಟಿವಿ(TV)ಯಲ್ಲಿ ಪ್ರಸಾರವಾಗಿರುವ ಸುದ್ದಿಯನ್ನು ನೋಡಿರುತ್ತೇವೆ. ಈ ಕಾಳಗದಲ್ಲಿ ಹುಂಜಗಳ ಕಾಲಿಗೆ ಬ್ಲೇಡ್(Blade) ಅಥವಾ ಹರಿತವಾದ ಚಾಕು(Knief)ಗಳನ್ನು ಕಟ್ಟಬಾರದು ಎಂದು ಆದೇಶವಿದ್ದರೂ ಸಹ ಈ ಕ್ರೀಡೆಯನ್ನು ಅನೇಕ ಕಡೆಗಳಲ್ಲಿ ಹಾಗೆಯೇ ಆಡಿಸುತ್ತಾರೆ. ಇದನ್ನು ಸಂಪೂರ್ಣವಾಗಿ ಪರಿಶೀಲಿಸುವಲ್ಲಿ ಆಯಾ ಸ್ಥಳೀಯ ಪೊಲೀಸ(Police)ರು ಎಷ್ಟೇ ಕಠಿಣವಾಗಿ ಗಸ್ತು ತಿರುಗಿದರೂ ಸಹ ಈ ಕೋಳಿ ಕಾಳಗವು ಹೀಗೆ ಅನೇಕ ಸ್ಥಳಗಳಲ್ಲಿ ಇವತ್ತಿಗೂ ಮುಂದುವರೆಯುತ್ತಲೇ ಇವೆ. ಈ ಕಾಳಗದಲ್ಲಿ ಕೋಳಿಗಳ ರಕ್ತ(Blood) ಹರಿಯುವುದಲ್ಲದೆ ಕೆಲವೊಮ್ಮೆ ಅಚಾತುರ್ಯದಿಂದ ವ್ಯಕ್ತಿಗಳ ರಕ್ತವು ಸಹ ಹರಿಯುವುದನ್ನು ನಾವು ನೋಡಿರುತ್ತೇವೆ ಮತ್ತು ಕೇಳಿರುತ್ತೇವೆ.

ಕೋಳಿ ಕಾಳಗದಿಂದ 37 ವರ್ಷದ ವ್ಯಕ್ತಿ ಸಾವು!

ಇಲ್ಲಿಯೂ ಸಹ ಅದೇ ರೀತಿಯ ಘಟನೆ ನಡೆದಿದ್ದು, 37 ವರ್ಷದ ವ್ಯಕ್ತಿಯೊಬ್ಬ ಆಕಸ್ಮಿಕವಾಗಿ ಕೋಳಿ ಕಾಲಿಗೆ ಕಟ್ಟಿದ್ದ ಚಾಕು ತನ್ನ ಕಾಲಿಗೆ ಚುಚ್ಚಿ, ಕಾಲಿನಲ್ಲಿರುವ ನರಕ್ಕೆ ತೀವ್ರವಾಗಿ ಗಾಯವಾದ ನಂತರ ಮೃತಪಟ್ಟರು ಎಂದು ವರದಿಯಾಗಿದೆ. ಪೊಲೀಸರು ಮೃತ ವ್ಯಕ್ತಿಯನ್ನು ಚಿತ್ತೂರು ಜಿಲ್ಲೆಯ ಪೆದ್ದಮಾಂಡಯಂ ಮಂಡಲದ ಮುದಿವೇಡುವಿನಿಂದ ಗಂಗೂಲಿಯಾ ಎಂದು ಗುರುತಿಸಿದ್ದಾರೆ.

ಇದನ್ನೂ ಓದಿ: ಸೊಳ್ಳೆಗಳ ವಿರುದ್ಧ ಸಮರ ಸಾರಿದ ವ್ಯಕ್ತಿ! ಪ್ರತಿದಿನ ಏರಿಯಾದಲ್ಲಿ ಏನ್​ ಮಾಡ್ತಾರೆ ಅಂತ ನೀವೇ ನೋಡಿ..

ಪೆದ್ದಮಾಂಡಯಂ ಪೊಲೀಸ್ ಠಾಣೆ ವ್ಯಾಪ್ತಿಯ ನಿಪ್ಪುವಾನಮ್ ಗ್ರಾಮದಲ್ಲಿ ಈ ಘಟನೆ ನಡೆದಿದೆ ಎಂದು ಹೇಳಲಾಗುತ್ತಿದೆ. ಈ ಗ್ರಾಮದಲ್ಲಿ ಕೆಲವರು ಕೋಳಿ ಕಾಳಗಗಳನ್ನು ಆಯೋಜಿಸಿದ್ದಾರೆ ಎಂಬ ಮಾಹಿತಿ ಬಂದಿತ್ತು ಎಂದು ಪೊಲೀಸರು ತಿಳಿಸಿದ್ದಾರೆ. ಗಂಗೂಲಿಯಾ ಚಾಕುವಿನಿಂದ ಆದ ಗಾಯದಿಂದ ಬಳಲುತ್ತಿದ್ದು, ದೇಹದಿಂದ ತುಂಬಾನೇ ರಕ್ತ ಹೋಗಿ ಇವರ ಸಾವಾಗಿದೆ ಎಂದು ಹೇಳಲಾಗುತ್ತಿದೆ.

ಕಾಲಿನ ನರಗಳು ಕಟ್​, ರಕ್ತ ಸ್ರಾವದಿಂದ ವ್ಯಕ್ತಿ ಸಾವು!

"ನಾವು ಅವನನ್ನು 108 ಆ್ಯಂಬ್ಯುಲೆನ್ಸ್‌ನಲ್ಲಿ ಸ್ಥಳೀಯ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದುಕೊಂಡು ಹೋದೆವು. ಆದರೆ ಅತಿಯಾದ ರಕ್ತ ಸ್ರಾವದಿಂದಾಗಿ ಕಾಲಿನ ನರಗಳ ಕಡಿತಗೊಂಡಿರುವುದರಿಂದ ಇವರು ಸಾವನ್ನಪ್ಪಿದ್ದಾರೆ" ಎಂದು ಪೆದ್ದಮಾಂಡಯಂ ಸಬ್‌ಇನ್ಸ್‌ಪೆಕ್ಟರ್‌ ಹೇಳಿದರು. ಅಕ್ರಮ ಕ್ರೀಡೆಯನ್ನು ಸಂಘಟಿಸಿದ್ದಕ್ಕಾಗಿ ಪೊಲೀಸರು 12 ಜನರನ್ನು ಈಗಾಗಲೇ ಬಂಧಿಸಿದ್ದಾರೆ ಮತ್ತು ಐದು ಕೋಳಿಗಳನ್ನು ಆ ಸ್ಥಳದಿಂದ ವಶಪಡಿಸಿಕೊಂಡಿದ್ದಾರೆ ಮತ್ತು ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ.

2 ವರ್ಷಗಳ ಹಿಂದೆ ನಡೆದಿತ್ತು ಇದೇ ರೀತಿಯ ಘಟನೆ!

ಎರಡು ವರ್ಷಗಳ ಹಿಂದೆ ಸಹ ಆಂಧ್ರ ಪ್ರದೇಶದ ಪಶ್ಚಿಮ ಗೋದಾವರಿ ಜಿಲ್ಲೆಯಲ್ಲಿ ನಡೆದ ಕೋಳಿ ಕಾಳಗದಲ್ಲಿ 55 ವರ್ಷದ ವ್ಯಕ್ತಿಯೊಬ್ಬರು ಹುಂಜದ ಕಾಲಿಗೆ ಕಟ್ಟಿದ್ದ ಹರಿತವಾದ ಚಾಕು ಚುಚ್ಚಿ ಮೃತಪಟ್ಟಿದ್ದರು. ವರದಿಗಳ ಪ್ರಕಾರ, ಚಿಂತಲಪುಡಿ ಮಂಡಲದ ಪ್ರಗಡವರಂ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಆ ಮೃತ ವ್ಯಕ್ತಿಯನ್ನು ವೆಂಕಟೇಶ್ವರ ರಾವ್ ಎಂದು ಗುರುತಿಸಲಾಗಿತ್ತು. ರಾವ್ ಈ ಕಾಳಗದಲ್ಲಿ ಜಗಳಕ್ಕೆ ಮುಂಚಿತವಾಗಿ ಹುಂಜವನ್ನು ಹಿಡಿದಿದ್ದಾನೆ ಎಂದು ವರದಿಯಾಗಿದೆ. ಅದು ಅವನ ಕೈಯಿಂದ ತಪ್ಪಿಸಿಕೊಳ್ಳಲು ಇದ್ದಕ್ಕಿದ್ದಂತೆ ಪ್ರಯತ್ನಿಸಿತು. ಅದನ್ನು ಹಿಡಿದಿಟ್ಟುಕೊಳ್ಳುವ ಪ್ರಯತ್ನದಲ್ಲಿ, ಹುಂಜದ ಕಾಲಿಗೆ ಕಟ್ಟಿದ ತೀಕ್ಷ್ಣವಾದ ಚಾಕು ಇವರಿಗೆ ಚುಚ್ಚಿ ಗಾಯಗೊಳಿಸಿದೆ ಮತ್ತು ನಂತರ ಅವರು ಮೃತಪಟ್ಟಿದ್ದಾರೆ ಎಂದು ಹೇಳಲಾಗಿತ್ತು.

ಇದನ್ನೂ ಓದಿ: ಅವಳು ಬೇಕಾ, ಇವಳು ಬೇಕಾ? ಹೀಗಂತ ಫೋಟೋ ಜೊತೆ ರೇಟ್ ಹಾಕ್ತಿದ್ದ ವಿಕೃತ ಯುವಕ!

ಕೋಳಿ ಕಾಳಗದಲ್ಲಿದೆ ಕೋಟಿ ಕೋಟಿ ಹಣ!

ಸುಪ್ರೀಂ ಕೋರ್ಟ್‌ನ ಆದೇಶಗಳು ಮತ್ತು ಪೊಲೀಸರ ಎಚ್ಚರಿಕೆಯ ಹೊರತಾಗಿಯೂ ಸಂಕ್ರಾಂತಿಯ ಸಮಯದಲ್ಲಿ ಆಂಧ್ರ ಪ್ರದೇಶದ ಕರಾವಳಿ ಪ್ರದೇಶದ ಹಲವಾರು ಭಾಗಗಳಲ್ಲಿ ಕೋಳಿ ಕಾಳಗಗಳನ್ನು ಕದ್ದು ಮುಚ್ಚಿ ಆಯೋಜಿಸುತ್ತಾರೆ. ಈ ಕೋಳಿ ಕಾಳಗದಿಂದ ಪ್ರತಿ ವರ್ಷ ಕೋಟ್ಯಂತರ ರೂಪಾಯಿಗಳು ಜನರ ಹತ್ತಿರ ಹರಿದಾಡುತ್ತವೆ ಎಂದು ಹೇಳಲಾಗುತ್ತಿದೆ.
Published by:Vasudeva M
First published: