ಏರ್​ ಇಂಡಿಯಾ ವಿಮಾನದಲ್ಲಿ ಬಟ್ಟೆ ಬಿಚ್ಚಿ ಓಡಾಡಿದ ಪ್ರಯಾಣಿಕ; ಬಟ್ಟೆ ಹೊದಿಸಿ ಕೂರಿಸಿದ ಸಿಬ್ಬಂದಿ!

ಬಟ್ಟೆ ಬಿಚ್ಚಿ ಓಡಾಡುತ್ತಿದ್ದ ವ್ಯಕ್ತಿಯನ್ನು ಏರ್​ ಇಂಡಿಯಾದ ಇಬ್ಬರು ಸಿಬ್ಬಂದಿ ಎಳೆದು ಸೀಟಿನಲ್ಲಿ ಕೂರಿಸಿ, ಮೈಮೇಲೆ ಬಟ್ಟೆ ಹೊದಿಸಿದ್ದಾರೆ.

news18
Updated:December 30, 2018, 10:23 AM IST
ಏರ್​ ಇಂಡಿಯಾ ವಿಮಾನದಲ್ಲಿ ಬಟ್ಟೆ ಬಿಚ್ಚಿ ಓಡಾಡಿದ ಪ್ರಯಾಣಿಕ; ಬಟ್ಟೆ ಹೊದಿಸಿ ಕೂರಿಸಿದ ಸಿಬ್ಬಂದಿ!
ನಗ್ನವಾಗಿ ಓಡಾಡಿದ ಪ್ರಯಾಣಿಕ
news18
Updated: December 30, 2018, 10:23 AM IST
ನವದೆಹಲಿ (ಡಿ.30): ದುಬೈನಿಂದ ಪ್ರಯಾಣಿಸುತ್ತಿದ್ದ ವಿಮಾನ ಟೇಕ್ ಆಫ್ ಆದ ಸಂದರ್ಭದಲ್ಲಿ ಪ್ರಯಾಣಿಕನೋರ್ವ ಬಟ್ಟೆ ಬಿಚ್ಚಿಕೊಂಡು ವಿಮಾನದೊಳಗೆ ಓಡಾಡತೊಡಗಿದ ಘಟನೆ ಪ್ರಯಾಣಿಕರಿಗೆ ಭಾರೀ ಮುಜುಗರ ಉಂಟುಮಾಡಿದೆ.

150 ಪ್ರಯಾಣಿಕರಿದ್ದಏರ್​ ಇಂಡಿಯಾ ಎಕ್ಸ್​ಪ್ರೆಸ್​  ವಿಮಾನ ದುಬೈಯಿಂದ ಲಕ್ನೋ ಕಡೆಗೆ ಹೋಗುತ್ತಿತ್ತು. ಇನ್ನೇನು ವಿಮಾನ ಟೇಕಾಫ್​ ಆಯಿತು ಎನ್ನುವಾಗ  ಪ್ರಯಾಣಿಕರಿಗೆ ಆಘಾತ, ಅಚ್ಚರಿ, ಭಯ ಎಲ್ಲವೂ ಒಟ್ಟೊಟ್ಟಿಗೆ ಶುರುವಾಯಿತು. ಅದಕ್ಕೆ ಕಾರಣವೂ ಇದೆ. ವಿಮಾನದಲ್ಲಿದ್ದ ಓರ್ವ ಪ್ರಯಾಣಿಕ ವಿಮಾನ ಟೇಕ್ ಆಫ್ ಆಗುತ್ತಿದ್ದಂತೆ ವ್ಯಕ್ತಿ ತನ್ನ ಬಟ್ಟೆ ಬಿಚ್ಚಿ ಓಡಾಡತೊಡಗಿದ್ದಾನೆ. ಪ್ರಯಾಣಿಕನ ಈ ವರ್ತನೆಯನ್ನು ಕಂಡ ವಿಮಾನದ ಸಿಬ್ಭಂದಿ ಆತನನ್ನು ತಡೆದು, ನಗ್ನನಾಗಿದ್ದ ಆತನ ಮೈಮೇಲೆ ಬಟ್ಟೆ ಹೊದಿಸಿ ಸೀಟಿನ ಮೇಲೆ ಕೂರಿಸಿದ್ದಾರೆ.

ಇದನ್ನೂ ಓದಿ: ಕಾಶ್ಮೀರದಲ್ಲಿ ಹೆಣ್ಣುಮಗುವಿಗೆ ಜನ್ಮ ನೀಡಿದ 65ರ ಮಹಿಳೆ; ಇದೆಲ್ಲ ಅಲ್ಲಾಹ್ ಪವಾಡ ಎಂದ 80 ವರ್ಷದ ತಂದೆ!

ನಿನ್ನೆ ಮಧ್ಯಾಹ್ನ ಈ ಘಟನೆ ನಡೆದಿದ್ದು, ಪ್ರಯಾಣಿಕನ ಈ ವರ್ತನೆಗೆ ಕಾರಣ ತಿಳಿದುಬಂದಿಲ್ಲ. ವಿಮಾನವು ಲಕ್ನೋ ನಿಲ್ದಾಣಕ್ಕೆ ಆಗಮಿಸಿದಂತೆ ವ್ಯಕ್ತಿಯನ್ನು ಭದ್ರತಾ ಸಿಬ್ಬಂದಿಗೆ ನೀಡಿದ್ದಾರೆ ಎನ್ನಲಾಗಿದೆ.

First published:December 30, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...