• ಹೋಂ
  • »
  • ನ್ಯೂಸ್
  • »
  • ದೇಶ-ವಿದೇಶ
  • »
  • Viral Video: ಚಲಿಸುತ್ತಿರುವ ಟ್ರಕ್​ನಲ್ಲಿ 10 ಮೇಕೆ ಎಗರಿಸಿದ ಕಳ್ಳರು! ಹೈವೇಯಲ್ಲಿ ನಡೀತು ಫಿಲ್ಮಿ ಸ್ಟೈಲ್ ಕಳ್ಳತನ

Viral Video: ಚಲಿಸುತ್ತಿರುವ ಟ್ರಕ್​ನಲ್ಲಿ 10 ಮೇಕೆ ಎಗರಿಸಿದ ಕಳ್ಳರು! ಹೈವೇಯಲ್ಲಿ ನಡೀತು ಫಿಲ್ಮಿ ಸ್ಟೈಲ್ ಕಳ್ಳತನ

ಚಲಿಸುತ್ತಿರುವ ಟ್ರಕ್​ನಿಂದ ಮೇಕೆ ಕಳ್ಳತನ

ಚಲಿಸುತ್ತಿರುವ ಟ್ರಕ್​ನಿಂದ ಮೇಕೆ ಕಳ್ಳತನ

ಫಿಲ್ಮಿ ಮಾದರಿಯಲ್ಲಿ (Filmy Style) ಮೇಕೆಗಳನ್ನು (Goats) ಕಳ್ಳತನ ಮಾಡಿರುವ ವಿಡಿಯೋ (Viral Video) ಸಾಮಾಜಿಕ ಜಾಲತಾಣದಲ್ಲಿ (Social Media) ವೈರಲ್ ಆಗುತ್ತಿದೆ.

  • News18 Kannada
  • 2-MIN READ
  • Last Updated :
  • Maharashtra, India
  • Share this:

ಮುಂಬೈ: ನಾವು ಸಿನಿಮಾಗಳಲ್ಲಿ (Cinema) ಚಲಿಸುವ ರೈಲಿನಲ್ಲಿ (Train), ಬಸ್​ಗಳಲ್ಲಿ ಅಥವಾ ಟ್ರಕ್​ಗಳನ್ನ ಲೂಟಿ (Theft) ಮಾಡುವ ಹಲವಾರು ದೃಶ್ಯಗಳನ್ನು ನೋಡಿರುತ್ತೇವೆ. ಆದರೆ ನಿಜ ಜೀವನದಲ್ಲಿ ಫಿಲ್ಮಿ ಮಾದರಿಯಲ್ಲಿ (Filmy Style) ಮೇಕೆಗಳನ್ನು (Goats) ಕಳ್ಳತನ ಮಾಡಿರುವ ವಿಡಿಯೋ (Viral Video) ಸಾಮಾಜಿಕ ಜಾಲತಾಣದಲ್ಲಿ (Social Media) ವೈರಲ್ ಆಗುತ್ತಿದೆ. ಹೆದ್ದಾರಿಯಲ್ಲಿ (Highway) ಕಳ್ಳರ ಗ್ಯಾಂಗ್ ಮೇಕೆ ಸಾಗಿಸುತ್ತಿದ್ದ ಟ್ರಕ್​ನಿಂದ 10 ಕ್ಕೂ ಹೆಚ್ಚು ಮೇಕೆಗಳನ್ನು ಕದ್ದಿದ್ದಾರೆ. ಆದರೆ ಕಳ್ಳತನ ಮಾಡುವ ಬರದಲ್ಲಿ ಮೇಕೆಗಳನ್ನು ವೇಗವಾಗಿ ಚಲಿಸುವ ಟ್ರಕ್​ನಿಂದ ಎಸೆಯುವ ದೃಶ್ಯಗಳು ನೋಡಿ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.


ವೈರಲ್ ಕ್ಲಿಪ್​ನಲ್ಲಿ​ ವೇಗವಾಗಿ ಚಲಿಸುತ್ತಿರುವ ಟ್ರಕ್‌ನಿಂದ ಮೇಕೆಗಳು ಒಂದೊಂದಾಗಿ ಬೀಳುವ ದೃಶ್ಯದ ಮೂಲಕ ಪ್ರಾರಂಭವಾಗುತ್ತದೆ. ಹೆದ್ದಾರಿಯಲ್ಲಿ ಪ್ರಯಾಣಿಸುತ್ತಿದ್ದ ವ್ಯಕ್ತಿಯೊಬ್ಬರು ಇದರ ಚಿತ್ರೀಕರಣ ಮಾಡಿ ಟ್ವೀಟ್ ಮಾಡಿದ್ದಾರೆ. ಇದೀಗ ಸಾಮಾಜಿಕ ಜಾಲತಾಣದಲ್ಲಿ ಈ ದೃಶ್ಯ ಭಾರಿ ವೈರಲ್ ಆಗಿದೆ.


ಇದನ್ನೂ ಓದಿ: Online Games: ಮಹಿಳೆ ಖಾತೆಯಿಂದ 40 ಲಕ್ಷ ಎಗರಿಸಿದ ಬ್ಯಾಂಕ್ ನೌಕರ, ಕೆಲವೇ ಗಂಟೆಗಳಲ್ಲಿ ಕದ್ದ ಹಣ ಮಾಯ!


ಮೇಕೆಗಳನ್ನು ರಸ್ತೆಗೆ ಎಸೆಯುವ ಕಳ್ಳ


ವೈರಲ್ ವಿಡಿಯೋದಲ್ಲಿ ಟ್ರಕ್​ ಮೇಲೆ ನಿಂತಿರುವ ಒಬ್ಬ ವ್ಯಕ್ತಿಯು ಮೇಕೆಗಳನ್ನು ಟ್ರಕ್‌ನಿಂದ ಎಸೆಯುತ್ತಿರುದ್ದಾನೆ. ಅವುಗಳನ್ನು ಕದಿಯುವ ಪ್ರಯತ್ನದಿಂದಲೇ ಹೀಗೆ ಮಾಡಲಾಗಿದೆ ಎಂಬುದು ವಿಡಿಯೋದಲ್ಲಿ ಸ್ಪಷ್ಟವಾಗುತ್ತದೆ. ವಿಡಿಯೋದಲ್ಲಿ ಕಾಣಿಸುವಂತೆ ಕಳ್ಳ ಸುಮಾರು 10 ಮೇಕೆಗಳು ಟ್ರಕ್​ನಿಂದ ಎತ್ತಿ ರಸ್ತೆಗೆ ಎಸೆಯುತ್ತಾನೆ. ತಕ್ಷಣ ಕಾರಿನಲ್ಲಿ ಬರುವವರು ಆ ಮೇಕೆಗಳನ್ನು ಎತ್ತಿ ಕಾರಿಗೆ ಹಾಕಿಕೊಂಡಿದ್ದಾರೆ.



ಮಾನವೀಯತೆ ಇಲ್ಲದ ಮೃಗಗಳು


ಸತತ 10 ಮೇಕೆಗಳನ್ನು ಎಸೆಯುವ ಆರೋಪಿ ಕೆಲವು ಸಮುಯದ ನಂತರ ಕಾರಿನ ಸಹಾಯದಿಂದ ಕೆಳಗಿಳಿಯುವುದು ವಿಡಿಯೋದಲ್ಲಿ ಕಂಡುಬರುತ್ತದೆ.


ಮೇಕೆಗಳನ್ನು ಕದ್ದದ್ದಕ್ಕಿಂತ ಅವುಗಳನ್ನು ವಸ್ತುಗಳಂತೆ ರಸ್ತೆಯ ಬೀಸಾಡುವ ದೃಶ್ಯ ನೋಡಿ ಹಲವು ಈ ದುಷ್ಟರನ್ನ ಮಾನವೀಯತೆ ಇಲ್ಲದ ಮೃಗಗಳು ಎಂದು ಅಕ್ರೋಶ ವ್ಯಕ್ತಪಡಿಸಿದ್ದಾರೆ. ಮೇಕೆಗಳು ರಭಸವಾಗಿ ರಸ್ತೆಯ ಮೇಲೆ ಬಿದ್ದು ಕಾಲು ಮುರಿದಂತಾಗಿ ಒದ್ದಾಡುವ ದೃಶ್ಯ ವಿಡಿಯೋದಲ್ಲಿ ಕಂಡು ಬರುತ್ತದೆ.


ಟ್ರಕ್​ ಡ್ರೈವರ್​ ಬಕ್ರ ಎಂದ ನೆಟಿಜನ್ಸ್


ಇನ್ನು 10ಕ್ಕೂ ಹೆಚ್ಚು ಮೇಕೆಗಳನ್ನು ಟ್ರಕ್​ನಿಂದ ಎಸೆಯುತ್ತಿದ್ದರು ಗಮನಿಸದೇ ಹೋಗುತ್ತಿದ್ದ ಟ್ರಕ್​ ಚಾಲಕಬೊಬ್ಬ ಬಕ್ರ ಎಂದು ಕೆಲವು ಜನರು ಕಮೆಂಟ್ ಮಾಡಿದ್ದಾರೆ.

top videos


    ಈ ವಿಡಿಯೋವನ್ನು ಪೋಸ್ಟ್ ಮಾಡಿರುವ ವ್ಯಕ್ತಿ ಈ ಘಟನೆ ಉತ್ತರ ಪ್ರದೇಶದ ಉನ್ನಾವೋದಲ್ಲಿ ನಡೆದಿದೆ ಎಂದು ಬರೆದುಕೊಂಡಿದ್ದಾರೆ. ಆದರೆ ಈ ಟ್ವೀಟ್​ಗೆ ಪ್ರತಿಕ್ರಿಯೆ ನೀಡಿರುವ  ಉನ್ನಾವೋ ಪೊಲೀಸ್​, ಈ ಘಟನೆ ಮಹಾರಾಷ್ಟ್ರದ ಇಗತ್​ಪುರಿ-ಘೋಟಿ ರಸ್ತೆಯಲ್ಲಿ ನಡೆದಿದೆ, ವಿಚಾರ ತಿಳಿಯದೇ ಸುಳ್ಳು ಸುದ್ದಿಯನ್ನು ವೈರಲ್ ಮಾಡಬೇಡಿ ಎಂದು ಮನವಿ ಮಾಡಿದ್ದಾರೆ.

    First published: