• Home
  • »
  • News
  • »
  • national-international
  • »
  • Madhya Pradesh: ನಂಬಿಕೆ ದ್ರೋಹ ಮಾಡ್ಬೇಡಿ: ಯುವತಿಯ ಕತ್ತು ಸೀಳಿ ಶವದ ವಿಡಿಯೋ ಶೇರ್ ಮಾಡಿದ ಪಾಪಿ!

Madhya Pradesh: ನಂಬಿಕೆ ದ್ರೋಹ ಮಾಡ್ಬೇಡಿ: ಯುವತಿಯ ಕತ್ತು ಸೀಳಿ ಶವದ ವಿಡಿಯೋ ಶೇರ್ ಮಾಡಿದ ಪಾಪಿ!

ಪ್ರೇಯಸಿಯ ಕೊಲೆಗೈದು ವಿಡಿಯೋ ಮಾಡಿದ ಕಿರಾತಕ

ಪ್ರೇಯಸಿಯ ಕೊಲೆಗೈದು ವಿಡಿಯೋ ಮಾಡಿದ ಕಿರಾತಕ

ಮಧ್ಯಪ್ರದೇಶದ ಜಬಲ್‌ಪುರ ಜಿಲ್ಲೆಯ ತಿಲ್ವಾರಾ ಪೊಲೀಸ್ ಠಾಣೆ ವ್ಯಾಪ್ತಿಯ ಮೇಖ್ಲಾ ರೆಸಾರ್ಟ್‌ನ ಕೊಠಡಿಯಲ್ಲಿ ವ್ಯಕ್ತಿಯೊಬ್ಬ ತನ್ನ 22 ವರ್ಷದ ಗೆಳತಿಯನ್ನು ಕೊಂದಿದ್ದಾನೆ. ಕೊಲೆಯ ಮಾಡಿದ ಬಳಿಕ ಆತ ತನ್ನ ಅಪರಾಧವನ್ನು ಒಪ್ಪಿಕೊಂಡು ವಿಡಿಯೋ ಒಂದನ್ನು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದಾನೆ. .

ಮುಂದೆ ಓದಿ ...
  • News18 Kannada
  • Last Updated :
  • Madhya Pradesh, India
  • Share this:

ದೇಶಾದ್ಯಂತ ಸದ್ಯ ಶ್ರದ್ಧಾ ವಾಕರ್ ಕೊಲೆ ಪ್ರಕರಣ ಸದ್ದು ಮಾಡುತ್ತಿದೆ. ಮದುವೆಯಾಗುವಂತೆ ಒತ್ತಾಯಿಸಿದ ಪ್ರೇಯಸಿಯನ್ನು ತುಂಡು ತುಂಡಾಗಿ ಕತ್ತರಿಸಿದ ಅಪ್ಥಾಬ್ ಸದ್ಯ ಪೊಲೀಸರ ಅತಿಥಿಯಾಗಿದ್ದಾನೆ. ಆದರೀಗ ಈ ವಿಚಾರ ತಣ್ಣಗಾಗುವ ಮೊದಲೇ ಮಧ್ಯಪ್ರದೇಶದ ಮತ್ತೊಂದು ಪ್ರಕರಣ ಭಾರೀ ಸದ್ದು ಮಾಡಲಾರಂಭಿಸಿದೆ. ಹೌದು ನವೆಂಬರ್ 8 ರಂದು, ಮಧ್ಯಪ್ರದೇಶದ ಜಬಲ್‌ಪುರ ಜಿಲ್ಲೆಯ ತಿಲ್ವಾರಾ ಪೊಲೀಸ್ ಠಾಣೆ ವ್ಯಾಪ್ತಿಯ ಮೇಖ್ಲಾ ರೆಸಾರ್ಟ್‌ನ ಕೊಠಡಿಯಲ್ಲಿ ವ್ಯಕ್ತಿಯೊಬ್ಬ ತನ್ನ 22 ವರ್ಷದ ಗೆಳತಿಯನ್ನು ಕೊಂದಿದ್ದಾನೆ. ಕೊಲೆ ಮಾಡಿದ ಬಳಿಕ ಆತ ತನ್ನ ಅಪರಾಧವನ್ನು ಒಪ್ಪಿಕೊಂಡು ವಿಡಿಯೋ ಒಂದನ್ನು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದಾನೆ.


ಪ್ರಕರಣದ ಪ್ರಮುಖ ಆರೋಪಿಯು ಸಾಮಾಜಿಕ ಮಾಧ್ಯಮದಲ್ಲಿ ವಿಡಿಯೋವನ್ನು ಪೋಸ್ಟ್ ಮಾಡಿದ ಬಳಿಕ ಈ ಕೊಲೆ ಪ್ರಕರಣ ಬೆಳಕಿಗೆ ಬಂದಿದೆ. ಈ ವಿಡಿಯೋದಲ್ಲಿ ಯುವತಿ ಹೋಟೆಲ್ ಕೋಣೆಯಲ್ಲಿ ಹಾಸಿಗೆಯ ಮೇಲೆ ರಕ್ತದ ಮಡುವಿನಲ್ಲಿ ಬಿದ್ದಿರುವ ದೃಶ್ಯಗಳಿವೆ. ಅಲ್ಲದೇ ಆಕೆಯನ್ನು ಕೊಲೆಗೈದಾತ "ದ್ರೋಹ ಮಾಡಬೇಡಿ" ಎಂದು ಹೇಳಿರುವ ದೃಶ್ಯಗಳೂ ಇದರಲ್ಲಿ ದಾಖಲಾಗಿವೆ. ಹೀಗಾಗಿ ಕೊಲೆಗೀಡಾದ ಯುವತಿ ಆತನಿಗೆ ಮೋಸ ಮಾಡಿರಬಹುದು, ಹೀಗಾಗಿ ಆತ ಆಕೆಯನ್ನು ಕೊಲೆಗೈದಿರಬಹುದು ಎಂದುವ ಅಂದಾಜಿಸಲಾಗಿದೆ. ಆಕೆ ತನಗೆ ಮೋಸ ಮಾಡುತ್ತಿದ್ದಾಳೆ ಎಂಬ ಕಾರಣಕ್ಕೆ ಆಕೆಯನ್ನು ಕೊಂದಿದ್ದಾನೆ ಎಂದು ತಿಳಿದುಬಂದಿದೆ.

Deadly Murder: ಪ್ರಿಯತಮೆಯನ್ನು ಕೊಂದು 35 ಪೀಸ್ ಮಾಡಿ ಫ್ರಿಡ್ಜ್​ನಲ್ಲಿಟ್ಟ, ಆಮೇಲೆ ಮಾಡಿದ್ದು ಕೇಳಿದ್ರೆ ಮೈ  ಜುಂ ಎನ್ನುತ್ತೆ!


ಯುವತಿಯ ಕತ್ತು ಸೀಳಿ ಹಲ್ಲೆ ನಡೆಸಿದ ತಕ್ಷಣ ವಿಡಿಯೋ ಮಾಡಲಾಗಿದ್ದು, ಆಕೆ ನರಳಾಡುತ್ತಾ, ಕೊನೆಯುಸಿರೆಳೆದಿರುವುದನ್ನು ವಿಡಿಯೋದಲ್ಲಿ ಕಾಣಬಹುದು.ಪೊಲೀಸರ ಪ್ರಕಾರ, ಶುಕ್ರವಾರ ಸಂತ್ರಸ್ತೆಯ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಈ ವಿಡಿಯೋವನ್ನು ಪೋಸ್ಟ್​ ಮಾಡಲಾಗಿದೆ. ಮೃತಳನ್ನು ಬರೇಲಿಯ ನಿವಾಸಿ ಶಿಲ್ಪಾ ಝರಿಯಾ ಎಂದು ಗುರುತಿಸಲಾಗಿದೆ. ಇನ್ನು ಘಟನೆ ಬೆನ್ನಲ್ಲೇ ಶಂಕಿತ ಮತ್ತೊಂದು ವಿಡಿಯೋವನ್ನು ಪೋಸ್ಟ್ ಮಾಡಿದ್ದು, ಅದರಲ್ಲಿ ತನ್ನ ಬ್ಯುಸಿನೆಸ್​ ಪಾರ್ಟ್ನರ್​ ಆಕೆಯನ್ನು ಕೊಲ್ಲಲು ಹೇಳಿದ್ದ. ಹೀಗಾಗಿ ತಾನು ಆಕೆಯನ್ನು ಕೊಂದೆ ಎಂದು ಹೇಳಿದ್ದಾನೆ.


ಕ್ರಿಮಿನಲ್ ಅಭಿಜೀತ್ ಪಾಟಿದಾರ್ ಈ ವಿಡಿಯೋದಲ್ಲಿ “ತಾನು ಹಾಗೂ ತನ್ನ ಸಹಚರ ಪಾಟ್ನಾದಲ್ಲಿ ವ್ಯಾಪಾರ ನಡೆಸುತ್ತಿದ್ದೇವೆ. ಆದರೆ ತನ್ನ ಗೆಳತಿ ತನ್ನ ಗೆಳೆಯನೊಂದಿಗೂ ಅಕ್ರಮ ಸಂಬಂಧ ಹೊಂದಿದ್ದಾಳೆ ಎಂದು ಅಭಿಜೀತ್ ಆರೋಪಿಸಿದ್ದಾರೆ. ಜಬಲ್ಪುರಕ್ಕೆ ಪಲಾಯನ ಮಾಡುವ ಮೊದಲು 12 ಲಕ್ಷ ರೂ. ತನಗೆ ನೀಡುವಂತೆ ಮಾಡಿದ್ದ ಎಂದೂ ಹೇಳಿದ್ದಾನೆ. ಸದ್ಯ ಅಭಿಜೀತ್ ತನ್ನ ಗೆಳೆಯನೇ ಆಕೆಯನ್ನು ಕೊಲ್ಲಲು ಹೇಳಿದ್ದ ಎಂದು ಹೇಳತೊಡಗಿದ್ದಾನೆ.

Published by:Precilla Olivia Dias
First published: