Man Slits Girlfriend’s Throat; ಕಾಲೇಜ್ ಕ್ಯಾಂಪಸ್ ನಲ್ಲಿ ಗೆಳತಿಯ ಕತ್ತು ಸೀಳಿ ಕೊಲೆಗೈದ ಯುವಕ

ನಿಧಿಮಾ ಕೊಲೆ ಬಳಿಕ ಅಭಿಷೇಕ್ ತಪ್ಪಿಸಿಕೊಳ್ಳಲು ಸಹ ಪ್ರಯತ್ನಿಸಲಿಲ್ಲ. ಪೊಲೀಸರು ಬರೋವರೆಗೂ ಶವದ ಪಕ್ಕದಲ್ಲಿಯೇ ಕುಳಿತಿದ್ದನು ಎಂದು ಪ್ರತ್ಯಕ್ಷದರ್ಶಿ ಹೇಳಿಕೆ ನೀಡಿದ್ದಾರೆ.

ಸಾಂದರ್ಭಿಕ ಚಿತ್ರ.

ಸಾಂದರ್ಭಿಕ ಚಿತ್ರ.

  • Share this:
    ತಿರುವನಂತಪುರ: 22 ವರ್ಷದ ಯುವತಿಯನ್ನು ಆಕೆಯ ಗೆಳಯನೇ ಕೊಲೆ ಮಾಡಿರುವ ಘಟನೆ ಕೇರಳದ ಕೊಟ್ಟಾಯಂ (Kottayam district in Kerala) ಜಿಲ್ಲೆಯಲ್ಲಿ ನಡೆದಿದೆ. ಇಂದು ಬೆಳಗ್ಗೆ ಸುಮಾರು 11.30ಕ್ಕೆ ಕಾಲೇಜ್ ಕ್ಯಾಂಪಸ್ ನಲ್ಲಿಯೇ ಇಬ್ಬರ ನಡುವೆ ಜಗಳ ನಡೆದಿದೆ. ಜಗಳ ವಿಕೋಪಕ್ಕೆ ತಿರುಗಿದಾಗ ಕೋಪಗೊಂಡ ಯುವಕ ಗೆಳತಿಯ ಕತ್ತು ಸೀಳಿ ಕೊಲೆ ಮಾಡಿದ್ದಾನೆ. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ಯುವಕನನ್ನು ಬಂಧಿಸಿ, ಯುವತಿ ಶವವನ್ನು ಆಸ್ಪತ್ರೆಗೆ ರವಾನಿಸಿದ್ದಾರೆ.

    ಕೊಲೆ ನಡೆದಿದ್ದು ಯಾಕೆ?

    22 ವರ್ಷದ ನಿಧಿಮಾ ಮೋಲ್ ಕೊಲೆಯಾದ ಯುವತಿ. ನಿಧಿಯಾ ಗೆಳಯ ಅಭಿಷೇಕ್ ನನ್ನು ಪೊಲೀಸರು ಬಂಧಿಸಿದ್ದು, ಆತ ತಪ್ಪು ಒಪ್ಪಿಕೊಂಡಿದ್ದಾನೆ ಎಂದು ವರದಿಯಾಗಿದೆ. ನಿಧಿಮಾ ಕೊಟ್ಟಾಯಂ ಜಿಲ್ಲೆಯ ಸೇಂಟ್ ಥಾಮಸ್ ಕಾಲೇಜಿನ ವಿದ್ಯಾರ್ಥಿನಿಯಾಗಿದ್ದು, ಅಭಿಷೇಕ್ ಜೊತೆ ರಿಲೇಶನ್ ಶಿಪ್ ನಲ್ಲಿದ್ದಳು. ಆದ್ರೆ ಇಬ್ಬರ ಮಧ್ಯೆ ವೈ ಮನಸ್ಸು ಉಂಟಾಗಿತ್ತು. ಈ ಸಂಬಂಧ ಅಭಿಷೇಕ್ ಇವತ್ತು ಕಾಲೇಜ್ ಕ್ಯಾಂಪಸ್ (campus of St Thomas college) ನಲ್ಲಿ ನಿಧಿಮಾಳನ್ನ ಭೇಟಿಯಾಗಿದ್ದಾನೆ. ಈ ಇಬ್ಬರ ನಡುವೆ ಜಗಳ ಉಂಟಾಗಿ, ಜಗಳ ಕೊಲೆಯಲ್ಲಿ ಅಂತ್ಯವಾಗಿದೆ.

    ಆರೋಪಿ ತಪ್ಪೊಪ್ಪಿಗೆ ಹೇಳಿಕೆ

    ಪೊಲೀಸ್ ಕಸ್ಟಡಿಯಲ್ಲಿರುವ ಅಭಿಷೇಕ್ ತಪ್ಪೊಪ್ಪಿಕೊಂಡಿದ್ದಾನೆ. ನಾನು ಆಕೆಯ ಜೊತೆ ರಿಲೇಶನ್ ಶಿಪ್ ನಲ್ಲಿದೆ. ಆದ್ರೆ ಇಬ್ಬರ ನಡುವೆ ವೈಮನಸ್ಸು ಉಂಟಾಗಿದ್ದರಿಂದ ಸಮಸ್ಯೆ ಬಗೆಹರಿಸಿಕೊಳ್ಳಲು ಮಾತನಾಡುತ್ತಿದ್ದೆ. ನಿಧಿಮಾ ಪದೇ ಪದೇ ವಾದ ಮಾಡುತ್ತಿದ್ದರಿಂದ ಕೋಪಗೊಂಡು ಕೊಲೆ ಮಾಡಿದೆ ಎಂದು ಹೇಳಿದ್ದಾನೆ. ನಿಧಿಮಾ ಕೊಲೆ ಬಳಿಕ ಅಭಿಷೇಕ್ ತಪ್ಪಿಸಿಕೊಳ್ಳಲು ಸಹ ಪ್ರಯತ್ನಿಸಲಿಲ್ಲ. ಪೊಲೀಸರು ಬರೋವರೆಗೂ ಶವದ ಪಕ್ಕದಲ್ಲಿಯೇ ಕುಳಿತಿದ್ದನು ಎಂದು ಪ್ರತ್ಯಕ್ಷದರ್ಶಿ ಹೇಳಿಕೆ ನೀಡಿದ್ದಾರೆ.

    ಸದ್ಯ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಪ್ರತ್ಯಕ್ಷದರ್ಶಿಗಳ ಹೇಳಿಕೆಯನ್ನು ದಾಖಲಿಸಿಕೊಂಡಿದ್ದಾರೆ. ಕಾಲೇಜಿನ ವಿದ್ಯಾರ್ಥಿಗಳಲ್ಲಿ ಆತಂಕ ಮನೆ ಮಾಡಿದೆ. ಕಾಲೇಜಿಗೆ ಸದ್ಯ ರಜೆ ನೀಡಲಾಗಿದೆ. ಪೊಲೀಸರು ಯುವತಿ ಶವವನ್ನು ಮರಣೋತ್ತರ ಪರೀಕ್ಷೆಗಾಗಿ ಸಾರ್ವಜನಿಕ ಆಸ್ಪತ್ರೆಗೆ ರವಾನಿಸಿದ್ದಾರೆ.

    ಇದನ್ನು ಓದಿ: JDS Candidates: ಎರಡು ಕ್ಷೇತ್ರಗಳಿಗೆ ಅಲ್ಪಸಂಖ್ಯಾತರಿಗೆ ಟಿಕೆಟ್ ನೀಡಿದ ಜೆಡಿಎಸ್; ಸಿಂಧಗಿಗೆ ಶಕೀಲಾ, ಹಾನಗಲ್​ನಿಂದ ನಿಯಾಜ್ ಸ್ಪರ್ಧೆ!

    17 ಬಾರಿ ಗೆಳತಿಗೆ ಚಾಕುವಿನಿಂದ ಇರಿದು ಕೊಂದ ಲವರ್

    ವಿಧವೆಗೆ ಪ್ರೇಮ ನವೇದನೆ ಮಾಡಿಕೊಂಡ ಪಾಗಲ್ ಪ್ರೇಮಿಯೊಬ್ಬ ಆಕೆ ತನ್ನ ಪ್ರೀತಿಯನ್ನು ಒಪ್ಪಿಕೊಳ್ಳದಿದ್ದ ಕಾರಣಕ್ಕೆ ಆಕೆಯನ್ನು ಚಾಕುವಿನಿಂದ ಇರಿದು ಕೊಲೆ ಮಾಡಿರುವ ಘಟನೆ ಕೇರಳದಲ್ಲಿ ನಡೆದಿದೆ. ಸೆಪ್ಟಂಬರ್ 1ರಂದು ಕೇರಳದ ನೇಡುಮಂಗಡ್ ಅರುಣ್ ಎಂಬಾತ ತನ್ನ ವಿಧವೆ ಗೆಳತಿಯನ್ನು 17 ಬಾರಿ ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾನೆ. ಅರುಣ್ ಆರ್ಯಾನಂದ ನಿವಾಸಿ ಎಂದು ತಿಳಿದು ಬಂದಿದೆ. ಸುರಿಯಾ ಗಾಯಿತ್ರಿ ಕೊಲೆಯಾದ ಯುವತಿ. ಗಾಯಿತ್ರಿ ತಾಯಿ ಅಂಗವಿಕಲೆಯಾಗಿದ್ದು, ಮಗಳ ಕಿರುಚಾಟ ಕೇಳಿ ಹೊರ ಬಂದಿದ್ದಾರೆ. ತಾಯಿಯ ಮುಂದೆಯೇ ಮಗಳನ್ನು 17 ಬಾರಿ ಇರಿದು ಕೊಲೆ ಮಾಡಿದ್ದಾನೆ. ಸುರಿಯಾ ಗಾಯಿತ್ರಿ ರಕ್ಷಣೆಗೆ ಮುಂದಾಗಿದ್ದ ಆಕೆಯ ಸೋದರಿಯೂ ಮೇಲೆಯೂ ಅರುಣ್ ಹಲ್ಲೆ ನಡೆಸಿದ್ದನು. ಗಾಯಿತ್ರಿ ಕುಟುಂಬಸ್ಥರು ಸಹಾಯಕ್ಕಾಗಿ ಕೂಗಿ ಕೊಳ್ಳುತ್ತಿದ್ದಂತೆ ನೆರೆಹೊರೆಯವರು ಧಾವಿಸಿದ್ದರು. ಸ್ಥಳೀಯರೇ ಅರುಣ್ ನನ್ನು ಹಿಡಿದು ಪೊಲೀಸರ ವಶಕ್ಕೆ ನೀಡಿದ್ದರು.

    ಗಂಭೀರವಾಗಿ ಗಾಯಗೊಂಡಿದ್ದ ಗಾಯಿತ್ರಿ ಮತ್ತು ಆಕೆಯ ಸೋದರಿಯನ್ನು ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದ್ದರು. ಚಿಕಿತ್ಸೆ ಫಲಕಾರಿಯಾಗದೇ ಗಾಯತ್ರಿ ಸಾವನ್ನಪ್ಪಿದ್ದಳು. ಬಂಧಿತ ಅರುಣ್ ತಂದೆ ಪೊಲೀಸರ ಮುಂದೆ ಹೇಳಿಕೆ ನೀಡಿದ್ದು, ಮಗ ಆಕೆಯನ್ನು ಪ್ರೀತಿಸುತ್ತಿದ್ದನು. ಆದ್ರೆ ಗಾಯತ್ರಿ ಆತನ ಪ್ರೀತಿಯನ್ನು ಒಪ್ಪಿಕೊಂಡಿರಲಿಲ್ಲ. ಸೆಪ್ಟಂಬರ್ 1ರಂದು ಆಕೆಯ ಮನೆಗೆ ತೆರಳಿದ್ದನು ಎಂದು ಹೇಳಿದ್ದಾರೆ.

    ವರದಿ: ಮೊಹ್ಮದ್​​ ರಫೀಕ್​ ಕೆ
    Published by:HR Ramesh
    First published: