Crime News: ಮೊಬೈಲ್​ ಬಳಸ್ತಿದ್ದ ಪತ್ನಿಗೆ 30 ಬಾರಿ ಬ್ಲೇಡ್​ನಿಂದ ಕುಯ್ದ ಗಂಡ

ಹೆಂಡತಿ ಮೊಬೈಲ್ ಬಳಸುವುದನ್ನು ನೋಡಿ ಸಿಟ್ಟಾದ ಗಂಡ ಆಕೆಯ ಮೇಲೆ ಬ್ಲೇಡ್​ನಿಂದ ಗಾಯಗೊಳಿಸಿದ್ದಾನೆ. ಆಕೆಯ ಮುಖ, ಕೈ, ಹೊಟ್ಟೆ, ಬೆನ್ನು ಮತ್ತು ಕಿವಿಗೆ ಕುಯ್ದು ಗಾಯ ಮಾಡಿದ್ದಾನೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಮೊಬೈಲ್ ಗೀಳು ಮಕ್ಕಳಿಗಷ್ಟೇ ಅಲ್ಲ, ಎಲ್ಲಾ ವಯಸ್ಸಿನವರಿಗೂ ಮೊಬೈಲ್ (Mobile) ಬಳಕೆಯ ಹವ್ಯಾಸ (Hobby) ತುಂಬಾ ಸಾಮಾನ್ಯ. ಚಿಕ್ಕಮಕ್ಕಳು ಮೊಬೈಲ್​ನಲ್ಲಿ ಗೇಮ್ ಆಡಿದರೆ, ಹದಿಹರೆಯದವರು ಚಾಟಿಂಗ್, ಸೋಷಿಯಲ್ ಮಿಡಿಯಾದಲ್ಲಿ ಬ್ಯುಸಿ ಇರುತ್ತಾರೆ. ಪುರುಷರು ಗೇಮಿಂಗ್, ಸಿನಿಮಾಗಳಲ್ಲಿ ಮುಳುಗಿದರೆ ಮಹಿಳೆಯರು ಅಡುಗೆ, ಶಾಪಿಂಗ್, ಸೋಷಿಯಲ್ ಮೀಡಿಯಾಗಾಗಿ ಹೆಚ್ಚಾಗಿ ಫೋನ್ ಬಳಸುತ್ತಾರೆ. ಮೊಬೈಲ್ ಗೀಳು ಹತ್ತುವುದು ಸುಲಭ. ಆಸಕ್ತಿಕರ ವಿಷಯ ಕಂಡರೆ ಅಂತಹ ಸಾಕಷ್ಟು ವಿಷಯಗಳನ್ನು ಹುಡುಕಾಡುವ ಮನಸ್ಥಿತಿಯಲ್ಲಿ ಮೊಬೈಲ್ ಬಳಕೆ ಮಿತಿ ಮೀರುತ್ತಿದೆ. ಇದು ಮಕ್ಕಳು ಎಂದು ಪ್ರತ್ಯೇಕಿಸುವ ಅಗತ್ಯವಿಲ್ಲ. ದೊಡ್ಡವರೂ ಮೊಬೈಲ್​ಗಳನ್ನು ಮಿತಿಮೀರಿ ಬಳಸುವುದನ್ನು ಬಹಳಷ್ಟು ಸಲ ನೀವು ಕಂಡಿರುತ್ತೀರಿ.

ಹೆಂಡತಿಯ ಮೊಬೈಲ್ ಬಳಕೆ ನೋಡಿ ಗಂಡನೊಬ್ಬ (Husband) ಅತಿರೇಕವಾಗಿ ವರ್ತಿಸಿದ್ದಾನೆ. ಆತನಿಗೆ ಸಮಾಧಾನವಾಗಿ ಹೇಳುವ ಅವಕಾಶವಿತ್ತಾದರೂ ತಾಳ್ಮೆ ಮೀರಿ ಹೆಂಡತಿಯ ಮೇಲೆ ಬ್ಲೇಡ್​ನಿಂದ (Blade) ಹಲ್ಲೆ ಮಾಡಿದ್ದಾನೆ.

ಪೇಪರ್ ಕಟರ್​ನಿಂದ 30 ಬಾರಿ ಕುಯ್ದ ಗಂಡ

ಗುರುವಾರ ಮಧ್ಯಾಹ್ನ ಮುಂಬೈನ ದಹಿಸರ್ (ಪೂರ್ವ) ನಲ್ಲಿರುವ ಅವರ ನಿವಾಸದಲ್ಲಿ 45 ವರ್ಷದ ಫ್ಯಾಬ್ರಿಕೇಶನ್ ಕೆಲಸಗಾರನೊಬ್ಬ ತನ್ನ ಪತ್ನಿಯ ಮೇಲೆ ಪೇಪರ್ ಕಟ್ಟರ್ ಬ್ಲೇಡ್‌ನಿಂದ 30 ಬಾರಿ ಹಲ್ಲೆ ನಡೆಸಿದ್ದಾನೆ.

ಆಳವಾದ ಗಾಯಗಳಿಂದ ಮಹಿಳೆ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದು, ಅವರ ಸ್ಥಿತಿ ಸ್ಥಿರವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಮನೆ ಮಂದಿಯ ಮುಂದೆಯೇ ನಡೆದ ಘಟನೆ

ಘಟನೆಯು ನ್ಯೂ ಏಕ್ತಾ ಸೊಸೈಟಿಯಲ್ಲಿ ಮಧ್ಯಾಹ್ನ 12.30 ರ ಸುಮಾರಿಗೆ ನಡೆದಿದೆ. SRA ಕಟ್ಟಡ, ದಹಿಸರ್ (ಪೂರ್ವ) ನಲ್ಲಿರುವ ಕೇತಕಿಪಾಡಾದಲ್ಲಿ ಕೃತ್ಯ ನಡೆದಿದೆ.

ಪತ್ನಿ ಮೊಬೈಲ್ ಫೋನ್‌ನಲ್ಲಿ ಹೆಚ್ಚು ಸಮಯ ಕಳೆಯುತ್ತಿದ್ದರಿಂದ ಕೋಪಗೊಂಡ ಆಕೆಯ ಗಂಡ ಫಿರೋಜ್ ರಾಹತ್ (37) ಮೇಲೆ ಬ್ಲೇಡ್‌ನಿಂದ ಹಲ್ಲೆ ನಡೆಸಿದ್ದಾನೆ ಎಂದು ದೂರುದಾರರಾದ ರಹಿಜಾ ಮುಜಾವರ್ (19) ಪೊಲೀಸರಿಗೆ ತಿಳಿಸಿದ್ದಾರೆ. ಈ ಘಟನೆಯು ತನ್ನ ಮತ್ತು ತನ್ನ ಅಜ್ಜಿಯರ ಉಪಸ್ಥಿತಿಯಲ್ಲಿ ನಡೆದಿದೆ ಎಂದು ಅವರು ಹೇಳಿದರು.

ಇದನ್ನೂ ಓದಿ: Man Steals Puppy: ನಾಯಿ ಮಾಂಸದ ಅಡುಗೆ ತಿನ್ನಲು ಪುಟ್ಟ ಶ್ವಾನವನ್ನು ಕದ್ದ ವ್ಯಕ್ತಿ!

ಫಿರೋಜ್ ತನ್ನ ಪತ್ನಿಯನ್ನು ಕೊಲೆ ಮಾಡುವ ಉದ್ದೇಶದಿಂದ ಪೇಪರ್ ಕಟ್ಟರ್ ಬ್ಲೇಡ್ ನಿಂದ ಆಕೆಯ ಮುಖ, ಕೈ, ಹೊಟ್ಟೆ, ಬೆನ್ನು ಮತ್ತು ಕಿವಿಗೆ ಗಾಯ ಮಾಡಿ ಹಾಕಿದ್ದಾನೆ. ಅವನು 30 ಬಾರಿ ಆಕೆಯ ದೇಹದ ಮೇಲೆ ಕುಯ್ದಿದ್ದಾನೆ.

ಅವಳ ದೇಹದ ಮೇಲೆ ಆಳವಾದ ಗಾಯಗಳನ್ನು ಮಾಡಿದ್ದಾನೆ. ಮಗಳು ಆಕೆಯನ್ನು ಮೀರಾ ರಸ್ತೆಯಲ್ಲಿರುವ ಆಸ್ಪತ್ರೆಗೆ ಕರೆದೊಯ್ದಳು. ಅವಳು ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಳು. ಆಕೆಯ ಸ್ಥಿತಿ ಸ್ಥಿರವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ ಎಂದು ದಹಿಸರ್ ಪೊಲೀಸ್ ಠಾಣೆಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಕೊಲೆಗೆ ಪ್ರಯತ್ನ

ನಾವು ಆರೋಪಿಯನ್ನು ಬಂಧಿಸಿದ್ದೇವೆ. 326 ಮತ್ತು 307 ಸೆಕ್ಷನ್‌ಗಳ ಅಡಿಯಲ್ಲಿ ಗಂಭೀರವಾದ ಗಾಯ ಮತ್ತು ಕೊಲೆಗೆ ಯತ್ನಿಸಿದ್ದಕ್ಕಾಗಿ ಪ್ರಕರಣ ದಾಖಲಿಸಿದ್ದೇವೆ. ಅವರು ಚೇತರಿಸಿಕೊಂಡ ನಂತರ ನಾವು ಆಕೆಯ ಹೇಳಿಕೆಯನ್ನು ದಾಖಲಿಸಿಕೊಳ್ಳುತ್ತೇವೆ ಎಂದು ದಹಿಸರ್ ಪೊಲೀಸ್ ಠಾಣೆಯ ಹಿರಿಯ ಪೊಲೀಸ್ ಇನ್ಸ್‌ಪೆಕ್ಟರ್ ಪ್ರವೀಣ್ ಪಾಟೀಲ್ ಹೇಳಿದ್ದಾರೆ.

ಇದನ್ನೂ ಓದಿ: Afghanistan Earthquake: ಭೂಕಂಪದಿಂದ ನಲುಗಿದ ಅಫ್ಘಾನ್​ಗೆ ಮೊದಲು ನೆರವಾಗಿದ್ದೇ ಭಾರತ!

ಇನ್ನೂ ಹೆಚ್ಚಿನ ಕಾರಣಗಳಿರಬಹುದು. ಕುಟುಂಬ ಸದಸ್ಯರು ಆಘಾತದಿಂದ ಹೊರಬಂದ ನಂತರ ಮಾನಾಡುವ ಸ್ಥಿತಿಗೆ ಬಂದ ಮೇಲೆ ನಾವು ಈ ಬಗ್ಗೆ ತನಿಖೆ ನಡೆಸುತ್ತೇವೆ ಎಂದು ಅಧಿಕಾರಿ ಹೇಳಿದರು.
Published by:Divya D
First published: