HOME » NEWS » National-international » MAN SLAPS FRENCH PRESIDENT EMMANUEL MACRON IN A CROWD ARRESTED IMMEDIATELY STG SKTV

Emmanuel Macron: ಎಲ್ಲರೆದುರು ಫ್ರೆಂಚ್ ಅಧ್ಯಕ್ಷನ ಕಪಾಳಕ್ಕೆ ಹೊಡೆದ ವ್ಯಕ್ತಿ: ಇಬ್ಬರ ಬಂಧನ

Emmanuel Macron: ಜನರ ಬಳಿ ಹೋದ ಮ್ಯಾಕ್ರನ್‌ ಒಬ್ಬ ವ್ಯಕ್ತಿಗೆ ಸ್ವಾಗತಿಸಲು ತನ್ನ ಕೈ ಕುಲುಕಿದರು. ಆದರೆ, ಆ ವ್ಯಕ್ತಿ ಕಪಾಳಮೋಕ್ಷ ಮಾಡಿದ್ದು, ನಂತರ ಭದ್ರತಾ ಸಿಬ್ಬಂದಿ ಆತನನ್ನು ಹಾಗೂ ಮತ್ತೊಬ್ಬ ವ್ಯಕ್ತಿ ಸೇರಿ ಇಬ್ಬರನ್ನು ಬಂಧಿಸಲಾಗಿದೆ ಎಂದು ವರದಿಯಾಗಿದೆ.

Trending Desk
Updated:June 9, 2021, 1:31 PM IST
Emmanuel Macron: ಎಲ್ಲರೆದುರು ಫ್ರೆಂಚ್ ಅಧ್ಯಕ್ಷನ ಕಪಾಳಕ್ಕೆ ಹೊಡೆದ ವ್ಯಕ್ತಿ: ಇಬ್ಬರ ಬಂಧನ
ಫ್ರೆಂಚ್ ಅಧ್ಯಕ್ಷ
  • Share this:
Emmanuel Macron: ಆಗ್ನೇಯ ಫ್ರಾನ್ಸ್‌ನ ಡ್ರೋಮ್ ಪ್ರದೇಶದಲ್ಲಿ ಜನಸಮೂಹದೊಂದಿಗೆ ನಡೆದಾಡುವ ಅಧಿವೇಶನದಲ್ಲಿ ಫ್ರೆಂಚ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್‌ಗೆ ವ್ಯಕ್ತಿಯೊಬ್ಬ ಕಪಾಳ ಮೋಕ್ಷ ಮಾಡಿರುವ ಘಟನೆ ನಡೆದಿದೆ. ಸೋಷಿಯಲ್ ಮೀಡಿಯಾದಲ್ಲಿ ವೈರಲ್‌ ಆಗಿರುವ ವಿಡಿಯೋದಲ್ಲಿ ಮೆಟಲ್‌ ಬ್ಯಾರಿಯರ್‌ ಹಿಂದೆ ಇರುವ ಜನರ ಬಳಿ ಹೋದ ಮ್ಯಾಕ್ರನ್‌ ಒಬ್ಬ ವ್ಯಕ್ತಿಗೆ ಸ್ವಾಗತಿಸಲು ತನ್ನ ಕೈ ಕುಲುಕಿದರು. ಆದರೆ, ಆ ವ್ಯಕ್ತಿ ಕಪಾಳಮೋಕ್ಷ ಮಾಡಿದ್ದು, ನಂತರ ಭದ್ರತಾ ಸಿಬ್ಬಂದಿ ಆತನನ್ನು ಹಾಗೂ ಮತ್ತೊಬ್ಬ ವ್ಯಕ್ತಿ ಸೇರಿ ಇಬ್ಬರನ್ನು ಬಂಧಿಸಲಾಗಿದೆ ಎಂದು ವರದಿಯಾಗಿದೆ. ಈ ಘಟನೆ ಬಗ್ಗೆ ಪ್ರತಿಕ್ರಿಯೆ ನೀಡಿದ ಮ್ಯಾಕ್ರನ್, ತನ್ನ ಸುರಕ್ಷತೆ ಬಗ್ಗೆ ತಾನು ಹೆದರುವುದಿಲ್ಲ. ತನ್ನ ಕೆಲಸವನ್ನು ಮುಂದುವರೆಸುವುದನ್ನು ಯಾರೂ ತಡೆಯುವುದು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.

ಫ್ರೆಂಚ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್‌ಗೆ ವ್ಯಕ್ತಿಯೊಬ್ಬ ಕಪಾಳ ಮೋಕ್ಷ ಮಾಡಿದ ನಂತರ ಇಬ್ಬರನ್ನು ಬಂಧಿಸಲಾಗಿದೆ ಎಂದು ಬಿಎಫ್‌ಎಂ ಟಿವಿ ಮತ್ತು ಆರ್‌ಎಂಸಿ ರೇಡಿಯೋ ಮಂಗಳವಾರ ವರದಿ ಮಾಡಿದೆ. ಬಿಎಫ್‌ಎಂ ಟಿವಿ ಮತ್ತು ಆರ್‌ಎಂಸಿ ವಿಡಿಯೋದ ಕ್ಲಿಪ್‌ಗಳು ವೈರಲ್‌ ಆಗಿವೆ. ಕನ್ನಡಕ, ಮಾಸ್ಕ್‌ನೊಂದಿಗೆ ಟಿ ಶರ್ಟ್‌ ಧರಿಸಿರುವ ವ್ಯಕ್ತಿಯು “ಡೌನ್ ವಿಥ್ ಮ್ಯಾಕ್ರೋನಿಯಾ” ಎಂದು ಕೂಗಿ ನಂತರ ಮ್ಯಾಕ್ರನ್‌ ಅವರ ಎಡ ಭಾಗದ ಕೆನ್ನೆಗೆ ಹೊಡೆದಿದ್ದಾರೆ.

ಇದನ್ನೂ ಓದಿ: ರಸ್ತೆಯಲ್ಲಿ ನರಳುತ್ತಿದ್ದ ಜಿರಳೆಯನ್ನು ಆಸ್ಪತ್ರೆ ಸೇರಿಸಿದ ವ್ಯಕ್ತಿ, ಬದುಕುವ ಚಾನ್ಸ್ 50/50 ಎಂದ ಡಾಕ್ಟರ್ !

ಮ್ಯಾಕ್ರನ್‌ನ ಭದ್ರತಾ ಸಿಬ್ಬಂದಿ ಆ ವ್ಯಕ್ತಿಯನ್ನು ನೆಲಕ್ಕೆ ಎಳೆಯಲು ಹಾಗೂ ಮ್ಯಾಕ್ರನ್‌ನನ್ನು ಆ ವ್ಯಕ್ತಿಯಿಂದ ದೂರ ಸರಿಸಲು ತಕ್ಷಣವೇ ಮಧ್ಯ ಪ್ರವೇಶ ಮಾಡಿದ್ದಾರೆ. ಇನ್ನು, ಈ ಘಟನೆಯನ್ನು ಭದ್ರತಾ ಸಿಬ್ಬಂದಿಯೂ ದೃಢಪಡಿಸಿದ್ದಾರೆ. ಹಾಸ್ಪಿಟಾಲಿಟಿ ಉದ್ಯಮದ ವೃತ್ತಿಪರ ತರಬೇತಿ ಕಾಲೇಜಿಗೆ ಫ್ರೆಂಚ್‌ ಅಧ್ಯಕ್ಷರು ಭೇಟಿ ನೀಡಿದ್ದಾಗ ಈ ಘಟನೆ ಸಂಭವಿಸಿದೆ ಎಂದು ವರದಿಯಾಗಿದೆ.

ಫ್ರೆಂಚ್ ಸೈನ್ಯದ ಯುದ್ಧ ಕೂಗು "ಮಾಂಟ್ಜೋಯ್ ಸೇಂಟ್ ಡೆನಿಸ್" ಎಂದು ಸಹ ಆ ವ್ಯಕ್ತಿ ಕೂಗಿ ಹೇಳಿದ್ದಾನೆ. ಇನ್ನು, ಆ ಘಟನೆ ನಡೆದ ಸ್ವಲ್ಪ ಸಮಯದ ನಂತರ ಫ್ರಾನ್ಸ್‌ ಅಧ್ಯಕ್ಷರು ಮತ್ತೆ ಜನರ ಬಳಿ ಬಂದು ಕೆಲವರಿಗೆ ಕೈಕುಲುಕಿದ್ದಾರೆ ಎಂದು ಟ್ವಿಟ್ಟರ್‌ನಲ್ಲಿ ಅಪ್ಲೋಡ್‌ ಆದ ಮತ್ತೊಂದು ವಿಡಿಯೋ ಹೇಳುತ್ತದೆ.





ಈ ಘಟನೆಯ ಬಗ್ಗೆ ಫ್ರಾನ್ಸಿನ್‌ಫೊ ರೇಡಿಯೋಗೆ ಪ್ರತಿಕ್ರಿಯೆ ನೀಡಿದ ಸ್ಥಳೀಯ ಮೇಯರ್, ಜೇವಿಯರ್ ಏಂಜೆಲಿ, ಅಪರಾಧಿಯನ್ನು ಹಿಡಿದಿಟ್ಟುಕೊಂಡ ಬಳಿಕ ಮ್ಯಾಕ್ರನ್‌ ''ಅವನನ್ನು ಬಿಡಿ, ಅವನನ್ನು ಬಿಡಿ" ಎಂದು ಭದ್ರತಾ ಸಿಬ್ಬಂದಿಗೆ ಹೇಳಿದರು ಎಂದು ತಿಳಿಸಿದ್ದಾರೆ. ಇಬ್ಬರನ್ನು ಬಂಧಿಸಲಾಗಿದೆ ಎಂದು ರಾಯಿಟರ್ಸ್‌ಗೆ ಪೊಲೀಸ್‌ ಮೂಲ ತಿಳಿಸಿದೆ. ಮ್ಯಾಕ್ರನ್‌ಗೆ ಕಪಾಳಮೋಕ್ಷ ಮಾಡಿದ ವ್ಯಕ್ತಿಯ ಗುರುತು ಮತ್ತು ಅವನ ಉದ್ದೇಶಗಳು ಸ್ಪಷ್ಟವಾಗಿಲ್ಲ ಎಂದೂ ತಿಳಿದುಬಂದಿದೆ.

ಕಾಲೇಜಿಗೆ ಭೇಟಿ ನೀಡುವ ಜತೆಗೆ, ಕೋವಿಡ್ - 19 ಸಾಂಕ್ರಾಮಿಕ ರೋಗದ ನಂತರ ಸಾಮಾನ್ಯ ಜೀವನಕ್ಕೆ ಮರಳುವ ಬಗ್ಗೆ ಮಾತನಾಡಲು ಮ್ಯಾಕ್ರನ್ ಡ್ರೋಮ್ ಪ್ರದೇಶಕ್ಕೆ ಭೇಟಿ ನೀಡಿದ್ದರು. ಮುಂದಿನ ವರ್ಷ ನಡೆಯಲಿರುವ ಅಧ್ಯಕ್ಷೀಯ ಚುನಾವಣೆಗೆ ಮುನ್ನ ರಾಷ್ಟ್ರದ ನಾಡಿಮಿಡಿತವನ್ನು ತಿಳಿದುಕೊಳ್ಳುವುದು ಸಹ ಅವರ ಭೇಟಿಯ ಉದ್ದೇಶಗಳಲ್ಲಿ ಒಂದು ಎಂದು ಅವರ ಸಹಾಯಕರು ಹೇಳಿದ್ದಾರೆ.
Youtube Video

2016 ರಲ್ಲಿ, ಮ್ಯಾಕ್ರನ್ ಆರ್ಥಿಕ ಮಂತ್ರಿಯಾಗಿದ್ದ ಸಮಯದಲ್ಲಿ ಕಾರ್ಮಿಕ ಸುಧಾರಣೆಗಳ ವಿರುದ್ಧ ನಡೆದ ಮುಷ್ಕರದಲ್ಲಿ ಕಠಿಣ-ಎಡ ಕಾರ್ಮಿಕ ಸಂಘಗಳು ಅವರ ಬಳಿ ಮೊಟ್ಟೆಗಳನ್ನು ಎಸೆದಿದ್ದ ಘಟನೆ ನಡೆದಿತ್ತು. ತನ್ನ ದೃಢ ನಿಶ್ಚಯವನ್ನು ತಡೆಯುವುದಿಲ್ಲ ಎಂದು ಅವರು ಹೇಳಿದ್ದರು. ಎರಡು ವರ್ಷಗಳ ನಂತರ, ಸರ್ಕಾರಿ ವಿರೋಧಿ ''ಯೆಲ್ಲೋ ವೆಸ್ಟ್‌'' ಪ್ರತಿಭಟನಾಕಾರರು ಮ್ಯಾಕ್ರನ್‌ರನ್ನು ಮೂದಲಿಸಿದ್ದರು ಹಾಗೂ ಅಸಮಾಧಾನ ಸೂಚಕ ಧ್ವನಿಯಾದ ''ಬೂ'' ಮಾಡಿದ್ದರು.
Published by: Soumya KN
First published: June 9, 2021, 1:13 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories