ಉತ್ತರಪ್ರದೇಶ: ಪೊಲೀಸ್ ಠಾಣೆಯ ಎದುರೇ ಗುಂಡಿಕ್ಕಿ ವ್ಯಕ್ತಿಯ ಹತ್ಯೆ!

ಈ ಸಂಬಂಧ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ. ಭೂವಿವಾದ ಹಿನ್ನಲೆಯಲ್ಲಿ ಈ ಘಟನೆ ನಡೆದಿದ್ದು, ಕೂಡಲೇ ಬಂಧಿಸಿ ವಿಚಾರಣೆಗೆ ಒಳಪಡಿಸಲಾಗುವುದು ಎಂದು ಎಸ್‌ಪಿ ವಿಪಿನಕುಮಾರ್ ಮಿಶ್ರಾ ತಿಳಿಸಿದ್ದಾರೆ. 

news18
Updated:January 10, 2019, 10:35 PM IST
ಉತ್ತರಪ್ರದೇಶ: ಪೊಲೀಸ್ ಠಾಣೆಯ ಎದುರೇ ಗುಂಡಿಕ್ಕಿ ವ್ಯಕ್ತಿಯ ಹತ್ಯೆ!
ಸಾಂದರ್ಭಿಕ ಚಿತ್ರ
news18
Updated: January 10, 2019, 10:35 PM IST
ನವದೆಹಲಿ(ಜ.10): ಪೊಲೀಸ್​​ ಠಾಣೆಯ ಎದುರೇ ವ್ಯಕ್ತಿಯೋರ್ವನನ್ನು ಗುಂಡಿಕ್ಕಿ ಕೊಂದ ಅಮಾನವೀಯ ಘಟನೆ ಉತ್ತರಪ್ರದೇಶದಲ್ಲಿ ನಡೆದಿದೆ. ಭೂ ವಿವಾದಕ್ಕೆ ಸಂಬಂಧಿಸಿದಂತೆ ಪೊಲೀಸ್​ ಠಾಣೆಯ ಎದುರೇ ಮಾರಾಮಾರಿ ಸಂಭವಿಸಿದ್ದು, 40 ವರ್ಷದ ವ್ಯಕ್ತಿಯನ್ನು ಗುಂಡಿಟ್ಟು ಹತ್ಯೆಗೈದಿದ್ದಾರೆ. ಅಲ್ಲದೇ ಜಗಳದಲ್ಲಿ ಮತ್ತೋರ್ವ ಗಾಯಗೊಂಡಿದ್ದು, ಚಿಕಿತ್ಸೆಗಾಗಿ ಸ್ಥಳೀಯ ಆಸ್ಪತ್ರೆಗೆ ರವಾನಿಸಿದ್ದಾರೆ.

ಉತ್ತರಪ್ರದೇಶದಲ್ಲಿನ ಠಾಣೆಯೊಂದರ ಎದುರಿನ ಅಂಗಡಿಯಲ್ಲಿ ತ್ರಿಲೋಕಿ ಮಾಲಿ ಎಂಬಾತ ಕುಳಿತು ಹರಟೆ ಹೊಡೆಯುತ್ತಿದ್ದ. ಈ ವೇಳೆ ಆತನನ್ನು ಕೊಲ್ಲಬೇಕೆಂದೆ ಹಲವು ದಿನಗಳಿಂದ ಹೊಂಚು ಹಾಕಿದ್ದ ಸಂಜಯ್​​ ಸಿಂಗ್​ ಎಂಬಾತ ಮಾಲಿಯನ್ನ ಗುಂಡಿಕ್ಕಿ ಕೊಂದಿದ್ದಾನೆ.ಮಾಲಿ ಸ್ಥಳದಲ್ಲಿಯೇ ಅಸುನೀಗಿದ್ದು, ಆತನ ಸಹಚರ ಸುನೀಲ್​ಗೆ ಗಂಭೀರ ಗಾಯಗಳಾಗಿವೆ.

ಇದನ್ನೂ ಓದಿ: Alok Verma vs Narendra Modi: ಸಿಬಿಐ ನಿರ್ದೇಶಕ ವರ್ಮಾರನ್ನೇ ವಜಾ ಮಾಡಿದ ಮೋದಿ ನೇತೃತ್ವದ ಸಮಿತಿ

ಈ ಸಂಬಂಧ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ. ಭೂವಿವಾದ ಹಿನ್ನಲೆಯಲ್ಲಿ ಈ ಘಟನೆ ನಡೆದಿದ್ದು, ಕೂಡಲೇ ಬಂಧಿಸಿ ವಿಚಾರಣೆಗೆ ಒಳಪಡಿಸಲಾಗುವುದು ಎಂದು ಎಸ್‌ಪಿ ವಿಪಿನಕುಮಾರ್ ಮಿಶ್ರಾ ತಿಳಿಸಿದ್ದಾರೆ.

----------------
ಕಾಟಾಚಾರಕ್ಕೆ ಆಸ್ಪತ್ರೆಗೆ ಭೇಟಿ ನೀಡಿದ ಆರೋಗ್ಯ ಸಚಿವರ ವಿರುದ್ಧ ಸಾರ್ವಜನಿಕರ ಆಕ್ರೋಶ
First published:January 10, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ