ಅದೊಂದಿತ್ತು ಕಾಲ ನೋಡಿ ಫೋನ್ ನಂಬರ್ (Phone Number) ಅನ್ನು ಡೈರಿಯಲ್ಲಿ ಬರೆದುಕೊಳ್ಳುವುದು, ರಂಗೋಲಿಗಳನ್ನು ರಂಗೋಲಿ ಪುಸ್ತಕದಲ್ಲಿ ಬಿಡಿಸಿ ರಂಗೋಲಿ ಬುಕ್ ಮಾಡಿಕೊಳ್ಳುವುದು, ಸಿನಿಮಾ ಗೀತೆಗಳನ್ನು ಬರೆದುಕೊಂಡಿರುವುದು, ಸಿನಿಮಾ ನಾಯಕರ (Film Hero) ಫೋಟ್ ಕಟ್ ಮಾಡಿ ಅವುಗಳನ್ನು ಬುಕ್ ಒಂದರಲ್ಲಿ ಅಂಟಿಸುವುದು ಹೀಗೆ ಏನೇ ಸವಿ ನೆನಪು-ಕಹಿ ಘಟನೆ ಇದ್ದರೂ ಪುಸ್ತಕದಲ್ಲಿ ಬರೆದಿಟ್ಟು ನೋಡುವ, ನೆನಪಿಸಿಕೊಳ್ಳುವ ಯುಗವಿತ್ತು. ಟೆಕ್ ವಲಯ, ಡಿಜಿಟಲ್ ಲೋಕ (Digital Word) ಎಲ್ಲವೂ ಬೆಳವಣಿಗೆ ಆಗುತ್ತಿದ್ದಂತೆ ಪುಸ್ತಕ, ಪೆನ್‌ಗಳ ಬಳಕೆ ತಗ್ಗುತ್ತಾ ಎಲ್ಲವನ್ನೂ ಮೊಬೈಲ್, ಗ್ಯಾಜೆಟ್‌ಗಳಲ್ಲಿ ನಮೂದಿಸಿಕೊಳ್ಳುವ ಕಾಲಕ್ಕೆ ನಾವು ಈಗ ಬಂದುಬಿಟ್ಟಿದ್ದೇವೆ. ಆದರೆ ನಮ್ಮ ಬಾಲ್ಯದಲ್ಲಿ (Childhood) ನಾವು ಮಾಡಿಟ್ಟ ಈ ಕೆಲಸವನ್ನು ಅಥವಾ ಇನ್ಯಾರೋ ಅವರ ಕಥೆಯನ್ನು ಹಂಚಿಕೊಂಡರೆ ನಮಗೂ ನಮ್ಮ ಇಂತಹ ನೆನಪುಗಳು ಕಣ್ಮುಂದೆ ಬರುತ್ತವೆ.
This is insane. Apparently, Anbe Vaa (1966) was inspired from Come September (1961) and my grandfather had watched both the films in theatres. https://t.co/jiICmE8aRq pic.twitter.com/s2legfU7yl
— A K (@iamakshy_06) February 25, 2023
ಅಜ್ಜನ ಸಿನಿಮಾ ಟ್ರ್ಯಾಕ್ ರೆಕಾರ್ಡ್ ಹಂಚಿಕೊಂಡ ಮೊಮ್ಮಗ
ಹೀಗೆ ಇಲ್ಲೊಬ್ಬ ಅಜ್ಜ ತಾನು ತನ್ನ ಜೀವಮಾನದಲ್ಲಿ ನೋಡಿದ ಎಲ್ಲಾ ಸಿನಿಮಾಗಳನ್ನು ಬುಕ್ ಒಂದರಲ್ಲಿ ಬರೆದಿದ್ದಾರೆ ನೋಡಿ. ಈ ಒಂದು ನೆನಪನ್ನು ಅವರ ಮೊಮ್ಮಗ ಪುಸ್ತಕದ ಕೆಲ ಪುಟಗಳನ್ನು ಟ್ವಿಟರ್‌ನಲ್ಲಿ ಹಂಚಿಕೊಳ್ಳುವ ಮೂಲಕ ಅಜ್ಜನ ಸಿನಿಮಾ ಡೈರಿಯನ್ನು ಹಂಚಿಕೊಂಡಿದ್ದಾರೆ.
ಹಿಂದೆಯೇ ಲೆಟರ್ ಬಾಕ್ಸ್ಡ್ ರಚಿಸಿದ್ದರು ಈ ಹಿರಿಯ ವ್ಯಕ್ತಿ
ಸಿನಿಮಾ ಬಗ್ಗೆ ಅಭಿರುಚಿ ಇರುವವರು ನೋಡಿದ ಸಿನಿಮಾಗಳ ಪಟ್ಟಿ ಮಾಡಲು, ವೀಕ್ಷಣೆಯ ದಿನಾಂಕಗಳನ್ನು ನಮೂದಿಸಲು, ವಿಮರ್ಶೆ, ಅಭಿಪ್ರಾಯ ಹಂಚಿಕೊಳ್ಳಲು ಈಗ ಲೆಟರ್ ಬಾಕ್ಸ್ಡ್ (Letterboxd) ಎಂಬ ಜಾಗತಿಕ ಸಾಮಾಜಿಕ ನೆಟ್‌ವರ್ಕ್ ಇದೆ. ಆದರೆ ಈ ಸೌಲಭ್ಯ ಹಿಂದೆ ಇರಲಿಲ್ಲ. ಹೀಗಾಗಿ ಎಲ್ಲವನ್ನೂ ಈ ಹಿರಿಯ ವ್ಯಕ್ತಿ ಪುಸ್ತಕದಲ್ಲಿ ಬರೆದು ಇಟ್ಟುಕೊಂಡಿದ್ದರು. ಇವರು ಆಗ ಬರೆದ ಈ ರೆಕಾರ್ಡ್ ಈಗಿನ ಲೆಟರ್ ಬಾಕ್ಸ್ಡ್ ಅನ್ನೇ ಹೋಲುವಂತಿದೆ.
@iamakshy_06 ಎಂಬ ಬಳಕೆದಾರರು ಟ್ವಿಟರ್‌ನಲ್ಲಿ ತಮ್ಮ ಅಜ್ಜನ ಲೆಟರ್ ಬಾಕ್ಸ್ಡ್ ಆವೃತ್ತಿಯ ಚಿತ್ರವನ್ನು ಹಂಚಿಕೊಂಡಿದ್ದು,. “ಬಹಳ ಹಿಂದೆಯೇ, ನನ್ನ ತಾತ ಅವರು ವೀಕ್ಷಿಸಿದ ಚಲನಚಿತ್ರಗಳ ದಾಖಲೆಯನ್ನು ಇರಿಸಿಕೊಳ್ಳಲು ಲೆಟರ್‌ಬಾಕ್ಸ್ಡ್‌ನ ತಮ್ಮದೇ ಆದ ಆವೃತ್ತಿಯನ್ನು ರಚಿಸಿದ್ದಾರೆ.
Long long ago, my grandfather has created his own version of Letterboxd to keep record of the movies he had watched. I’m awestruck by the fact that he’s watched Hitchcock and James Bond films in theatres. pic.twitter.com/uiVhk7RqOY
— A K (@iamakshy_06) February 25, 2023
ಅವರು ಆಗಲೇ ಹಿಚ್‌ಕಾಕ್ ಮತ್ತು ಜೇಮ್ಸ್ ಬಾಂಡ್ ಚಲನಚಿತ್ರಗಳನ್ನು ಥಿಯೇಟರ್‌ಗಳಲ್ಲಿ ವೀಕ್ಷಿಸಿದ್ದಾರೆ ಎಂಬುದನ್ನು ತಿಳಿದು ನಾನು ನಿಜಕ್ಕೂ ಆಶ್ಚರ್ಯಗೊಂಡಿದ್ದೇನೆ" ಎಂಬ ಶೀರ್ಷಿಕೆ ಜೊತೆಗೆ ಕೆಲವು ಫೋಟೋಗಳನ್ನು ಶೇರ್ ಮಾಡಿದ್ದಾರೆ.
ಸಿನಿಮಾ, ದಿನಾಂಕ, ಭಾಷೆ, ಸಮಯ.. ಎಲ್ಲವೂ ರೆಕಾರ್ಡ್ ಬುಕ್‌ನಲ್ಲಿದೆ
ಅಕ್ಷಯ್ ಹಂಚಿಕೊಂಡ ಫೋಟೋ ಪೋಸ್ಟ್‌ನಲ್ಲಿ ಈ ಹಿರಿಯ ವ್ಯಕ್ತಿ ಸರಿಸುಮಾರು 286 ಸಿನಿಮಾಗಳನ್ನು ನೋಡಿರುವುದು ಕಾಣಬಹುದು. ಆದರೆ ಅಕ್ಷಯ್ ಪ್ರಕಾರ ನಿಖರವಾದ ದಾಖಲೆಯು 470 ಚಲನಚಿತ್ರಗಳನ್ನು ಇವರು ವೀಕ್ಷಿಸಿರಬಹುದು ಎಂದು ಹೇಳಿದ್ದಾರೆ. ಡೈರಿಯಲ್ಲಿ ಆ ವ್ಯಕ್ತಿ ತಾನು ನೋಡಿದ ಸಿನಿಮಾ ಹೆಸರು, ದಿನಾಂಕ, ಭಾಷೆ, ಸಮಯ ಎಲ್ಲವನ್ನೂ ತಮ್ಮದೇ ಕೈಬರಹದ ಮೂಲಕ ಪುಸ್ತಕದಲ್ಲಿ ನಮೂದಿಸಿದ್ದಾರೆ.
ಇದನ್ನೂ ಓದಿ: Nayanthara: ನಯನತಾರಾ ಗರ್ಭಿಣಿಯಾ? ಪತಿ ವಿಘ್ನೇಶ್ ಪೋಸ್ಟ್ ವೈರಲ್
ಇಂಟರ್‌ನೆಟ್‌ನಲ್ಲಿ ಪೋಸ್ಟ್ ವೈರಲ್
ಅಕ್ಷಯ್ ಈ ಪೋಸ್ಟ್ ಅನ್ನು ಹಂಚಿಕೊಂಡಾಗಿನಿಂದ 288,000 ಕ್ಕೂ ಹೆಚ್ಚು ವೀಕ್ಷಣೆಗಳು ಮತ್ತು ಸಾವಿರಾರು ಲೈಕ್‌ಗಳನ್ನು ಪಡೆದುಕೊಂಡಿದೆ. ನೆಟ್ಟಿಗರಂತೂ ಅಜ್ಜನ ತಾಳ್ಮೆಗೆ, ಪರಿಶ್ರಮಕ್ಕೆ, ಇವರಿಗಿದ್ದ ಸಿನಿಮಾ ಪ್ರೀತಿಗೆ ಮನಸೋತಿದ್ದಾರೆ. ಕೆಲ ಬಳಕೆದಾರರಂತೂ ಇದೊಂದು ನಿಧಿ, ಅಮೂಲ್ಯವಾದ ಕ್ಷಣಗಳು, ದಾಖಲೆಗಳು ಎಂದು ಬರೆದಿದ್ದಾರೆ.
ಒಬ್ಬ ಬಳಕೆದಾರ ಕೈ ಬರಹದ ವಸ್ತುಗಳು ಯಾವಾಗಲೂ ಮೋಡಿ ಮಾಡುತ್ತವೆ ಎಂದು ಕಾಮೆಂಟ್ ಮಾಡಿದರೆ ಇನ್ನೋರ್ವ ಬಳಕೆದಾರ ಇದೊಂದು ಎಪಿಕ್ ಲಾಗಿಂಗ್ ಆಗಿದ್ದು ಮ್ಯೂಸಿಯಂನಲ್ಲಿಡಬೇಕು ಎಂದಿದ್ದಾರೆ. ಕೆಲವರಂತೂ ಹಿರಿಯ ವ್ಯಕ್ತಿಯು ಬರೆದ ಕ್ರಮ, ಸ್ಪಷ್ಟತೆ ಕೋಷ್ಟಕ ಎಲ್ಲವನ್ನೂ ಹಾಡಿ ಹೊಗಳಿದ್ದಾರೆ. ಇನ್ನೊಬ್ಬ ಟ್ವಿಟರ್ ಬಳಕೆದಾರರು ತಮ್ಮ ಅಜ್ಜ 1958 ರಿಂದ 1974 ರವರೆಗಿನ ಚಲನಚಿತ್ರಗಳ ಟ್ರ್ಯಾಕ್ ಅನ್ನು ಇಟ್ಟುಕೊಂಡಿದ್ದಾರೆ ಎಂದು ತಿಳಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ