Crime News: ಪತಿ, ಪತ್ನಿ ಮತ್ತು ಕಾಮುಕ ಬಾಸ್! "ನಿನ್ ಹೆಂಡ್ತಿ ಕಳಿಸು" ಎಂದಿದ್ದಕ್ಕೆ ಈತ ಮಾಡಿದ್ದೇನು?

ತನ್ನ ಬಾಸ್ ಮಾತು ಕೇಳಿ ಗೋಕುಲ್ ಯಾದವ್ ಆಘಾತಕ್ಕೆ ಒಳಗಾಗಿದ್ದಾರೆ. ವರ್ಗಾವಣೆ ಅನಿವಾರ್ಯ ನಿಜ, ಹಾಗಂತೆ ಬಾಸ್ ಹೇಳಿದ್ದು ಕೇಳುವುದುಕ್ಕೂ ಆಗುವುದಿಲ್ಲ. ಹೀಗಾಗಿ ಏನು ಮಾಡುವುದು ಅಂತ ತೋಚದೇ ಕಂಗಾಲಾಗಿದ್ದಾರೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಉತ್ತರ ಪ್ರದೇಶ: ಖಾಸಗಿ ಕಂಪನಿ (Private Company) ಇರಲಿ, ಸರ್ಕಾರಿ ಕಚೇರಿಗಳೇ (Government office) ಇರಲಿ. ಉದ್ಯೋಗಿಗಳು (Employee) ತಮಗೆ ಬೇಕಾದ ಸ್ಥಳಕ್ಕೆ (Place) ವರ್ಗಾವಣೆ (Transfer) ಬಯಸುವುದು ಸಾಮಾನ್ಯ. ಹೀಗೆ ವರ್ಗಾವಣೆ ಕೊಡುವಾಗ ಅದಕ್ಕೆ ಅಂತಲೆ ಕೆಲವೊಂದು ಮಾನದಂಡ, ಕೆಲವೊಂದು ಅರ್ಹತೆಗಳು ಇರುತ್ತವೆ. ಅವೆಲ್ಲ ಇದ್ದರೂ ಉದ್ಯೋಗಿಗೆ ವರ್ಗಾವಣೆ ನೀಡದಿದ್ದರೆ ಅಲ್ಲಿ ಸಮ್‌ ಥಿಂಗ್ (Something) ಏನೋ ಇದೆ ಅಂತ ಅಂದುಕೊಳ್ಳಬಹುದು. ಇಲ್ಲಿ ಆಗಿದ್ದೂ ಅದೆ, ಆತ ಕಂಪನಿಯೊಂದರ ನೌಕರ, ಆತನಿಗೆ ವರ್ಗಾವಣೆ ಬೇಕಾಗಿತ್ತು. ಬಾಸ್ (Boss) ಎದುರು ಹೋಗಿ ವರ್ಗಾವಣೆಗಾಗಿ ಬೇಡಿಕೆ ಸಲ್ಲಿಸಿದ. ಆದರೆ ಕಾಮುಕ ಬಾಸ್ ಮಾತ್ರ ಆತನ ಹೆಂಡತಿ (Wife) ಮೇಲೆ ಕಣ್ಣು ಹಾಕಿದ್ದ. ಆಗ ಮುಂದೆ ಏನಾಯ್ತು ಎನ್ನುವುದನ್ನು ನೀವೇ ಓದಿ…

 ಉತ್ತರ ಪ್ರದೇಶದಲ್ಲಿ ಭಯಾನಕ ಘಟನೆ

ಉತ್ತರ ಪ್ರದೇಶ ರಾಜ್ಯದ ವಿದ್ಯುಚ್ಛಕ್ತಿ ಇಲಾಖೆಯಲ್ಲಿ ಗೋಕುಲ್ ಯಾದವ್ ಎಂಬುವರು ಲೈನ್‌ಮನ್ ಆಗಿ ಕೆಲಸ ಮಾಡುತ್ತಿದ್ದರು. ಅವರು ಲಖಿಂಪುರ ಖೇರಿಯ ಪಲಿಯಾದಲ್ಲಿರುವ ನಿವಾಸದಲ್ಲಿ ಹೆಂಡತಿ ಹಾಗೂ ಕುಟುಂಬಸ್ಥರೊಂದಿಗೆ ಇದ್ದರು. ಅವರು ಬೇರೊಂದು ಸ್ಥಳಕ್ಕೆ ವರ್ಗಾವಣೆ ಬಯಸಿ, ತಮ್ಮ ಮೇಲಾಧಿಕಾರಿ ಅಂದರೆ ಜೂನಿಯರ್‌ ಎಂಜಿನಿಯರ್‌ (ಜೆಇ)ಗೆ ಮನವಿ ಸಲ್ಲಿಸಿದ್ದರು. ಆದರೆ ಆತ ಗೋಕುಲ್ ಯಾದವ್ ಹೆಂಡತಿ ಮೇಲೆ ಕಣ್ಣು ಹಾಕಿದ್ದಾನೆ ಎನ್ನಲಾಗಿದೆ.

“ವರ್ಗಾವಣೆ ಬೇಕಾದರೆ ಹೆಂಡತಿಯನ್ನು ಕಳಿಸು”

ಜೂನಿಯರ್‌ ಎಂಜಿನಿಯರ್‌ ಆಗಿರುವ ನಾಗೇಂದ್ರ ಉಮರ್‌ ಎಂಬ ವ್ಯಕ್ತಿ ಗೋಕುಲ್ ಯಾದವ್ ಮುಂದೆ ವಿಚಿತ್ರ ಬೇಡಿಕೆ ಇಟ್ಟಿದ್ದಾನೆ. ನಿನಗೆ ನೀನು ಬಯಸಿದ ಸ್ಥಳಕ್ಕೆ ವರ್ಗಾವಣೆ ಮಾಡಿಕೊಡುತ್ತೇನೆ. ಆದರೆ ಒಂದು ಕಂಡೀಷನ್, ಅದೇನಪ್ಪಾ ಎಂದರೆ ನಿನ್ನ ಹೆಂಡತಿಯನ್ನು ಒಂದು ದಿನದ ಮಟ್ಟಿಗೆ ನನ್ನ ಜೊತೆ ಹಾಗೂ ನನ್ನ ಸ್ನೇಹಿತರ ಜೊತೆ ಕಳಿಸು ಅಂತ ಹೇಳಿದ್ದಾನೆ. ನಿನ್ನ ಹೆಂಡತಿಯನ್ನು ಕಳಿಸಿಲ್ಲ ಎಂದರೆ ವರ್ಗಾವಣೆ ಆಸೆ ಬಿಟ್ಟು ಬಿಡು ಅಂತ ತಾಕೀತು ಮಾಡಿದ್ದಾನೆ.

ಇದನ್ನೂ ಓದಿ: Heavy Rain: ಅಕಾಲಿಕ ಮಳೆಗೆ ಕುಸಿದೇ ಹೋಯ್ತು ಬದುಕು! ಮದುವೆ ನಡೆಯಬೇಕಿದ್ದ ಮನೆಯಲ್ಲಿ ಕಣ್ಣೀರಧಾರೆ!

ಮೇಲಾಧಿಕಾರಿ ಮಾತು ಕೇಳಿ ನೌಕರನಿಗೆ ಆಘಾತ

 ತನ್ನ ಬಾಸ್ ಮಾತು ಕೇಳಿ ಗೋಕುಲ್ ಯಾದವ್ ಆಘಾತಕ್ಕೆ ಒಳಗಾಗಿದ್ದಾರೆ. ವರ್ಗಾವಣೆ ಅನಿವಾರ್ಯ ನಿಜ, ಹಾಗಂತೆ ಬಾಸ್ ಹೇಳಿದ್ದು ಕೇಳುವುದುಕ್ಕೂ ಆಗುವುದಿಲ್ಲ. ಹೀಗಾಗಿ ಏನು ಮಾಡುವುದು ಅಂತ ತೋಚದೇ ಕಂಗಾಲಾಗಿದ್ದಾರೆ. ಈ ಬಗ್ಗೆ ಪೊಲೀಸರಿಗೆ ದೂರು ನೀಡಿದರೂ ಅವರು ಯಾವುದೇ ಕ್ರಮ ಕೈಗೊಂಡಿರಲಿಲ್ಲ ಎನ್ನಲಾಗಿದೆ.

 ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಶರಣಾದ ನೌಕರ

ಬಾಸ್ ಬೇಡಿಕೆಯಿಂದ ನೊಂದ ಗೋಕುಲ್ ಯಾದವ್ ದುಡುಕಿನ ನಿರ್ಧಾರ ಕೈಗೊಂಡಿದ್ದಾನೆ. ಮನೆಗೆ ಬಂದವನೇ ತನ್ನ ಮೈಮೇಲೆ ಡೀಸೆಲ್‌ ಸುರಿದುಕೊಂಡು ಬೆಂಕಿ ಹಚ್ಚಿಕೊಂಡಿದ್ದಾನೆ. ತೀವ್ರವಾಗಿ ಸುಟ್ಟ ಗಾಯಗಳಿಂದ ನರಳುತ್ತಿದ್ದ ಗೋಕುಲ್‌ ಅವರನ್ನು ಲಖನೌನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆಗೆ ಸ್ಪಂದಿಸದೆ ಗೋಕುಲ್ ಯಾದವ್ ಕೊನೆಯುಸಿರು ಎಳೆದಿದ್ದಾನೆ.

ಸಾಯುವ ಮುನ್ನ ಹೇಳಿಕೆ ದಾಖಲಿಸಿಕೊಂಡ ಪೊಲೀಸರು

ಗೋಕುಲ್‌ ಯಾದವ್ ಸಾವಿಗೂ ಮುನ್ನ ಪೊಲೀಸರ ಮುಂದೆ ಹೇಳಿಕೆ ನೀಡಿದ್ದಾನೆ. ತನ್ನ ಮೇಲಾಧಿಕಾರಿ ತನ್ನ ಹೆಂಡತಿ ಮೇಲೆ ಕಣ್ಣು ಹಾಕಿದ್ದು, ವರ್ಗಾವಣೆ ಬೇಕಾದರೆ ಹೆಂಡತಿಯನ್ನು ಕಳುಹಿಸು ಎಂದಿದ್ದು ಎಲ್ಲವನ್ನೂ ಹೇಳಿದ್ದಾನೆ. ಆತನ ಕೊವರ ಕೊನೆಯ ಮಾತು ವಿಡಿಯೋ ಹಾಗೂ ಲಿಖಿತ ರೂಪದಲ್ಲಿ ದಾಖಲಾಗಿದೆ.

ಇದನ್ನೂ ಓದಿ: Shocking News: ಗಂಡ ಹಣ ಕೊಡದಿದ್ದಕ್ಕೆ ಹೆಂಡತಿ ಸೂಸೈಡ್! ಪತ್ನಿಯ ಉರಿಯುತ್ತಿರುವ ಚಿತೆಗೆ ಹಾರಿದ ಪತಿ!

ಪೊಲೀಸರಿಂದ ಮುಂದುವರೆದ ತನಿಖೆ

ಇನ್ನು ಜೂನಿಯರ್‌ ಎಂಜಿಯರ್‌ ನಾಗೇಂದ್ರ ಉಮರ್‌ ಹಾಗೂ ಇಲಾಖೆಯ ಮತ್ತೊಬ್ಬ ಸಿಬ್ಬಂದಿಯನ್ನು ಅಮಾನತ್ತು ಮಾಡಲಾಗಿದೆ. ಅವರ ವಿರುದ್ಧ ಇಲಾಖಾ ತನಿಖೆಗೆ ಆದೇಶಿಸಲಾಗಿದೆ. ಈ ಪ್ರಕರಣದಲ್ಲಿ ಪೊಲೀಸರೂ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
Published by:Annappa Achari
First published: