HOME » NEWS » National-international » MAN SENT TO 8 YR JAIL FOR STABBING HIS WIFE FOR EATING CURD IN MUMBAI STG SNVS

ಮೊಸರು ತಿನ್ನುತ್ತಿದ್ದ ಹೆಂಡತಿಗೆ ಗೇಲಿ ಮಾಡಿ ಜೈಲು ಸೇರಿದ ಗಂಡ!

ಬೆಕ್ಕಿನ ರೀತಿಯಲ್ಲಿ ತಿನ್ನುತ್ತಿರುವೆ ಎಂದು ಕೇಳಿದ ಗಂಡನನ್ನ ಪ್ರಶ್ನೆ ಮಾಡಿದ್ದಕ್ಕೆ ಹೆಂಡತಿಗೆ ಚಾಕುವಿನಿಂದ ಇರಿದು ಗಾಯಗೊಳಿಸಲಾಗಿದೆ. ಮುಂಬೈನ ಸೆಷೆನ್ಸ್ ನ್ಯಾಯಾಲಯವು ಆರೋಪಿಗೆ 8 ವರ್ಷ ಜೈಲುಶಿಕ್ಷೆ ವಿಧಿಸಿದೆ.

news18
Updated:February 7, 2021, 4:23 PM IST
ಮೊಸರು ತಿನ್ನುತ್ತಿದ್ದ ಹೆಂಡತಿಗೆ ಗೇಲಿ ಮಾಡಿ ಜೈಲು ಸೇರಿದ ಗಂಡ!
ಸಾಂದರ್ಭಿಕ ಚಿತ್ರ
  • News18
  • Last Updated: February 7, 2021, 4:23 PM IST
  • Share this:
ಮುಂಬೈ: ಗಂಡ ಹೆಂಡತಿ ಜಗಳ ಉಂಡು ಮಲಗುವ ತನಕ ಎಂಬ ಗಾದೆ ಇದೆ. ಆದರೆ ಹೆಂಡತಿ ಊಟ ಮಾಡುವ ವೇಳೆ ಆದ ಜಗಳ ಗಂಡ ಜೈಲು ಸೇರುವಂತೆ ಆಗಿದೆ. ಹೆಂಡತಿ ಮೊಸರು ತಿನ್ನುವ ವಿಚಾರಕ್ಕೆ ಗಂಡ ಮಾಡಿದ ಜಗಳ ವಿಕೋಪ ತಿರುಗಿ ಹೆಂಡತಿ ಮೇಲೆ ಗಂಡ ಚಾಕುವಿನಿಂದ ಹಲವು ಬಾರಿ ಹಲ್ಲೆ ಮಾಡಿರುವ ಘಟನೆ ಮುಂಬೈನಲ್ಲಿ ನಡೆದಿದೆ.

ಟೈಮ್ಸ್‌ ಆಫ್‌ ಇಂಡಿಯಾ ವರದಿ ಪ್ರಕಾರ, ಆರೋಪಿಯ ಪತ್ನಿ ರಂಜನಾ ಸೆಪ್ಟೆಂಬರ್‌ 2019ರಂದು ಮನೆಯಲ್ಲಿ ಆಕೆಯ ತಾಯಿ ನೀಡಿದ ಮೊಸರು ತಿನ್ನುತ್ತಿದ್ದರು. ಆಗ ರಂಜನಾ ಮೊಸರು ತಿನ್ನುತ್ತಿರುವುದು ಆಕೆಯ ಪತಿ ಸಚಿನ್‌ ನೋಡಿ ಆಕೆಯನ್ನು ಪ್ರಶ್ನಿಸಿದ್ದನು. ನೀವು ತಿನ್ನುತ್ತಿರುವ ಮೊಸರು ಬೆಕ್ಕು ತಿಂದಂತೆ ಕಾಣಿಸುತ್ತದೆ ಎಂದಿದ್ದನು.

ಮರುಪ್ರಶ್ನೆ ಮಾಡಿದಕ್ಕೆ ಕೋಪಗೊಂಡ ಪತಿ!

ಆಗ ಆತನ ಮಾತಿಗೆ ಕೋಪಗೊಂಡ ಪತ್ನಿ ರಂಜನಾ, ನನ್ನನ್ನು ಏಕೆ ಬೆಕ್ಕಿಗೆ ಹೋಲಿಕೆ ಮಾಡುತ್ತಿದ್ದೀರಿ ಎಂದು ಕೇಳಿದ್ದಾಳೆ. ಆಗ ಸಚಿನ್‌ ಕೋಪಗೊಂಡು ಇಬ್ಬರು ಮಾತಿಗೆ ಮಾತು ಮುಂದುವರೆಸಿ ರಂಜನಾಗೆ ಸಚಿನ್‌ ಹೊಡೆದಿದ್ದಾನೆ. ನನ್ನನ್ನು ಏಕೆ ಬೆಕ್ಕಿಗೆ ಹೋಲಿಕೆ ಮಾಡುತ್ತಿರಿ ಎಂದು ಮರುಪ್ರಶ್ನೆ ಮಾಡಿದ್ದಕ್ಕೆ ಆಕೆಯ ಮೇಲೆ ಗಂಡ ಹಲ್ಲೆ ಮಾಡಿದ್ದಾನೆ. ಕೋಪದಲ್ಲಿ ಚಾಕುವಿನಿಂದ ಹೆಂಡತಿಗೆ ಗಾಯಗೊಳಿಸಿದ್ದಾನೆ. ಕೂಡಲೇ ಸಹಾಯಕ್ಕಾಗಿ ರಂಜನಾ ಕೂಗಿಕೊಂಡಿದ್ದಾಳೆ. ಆಗ ಸಚಿನ್‌ ಸ್ಥಳದಿಂದ ಪರಾರಿಯಾಗಿದ್ದಾನೆ.

ಇದನ್ನೂ ಓದಿ: ಯೂಟ್ಯೂಬ್ ಲೈವ್​ ಸ್ಟ್ರೀಮಿಂಗ್​​​ ಮಾಡುತ್ತಲೇ 1.5 ಲೀಟರ್ ವೋಡ್ಕಾ ಕುಡಿದು ಸಾವನ್ನಪ್ಪಿದ ಅಜ್ಜ..!

ಮನೆಮಾಲೀಕರ ಅಳಿಯನಿಗೆ ರಂಜನಾ ಕೂಗು ಕೇಳಿಸಿ, ಸಹಾಯಕ್ಕೆ ಧಾವಿಸಿದ್ದಾರೆ. ಗಂಭೀರವಾಗಿ ಗಾಯಗೊಂಡಿದ್ದ ರಂಜನಾ ಮತ್ತು ಆಕೆಯ ತಾಯಿ ಇಬ್ಬರು ಒಂದು ತಿಂಗಳು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಲು ದಾಖಲಾಗಿದ್ದಾರೆ.

ಆರೋಪಿ ವಾದಕ್ಕೆ ಕೋರ್ಟ್‌ ನಿರಾಕರಣೆ:ಆರೋಪಿ ಸಚಿನ್‌ನನ್ನು ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಒಪ್ಪಿಸಿದರು. ಈ ವೇಳೆ ಆರೋಪಿ ಸಚಿನ್‌, ಇಬ್ಬರು ಜಗಳ ಮಾಡಿದ ವೇಳೆ ರಂಜನಾ ಕೆಳಗೆ ಬಿದ್ದ ವೇಳೆ ತಾನೇ ಚಾಕುವಿನಿಂದ ಗಾಯ ಮಾಡಿಕೊಂಡಿದ್ದಾಳೆ ಎಂದು ನ್ಯಾಯಾಲಯದಲ್ಲಿ ಹೇಳಿಕೊಂಡಿದ್ದನು. ಈತನ ವಾದವನ್ನು ನ್ಯಾಯಾಲಯ ಒಪ್ಪಲಿಲ್ಲ. ಆರೋಪಿ ನಿರುದ್ಯೋಗಿಯಾಗಿದ್ದು, ಕುಡಿದಾಗ ಹಲ್ಲೆ ನಡೆಸುತ್ತಿದ್ದನು ಎಂದು ರಂಜನಾ ತನ್ನ ಪತಿ ವಿರುದ್ಧ ಆರೋಪ ಮಾಡಿದಳು. ಕೋರ್ಟ್ ಇದಕ್ಕೆ ಸ್ಪಂದಿಸಿ, ಆರೋಪಿ ಸಚಿನ್‌ಗೆ 8 ವರ್ಷ ಜೈಲು ಶಿಕ್ಷೆ ವಿಧಿಸಿ ತೀರ್ಪು ನೀಡಿತು.

ಇದನ್ನೂ ಓದಿ: 180 ವರ್ಷಗಳ ಕಾಲ ಬದುಕಲು ಅಮೆರಿಕದ ಈ ಟೆಕ್ ಉದ್ಯಮಿ ಮಾಡುತ್ತಿರುವುದೇನು ಗೊತ್ತಾ?

ಇದೇ ರೀತಿಯ ಒಂದು ಘಟನೆ ದಕ್ಷಿಣ ದೆಹಲಿಯ ಫತೇಪುರ್ ಬೇರಿಯಲ್ಲಿಯೂ ಕೆಲ ವಾರಗಳ ಹಿಂದೆ ನಡೆದಿತ್ತು. ಈರುಳ್ಳಿ ಸಲಾಡ್‌ ನೀಡುವ ವಿಚಾರವಾಗಿ 60 ವರ್ಷದ ವ್ಯಕ್ತಿಯೊಬ್ಬರು ಮತ್ತೊಬ್ಬ ವ್ಯಕ್ತಿಯ ಮೇಲೆ ಹಲ್ಲೆ ಮಾಡಿದ್ದನು.

ನವೆಂಬರ್ 2020ರಲ್ಲಿ, 23 ವರ್ಷದ ಯುವಕನೊಬ್ಬ ತನ್ನ ಮೊಬೈಲ್ ಇಂಟರ್ನೆಟ್ ಡೇಟಾವನ್ನು ಖಾಲಿ ಮಾಡಿದ್ದಕ್ಕಾಗಿ ತನ್ನ ತಮ್ಮನನ್ನು ಚಾಕುವಿನಿಂದ ಇರಿದು ಕೊಂದಿದ್ದನು. ಪೊಲೀಸರ ಪ್ರಕಾರ, ಮನೆಯ ಮೇಲ್ಛಾವಣೆ ಮೇಲೆ ಗಂಭೀರವಾಗಿ ಗಾಯಗೊಂಡು ಬಿದ್ದ ವ್ಯಕ್ತಿಯನ್ನು ಆಸ್ಪತ್ರೆಗೆ ತೆಗೆದುಕೊಂಡು ಹೋಗಿದ್ದರು. ಆಗ ವೈದ್ಯರು ವ್ಯಕ್ತಿ ಮೃತಪಟ್ಟಿರುವುದನ್ನು ದೃಢಪಡಿಸಿದರು. ಚಾಕುವಿನಿಂದ ಇರಿದು ಪರಾರಿಯಾಗಿದ್ದ ಆರೋಪಿ ರೈಲ್ವೆ ನಿಲ್ದಾಣದಲ್ಲಿ ಪೊಲೀಸರು ಬಂಧಿಸಿದ್ದರು.
Published by: Vijayasarthy SN
First published: February 7, 2021, 4:23 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories