• Home
  • »
  • News
  • »
  • national-international
  • »
  • Cheating: ಮಗಳ MBBS ಸೀಟ್​ಗಾಗಿ ತಂದೆಯ ಪರದಾಟ! ಬಡ ತಂದೆಗೆ 8 ಲಕ್ಷ ರೂ. ವಂಚನೆ

Cheating: ಮಗಳ MBBS ಸೀಟ್​ಗಾಗಿ ತಂದೆಯ ಪರದಾಟ! ಬಡ ತಂದೆಗೆ 8 ಲಕ್ಷ ರೂ. ವಂಚನೆ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಶಿಕ್ಷಣ ವ್ಯವಸ್ಥೆಯಲ್ಲಿ (Education System) ಬಹಳಷ್ಟು ವಂಚನೆ ಪ್ರಕರಣಗಳೂ, ಫ್ರಾಡ್ ಕೇಸ್ (Fraud Case) ವರದಿಯಾಗುತ್ತಲೇ ಇರುತ್ತದೆ. ಇದೀಗ ಇಂಥದ್ದೇ ಬೆಳವಣಿಗೆಯಲ್ಲಿ ಮಗಳ ಎಂಬಿಬಿಎಸ್ (MBBS) ಶಿಕ್ಷಣಕ್ಕಾಗಿ ಪರದಾಡಿದ ತಂದೆ ಮೋಸಕ್ಕೊಳಗಾಗಿರುವ ಘಟನೆ ವರದಿಯಾಗಿದೆ.

  • Share this:

ಮಕ್ಕಳ ಶಿಕ್ಷಣಕ್ಕಾಗಿ (Education) ತಂದೆ ಪರದಾಡುವ ಘಟನೆ ಹೊಸದೇನಲ್ಲ. ಭಾರತದಲ್ಲಿ ವೈದ್ಯಕೀಯ ಶಿಕ್ಷಣ (Medical Education) ಹೊರೆ ಹೆಚ್ಚಾಗಿರುವ ಕಾರಣದಿಂದಲೇ ಭಾರತೀಯ ಪ್ರತಿಭಾವಂತ ವಿದ್ಯಾರ್ಥಿಗಳು (Students) ಉಕ್ರೇನ್ (Ukraine)​ನಂತಹ ರಾಷ್ಟ್ರದಲ್ಲಿ ಕಡಿಮೆ ವೆಚ್ಚದಲ್ಲಿ ಶಿಕ್ಷಣ ಪಡೆಯಲು ಹೋಗಬೇಕಾದ ಅನಿವಾರ್ಯತೆ ಎದುರಾಗುತ್ತದೆ. ಬಹಳಷ್ಟು ಕಡೆಗಳಲ್ಲಿ ಲಂಚದ (Corruption) ಕಾರಣ ಬಡ ವಿದ್ಯಾರ್ಥಿಗಳು ಶಿಕ್ಷಣದಿಂದ ವಂಚಿತರಾಗಬೇಕಾಗುತ್ತದೆ. ಪೋಷಕರು ಮಕ್ಕಳಿಗೆ ಶಿಕ್ಷಣ ಕೊಡಿಸಲಾಗದೆ ಜಮೀನು, ಆಸ್ತಿಯನ್ನೂ ಮಾರಬೇಕಾದ ಪರಿಸ್ಥಿತಿ ಎದುರಾಗುತ್ತದೆ. ಹೀಗಿದ್ದರೂ ನಮ್ಮ ಶಿಕ್ಷಣ ವ್ಯವಸ್ಥೆಯಲ್ಲಿ (Education System) ಬಹಳಷ್ಟು ವಂಚನೆ ಪ್ರಕರಣಗಳೂ, ಫ್ರಾಡ್ ಕೇಸ್ (Fraud Case) ವರದಿಯಾಗುತ್ತಲೇ ಇರುತ್ತದೆ. ಇದೀಗ ಇಂಥದ್ದೇ ಬೆಳವಣಿಗೆಯಲ್ಲಿ ಮಗಳ ಎಂಬಿಬಿಎಸ್ (MBBS) ಶಿಕ್ಷಣಕ್ಕಾಗಿ ಪರದಾಡಿದ ತಂದೆ ಮೋಸಕ್ಕೊಳಗಾಗಿರುವ ಘಟನೆ ವರದಿಯಾಗಿದೆ.


ನೆರೂಲ್‌ನ ಡಿವೈ ಪಾಟೀಲ್ ಕಾಲೇಜಿನಲ್ಲಿ ₹8 ಲಕ್ಷಕ್ಕೆ ಪ್ರವೇಶ ನೀಡುವುದಾಗಿ ಸುಳ್ಳು ಆಶ್ವಾಸನೆ ನೀಡಿ ಪೋಷಕರಿಗೆ ವಂಚಿಸಲು ಯತ್ನಿಸಿದ ಆರೋಪದ ಮೇಲೆ ಮಂಗಳವಾರ ವನೌರಿ ಪೊಲೀಸರು ಮಹಿಳಾ ವಕೀಲರೊಬ್ಬರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಆರೋಪಿಯನ್ನು ಕಲ್ಯಾಣ್ ವೆಸ್ಟ್ ನಿವಾಸಿ ಮುಗ್ದಾ ಹೇಮಂತ್ ಕುಲಕರ್ಣಿ (28) ಎಂದು ಪೊಲೀಸರು ಗುರುತಿಸಿದ್ದಾರೆ.


ಕಾರ್ಯಕ್ರಮದಲ್ಲಿ ತಂದೆ ಮಗಳ ಭೇಟಿಯಾದ ವಕೀಲೆ


ಪೊಲೀಸರ ಪ್ರಕಾರ, ಆರೋಪಿಯು ಸೆಪ್ಟೆಂಬರ್ 2021 ರಲ್ಲಿ ಪುಣೆಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ದೂರುದಾರ ಶಿವಾಜಿ ಪಾಟೀಲ್ ಮತ್ತು ಅವರ ಮಗಳು ಸಾಧನಾ ಅವರೊಂದಿಗೆ ಸಂಪರ್ಕಕ್ಕೆ ಬಂದರು.


ಸುಳ್ಳು  ಸಂಬಂಧವನ್ನು ಹೇಳಿ ಮೋಸ


ಪೊಲೀಸ್ ದೂರಿನ ಪ್ರಕಾರ, ಆರೋಪಿಯು ಕಾಂಗ್ರೆಸ್ ಮುಖಂಡ ಮತ್ತು ಡಿವೈ ಪಾಟೀಲ್ ಕಾಲೇಜಿನ ಮಾಲೀಕ ಸತೇಜ್ ಪಾಟೀಲ್ ಅವರೊಂದಿಗೆ ಉತ್ತಮ ಸಂಬಂಧವನ್ನು ಹೊಂದಿದ್ದಾಳೆ ಎಂದು ನಟಿಸಿದ್ದಾರೆ. ಹಾಗಾಗಿ, ಎಂಬಿಬಿಎಸ್‌ಗೆ ಪ್ರವೇಶ ಪಡೆಯಲು ಸಹಾಯ ಮಾಡುವುದಾಗಿ ಭರವಸೆ ನೀಡಿದರು.


ಮಗಳ ದಾಖಲಾತಿಗಾಗಿ 6 ಲಕ್ಷ ಕೇಳಿದ ವಕೀಲೆ


ನವೆಂಬರ್ 2021 ಮತ್ತು ಏಪ್ರಿಲ್ 2022 ರ ನಡುವೆ, ಆರೋಪಿಯು ತನ್ನ ಮಗಳ ಎಂಬಿಬಿಎಸ್ ಶಿಕ್ಷಣದ ಪ್ರವೇಶವನ್ನು ಪಡೆಯಲು ಶಿವಾಜಿ ಪಾಟೀಲ್ ಅವರಿಂದ ₹ 6,00,000/- ಕೇಳಿದರು.


ಒಟ್ಟು 8 ಲಕ್ಷ ಕೊಟ್ಟಿದ್ದರೂ ಸಿಗಲಿಲ್ಲ ಸೀಟ್


ಪೊಲೀಸ್ ಇನ್ಸ್‌ಪೆಕ್ಟರ್ ದೀಪಕ್ ಲಗಾಡ್ ಮಾತನಾಡಿ, ''ಆರೋಪಿ ನೀಡಿದ ಸೂಚನೆಯಂತೆ ಪಾಟೀಲ್ ಅವರು ₹ 8 ಲಕ್ಷವನ್ನು ಹಲವು ವಹಿವಾಟು ಮೂಲಕ ವರ್ಗಾವಣೆ ಮಾಡಿದ್ದಾರೆ. ಆದರೆ ನಂತರದಲ್ಲಿ ಎಡ್ಮಿಷನ್ ಆಗದೆ ಇದ್ದಾಗ, ಆ ವ್ಯಕ್ತಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.


ಇದನ್ನೂ ಓದಿ: National Herald Case: ಸತತ 3ನೇ ದಿನ ಇಡಿ ವಿಚಾರಣೆಗೆ ಹಾಜರಾಗಲಿರುವ ರಾಹುಲ್ ಗಾಂಧಿ


ವಕೀಲರ ವಿರುದ್ಧ ಭಾರತೀಯ ದಂಡ ಸಂಹಿತೆಯ (ಐಪಿಸಿ) ಸೆಕ್ಷನ್ 406, 420, 506 ರ ಅಡಿಯಲ್ಲಿ ಅಪರಾಧಗಳಿಗಾಗಿ ಪ್ರಕರಣವನ್ನು ದಾಖಲಿಸಲಾಗಿದೆ. ಹಿರಿಯ ಪೊಲೀಸ್ ಇನ್ಸ್ ಪೆಕ್ಟರ್ ದೀಪಕ್ ಲಗಾಡ್ ಪ್ರಕರಣದ ತನಿಖೆ ನಡೆಸುತ್ತಿದ್ದಾರೆ.


ಎಲ್ಲಾ ಕಡೆಗಳಲ್ಲಿಯೂ ಭ್ರಷ್ಟಾಚಾರ, ವಂಚನೆ


ಪ್ರಾಥಮಿಕ ಶಿಕ್ಷಕರ ನೇಮಕಾತಿಯಲ್ಲಿ ನಡೆದ ಅಕ್ರಮಗಳಲ್ಲಿ ಪಶ್ಚಿಮ ಬಂಗಾಳದ ಶಿಕ್ಷಣ ಇಲಾಖೆಯ ಹಲವು ಅಧಿಕಾರಿಗಳು ಭಾಗಿಯಾಗಿದ್ದಾರೆ ಎಂದು ಸಿಬಿಐನ (CBI) ಹಿರಿಯ ಅಧಿಕಾರಿಯೊಬ್ಬರು ಶನಿವಾರ ಹೇಳಿದ್ದಾರೆ.


ಇದನ್ನೂ ಓದಿ: UPI Payment: ಗೂಗಲ್​ ಪೇ - ಫೋನ್​ ಪೇ ಯೂಸ್​ ಮಾಡ್ತಿದ್ದೀರಾ? ಹುಷಾರ್​ ರೀ, ಚೂರ್ ಮಿಸ್​ ಆದ್ರು ಹಣ ಗೋವಿಂದ!


ಖಾಲಿ ಉತ್ತರ ಪತ್ರಿಕೆ ಕೊಟ್ಟವರಿಗೂ ಸಿಕ್ತು ಸರ್ಕಾರಿ ಕೆಲಸ


ಅಭ್ಯರ್ಥಿಗಳು ಖಾಲಿ ಉತ್ತರ ಪತ್ರಿಕೆಗಳನ್ನು ಸಲ್ಲಿಸಿದ ನಂತರವೂ ಅವರ ಹೆಸರು ಮತ್ತು ನೋಂದಣಿ ಸಂಖ್ಯೆಯನ್ನು ನಮೂದಿಸಿ ನೇಮಕಾತಿಗಳನ್ನು ನೀಡಿದ ಉದಾಹರಣೆಗಳಿವೆ ಎಂದು ಇದುವರೆಗಿನ ತನಿಖೆಯಿಂದ ತಿಳಿದುಬಂದಿದೆ ಎಂದು ಅವರು ಆರೋಪಿಸಿದರು.

Published by:Divya D
First published: