Afghanistan: ಅಫ್ಘನ್​ನಿಂದ ಭಾರತಕ್ಕೆ ಮರಳಿದ ಜಾರ್ಖಂಡ್​ ವ್ಯಕ್ತಿ; ವಿಮಾನದಿಂದ ಇಳಿದ ತಕ್ಷಣ ನೆಲಕ್ಕೆ ಮುತ್ತಿಟ್ಟ ಬಬ್ಲೂ

ಜಾರ್ಖಂಡ್‌ನ ಬೊಕಾರೊ ಜಿಲ್ಲೆಯ ಗೋಮಿಯಾ ನಿವಾಸಿ ಬಬ್ಲೂ (Babloo) ಭಾನುವಾರ ರಾಂಚಿಯ ಬಿರ್ಸಾ ಮುಂಡಾ ವಿಮಾನ ನಿಲ್ದಾಣವನ್ನು (Birsa Munda Airport, Ranchi) ತಲುಪಿದರು. ಅವರು ಭಾನುವಾರ ಬೆಳಿಗ್ಗೆ ರಾಷ್ಟ್ರ ರಾಜಧಾನಿ ನವದೆಹಲಿಗೆ ತಲುಪಿದರು.

ಅಫ್ಘನ್​ನಿಂದ ಭಾರತಕ್ಕೆ ಮರಳಿದ ಬಬ್ಲೂ

ಅಫ್ಘನ್​ನಿಂದ ಭಾರತಕ್ಕೆ ಮರಳಿದ ಬಬ್ಲೂ

 • Share this:
  Jharkhand:  2018 ರಿಂದ ಅಫ್ಘಾನಿಸ್ತಾನದಲ್ಲಿ ಕೆಲಸ ಮಾಡುತ್ತಿದ್ದ ಜಾರ್ಖಂಡ್ ಮೂಲದ ವ್ಯಕ್ತಿ, ಅಫ್ಘಾನಿಸ್ತಾನ ದೇಶದ ರಾಜಧಾನಿ ಕಾಬೂಲ್ ಅನ್ನು ತಾಲಿಬಾನಿಗಳು ವಶಪಡಿಸಿಕೊಂಡು ಒಂದು ವಾರ ಕಳೆದ ನಂತರ ಭಾನುವಾರ ತಡರಾತ್ರಿ ಸ್ವದೇಶಕ್ಕೆ ಮರಳಿದರು.

  ಜಾರ್ಖಂಡ್‌ನ ಬೊಕಾರೊ ಜಿಲ್ಲೆಯ ಗೋಮಿಯಾ ನಿವಾಸಿ ಬಬ್ಲೂ (Babloo) ಭಾನುವಾರ ರಾಂಚಿಯ ಬಿರ್ಸಾ ಮುಂಡಾ ವಿಮಾನ ನಿಲ್ದಾಣವನ್ನು (Birsa Munda Airport, Ranchi) ತಲುಪಿದರು. ಅವರು ಭಾನುವಾರ ಬೆಳಿಗ್ಗೆ ರಾಷ್ಟ್ರ ರಾಜಧಾನಿ ನವದೆಹಲಿಗೆ ತಲುಪಿದರು.

  ಜಾರ್ಖಂಡ್ ವ್ಯಕ್ತಿ ರಾಂಚಿಯಲ್ಲಿ ಇಳಿಯುತ್ತಿದ್ದಂತೆ, ಆತ ತಲೆಬಾಗಿ ನೆಲಕ್ಕೆ ಮುತ್ತಿಟ್ಟ. ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, "ಭಾರತದ ಸಾವಿರಾರು ಸಹೋದರಿಯರ ಪ್ರಾರ್ಥನೆಯಿಂದ ಮಾತ್ರ ನಾನು ಜೀವಂತವಾಗಿದ್ದೇನೆ." ಈ ಬಿಕ್ಕಟ್ಟಿನ ಸಮಯದಲ್ಲಿ ನನಗೆ ಇದು ಧೈರ್ಯ ನೀಡಿತು ಮತ್ತು ಇತರ ಸಾವಿರಾರು ಜನ ಅಫ್ಘಾನಿಸ್ತಾನದಲ್ಲಿ ಸಿಲುಕಿದ್ದಾರೆ ಅವರು ಸಹ ಆದಷ್ಟು ಬೇಗ ಮರಳಿ ತವರು ತಲುಪಲಿ ಎಂದು ಪ್ರಾರ್ಥಿಸಿದರು.

  "ತಾಲಿಬಾನ್ ಅಫ್ಘಾನಿಸ್ತಾನವನ್ನು ವಶಪಡಿಸಿಕೊಂಡ ನಂತರ, ಎಲ್ಲೆಡೆ ಅವ್ಯವಸ್ಥೆ ರಾರಾಜಿಸುತ್ತಿತ್ತು, ಅವರು ನಿಷ್ಕರುಣೆಯಿಂದ ಜನರನ್ನು ಕೊಲ್ಲುತ್ತಿದ್ದರು. ಅಫ್ಘಾನಿಸ್ತಾನದ ವಿವಿಧ ಖಾಸಗಿ ಸಂಸ್ಥೆಗಳಲ್ಲಿ ಕೆಲಸ ಮಾಡುತ್ತಿರುವ ಸಾವಿರಾರು ಆಫ್ಘನ್ನರು ಮತ್ತು ನನ್ನಂತಹ ನೂರಾರು ಜನರು ದೇಶದಿಂದ ತಪ್ಪಿಸಿಕೊಳ್ಳುವ ಹಂಬಲದಲ್ಲಿ ಇದ್ದರು"ಎಂದು ಬಬ್ಲೂ ಹೇಳಿದರು.  "ಅನೇಕರು ಇನ್ನೂ ಅಲ್ಲಿ ಸಿಲುಕಿಕೊಂಡಿದ್ದಾರೆ, ಅವರ ಸುರಕ್ಷತೆಗಾಗಿ ನಾನು ಪ್ರಾರ್ಥಿಸುತ್ತೇನೆ" ಎಂದು ಅವರು ಹೇಳಿದರು.
  ಜಾರ್ಖಂಡ್ ವ್ಯಕ್ತಿ ಭಾರತಕ್ಕೆ ಮರಳಲು ಸಹಾಯ ಮಾಡಿದ್ದಕ್ಕಾಗಿ ಸಾಮಾಜಿಕ ಕಾರ್ಯಕರ್ತೆ ಜ್ಯೋತಿ ಶರ್ಮಾ ಅವರಿಗೆ ಧನ್ಯವಾದ ಅರ್ಪಿಸಿದರು. "ನನ್ನ ಕುಟುಂಬವು ಮೊದಲು ಜ್ಯೋತಿ ಶರ್ಮಾ ಅವರನ್ನು ಸಂಪರ್ಕಿಸಿತು ಮತ್ತು ನಾನು ಇರುವ ಪರಿಸ್ಥಿತಿಯ ಬಗ್ಗೆ ಅವಳಿಗೆ ತಿಳಿಸಿದೆ. ಆ ನಂತರ ನಾವು ದೂರವಾಣಿ ಮೂಲಕ ನಿಯಮಿತ ಸಂಪರ್ಕದಲ್ಲಿದ್ದ ಕಾರಣ ಇದು ಸಾದ್ಯವಾಯಿತು" ಎಂದು ಬಬ್ಲೂ ಹೇಳಿದರು.  "ಅವರು ರಾಯಭಾರ ಕಚೇರಿಯೊಂದಿಗೆ ಮಾತುಕತೆ ನಡೆಸಿದರು ಮತ್ತು ಕಾರ್ಯವಿಧಾನಗಳ ಬಗ್ಗೆ ಮತ್ತು ಅಗತ್ಯ ದಾಖಲೆಗಳನ್ನು ಹೇಗೆ ಭರ್ತಿ ಮಾಡಬೇಕೆಂದು ನನಗೆ ಮಾರ್ಗದರ್ಶನ ನೀಡಿದರು" ಎಂದು ಸಾಮಾಜಿಕ ಕಾರ್ಯಕರ್ತೆ ಜ್ಯೋತಿ ಶರ್ಮಾ ಅವರ ಸಹಾಯವನ್ನು ಬಬ್ಲೂ ಸ್ಮರಿಸಿದರು.


  ಬೊಕಾರೊ ಮೂಲದ ಈ ವ್ಯಕ್ತಿ ತಾನು 2018 ರಿಂದ ಖಾಸಗಿ ಕಂಪನಿಯಲ್ಲಿ ಆಪರೇಟರ್ ಆಗಿ ಕೆಲಸ ಮಾಡುತ್ತಿದ್ದೇನೆ ಎಂದು ಹೇಳಿದರು.


  ಮಾಧ್ಯಮ ವರದಿಗಳ ಪ್ರಕಾರ, ಕಾಬೂಲ್ ವಿಮಾನ ನಿಲ್ದಾಣವು ಈಗ ಸ್ಥಳಾಂತರ ಮಾಡುವ ವಿಮಾನಗಳಿಗಾಗಿ ಮಾತ್ರ ಮುಕ್ತವಾಗಿದೆ. ಭಾರತವು ಭಾನುವಾರ ಭಾರತೀಯ ನಾಗರಿಕರು, ಅಫ್ಘಾನ್ ಶಾಸಕರು, ಅಫ್ಘಾನ್ ಸಿಖ್ಖರು ಮತ್ತು ಹಿಂದೂಗಳು ಸೇರಿದಂತೆ 392 ಜನರನ್ನು ಮರಳಿ ವಾಪಸ್ ಕರೆತಂದಿದೆ.

  ಇದನ್ನೂ ಓದಿ: Mysuru: ಚಿನ್ನ ಕದಿಯಲು ಬಂದ ಕಳ್ಳರಿಂದ ಫೈರಿಂಗ್​; ತಡೆಯಲು ಹೋದ ಯುವಕ ಗುಂಡಿಗೆ ಬಲಿ

  ಸಿ -17 ಮಿಲಿಟರಿ ಸಾರಿಗೆ ವಿಮಾನದಲ್ಲಿ 168 ವ್ಯಕ್ತಿಗಳನ್ನು ಕಾಬೂಲ್‌ನಿಂದ ದೆಹಲಿಯ ಸಮೀಪದ ಹಿಂಡನ್ ವಿಮಾನ ನಿಲ್ದಾಣಕ್ಕೆ ಕರೆದೊಯ್ಯಲಾಯಿತು ಎಂದು ವರದಿಗಳು ಉಲ್ಲೇಖಿಸಿವೆ. ಮತ್ತೊಂದು ಬ್ಯಾಚ್ ಭಾರತೀಯ ಮತ್ತು ನೇಪಾಳಿ ಪ್ರಜೆಗಳನ್ನು ಐಎಎಫ್ 130 ಜೆ ಸಾರಿಗೆ ವಿಮಾನದಲ್ಲಿ ದುಶಾನ್‌ಬೆಯಿಂದ ಏರ್ ಇಂಡಿಯಾ ವಿಮಾನದಲ್ಲಿ ಕರೆದುಕೊಂಡು ಬಂದು ರಕ್ಷಿಸಲಾಯಿತು.  ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು.
  Published by:HR Ramesh
  First published: