HOME » NEWS » National-international » MAN REACHES HOME IN POONCH AMID LOCKDOWN BY FAKING HIS DEATH MAK

ಲಾಕ್‌ಡೌನ್ ನಡುವೆ ಮನೆಗೆ ತಲುಪಲು ಸತ್ತಂತೆ ನಟಿಸಿದ ವ್ಯಕ್ತಿ ಇಂದು ಪೊಲೀಸ್ ಅತಿಥಿ

ಸತ್ತಂತೆ ನಟಿಸಿ ಇದೀಗ ಜೈಲು ಪಾಲಾಗಿರುವ ವ್ಯಕ್ತಿಯನ್ನು ಹಕಮ್ ದಿನ್ ಎಂದು ಗುರುತಿಸಲಾಗಿದೆ. ಕೆಲ ದಿನಗಳ ಹಿಂದೆ ತೀವ್ರ ಗಾಯಕ್ಕೊಳಗಾಗಿ ಚಿಕಿತ್ಸೆಗೆಂದು ಇಲ್ಲಿನ ಸರ್ಕಾರಿ ವೈದ್ಯಕೀಯ ಕಾಲೇಜಿನ ಆಸ್ಪತ್ರೆಗೆ ದಾಖಲಾಗಿದ್ದ. ಆದರೆ, ಆಸ್ಪತ್ರೆಯಿಂದ ಡಿಸ್ಜಾರ್ಚ್ ಆಗುವ ವೇಳೆಗೆ ಲಾಕ್‌ಡೌನ್ ಘೋಷಿಸಲಾಗಿತ್ತು. ಇದರಿಂದ ಈತ ಮನೆಗೆ ತಲುಪಲು ಸಾಧ್ಯವಾಗಿರಲಿಲ್ಲ.

news18-kannada
Updated:April 1, 2020, 8:38 AM IST
ಲಾಕ್‌ಡೌನ್ ನಡುವೆ ಮನೆಗೆ ತಲುಪಲು ಸತ್ತಂತೆ ನಟಿಸಿದ ವ್ಯಕ್ತಿ ಇಂದು ಪೊಲೀಸ್ ಅತಿಥಿ
ಸಾಂದರ್ಭಿಕ ಚಿತ್ರ
  • Share this:
ಜಮ್ಮು (ಮಾರ್ಚ್ 31); ಇಡೀ ರಾಷ್ಟ್ರದಾದ್ಯಂತ ಕೊರೋನಾ ಸೋಂಕನ್ನು ಹೋಗಲಾಡಿಸುವ ಸಲುವಾಗಿ ಲಾಕ್‌ಡೌನ್ ಘೋಷಿಸಲಾಗಿದೆ. ಆದರೆ, ಲಾಕ್‌ಡೌನ್ ನಡುವೆಯೂ ಜಮ್ಮು-ಕಾಶ್ಮೀರದ ಫೂಂಚ್ ಜಿಲ್ಲೆಯಲ್ಲಿ ವ್ಯಕ್ತಿಯೊಬ್ಬ ಆಂಬ್ಯುಲೆನ್ಸ್ ಮೂಲಕ ಮನೆಗೆ ತಲುಪಲು ಸತ್ತಂತೆ ನಾಟಕ ಮಾಡಿ ಇದೀಗ ಪೊಲೀಸ್ ಅತಿಥಿಯಾಗಿದ್ದಾನೆ.

ಸತ್ತಂತೆ ನಟಿಸಿ ಇದೀಗ ಜೈಲು ಪಾಲಾಗಿರುವ ವ್ಯಕ್ತಿಯನ್ನು ಹಕಮ್ ದಿನ್ ಎಂದು ಗುರುತಿಸಲಾಗಿದೆ. ಕೆಲ ದಿನಗಳ ಹಿಂದೆ ತೀವ್ರ ಗಾಯಕ್ಕೊಳಗಾಗಿ ಚಿಕಿತ್ಸೆಗೆಂದು ಇಲ್ಲಿನ ಸರ್ಕಾರಿ ವೈದ್ಯಕೀಯ ಕಾಲೇಜಿನ ಆಸ್ಪತ್ರೆಗೆ ದಾಖಲಾಗಿದ್ದ. ಆದರೆ, ಆಸ್ಪತ್ರೆಯಿಂದ ಡಿಸ್ಜಾರ್ಚ್ ಆಗುವ ವೇಳೆಗೆ ಲಾಕ್‌ಡೌನ್ ಘೋಷಿಸಲಾಗಿತ್ತು. ಇದರಿಂದ ಈತ ಮನೆಗೆ ತಲುಪಲು ಸಾಧ್ಯವಾಗಿರಲಿಲ್ಲ.

ಹೇಗಾದರೂ ಮನೆಗೆ ತಲುಪಲೇಬೇಕು ಎಂಬ ಹಠದಿಂದ ಹಕಮ್ ದಿನ್ ತನ್ನ ಮೂವರು ಗೆಳೆಯರೊಂದಿಗೆ ಪಿತೂರಿ ನಡೆಸಿ ನಕಲಿ ಮರಣ ಪ್ರಮಾಣ ಪತ್ರ ಪಡೆದಿದ್ದಾನೆ. ಈ ಮೂಲಕ ಖಾಸಗಿ ಆಂಬ್ಯುಲೆನ್ಸ್‌ನಲ್ಲಿ ಮನೆಗೆ ಪ್ರಯಾಣಿಸಲು ಮುಂದಾಗಿದ್ದಾನೆ. ಆದರೆ, ಇವರ ಅದೃಷ್ಟ ಕೆಟ್ಟಿತ್ತು. ದಾರಿ ಮಧ್ಯೆ ಆಂಬ್ಯುಲೆನ್ಸ್ ಅನ್ನು ತಡೆದ ಪೊಲೀಸರು ವ್ಯಕ್ತಿ ಇನ್ನೂ ಜೀವಂತವಾಗಿಯೇ ಇರುವುದನ್ನು ಖಚಿತಪಡಿಸಿದ್ದಾರೆ. ಮತ್ತು ಈ ನಾಲ್ವರನ್ನೂ ಬಂಧಿಸಿ ತಮ್ಮ ವಶಕ್ಕೆ ಪಡೆದಿದ್ದಾರೆ ಎಂದು ಪಿಟಿಐ ವರದಿ ಮಾಡಿದೆ.

ಇದನ್ನೂ ಓದಿ : ರಾಜ್ಯದಲ್ಲಿಂದು 13 ಮಂದಿಗೆ ಕೊರೋನಾ; ನೂರರ ಗಡಿ ದಾಟಿದ ಸೋಂಕಿತರ ಸಂಖ್ಯೆ

First published: April 1, 2020, 8:38 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories